ವಿಂಬಲ್ಡನ್ 2018: ಕ್ವಾರ್ಟರ್​​ಫೈನಲ್​ಗೆ ಲಗ್ಗೆ ಇಟ್ಟ ರೋಜರ್ ಫೆಡರರ್

  • News18
  • 3-MIN READ
  • Last Updated :
  • Share this:

    ನ್ಯೂಸ್ 18 ಕನ್ನಡ

    ಲಂಡನ್ (ಜುಲೈ. 09): ಪ್ರತಿಷ್ಠಿತ ವಿಂಬಲ್ಡನ್ ಟೂರ್ನಿಯ ಪುರುಷರ ಸಿಂಗಲ್ಸ್ ವಿಭಾಗದ ಅಂತಿಮ ಹದಿನಾರರ ಸೆಣೆಸಾಟದಲ್ಲಿ ಸ್ವಿಟ್ಜರ್​​ಲೆಂಡ್​ನ ದಿಗ್ಗಜ ರೋಜರ್ ಫೆಡರರ್ ಅವರು ಗೆಲುವು ಸಾಧಿಸಿ ಕ್ವಾರ್ಟರ್ ಫೈನಲ್​ಗೆ ಲಗ್ಗೆ ಇಟ್ಟಿದ್ದಾರೆ. ಈ ಮೂಲಕ 21ನೇ ಗ್ರಾಂಡ್​​ಸ್ಲಾಮ್ ಪ್ರಶಸ್ತಿ ಕನಸನ್ನು ಗೆಲ್ಲುವ ಸನಿಹದಲ್ಲಿದ್ದಾರೆ.

    ಇಂದು ನಡೆದ ಅಂತಿಮ ಹದಿನಾರರ ಕಾದಾಟದಲ್ಲಿ ಫ್ರಾನ್ಸ್​ನ ಆಡ್ರಿಯನ್ ಮುನ್ನಾರಿನೊ ವಿರುದ್ಧ 6-0, 7-5, 6-4 ಸೆಟ್​ಗಳಲ್ಲಿ ಗೆಲುವಿನ ನಗೆ ಬೀರಿದರು. ಮೊದಲ ಸೆಟ್​​ ಅನ್ನು 16 ನಿಮಿಷದಲ್ಲೇ ತನ್ನ ವಶಕ್ಕೆ ಪಡೆದ ಫೆಡರರ್ ಅವರು, ಬಳಿಕ ಎರಡೂ ಸೆಟ್​ಗಳಲ್ಲಿ ಅಷ್ಟೇ ಬೇಗನೆ ಗೆಲುವು ಸಾಧಿಸಿದರು.

    53ನೇ ಗ್ರಾಂಡ್​​ಸ್ಲಾಮ್ ಕ್ವಾರ್ಟರ್​​ಫೈನಲ್​ನಲ್ಲಿ ಫೆಡರರ್, ಫ್ರಾನ್ಸ್​ನ ಗೇಲ್ ಮೊಂಫಿಲ್ಸ್ ಅಥವಾ ದ. ಆಫ್ರಿಕಾದ ಕೆವಿನ್ ಆ್ಯಂಡರ್ಸನ್ ವಿರುದ್ಧ ಹೋರಾಟ ನಡೆಸಲಿದ್ದಾರೆ.

    ಇನ್ನು ಇಂದು ನಡೆದ ಮತ್ತೊಂದು ಪಂದ್ಯದಲ್ಲಿ ಕೆನಡಾ ಆಟಗಾರ ಮಿಲಾಸ್ ರಾನಿಕ್ ಅವರು 4 ಸೆಟ್​​ಗಳ ಕಾದಾಟದಲ್ಲಿ ಜಯ ಗಳಿಸಿದ್ದಾರೆ. ಅಮೆರಿಕಾದ ಮೆಕ್​​ಡೋನಾಲ್ಡ್​ ಎದುರು ರಾನಿಕ್ ಅವರು 3-6, 6-4, 6-5 ಅಂತರದ ಗೆಲುವು ಸಾಧಿಸಿ ಕ್ವಾರ್ಟರ್ ಫೈನಲ್​ ಪ್ರವೇಶಿಸಿದ್ದಾರೆ.

     



    First published: