Rishabh Pant: ಊರ್ವಶಿ ರೌಟೇಲಾಗಾಗಿ ಹುಡುಕಾಟ, ರಿಷಭ್ ಪಂತ್​ ಕಾಲೆಳೆದ ಚಹಾಲ್​-ರೋಹಿತ್​

Rishabh Pant: ರೋಹಿತ್​ ಮತ್ತು ಚಹಾಲ್​ ರಿಷಭ್​ ಬಳಿ ಊರ್ವಶಿ ಅವರನ್ನು ಹುಡುಕುತ್ತಿದ್ದೀಯಾ ಎಂದು ಕೇಳುವ ಮೂಲಕ ತಮಾಷೆ ಮಾಡುತ್ತಿದ್ದಾರೆ ಎಂದು ನೆಟ್ಟಿಗರು ಒಂದು ವಿಡಿಯೋ ತುಣುಕನ್ನು ವೈರಲ್ ಮಾಡುತ್ತಿದ್ದಾರೆ.

ಊರ್ವಶಿ ರೌಟೇಲಾ-ರಿಷಭ್ ಪಂತ್

ಊರ್ವಶಿ ರೌಟೇಲಾ-ರಿಷಭ್ ಪಂತ್

  • Share this:
ಏಷ್ಯಾ ಕಪ್​ 2022ರ (Asia cup 2022) 15ನೇ ಆವೃತ್ತಿಯ 2ನೇ ಪಂದ್ಯದಲ್ಲಿ 10 ತಿಂಗಳಗಳ ನಂತರ ಭಾರತ ಮತ್ತು ಪಾಕಿಸ್ತಾನ (IND vs PAK) ತಂಡಗಳು ಮುಖಾಮುಖಿ ಆದವು. ಆದರೆ ಈ ಪಂದ್ಯ ಮುಗಿದ ಬಳಿಕವೂ ಸಖತ್​ ಸುದ್ದಿಯಾಗಿತ್ತು. ಅದರಲ್ಲಿಯೂ ಪಂದ್ಯದ ವೇಳೆ ನಟ ವಿಜಯ್ ದೇವರಕೊಂಡ ಮತ್ತು ಬಾಲಿವುಡ್​ ನಟಿ ಊರ್ವಶಿ ರೌಟೇಲಾ ಸಹ ಆಗಮಿಸಿದ್ದರು .ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಸಹಸ್ರಾರು ಕ್ರಿಕೆಟ್‌ ಪ್ರಿಯರು ಸೇರಿಕೊಂಡಿದ್ದರು. ಅಂದಹಾಗೆ ವಿಐಪಿ ಬಾಕ್ಸ್‌ನಲ್ಲಿ ಬಾಲಿವುಡ್‌ ಬೆಡಗಿ ಊರ್ವಶಿ ರೌಟೇಲಾ (Urvashi Rautela) ಕಾಣಿಸಿಕೊಂಡಿದ್ದು ವಿಶೇಷವಾಗಿತ್ತು. ಇದಕ್ಕೂ ಮೊದಲು ಇದೇ ನಟಿ ಊರ್ವಶೀ ಮತ್ತು ಟೀಂ ಇಂಡಿಯಾ ಆಟಗಾರ ರಿಷಭ್ ಪಂತ್​ ನಡುವೆ ಅನೇಕ ಮುಸುಕಿನ ಸಮರ ನಡೆದಿತ್ತು. ಹೀಗಾಗಿ ನಿನ್ನೆಯ ಪಂದ್ಯದ ಬಳಿಕ ಇದೇ ವಿಷಯವನ್ನು ಇಟ್ಟುಕೊಂಡು ರೋಹಿತ್ (Rohit Sharma) ಮತ್ತು ಚಹಾಲ್​ ಪಂತ್​ ಅವರ ಕಾಲೆಳೆದಿದ್ದಾರೆ.

ಊರ್ವಶಿಯ ಹುಡುಕಾಟದಲ್ಲಿ ಪಂತ್​:

ಹೌದು, ನಿನ್ನೆ ನಡೆದ ಹಾಂಗ್​ ಕಾಂಗ್​ ಪಂದ್ಯದ ಬಳಿಕ  ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ, ಚಹಾಲ್ ಮತ್ತು ರಿಷಭ್ ಪಂತ್​ ಮೈದಾನದಲ್ಲಿ ಕೆಲ ಕಾಲ ಸಮಯ ಕಳೆದರು. ಈ ವೇಳೆ  ರೋಹಿತ್​ ಮತ್ತು ಚಹಾಲ್​ ರಿಷಭ್​ ಬಳಿ ಊರ್ವಶಿ ಅವರನ್ನು ಹುಡುಕುತ್ತಿದ್ದೀಯಾ ಎಂದು ಕೇಳುವ ಮೂಲಕ ತಮಾಷೆ ಮಾಡುತ್ತಿದ್ದಾರೆ ಎಂದು ನೆಟ್ಟಿಗರು ಒಂದು ವಿಡಿಯೋ ತುಣುಕನ್ನು ವೈರಲ್ ಮಾಡುತ್ತಿದ್ದಾರೆ.

ಊರ್ವಶಿ ರೌಟೇಲಾ ಹಾಗೂ ಪಂತ್​ ನಡುವೆ ಕೆಲ ದಿನಗಳಿಂದ ಕೋಲ್ಡ್​ ವಾರ್​ ನಡೆಯುತ್ತಲೇ ಇದೆ. ಇಂಥಹ ಸಮಯದಲ್ಲಿ ರೌಟೇಲಾ ಗ್ರೌಂಡ್​ನಲ್ಲಿ ಕಾಣಿಸಿಕೊಂಡಿದ್ದು, ಸಾಕಷ್ಟು ಅನುಮಾನಗಳಿಗೆ ಕಾರಣವಾಗಿತ್ತು.

ಇದನ್ನೂ ಓದಿ: Virat Kohli: ಕೊಹ್ಲಿ ಅಭಿಮಾನಿಗಳಿಗೆ ಬಿಗ್​ ಶಾಕ್​, ಟಿ20 ಕ್ರಿಕೆಟ್​ಗೆ ವಿದಾಯ ಹೇಳ್ತಾರಾ ವಿರಾಟ್​?

 ಊರ್ವಶಿ ಬಂದಿದ್ದಕ್ಕೆ ಆಟ ಆಡಲಿಲ್ವಂತೆ ರಿಷಭ್​:

ಭಾರತ-ಪಾಕಿಸ್ತಾನ ನಡುವಣ ಪಂದ್ಯದಲ್ಲಿ ಊರ್ವಶಿ ಕಂಡು ಅವರ ಅಭಿಮಾನಿಗಳು ಬೆರಗಾದರು. ಆದರೆ, ದುರದೃಷ್ಟವಶಾತ್‌ ಟೀಂ ಇಂಡಿಯಾದ ಆಡುವ ಹನ್ನೊಂದರ ಬಳಗದಲ್ಲಿ ರಿಷಭ್ ಪಂತ್‌ ಸ್ಥಾನ ಪಡೆಯದೇ ಹೋದರು. ಇದಕ್ಕೆ ಸೋಷಿಯಲ್​ ಮೀಡಿಯಾದಲ್ಲಿ ಮತ್ತೊಂದು ಆಯಾಮ ಸಿಕ್ಕಿದೆ. ಅಕ್ಕ ಬಂದಿದ್ದಕ್ಕೆ ರಿಷಭ್ ಪಂತ್​ ಟೀಂಗೆ ಆಯ್ಕೆ ಆಗಲಿಲ್ಲ. ಮತ್ತೊಂದು ವಿವಾದ ಸೃಷ್ಠಿಯಾಗುವುದು ಬೇಡ ಅಂತ ರಿಷಭ್​ ಅವರೇ ಹೀಗೆ ಮಾಡಿದ್ದಾರಂತ ಸುದ್ದಿಯಾಗಿತ್ತು.

ಇದನ್ನೂ ಓದಿ: David Warner: ಮತ್ತೊಮ್ಮೆ ಭಾರತೀಯರ ಹೃದಯ ಗೆದ್ದ ವಾರ್ನರ್​, ಈ ಬಾರಿ ಅಂಥದ್ದೇನು​ ಮಾಡಿದ್ದಾರೆ ನೋಡಿ!

ಹೆಸರು ಹೇಳದೇ ತಿರುಗೇಟು ನೀಡಿದ್ದ ಪಂತ್​:

ಆದರೆ ಸಾಮಾಜಿಕ ಜಾಲತಾಣದಲ್ಲಿ ಊರ್ವಶಿ ಅವರ ಸಂದರ್ಶನದ ತುಣುಕುಗಳು ಹರಿದಾಡಿದ ನಂತರ ಕ್ರಿಕೆಟಿಗ ರಿಷಭ್ ಪಂತ್ ಊರ್ವಶಿ ಅವರ ಹೆಸರನ್ನು ಬಳಸದೇ ಇನ್ಸ್ಟಾಗ್ರಾಂ ನಲ್ಲಿ ಪೋಸ್ಟ್ ಒಂದನ್ನು ಮಾಡಿದ್ದರು. ಪೋಸ್ಟ್ ನಲ್ಲಿ ಅವರು, ‘ಕೇವಲ ಅಲ್ಪ ಜನಪ್ರಿಯತೆಗಾಗಿ ಮತ್ತು ಮುನ್ನಲೆಗೆ ಬರಲು ಜನರು ಸಂದರ್ಶನಗಳಲ್ಲಿ ಹೇಗೆ ಸುಳ್ಳು ಹೇಳುತ್ತಾರೆ ಎಂಬುದು ತಮಾಷೆಯಾಗಿದೆ. ಕೆಲವರು ಖ್ಯಾತಿ ಮತ್ತು ಹೆಸರಿಗಾಗಿ ಎಂತಹ ಹೇಳಿಕೆ ನೀಡುತ್ತಾರೆ ಎಂದು ನೋಡಿದರೆ ದುಃಖವಾಗುತ್ತದೆ. ದೇವರು ಅವರನ್ನು ಆಶೀರ್ವದಿಸಲಿ. #merapicachorhoBehen #jhutkibhilimithotihai” ಎಂದು ಬರೆದುಕೊಂಡಿದ್ದಾರೆ. ಅಲ್ಲದೇ ಕೊನೆಯಲ್ಲಿ ನೀಡಿದ ಈ ಎರಡು ಹ್ಯಾಶ್‌ಟ್ಯಾಗ್‌ಗಳ ಅರ್ಥ- ನನ್ನನ್ನು ಬಿಟ್ಟುಬಿಡಿ ಸಹೋದರಿ ಮತ್ತು ಸುಳ್ಳು ಹೇಳುವುದಕ್ಕೂ ಮಿತಿ ಇದೆ ಎಂದಾಗಿದೆ.
Published by:shrikrishna bhat
First published: