Robin Uthappa: ಕ್ರಿಕೆಟ್​ಗೆ ವಿದಾಯ ಹೇಳಿದ ಕನ್ನಡಿಗ ರಾಬಿನ್ ಉತ್ತಪ್ಪ

Robin Uthappa: ಮೊದಲ ಬಾರಿಗೆ ಟಿ20 ವಿಶ್ವಕಪ್ (T20 World Cup) ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಭಾರತ ತಂಡದ ಮಾಜಿ ಅನುಭವಿ ಆಟಗಾರ ಕನ್ನಡಿಗ ರಾಬಿನ್​ ಉತ್ತಪ್ಪ (Robin Uthappa) ಅಂತಾರಾಷ್ಟ್ರೀಯ ಕ್ರಿಕೆಟ್​ಗೆ (Cricket) ನಿವೃತ್ತಿ (Retirement) ಘೋಷಿಸಿದ್ದಾರೆ.

ರಾಬಿನ್​ ಉತ್ತಪ್ಪ

ರಾಬಿನ್​ ಉತ್ತಪ್ಪ

  • Share this:
ಕಳೆದ ಕೆಲ ದಿನಗಳಿಂದ ಕ್ರಿಕೆಟ್​ನಲ್ಲಿ ಸಾಲು ಸಾಲು ಸ್ಟಾರ್​ ಆಟಗಾರರು ತಮ್ಮ ವೃತ್ತಿ ಜೀವನಕ್ಕೆ ವಿದಾಯ ಹೇಳುತ್ತಿದ್ದಾರೆ. ಕಳೆದ ಕೆಲದಿನಗಳ ಹಿಂದೆಯಷ್ಟೇ, ಆಸೀಸ್​ನ ಸ್ಟಾರ್​ ಆಟಗಾರ ಆರೋನ್​ ಪಿಂಚ್​ ಏಕದಿನ ಮಾದರಿಗೆ ಗುಡ್​ ಬೈ ಹೇಳಿದ್ದರು. ಅಲ್ಲದೇ ನಿನ್ನೆ ಪಾಂಡೆ ಸಹ ನಿವೃತ್ತಿ ಘೋಷಿಸಿದ್ದರು. ಆದರೆ ಇದೀಗ ಮೊದಲ ಬಾರಿಗೆ ಟಿ20 ವಿಶ್ವಕಪ್ (T20 World Cup) ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಭಾರತ ತಂಡದ ಮಾಜಿ ಅನುಭವಿ ಆಟಗಾರ ಕನ್ನಡಿಗ ರಾಬಿನ್​ ಉತ್ತಪ್ಪ (Robin Uthappa) ಅಂತಾರಾಷ್ಟ್ರೀಯ ಕ್ರಿಕೆಟ್​ಗೆ (Cricket) ನಿವೃತ್ತಿ (Retirement) ಘೋಷಿಸಿದ್ದಾರೆ. ಅಲ್ಲದೇ ಭಾರತೀಯ ಕ್ರಿಕೆಟ್​ನ ಎಲ್ಲಾ ಮಾದರಿಗಳಿಗೂ ಅವರು ವಿದಾಯ ಹೇಳಿದ್ದು, ಈ ವಿಷಯವನ್ನು ಅವರು ಟ್ವೀಟ್​ ಮಾಡುವ ಮೂಲಕ ಸ್ಪಷ್ಟಪಡಿಸಿದ್ದಾರೆ.  ಇನ್ನು, ಉತ್ತಪ್ಪ 2006ರಲ್ಲಿ ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಿದ್ದರು.

ಅಂತರಾಷ್ಟ್ರೀಯ ಕ್ರಿಕೆಟ್​ಗೆ ಗುಡ್​ಬೈ ಹೇಳಿದ ಕನ್ನಡಿಗ:

ಹೌದು, ಮೊದಲ ಟಿ20 ವಿಶ್ವಕಪ್​ನ ಹೀರೋ ಆಗಿದ್ದಂತಹ ಟೀಂ ಇಂಡಿಯಾದ ಸ್ಟಾರ್​ ಆಟಗಾರ ಕನ್ನಡಿಗ ರಾಬಿನ್ ಉತ್ತಪ್ಪ ಇಂದು ಅಂತರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿದ್ದಾರೆ. ಈ ಕುರಿತು ಅವರು ಟ್ವೀಟ್​ ಮಾಡುವ ಮೂಲಕ ತಿಳಿಸಿದ್ದಾರೆ. ಈ ಕುರಿತು ಬರೆದುಕೊಂಡಿರುವ ಅವರು, ‘ನನ್ನ ದೇಶ ಹಾಗೂ ನನ್ನ ರಾಜ್ಯವಾದ ಕರ್ನಾಟಕವನ್ನು ಪ್ರತಿನಿಧಿಸುವುದು ನನಗೆ ದೊಡ್ಡ ಗೌರವದ ವಿಷಯವಾಗಿದೆ. ಆದರೆ, ಪ್ರತಿಯೊಂದು ಒಳ್ಳೆಯ ವಿಷಯಕ್ಕೂ ಅಂತ್ಯವೆನ್ನುವುದು ಇರುತ್ತದೆ. ಇದೇ ಕಾರಣಕ್ಕಾಗಿ ಇಂದು ನಾನು ಭಾರತ ಕ್ರಿಕೆಟ್​ನ ಎಲ್ಲಾ ಮಾದರಿಗಳಿಂದ ನಿವೃತ್ತಿ ಹೊಂದಲು ನಿರ್ಧರಿಸಿದ್ದೇನೆ‘ ಎಂದು ಬರೆದುಕೊಂಡಿದ್ದಾರೆ.

ಭಾರತೀಯ ತಂಡದಲ್ಲಿ ಮಿಂಚಿದ್ದ ಉತ್ತಪ್ಪ:

ಟೀಂ ಇಂಡಿಯಾಗೆ 2006ರಲ್ಲಿ ಇಂಗ್ಲೆಂಡ್​ ವಿರುದ್ಧದ ಸರಣಿಯ ಮೂಲಕ ಪದಾರ್ಪಣೆ ಮಾಡಿದ್ದ ಉತ್ತಪ್ಪ, ನಂತರ ತಂಡದಲ್ಲಿ ಅದ್ಭುತವಾಗಿ ಮಿಂಚಿದ್ರು. ತಮ್ಮ ಹೊಡಿಬಡಿ ಆಟದಿಂದ ಅವರು ಮೊದಲ ಟಿ20 ವಿಶ್ವಕಪ್​ಗೂ ಆಯ್ಕೆ ಆಗಿ ತಂಡ ಚೊಚ್ಚಲ ಟಿ20 ವಿಶ್ವಕಪ್​ ಟ್ರೋಪಿ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದರು. ಇನ್ನು, ತಮ್ಮ ಮೊದಲ ಪಂದ್ಯದಲ್ಲಿಯೇ ಓಪರ್​ ಆಗಿ ಕಣಕ್ಕಿಳಿದ ಅವರು ಬರೋಬ್ಬರಿ 86 ರನ್ ಗಳಿಸುವ ಮೂಲಕ ಅಬ್ಬರಿಸಿದ್ದರು. ಮುಂದೆ ಅವರ ಈ ಆಟವೇ ಅವರನ್ನು ವಿಶ್ವಕಪ್​ ತಂಡಕ್ಕೆ ಆಯ್ಕೆ ಆಗುವಂತೆ ಮಾಡಿತು.

ಇದನ್ನೂ ಓದಿ: MS Dhoni: ನನಗೆ ಅವಕಾಶಗಳು ದೊರಕದಿರಲು ಧೋನಿಯೇ ಕಾರಣ , ಕ್ಯಾಪ್ಟನ್​ ಕೂಲ್ ವಿರುದ್ಧ ಮಾಜಿ CSK ಆಟಗಾರನ ಗಂಭೀರ ಆರೋಪ

ಟಿ20 ವಿಶ್ವಕಪ್ ಹೀರೋ ಆಗಿ ಮಿಂಚಿದ್ದ ಕನ್ನಡಿಗ:

ಇನ್ನು, ರಾಬಿನ್​ ಉತ್ತಪ್ಪ ಚೊಚ್ಚಲ ಬಾರಿಗೆ ಭಾರತ ತಂಡವು ಟಿ20 ವಿಶ್ವಕಪ್​ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದರು. 2007ರಲ್ಲಿ ನಡೆದ ಟಿ20 ವಿಶ್ವಕಪ್​ನ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಅರ್ಧ ಶತಕ ಸಿಡಿಸಿ ಮಿಂಚಿದ್ದರು. ಅಲ್ಲದೇ ಈ ಪಂದ್ಯ ಟೈ ಆದರೂ ಬಾಲ್​ ಔಟ್​ನಲ್ಲಿ ಗೆಲುವು ಸಾದಿಸಿತ್ತು. ಇಲ್ಲಿ ಉತ್ತಪ್ಪ ಸಹ ಬೌಲಿಂಗ್​ ಮಾಡಿದ್ದು, ವಿಶೇಷ. ಇನ್ನು, ಈ ವಿಜಯದ 15ನೇ ವಾರ್ಷಿಕೋತ್ಸವದಂದು ಉತ್ತಪ್ಪ ನಿವೃತ್ತಿ ಹೇಳಿರುವುದು ವಿಶೇಷವಾಗಿದೆ. ಉತ್ತಪ್ಪ ಭಾರತದ ಪರ ಒಟ್ಟು 46 ಏಕದಿನ ಪಂದ್ಯಗಳಲ್ಲಿ 934 ರನ್ ಗಳಿಸಿದ್ದರೆ, 13 ಟಿ20 ಪಂದ್ಯಗಳಲ್ಲಿ 249 ರನ್ ಗಳಿಸಿದ್ದಾರೆ.
Published by:shrikrishna bhat
First published: