• ಹೋಂ
  • »
  • ನ್ಯೂಸ್
  • »
  • ಕ್ರೀಡೆ
  • »
  • ರೋಜರ್ ಫೆಡರರ್ ವಿಶ್ವದ ನಂ.1 ಟೆಸ್ಟ್ ಬ್ಯಾಟ್ಸ್​ಮನ್..? ಅಚ್ಚರಿಪಡುವ ಮುನ್ನ ಸುದ್ದಿ ಓದಿ

ರೋಜರ್ ಫೆಡರರ್ ವಿಶ್ವದ ನಂ.1 ಟೆಸ್ಟ್ ಬ್ಯಾಟ್ಸ್​ಮನ್..? ಅಚ್ಚರಿಪಡುವ ಮುನ್ನ ಸುದ್ದಿ ಓದಿ

  • Share this:

    -ನ್ಯೂಸ್ 18

    ಲಂಡನ್(ಜು.10): ವಿಶ್ವದ ನಂ 1 ಶ್ರೇಯಾಂಕಿತ ಟೆನಿಸ್ ಆಟಗಾರ ರೋಜರ್ ಫೆಡರರ್ ಸೋಮವಾರ ವಿಂಬಲ್ಡನ್​ನ 4ನೇ ಸುತ್ತಿನ 16ನೇ ಪಂದ್ಯದಲ್ಲಿ ಎದುರಾಳಿ ಅಡ್ರಿಯಾನ್ ಮನ್ನಾರಿನೋ ಅವರನ್ನ 6-0, 7-5, 6-4 ಸೆಟ್​ಗಳಿಂದ ಮಣಿಸಿದರು. ಪಂದ್ಯದುದ್ದಕ್ಕೂ ರೋಜರ್ ಫೆಡರರ್ ಪಾರುಪತ್ಯವಿದ್ದರೂ ಅತ್ಯಂತ ಗಮನಸೆಳೆದಿದ್ದು ರೋಜರ್ ಫೆಡರರ್ ಕ್ರಿಕೆಟ್ ಕೌಶಲ್ಯ. ಇದೇನಿದು ಟೆನಿಸ್ ಪಂದ್ಯದಲ್ಲಿ ಕ್ರಿಕೆಟ್ ಬಗ್ಗೆ ಮಾತಾಡುತ್ತಿದ್ದಾರೆ ಎಂದುಕೊಂಡ್ರಾ..? ಖಂಡಿತಾ ಹೌದು.

    ಮೊದಲ ಸೆಟ್​ನಲ್ಲಿ ಫೆಡರರ್ ಅವರ ಅಪರೂಪದ ಹೊಡೆತವೊಂದು ವಿಂಬಲ್ಡನ್ ವೀಕ್ಷಕರ ಗಮನ ಸೆಳೆಯಿತು. 2-0 ಮುನ್ನಡೆ ಪಡೆದಿದ್ದ ಫೆಡರರ್, ಎದುರುಬದಿಯಿಂದ ಮನ್ನಾರಿನೋ ಮಾಡಿದ ತಪ್ಪು ಸರ್ವ್ ಅನ್ನ ಥೇಟ್ ಕ್ರಿಕೆಟ್ ಶೈಲಿಯಲ್ಲೇ ಡಿಫೆಂಡ್ ಮಾಡಿದರು.

    ಕೂಡಲೇ ಈ ಬಗ್ಗೆ ವಿಂಬಲ್ಡನ್ ಟ್ವಿಟ್ಟರ್ ಹ್ಯಾಂಡಲ್​ನಲ್ಲಿ ವಿಡಿಯೋ ಜೊತೆ ಟ್ವೀಟನ್ನ ಐಸಿಸಿಗೆ ಟ್ಯಾಗ್ ಮಾಡಲಾಗಿದ್ದು, ರೋಜರ್ ಫೆಡರರ್ ಅವರ ಈ ಶಾಟ್​ಗೆ ಯಾವ ರ್ಯಾಂಕ್ ಕೊಡುತ್ತೀರಾ..? ಎಂದು ಕೇಳಲಾಗಿದೆ.



    ಇದಕ್ಕುತ್ತರಿಸಿರುವ ಐಸಿಸಿ, ರೋಜರ್ ಫೆಡರರ್ ವಿಶ್ವದ ನಂ.1 ಟೆಸ್ಟ್ ಬ್ಯಾಟ್ಸ್​ಮನ್ ಎಂದು ತಮಾಷೆಯ ಉತ್ತರ ಕೊಟ್ಟಿದ್ದು, ಇದರ ಜೊತೆಗೆ ರ್ಯಾಂಕಿಂಗ್ ಪಟ್ಟಿಯಲ್ಲಿ ಫೆಡರರ್ ಅಗ್ರಸ್ಥಾನದಲ್ಲಿರುವ ರೀತಿಯ ಒಂದು ಇಮೇಜ್ ಸಹ ಹಾಕಲಾಗಿದೆ.


    ಜೊತೆಗೆ ರೋಜರ್ ಫೆಡರರ್ ಹೊಡೆತವನ್ನ ಸಚಿನ್ ತೆಂಡೂಲ್ಕರ್ ಡಿಫೆನ್ಸಿವ್ ಶಾಟ್​ಗೆ ಹೋಲಿಕೆ ಮಾಡಲಾಗಿದ್ದು, ಶ್ರೇಷ್ಠರು ಶ್ರೇಷ್ಠರನ್ನ ಗುರ್ತಿಸಿದಾಗ ಎಂದು ಬರೆಯಲಾಗಿದೆ.


     

     

    First published: