ಡಬ್ಲಿನ್​​ನಲ್ಲಿ ರೋಹಿತ್-ಕುಲ್ದೀಪ್ ಅಬ್ಬರ: ಐರ್ಲೆಂಡ್​ ವಿರುದ್ಧ ಭಾರತಕ್ಕೆ 76 ರನ್​ಗಳ ಭರ್ಜರಿ ಜಯ

news18
Updated:June 28, 2018, 12:59 AM IST
ಡಬ್ಲಿನ್​​ನಲ್ಲಿ ರೋಹಿತ್-ಕುಲ್ದೀಪ್ ಅಬ್ಬರ: ಐರ್ಲೆಂಡ್​ ವಿರುದ್ಧ ಭಾರತಕ್ಕೆ 76 ರನ್​ಗಳ ಭರ್ಜರಿ ಜಯ
news18
Updated: June 28, 2018, 12:59 AM IST
ನ್ಯೂಸ್ 18 ಕನ್ನಡ

ಡಬ್ಲಿನ್ (ಜೂ. 27): ಐರ್ಲೆಂಡ್ ಡಬ್ಲಿನ್​​ನಲ್ಲಿ ನಡೆದ ಭಾರತ ಹಾಗೂ ಐರ್ಲೆಂಡ್ ನಡುವಣ ಮೊದಲ ಟಿ-20 ಪಂದ್ಯದಲ್ಲಿ ಭಾರತ 76 ರನ್​ಗಳ ಭರ್ಜರಿ ಜಯ ಸಾಧಿಸಿ ಸರಣಿಯಲ್ಲಿ ಶುಭಾರಂಭ ಮಾಡಿದೆ.

ಆರಂಭಿಕರಾದ ಶಿಖರ್ ಧವನ್ ಹಾಗೂ ಹಾಗೂ ರೋಹಿತ್ ಶರ್ಮಾ ಅವರ ಸ್ಪೋಟಕ ಅರ್ಧಶತಕದ ನೆರವಿನಿಂದ ಭಾರತ 20 ಓವರ್ನಲ್ಲಿ 208 ರನ್ಕಲೆಹಾಕಿತು. ಮೊದಲ ಓವರ್ನಿಂದಲೇ ಹೊಡಿಬಡಿ ಆಟಕ್ಕೆ ಮುಂದಾದ ಜೋಡಿ ಐರ್ಲೆಂಡ್ ಬೌಲರ್ಗಳ ಬೆವರಿಳಿಸಿದರು. ರೋಹಿತ್ ಹಾಗೂ ಧವನ್ ಸ್ಪೋಟಕ ಅರ್ಧಶತಕ ದಾಖಲಿಸಿ ಮೊದಲನೇ ವಿಕೆಟ್ಗೆ 160ರನ್ಗಳ ಕಾಣಿಕೆ ನೀಡಿದರು. ಧವನ್ ಕೇವಲ 45 ಎಸೆತಗಳಲ್ಲಿ 5 ಬೌಂಡರಿ ಹಾಗೂ 5 ಸಿಕ್ಸ್​​ನೊಂದಿಗೆ 74 ರನ್ಗಳಿಸಿ ಔಟ್ ಆದರು. ಬಳಿಕ ಬಂದ ಸುರೇಶ್ ರೈನಾ(10) ಹಾಗೂ ಧೋನಿ(11) ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಲ್ಲದೆ ಬೇಗನೆ ನಿರ್ಗಮಿಸಿದರು. ಇತ್ತ ಆರ್ಭಟಿಸುತ್ತಿದ್ದ ರೋಹಿತ್ ಶರ್ಮಾ ತಂಡದ ಮೊತ್ತವನ್ನು 200ರ ಗಡಿ ದಾಟಿಸಿ ಶತಕದ ಅಂಚಿನಲ್ಲಿ ಎಡವಿದರು. 61 ಎಸೆತಗಳಲ್ಲಿ 8 ಬೌಂಡರಿ ಹಾಗೂ 5 ಭರ್ಜರಿ ಸಿಕ್ಸ್​​ನೊಂದಿಗೆ 97 ರನ್ ಸಿಡಿಸಿ ಕೊನ ಓವರ್​ನಲ್ಲಿ ಔಟ್ ಆದರು. ಇದರ ಬೆನ್ನಲ್ಲೆ ನಾಯಕ ವಿರಾಟ್ ಕೊಹ್ಲಿ ಕೂಡ ಶೂನ್ಯಕ್ಕೆ ನಿರ್ಗಮಿಸಿದರು. ಅಂತಿಮವಾಗಿ ಭಾರತ ಪರ ಹಾರ್ದಿಕ್ ಪಾಂಡ್ಯ(6) ಹಾಗೂ ಮನೀಶ್ ಪಾಂಡೆ(0) ಅಜೇಯರಾಗಿ ಉಳಿದು 20 ಓವರ್​​ಗೆ 5 ವಿಕೆಟ್ ಕಳೆದುಕೊಂಡು 208 ರನ್ ಕಲೆಹಾಕಿತು. ಐರ್ಲೆಂಡ್ ಪರ ಪೀಟರ್ ಚೇಸ್ 4 ವಿಕೆಟ್ ಕಿತ್ತು ಮಿಂಚಿದರೆ ಕೆವಿನ್ 1 ವಿಕೆಟ್ ಪಡೆದರು.

ಇತ್ತ 209 ರನ್​ಗಳ ಬೃಹತ್ ಮೊತ್ತ ಬೆನ್ನಟ್ಟಿದ ಐರ್ಲೆಂಡ್ ತಂಡಕ್ಕೆ ಆರಂಭಿಕ ಆಘಾತ ಎದುರಾಯಿತು. ಪಾಲ್ ಸ್ಟರ್ಲಿಂಗ್(1) ಹಾಗೂ ಆಂಡ್ರೋ ಬಲ್ಬಿರ್ನಿ(11) ಬೇಗನೆ ಔಟ್ ಆದರು. ನಂತರ ಬಂದ ಸಿಮಿ ಸಿಂಗ್ ಕೇವಲ 7 ರನ್​ಗೆ ಕೊಹ್ಲಿ ಅವರಿಗೆ ಕ್ಯಾಚಿತ್ತು ನಿರ್ಗಮಿಸಿದರೆ ಇತ್ತ ಏಕಾಂಗಿ ಹೋರಾಟ ನಡೆಸುತ್ತಿದ್ದ ಜೇಮ್ಸ್ ಶಾನನ್ ಅರ್ಧಶತಕ ಬಾರಿಸಿ 60ರನ್​ಗೆ ಔಟ್ ಆದರು. ಇದರ ಬೆನ್ನಲ್ಲೆ ನಾಯಕ ವಿಲ್ಸನ್(5), ಕೆವಿನ್ ಓ ಬ್ರಿಯಾನ್(10), ಸ್ಟುವರ್ಟ್​ ಥೋಮ್ಪ್​​ಸನ್(12), ಸ್ಟುವರ್ಟ್​ ಪೊಯಿಟರ್(7) ಒಬ್ಬರ ಹಿಂದೆ ಒಬ್ಬರಂತೆ ನಿರ್ಗಮಿಸಿದರು. ಅಂತಿಮವಾಗಿ ಐರ್ಲೆಂಡ್ ಪರ ಪೀಟರ್ ಚೇಸ್(2) ಹಾಗೂ ಬೊರ್ ರಾಂಕಿನ್(5) ಅಜೇಯರಾಗು ಉಳಿದು 20 ಓವರ್​ಗೆ 9 ವಿಕೆಟ್ ಕಳೆದುಕೊಂಡು 132 ರನ್​ ಗಳಿಸಲಷ್ಟೇ ಶಕ್ತವಾಯಿತು. ಭಾರತ ಪರ ಬೌಲಿಂಗ್​ನಲ್ಲಿ ಅದ್ಭುತ ಪ್ರದರ್ಶನ ತೋರಿದ ಕುಲ್ದೀಪ್ ಯಾದವ್ 4 ವಿಕೆಟ್ ಪಡೆದು ಮಿಂಚಿದರೆ, ಚಾಹಲ್ 3, ಬುಮ್ರಾ 2 ವಿಕೆಟ್ ಕಿತ್ತರು.

ಈ ಮೂಲಕ ಭಾರತ-ಐರ್ಲೆಂಡ್ ನಡುವಣ ಎರಡು ಟಿ-20 ಪಂದ್ಯಗಳ ಪೈಕಿ, ಮೊದಲ ಪಂದ್ಯದಲ್ಲಿ ಭಾರತ 76 ರನ್​ಗಳ ಭರ್ಜರಿ ಗೆಲುವು ಸಾಧಿಸಿದೆ.

ಸಂಕ್ಷಿಪ್ತ ಸ್ಕೋರ್:

ಭಾರತ: 208-5
Loading...

(ರೋಹಿತ್ ಶರ್ಮಾ 97, ಶಿಖರ್ ಧವನ್ 74, ಪೀಟರ್ ಚೇಸ್ 35/4)

ಐರ್ಲೆಂಡ್: 132-9

(ಜೇಮ್ಸ್ ಶಾನನ್ 60, ಕುಲ್ದೀಪ್ ಯಾದವ್ 21/4, ಯಜುವೇಂದ್ರ ಚಾಹಲ್ 38/3)

ಪಂದ್ಯ ಶ್ರೇಷ್ಠ: ಕುಲ್ದೀಪ್ ಯಾದವ್

 

First published:June 28, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...