ಬಾಂಗ್ಲಾದೇಶ ವಿರುದ್ಧದ 2 ಟೆಸ್ಟ್ ಪಂದ್ಯಗಳ ಸರಣಿಯ 2ನೇ ಪಂದ್ಯವು ಇದೇ ಡಿಸೆಂಬರ್ 22ರಿಂದ ಆರಂಭವಾಗಲಿದೆ. ಮಿರ್ಪುರದಲ್ಲಿ ಉಭಯ (IND vs BAN Test) ದೇಶಗಳ ನಡುವೆ ಟೆಸ್ಟ್ ಸರಣಿಯ ಎರಡನೇ ಮತ್ತು ಕೊನೆಯ ಪಂದ್ಯ ನಡೆಯಲಿದೆ. ಈ ಹಿಂದೆ, ಎರಡನೇ ಟೆಸ್ಟ್ ಪಂದ್ಯದಿಂದಲೂ ತಂಡದ ನಿಯಮಿತ ನಾಯಕ ರೋಹಿತ್ ಶರ್ಮಾ (Rohit Sharma) ಹೊರಗುಳಿದಿದ್ದಾರೆ ಎಂದು ವರದಿಯಾಗಿತ್ತು. ಬಾಂಗ್ಲಾದೇಶ ವಿರುದ್ಧದ ಏಕದಿನ ಸರಣಿಯ ವೇಳೆ ರೋಹಿತ್ ಫೀಲ್ಡಿಂಗ್ ಮಾಡುವಾಗ ಅವರ ಹೆಬ್ಬೆರಳಿಗೆ ಗಾಯವಾಗಿತ್ತು. ಈ ಕಾರಣಕ್ಕಾಗಿ, ರೋಹಿತ್ ಭಾರತಕ್ಕೆ ಮರಳಿದ್ದರು. ಇದೀಗ ಬಿಸಿಸಿಐನಿಂದ ಈ ಅಧಿಕೃತ ಮಾಹಿತಿ ಹೊರಬಿದ್ದಿದ್ದು, ಎರಡನೇ ಟೆಸ್ಟ್ನಲ್ಲಿ ರೋಹಿತ್ ತಂಡದ ಭಾಗವಾಗುವುದಿಲ್ಲ ಮತ್ತು ಕೆಎಲ್ ರಾಹುಲ್ ನಾಯಕರಾಗಿರುತ್ತಾರೆ ಎಂದು ಅಧಿಕೃತವಾಗಿ ತಿಳಿಸಿದೆ. ಅದೇ ಸಮಯದಲ್ಲಿ ನವದೀಪ್ ಸೈನಿ (Navdeep Saini) ಕೂಡ ಎರಡನೇ ಟೆಸ್ಟ್ನಿಂದ ಹೊರಗುಳಿದಿದ್ದಾರೆ. ಅವರ ಕಿಬ್ಬೊಟ್ಟೆಯ ಸ್ನಾಯುಗಳ ಸಮಸ್ಯೆಯಲ್ಲಿದ್ದಾರೆ ಎಂದು ಹೇಲಿದೆ. ಹೀಗಾಗಿ ಇವರಿಬ್ಬರೂ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಗೆ ಮರಳಲಿದ್ದಾರೆ ಎಂದಿದೆ.
ರೋಹಿತ್-ನವದೀಪ್ ಔಟ್:
ರೋಹಿತ್ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದಾರೆ ಜೊತೆಗೆ ಅವರು ಎರಡನೇ ಟೆಸ್ಟ್ಗೆ ಲಭ್ಯರಿರಲಿದ್ದಾರೆ ಎಂದು ವರದಿಯಾಗಿತ್ತು. ಆದರೆ, ಅವರ ಹೆಬ್ಬೆರಳಿನ ಗಾಯ ಸಂಪೂರ್ಣವಾಗಿ ಗುಣಮುಖವಾಗಿಲ್ಲ ಎಂಬುದು ಇದೀಗ ಬಿಸಿಸಿಐ ತಿಳಿಸಿದೆ. ಬಾಂಗ್ಲಾದೇಶ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಕ್ಯಾಚ್ ಹಿಡಿಯುವ ವೇಳೆ ರೋಹಿತ್ ಹೆಬ್ಬೆರಳಿಗೆ ಚೆಂಡು ಬಡಿದಿತ್ತು. ರೋಹಿತ್ ಇನ್ನೂ ತಮ್ಮ ಹೆಬ್ಬೆರಳಿನ ನೋವನ್ನು ಅನುಭವಿಸುತ್ತಿದ್ದಾರೆ ಎಮದು ತಿಳಿದುಬಂದಿದೆ.
NEWS - Rohit Sharma and Navdeep Saini ruled out of second Test against Bangladesh.
More details here - https://t.co/CkMPsYkvFQ #BANvIND pic.twitter.com/qmVmyU5bQ6
— BCCI (@BCCI) December 20, 2022
ಪಂದ್ಯದ ವಿವರ:
ಭಾರತ ಮತ್ತು ಬಾಂಗ್ಲಾದೇಶ ನಡುವಿನ ಎರಡನೇ ಟೆಸ್ಟ್ ಪಂದ್ಯವು ಬುಧವಾರ, 22 ಡಿಸೆಂಬರ್ 2022 ರಿಂದ ಸೋಮವಾರ 26 ಡಿಸೆಂಬರ್ 2022ರ ವರೆಗೆ ಮೀರ್ಪುರದ ಶೇರ್ ಬಾಂಗ್ಲಾ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದೆ. ಪಂದ್ಯವು ಭಾರತೀಯ ಕಾಲಮಾನ ಬೆಳಗ್ಗೆ 9 ಗಂಟೆಯಿಂದ ಆರಂಭವಾಗಲಿದೆ. ಪಂದ್ಯದ ಲೈವ್ ಸ್ಟ್ರೀಮಿಂಗ್ ಭಾರತದಲ್ಲಿ ಅಧಿಕೃತ SonyLiv ವೆಬ್ಸೈಟ್ ಮತ್ತು Sony ಅಪ್ಲಿಕೇಶನ್ನಲ್ಲಿ ವೀಕ್ಷಿಸಬಹುದು. ಜೊತೆಗೆ ಪಂದ್ಯದ ನೇರ ಪ್ರಸಾರವನ್ನು ಭಾರತದಲ್ಲಿ ಸೋನಿ ಸ್ಪೋರ್ಟ್ಸ್ ನೆಟ್ವರ್ಕ್ನಲ್ಲಿ ಪ್ರಸಾರ ಮಾಡಲಾಗುತ್ತದೆ.
ಇದನ್ನೂ ಓದಿ: FIFA World Cup 2022: ವಿಶ್ವಕಪ್ ಗೆದ್ದರೂ ಮೆಸ್ಸಿಗೆ ಸಿಗಲಿಲ್ಲ ಒರಿಜಿನಲ್ ಟ್ರೋಫಿ, ಹಾಗಿದ್ರೆ ಎಲ್ಲೋಯ್ತು ರಿಯಲ್ ಕಪ್?
ಭಾರತ-ಬಾಂಗ್ಲಾದೇಶ ತಂಡ:
ಭಾರತ ತಂಡ: ಕೆಎಲ್ ರಾಹುಲ್ (ನಾಯಕ), ಶುಭಮನ್ ಗಿಲ್, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ರಿಷಬ್ ಪಂತ್ (ವಿಕೆಟ್ ಕೀಪರ್), ಕೆಎಸ್ ಭರತ್, ರವಿಚಂದ್ರನ್ ಅಶ್ವಿನ್, ಅಕ್ಸರ್ ಪಟೇಲ್, ಕುಲ್ದೀಪ್ ಯಾದವ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಅಭಿಮನ್ಯು ಈಶ್ವರನ್, ಸೌರಬ್ ಕುಮಾರ್, ಜಯದೇವ್ ಉನಾದ್ಕಟ್.
ಬಾಂಗ್ಲಾದೇಶ ತಂಡ: ಜಾಕಿರ್ ಹಸನ್, ನಜ್ಮುಲ್ ಹೊಸೈನ್ ಶಾಂಟೊ, ಲಿಟ್ಟನ್ ದಾಸ್, ಶಕಿಬ್ ಅಲ್ ಹಸನ್ (ನಾಯಕ), ಮುಶ್ಫಿಕರ್ ರಹೀಮ್, ಯಾಸಿರ್ ಅಲಿ, ನೂರುಲ್ ಹಸನ್ (ವಿಕೆಟ್ ಕೀಪರ್), ಮೆಹಿದಿ ಹಸನ್ ಮಿರಾಜ್, ತೈಜುಲ್ ಇಸ್ಲಾಂ, ಖಲೀದ್ ಅಹ್ಮದ್, ನಸುಮ್ ಅಹ್ಮದ್, ಮಹ್ಮುದುಲ್ ಹಸನ್ ಪ್ಲೆಷರ್, ಮೊಮಿನುಲ್ ಹಕ್, ರೆಹಮಾನ್ ರಾಜಾ, ತಸ್ಕಿನ್ ಅಹ್ಮದ್.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ