• Home
  • »
  • News
  • »
  • sports
  • »
  • BCCI President: ಬಿಸಿಸಿಐ ನೂತನ ಅಧ್ಯಕ್ಷರಾಗಿ ಕನ್ನಡಿಗ ರೋಜರ್​ ಬಿನ್ನಿ ಆಯ್ಕೆ? ಕಾರ್ಯದರ್ಶಿಯಾಗಿ ಜಯ್ ಶಾ ಮುಂದುವರಿಕೆ

BCCI President: ಬಿಸಿಸಿಐ ನೂತನ ಅಧ್ಯಕ್ಷರಾಗಿ ಕನ್ನಡಿಗ ರೋಜರ್​ ಬಿನ್ನಿ ಆಯ್ಕೆ? ಕಾರ್ಯದರ್ಶಿಯಾಗಿ ಜಯ್ ಶಾ ಮುಂದುವರಿಕೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

BCCI President: 1983ರ ಏಕದಿನ ವಿಶ್ವಕಪ್ ವಿಜೇತ ತಂಡದ ಸದಸ್ಯ ರೋಜರ್ ಬಿನ್ನಿ ಬಿಸಿಸಿಐನ ಮುಂದಿನ ಅಧ್ಯಕ್ಷರಾಗಲಿದ್ದಾರೆ. ಇದರ ಔಪಚಾರಿಕ ಘೋಷಣೆಯನ್ನು ಅಕ್ಟೋಬರ್ 18 ರಂದು ಮಾಡಲಾಗುವುದು ಎಂದು ತಿಳಿದುಬಂದಿದೆ. ಹಾಲಿ ಅಧ್ಯಕ್ಷ ಸೌರವ್ ಗಂಗೂಲಿ ಸ್ಥಾನಕ್ಕೆ ಬಿನ್ನಿ ನೇಮಕವಾಗಲಿದ್ದಾರೆ. ಅದೇ ಸಮಯದಲ್ಲಿ, ಜಯ್ ಶಾ ಬಿಸಿಸಿಐ ಕಾರ್ಯದರ್ಶಿಯಾಗಿ ಮುಂದುವರಿಯಲಿದ್ದಾರೆ.

ಮುಂದೆ ಓದಿ ...
  • Share this:

ಭಾರತದ 1983ರ ವಿಶ್ವಕಪ್ ವಿಜೇತ ತಂಡದ  ಸದಸ್ಯ ರೋಜರ್ ಬಿನ್ನಿ (Roger Binny) ಅವರು ಹಾಲಿ ಸೌರವ್ ಗಂಗೂಲಿ (Sourav Gangul) ನಂತರ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (BCCI) ಅಧ್ಯಕ್ಷರಾಗಲಿದ್ದಾರೆ ಎಂದು ತಿಳಿದುಬಂದಿಎಎ. ಗಂಗೂಲಿ ಕಳೆದ 3 ವರ್ಷಗಳಿಂದ ಬಿಸಿಸಿಐ ಅಧ್ಯಕ್ಷರಾಗಿದ್ದಾರೆ ಮತ್ತು ಅಕ್ಟೋಬರ್ 18 ರಂದು ನಡೆಯಲಿರುವ ಮಂಡಳಿಯ ವಾರ್ಷಿಕ ಸಾಮಾನ್ಯ ಸಭೆಯಲ್ಲಿ (MGM) ಬಿನ್ನಿ ಅವರು ಮುಂದಿನ ಅಧ್ಯಕ್ಷರಾಗಲಿದ್ದಾರೆ ಎಂದು ಅಧಿಕೃತ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ಕಳೆದ ಒಂದು ವಾರದ ನಂತರ, 67 ವರ್ಷದ ಬೆಂಗಳೂರು ಮೂಲದ ಬಿನ್ನಿ ಮಂಡಳಿಯ 36 ನೇ ಅಧ್ಯಕ್ಷರಾಗಲು ನಿರ್ಧರಿಸಲಾಗಿದೆ ಎಂದು ಹೇಳಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಅಧಿಕೃತ ಘೋಷಣೆಯೊಂದು ಬಾಕಿ ಉಳಿದಿದೆ.


ಬಿಸಿಸಿಐ ಅಧ್ಯಕ್ಷರಾಗಿ ಕನ್ನಡಿಗ:


ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಪುತ್ರ ಜಯ್ ಶಾ ಸತತ ಎರಡನೇ ಅವಧಿಗೆ ಬಿಸಿಸಿಐ ಕಾರ್ಯದರ್ಶಿಯಾಗಿ ಮುಂದುವರಿಯಲಿದ್ದಾರೆ. ಇದಲ್ಲದೇ ಗಂಗೂಲಿ ಐಸಿಸಿ ಮಂಡಳಿಯಲ್ಲಿ ಸ್ಥಾನ ಪಡೆಯಲಿದ್ದಾರೆ ಎಂಬ ಮಾತುಗಳು ಕೇಲಿಬರುತ್ತಿವೆ. ಬಿಸಿಸಿಐ ಪದಾಧಿಕಾರಿಗಳ ಪೈಕಿ ಏಕೈಕ ರಾಜೀವ್ ಶುಕ್ಲಾ ಅವರು ಮಂಡಳಿಯ ಉಪಾಧ್ಯಕ್ಷರಾಗಿ ಮುಂದುವರಿಯಲಿದ್ದಾರೆ. ಕ್ರೀಡಾ ಸಚಿವ ಅನುರಾಗ್ ಠಾಕೂರ್ ಅವರ ಕಿರಿಯ ಸಹೋದರ ಅರುಣ್ ಸಿಂಗ್ ಧುಮಾಲ್ ಈಗ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಅಧ್ಯಕ್ಷರಾಗಲಿದ್ದಾರೆ. ಈ ಎಲ್ಲಾ ಬದಲಾವಣೆ ಜೊತೆಗೆ ಬಿಸಿಸಿಐ ನ ಮುಂದಿನ ಅಧ್ಯಕ್ಷರಾಗಿ ಕನ್ನಡಿಗ ರೋಜರ್​ ಬಿನ್ನಿ ಆಯ್ಕೆ ಬಹುತೇಕ ಖಚಿತವಾದಂತಾಗಿದೆ. ಇದರೊಂದಿಗೆ ಮಹಾರಾಷ್ಟ್ರದ ಬಿಜೆಪಿ ನಾಯಕ ಆಶಿಶ್ ಶೆಲಾರ್ ಮಂಡಳಿಯ ನೂತನ ಖಜಾಂಚಿಯಾಗಲಿದ್ದಾರೆ.


ಅಕ್ಟೋಬರ್ 18 ರಂದು ರೋಜೆನ್ ಬಿನ್ನಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಲ್ಲಾ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾದ ಕಾರಣ ಯಾವುದೇ ಹುದ್ದೆಗೆ ಚುನಾವಣೆ ನಡೆಯುವುದಿಲ್ಲ. ಮಧ್ಯಮ ವೇಗದ ಬೌಲರ್ ಆಗಿದ್ದ ಬಿನ್ನಿ 1983ರ ವಿಶ್ವಕಪ್‌ನಲ್ಲಿ ಭಾರತವನ್ನು ಚಾಂಪಿಯನ್ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ನಂತರ ಅವರು ಎಂಟು ಪಂದ್ಯಗಳಲ್ಲಿ 18 ವಿಕೆಟ್‌ಗಳನ್ನು ಕಬಳಿಸಿದ್ದು ಆ ಟೂರ್ನಿಯ ದಾಖಲೆಯಾಗಿತ್ತು.


ಇದನ್ನೂ ಓದಿ: Shubman Gill: ಸ್ವಿಮಿಂಗ್​ ಫೂಲ್​ನಲ್ಲಿ ಸಿಕ್ಸ್ ಪ್ಯಾಕ್​ ತೋರಿಸಿದ ಶುಭ್​ಮನ್ ಗಿಲ್​, ಏನ್ ಲುಕ್ ಗುರು ಅಂತಿದ್ದಾರೆ ಲೇಡಿ ಫ್ಯಾನ್ಸ್​​


ಭಾರತದ ಪರ ಉತ್ತಮ ಪ್ರದರ್ಶನ ನೀಡಿದ್ದ ಬಿನ್ನಿ:


ಇನ್ನು, ಕನ್ನಡಿಗ ರೋಜರ್ ಬಿನ್ನಿ, ಭಾರತದ ಪರ ಒಟ್ಟು 27 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ ಅವರು ಬ್ಯಾಟಿಂಗ್‌ನಲ್ಲಿ 23.06 ಸರಾಸರಿಯಲ್ಲಿ 830 ರನ್ ಗಳಿಸಿದ್ದು, 5 ಅರ್ಧಶತಕ ಸಿಡಿಸಿದ್ದಾರೆ. ಅದಲ್ಲದೇ 72 ಏಕದಿನ ಪಂದ್ಯಗಳ ಮೂಲಕ  16.13 ಸರಾಸರಿಯಲ್ಲಿ 629 ರನ್ ಗಳಿಸಿದ್ದಾರೆ ಮತ್ತು 1 ಅರ್ಧಶತಕ ಬಾರಿಸಿದ್ದಾರೆ. ಬೌಲಿಂಗ್‌ನಲ್ಲಿ ಬಿನ್ನಿ  27 ಟೆಸ್ಟ್  ಗಳಿಂದ 47 ವಿಕೆಟ್ ಪಡೆದಿದ್ದರೆ 2 ಬಾರಿ 5 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. ಇನ್ನು 72 ಏಕದಿನ ಪಂದ್ಯಗಳಿಂದ 77 ವಿಕೆಟ್ ಪಡೆದು ಸಾಧನೆ ಮಾಡಿದ್ದಾರೆ.


ಇದನ್ನೂ ಓದಿ: MS Dhoni: ಧೋನಿ ಅಭಿಮಾನಿಗಳಿಗೆ ಗುಡ್​ ನ್ಯೂಸ್,​ ಐಪಿಎಲ್ 2023ರ ಕುರಿತು ಮಹತ್ವದ ಹೇಳಿಕೆ ನೀಡಿದ ಕ್ಯಾಪ್ಟನ್ ಕೂಲ್


ಇನ್ನು, ರೋಜರ್ ಬಿನ್ನಿ ಅವರ ಪುತ್ರ ಸ್ಟುವರ್ಟ್ ಬಿನ್ನಿ ಕೂಡ ಭಾರತವನ್ನು ಪ್ರತಿನಿಧಿಸಿದ್ದರು. ಆದರೆ, ಅವರ ತಂದೆ ಆಯ್ಕೆಗಾರರಾಗಿದ್ದಾಗ, ಅವರು ಭಾರತ ತಂಡವನ್ನು ಪ್ರವೇಶಿಸಿದರು ಮತ್ತು ಅದು ವಿವಾದಕ್ಕೆ ಕಾರಣವಾಯಿತು. ತಂದೆ ಸೆಲೆಕ್ಟರ್ ಆಗಿದ್ದರಿಂದ ಅರ್ಹತೆ ಇಲ್ಲದಿದ್ದರೂ ಸ್ಟುವರ್ಟ್ ಬಿನ್ನಿ ಅವರನ್ನು ಟೀಂ ಇಂಡಿಯಾಕ್ಕೆ ಆಯ್ಕೆ ಮಾಡಿರುವುದು ಆ ವೇಳೆ ದೊಡ್ಡ ಚರ್ಚೆಯಾಗಿತ್ತು. ಭಾರತ ತಂಡಕ್ಕೆ ಆಲ್ ರೌಂಡರ್ ಆಗಿ ಬಂದ ಸ್ಟುವರ್ಟ್ ಬಿನ್ನಿ ಹೆಚ್ಚು ಕಾಲ ತಮ್ಮ ಸ್ಥಾನವನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ.

Published by:shrikrishna bhat
First published: