Roger Federer: ಫೆಡರರ್ ಕೊನೆಯ ಪಂದ್ಯದ ಟಿಕೆಟ್​ ಬೆಲೆ ಕೇಳಿದ್ರೆ ಶಾಕ್​ ಆಗ್ತೀರಾ! ಈ ಹಣದಲ್ಲಿ ಬೆನ್ಜ್​ ಕಾರೇ ಬರ್ತಿತ್ತು

Roger Federer: ಲೇವರ್ ಕಪ್ ಟೆನಿಸ್ ಅಂಕಣದಲ್ಲಿ ಫೆಡರರ್ ಅವರ ಕೊನೆಯ ಪಂದ್ಯವಾಗಿರಲಿದೆ. ಹೀಗಾಗಿ ಈ ಪಂದ್ಯದಲ್ಲಿ ಫೆಡರರ್ ಆಡುವುದನ್ನು ಲೈವ್ ಆಗಿ ನೋಡಬೇಕಾದರೆ ಟೆನಿಸ್ ಅಭಿಮಾನಿಗಳು ಬರೋಬ್ಬರಿ ಅರ್ಧ ಕೋಟಿಯಷ್ಟು ಖರ್ಚು ಮಾಡಬೇಕಿದೆ.

ರೋಜರ್ ಫೆಡರರ್

ರೋಜರ್ ಫೆಡರರ್

  • Share this:
ಟೆನಿಸ್  (Tennis) ದಿಗ್ಗಜ ರೋಜರ್ ಫೆಡರರ್ (Roger Federer) ಕಳೆದ ವಾರ ಸ್ಪರ್ಧಾತ್ಮಕ ಟೆನಿಸ್‌ನಿಂದ ನಿವೃತ್ತಿ ಘೋಷಿಸಿದ್ದಾರೆ. 41 ವರ್ಷದ ಫೆಡರರ್ ತಮ್ಮ 24 ವರ್ಷಗಳ ವೃತ್ತಿಜೀವನವನ್ನು ಇದ್ದಕ್ಕಿದ್ದಂತೆ ನಿಲ್ಲಿಸುವ ಮೂಲಕ ತಮ್ಮ ಅಭಿಮಾನಿಗಳಿಗೆ ಆಘಾತ ನೀಡಿದರು. 20 ಗ್ರ್ಯಾಂಡ್ ಸ್ಲಾಮ್ ಪಂದ್ಯಾವಳಿಗಳನ್ನು ಗೆದ್ದಿರುವ ಫೆಡರರ್ ತಮ್ಮ ವೃತ್ತಿಜೀವನದಲ್ಲಿ ಹಲವು ದಾಖಲೆಗಳನ್ನು ಬರೆದಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ, ಗಾಯಗಳು ಮತ್ತು ಶಸ್ತ್ರಚಿಕಿತ್ಸೆಗಳು ಫೆಡರರ್ ಅವರನ್ನು ಟೆನಿಸ್ ಅಂಕಣದಲ್ಲಿ ಅವರು ಅಷ್ಟಾಗಿ ಗುರುತಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಆದರೆ ಇದೀಗ ಮುಂಬರುವ ಲೇವರ್ ಕಪ್ (Rod Laver Cup)  ಅವರ ಕೊನೆಯ ಪಂದ್ಯಾವಳಿಯಾಗಿದೆ ಎಂದು ಹೇಳಿದ್ದಾರೆ. ಆದ್ದರಿಂದ, ಲೇವರ್ ಕಪ್ ಸ್ಪರ್ಧೆಯ ಮಹತ್ವವು ಹೆಚ್ಚಾಗಿದೆ.  ಇದರಿಂದಾಗಿ ಈಗ ಪಂದ್ಯಾವಳಿಯ ಟಿಕೆಟ್ ದರ ಸಹ ದುಪ್ಪಟ್ಟಾಗಿದ್ದು, ಮುಟ್ಟಿದ್ದು, ಬೆಲೆ ಕೇಳಿದರೆ ನೀವು ಶಾಕ್ ಆಗುತ್ತೀರಿ.

ಅರ್ಧ ಕೋಟಿಗೆ ಲೇವರ್ ಕಪ್ ಟಿಕೆಟ್:

ಲೇವರ್ ಕಪ್ ಟೆನಿಸ್ ಅಂಕಣದಲ್ಲಿ ಫೆಡರರ್ ಅವರ ಕೊನೆಯ ಪಂದ್ಯಾವಳಿಯನ್ನು ಆಡಲಿದ್ದಾರೆ. ಹೀಗಾಗಿ ಈ ಪಂದ್ಯದ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ. ಹೀಗಾಗಿ ಟಿಕೆಟ್​ ದರ ಸಹ ಸಾಕಷ್ಟು ಹೆಚ್ಚಳವಾಗಿದೆ. ದ್ವಿತೀಯ ಮಾರುಕಟ್ಟೆಯಲ್ಲಿ ಟಿಕೆಟ್ ದರವನ್ನು ಹೆಚ್ಚಿಸಿದ್ದು, ಒಂದು ಲೇವರ್ ಕಪ್ ಪಂದ್ಯದ ಟಿಕೆಟ್ 59 ಸಾವಿರ ಬ್ರಿಟಿಷ್ ಪೌಂಡ್‌ಗಳಷ್ಟಾಗಿದೆ. ಭಾರತೀಯ ರೂಪಾಯಿಯಲ್ಲಿ ಇದರ ಬೆಲೆ ಸುಮಾರು 53 ಲಕ್ಷ. ಅಲ್ಲದೇ ಕನಿಷ್ಠ ಟಿಕೆಟ್ 14 ಲಕ್ಷ ರೂಪಾಯಿ ಎಂದು ಹೇಳಲಾಗಿದೆ.

ಲೇವರ್ ಕಪ್ ಪಂದ್ಯಗಳು ಯಾವಾಗ ನಡೆಯಲಿದೆ ?:

ಲೇವರ್ ಕಪ್ ಸ್ಪರ್ಧೆಯು ಯುರೋಪ್ ಮತ್ತು ವಿಶ್ವದ ಇತರ ದೇಶಗಳ ಅಗ್ರ ಟೆನಿಸ್ ಆಟಗಾರರ ನಡುವೆ ನಡೆಯುತ್ತದೆ. ಫೆಡರರ್ ಈ ಟೂರ್ನಿಯಲ್ಲಿ ಯುರೋಪ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಫೆಡರರ್ ಜೊತೆಗೆ ಸ್ಪೇನ್‌ನ ರಾಫೆಲ್ ನಡಾಲ್ ಮತ್ತು ಸರ್ಬಿಯಾದ ನೊವಾಕ್ ಜೊಕೊವಿಕ್ ಕೂಡ ಯುರೋಪ್ ತಂಡದಲ್ಲಿದ್ದಾರೆ. ಉದ್ಘಾಟನಾ ಲೇವರ್ ಕಪ್ ಪಂದ್ಯ ಸೆಪ್ಟೆಂಬರ್ 22 ರಂದು ನಡೆಯಲಿದೆ. ಪಂದ್ಯಾವಳಿಯ ಅಂತಿಮ ಪಂದ್ಯವು ಭಾನುವಾರ, ಸೆಪ್ಟೆಂಬರ್ 25 ರಂದು ನಡೆಯಲಿದೆ. ಪಂದ್ಯಗಳು ಲಂಡನ್‌ನ O2 ಅರೆನಾದಲ್ಲಿ ನಡೆಯಲಿವೆ.

ಇದನ್ನೂ ಓದಿ: Ravichandran Ashwin: ಅಶ್ವಿನ್​ ಗೂಗ್ಲಿಗೆ ಬೋಲ್ಡ್ ಆದ ಪ್ರೀತಿ, ಇಲ್ಲಿದೆ ಟೀಂ ಇಂಡಿಯಾ ಬೌಲರ್​ ಪ್ರೇಮ್​ ಕಹಾನಿ

ಫೆಡರರ್   ಟೆನಿಸ್​ ಲೋಕದ ಕಿಂಗ್​:

1998 ರ ವಯಸ್ಸಿನಲ್ಲಿ ವೃತ್ತಿಪರ ಟೆನಿಸ್ ವೃತ್ತಿ ಆರಂಭಿಸಿದ ಫೆಡರರ್  2003ರಲ್ಲಿ 21ನೇ ವಯಸ್ಸಿನಲ್ಲಿ ಚೊಚ್ಚಲ ಗ್ರ್ಯಾನ್ ಸ್ಲಾಮ್ ಗೆದ್ದಿದ್ದರು. ಅಲ್ಲದೇ 14ನೇ ಗ್ರ್ಯಾನ್ ಸ್ಲಾಮ್ ಗೆಲ್ಲುವ ಮೂಲಕ ಪೀಟ್ ಸಾಂಪ್ರಾಸ್ ಅತಿ ಹೆಚ್ಚು ಪ್ರಶಸ್ತಿಗಳನ್ನು ಗಳಿಸಿದ ದಾಖಲೆಯನ್ನು ಸರಿಗಟ್ಟಿದರು. ಇದಲ್ಲದೆ, ಫೆಡರರ್ 2018 ರಲ್ಲಿ 20 ನೇ ವಿಂಬಲ್ಡನ್ ಪ್ರಶಸ್ತಿಯನ್ನು ಗೆದ್ದ ಮೊದಲ ಪುರುಷ ಆಟಗಾರರಾದರು. ನಡಾಲ್ 22 ಪ್ರಶಸ್ತಿಗಳೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, ನೊವಾಕ್ ಜೊಕೊವಿಕ್ 21 ಪ್ರಶಸ್ತಿಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಫೆಡರರ್ ಮೂರನೇ ಸ್ಥಾನದಲ್ಲಿದ್ದಾರೆ. ಫೆಡರರ್ 310 ವಾರಗಳ ಕಾಲ ನಂಬರ್ ಒನ್ ಸ್ಥಾನದಲ್ಲಿದ್ದು, ದಾಖಲೆ ಬರೆದಿದ್ದರು. ಫೆಡರರ್ ಸತತ 237 ವಾರಗಳ ಕಾಲ ನಂಬರ್ ಒನ್ ಆಗಿದ್ದರು. ಈ ದಾಖಲೆಯನ್ನು ಟೆನಿಸ್​ ಅಂಗಳದಲ್ಲಿ ಈವರೆಗೂ ಯಾರ ಕೈಯಲ್ಲಿಯೂ ಮುರಿಯಲು ಸಾಧ್ಯವಾಗಲಿಲ್ಲ.
Published by:shrikrishna bhat
First published: