ರೋಚಕ ಕಾಳಗದಲ್ಲಿ ನಡಾಲ್ ಮಣಿಸಿ ವಿಂಬಲ್ಡನ್ ಫೈನಲ್‌ ಪ್ರವೇಶಿಸಿದ ರೋಜರ್ ಫೆಡರರ್

Roger Federer - Rafael Nadal : ಆದರೆ ಮೂರನೇ ಸೆಟ್​ನಲ್ಲಿ ಬಳಲಿದಂತೆ ಕಂಡು ಬಂದ ನಡಾಲ್ ಮತ್ತೆ ಫೆಡರರ್​ ಮುಂದೆ ಮಂಡಿಯೂರಿದರು. ಆದರೆ 4ನೇ ಸೆಟ್​ನಲ್ಲಿ ಮತ್ತೊಮ್ಮೆ ಫಿನಿಕ್ಸ್ ಆಟವಾಡಿದರೂ ಫೆಡರರ್​ ಅನುಭವದ ಮುಂದೆ ಸೋಲಲೇಬೇಕಾಯಿತು.

zahir | news18
Updated:July 13, 2019, 4:41 PM IST
ರೋಚಕ ಕಾಳಗದಲ್ಲಿ ನಡಾಲ್ ಮಣಿಸಿ ವಿಂಬಲ್ಡನ್ ಫೈನಲ್‌ ಪ್ರವೇಶಿಸಿದ ರೋಜರ್ ಫೆಡರರ್
nadal-vs-federer
  • News18
  • Last Updated: July 13, 2019, 4:41 PM IST
  • Share this:
ಪ್ರತಿಷ್ಠಿತ ವಿಂಬಲ್ಡನ್ ಗ್ರ್ಯಾಂಡ್‌ಸ್ಲಾಂ ಟೂರ್ನಮೆಂಟ್‌ನಲ್ಲಿ ಎಂಟು ಬಾರಿಯ ಚಾಂಪಿಯನ್ ಸ್ವಿಜರ್ಲೆಂಡ್‌ನ ರೋಜರ್ ಫೆಡರರ್ ಫೈನಲ್ ಪ್ರವೇಶಿಸಿದ್ದಾರೆ. ಶುಕ್ರವಾರ ನಡೆದ ಹೈ ವೋಲ್ಟೇಜ್ ಟೆನಿಸ್ ಸೆಮಿಫೈನಲ್‌ನಲ್ಲಿ ಸ್ಪೇನ್‌ನ ರಾಫೆಲ್ ನಡಾಲ್​ರನ್ನು 7-6 (7/3), 1-6, 6-3, 6-4 ಸೆಟ್‌ಗಳಿಂದ ಮಣಿಸಿದ  ಫೆಡರರ್ 12ನೇ ಬಾರಿಗೆ ವಿಂಬಲ್ಡನ್ ಅಂತಿಮ ಘಟ್ಟಕ್ಕೆ ತಲುಪಿದರು.

ವೃತ್ತಿ ಜೀವನದಲ್ಲಿ 40ನೇ ಬಾರಿ ಮುಖಾಮುಖಿಯಾಗಿದ್ದ ನಾಡಾಲ್ - ಫೆಡರರ್ ಜೋಡಿಯ ಈ ಪಂದ್ಯದಲ್ಲಿ ಆರಂಭದಿಂದಲೇ ಸ್ವಿಸ್ ಆಟಗಾರ ಮೇಲುಗೈ ಸಾಧಿಸಿದ್ದರು. ಉತ್ತಮ ಸರ್ವ್ ಹಾಗೂ ರಿವರ್ಸ್​ ಶಾಟ್​ಗಳಿಂದ ನಡಾಲ್​ರನ್ನು ಇಕ್ಕಟಿಗೆ ಸಿಲುಕಿಸುವಲ್ಲಿ ಯಶಸ್ವಿಯಾದ ಫೆಡರರ್ ಮೊದಲ ಸೆಟ್​ ಅನ್ನು ತಮ್ಮದಾಗಿಸಿಕೊಂಡರು. ಆದರೆ ಎರಡನೇ ಸೆಟ್​​ನಲ್ಲಿ ಕಂಬ್ಯಾಕ್ ಮಾಡಿದ ವಿಶ್ವದ 2ನೇ ಶ್ರೇಯಾಂಕಿತ ಆಟಗಾರ ನಡಾಲ್ ತಮ್ಮ ಟೈಮಿಂಗ್ ಮತ್ತು ಅದ್ಭುತ ಕೈ ಚಳಕದಿಂದ ಫೆಡರರ್​​ರನ್ನು 1-6 ಅಂತರದಿಂದ ಮಣಿಸಿದರು.

ಆದರೆ ಮೂರನೇ ಸೆಟ್​ನಲ್ಲಿ ಬಳಲಿದಂತೆ ಕಂಡು ಬಂದ ನಡಾಲ್ ಮತ್ತೆ ಫೆಡರರ್​ ಮುಂದೆ ಮಂಡಿಯೂರಿದರು. ಆದರೆ 4ನೇ ಸೆಟ್​ನಲ್ಲಿ ಮತ್ತೆ ಫಿನಿಕ್ಸ್ ಆಟವಾಡಿದರೂ ಫೆಡರರ್​ ಅನುಭವದ ಮುಂದೆ ಸೋಲಲೇಬೇಕಾಯಿತು. ಈ ಮೂಲಕ 2008 ರಲ್ಲಿ ವಿಂಬಲ್ಡನ್ ಫೈನಲ್‌ಲ್ಲಿ ಸ್ಪೇನ್ ಆಟಗಾರ ರಾಫೆಲ್ ನಡಾಲ್ ವಿರುದ್ಧ ಸೋಲನುಭವಿಸಿದ್ದ ಫೆಡಡರ್​ ಸೆಮಿ ಫೈನಲ್​ನಲ್ಲೇ ಸೇಡು ತೀರಿಸಿಕೊಂಡರು.

ಮತ್ತೊಂದು ಪಂದ್ಯದಲ್ಲಿ ಟೆನಿಸ್ ಅಂಗಳದ ಅಗ್ರ ಶ್ರೇಯಾಂಕಿತ ಹಾಗೂ ನಾಲ್ಕು ಬಾರಿಯ ಚಾಂಪಿಯನ್ ನೊವಾಕ್ ಜೊಕೊವಿಕ್ ಆರನೇ ಬಾರಿಗೆ ವಿಂಬಲ್ಡನ್ ಫೈನಲ್ ತಲುಪಿದ್ದಾರೆ.  23ನೇ ಶ್ರೇಯಾಂಕಿತ ಸ್ಪೇನ್ ಆಟಗಾರ ರಾಬರ್ಟೊ ಬಟಿಸ್ಟಾ ಅಗೂಟ್ ಅವರನ್ನು 6-2, 4-6, 6-3, 6-2 ಸೆಟ್​ಗಳಿಂದ ಸೋಲಿಸುವ ಮೂಲಕ ಸರ್ಬಿಯನ್ ಆಟಗಾರ ಅಂತಿಮ ಘಟ್ಟ ತಲುಪಿದರು.

ಭಾನುವಾರ ನಡೆಯಲಿರುವ ಫೈನಲ್‌ನಲ್ಲಿ ಫೆಡರರ್‌-ಜೊಕೊವಿಕ್ ಮುಖಾಮುಖಿ ಆಗಲಿದ್ದು, ನಂಬರ್​-1 ಆಟಗಾರನನ್ನು ಮಣಿಸಿದರೆ 37ರ ಹರೆಯದ ಫೆಡರರ್ 21ನೇ ಬಾರಿ ಪ್ರಮುಖ ಪ್ರಶಸ್ತಿ ಗೆದ್ದಂತಾಗಲಿದೆ. ಇನ್ನು ಉಭಯ ಆಟಗಾರರು 47 ಬಾರಿ ಪ್ರಮುಖ ಟೂರ್ನಿಯಲ್ಲಿ ಮುಖಾಮುಖಿಯಾಗಿದ್ದು, ಫೆಡರರ್​ 22 ರಲ್ಲಿ ಜಯಿಸಿದರೆ, ಜೋಕೋವಿಕ್ 25 ಬಾರಿ ಗೆದ್ದಿದ್ದಾರೆ.

First published:July 13, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ