HOME » NEWS » Sports » RITIKA PHOGAT DIES BY HANGING ON THE SAME DAY LOSING WRESTLING MATCH SNVS

Ritika Phogat - ಕುಸ್ತಿ ಪಂದ್ಯ ಸೋತಿದ್ದಕ್ಕೆ ಗೀತಾ ಫೋಗಾಟ್ ಸಹೋದರಿ ಆತ್ಮಹತ್ಯೆ

ರಾಜಸ್ಥಾನದ ಭರತಪುರ್​ನಲ್ಲಿ ನಡೆದ ರಾಜ್ಯಮಟ್ಟದ ಕುಸ್ತಿ ಪಂದ್ಯಾವಳಿಯ ಫೈನಲ್​ನಲ್ಲಿ 17 ವರ್ಷದ ರಿತಿಕಾ ಫೋಗಾಟ್ ಒಂದು ಅಂಕದಿಂದ ಸೋಲಪ್ಪಿದ್ದರು. ಅದೇ ದಿನ ರಾತ್ರಿ ಅವರು ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

news18
Updated:March 18, 2021, 9:58 AM IST
Ritika Phogat - ಕುಸ್ತಿ ಪಂದ್ಯ ಸೋತಿದ್ದಕ್ಕೆ ಗೀತಾ ಫೋಗಾಟ್ ಸಹೋದರಿ ಆತ್ಮಹತ್ಯೆ
ರಿತಿಕಾ ಫೋಗಾಟ್
  • News18
  • Last Updated: March 18, 2021, 9:58 AM IST
  • Share this:
ಭರತ್​ಪುರ್, ರಾಜಸ್ಥಾನ(ಮಾ. 18): ಖ್ಯಾತ ಕುಸ್ತಿಪಟುಗಳಾದ ಗೀತಾ ಮತ್ತು ಬಬಿತಾ ಫೋಗಾಟ್ ಅವರ ಸೋದರಿ ರಿತಿಕಾ ಫೋಗಾಟ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾಜ್ಯಮಟ್ಟದ ಕುಸ್ತಿ ಪಂದ್ಯಾವಳಿಯಲ್ಲಿ ಸೋಲನುಭವಿಸಿದ ದಿನವೇ ರಾತ್ರಿ ಅವರು ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ. ಮಾರ್ಚ್ 14ರಂದು ರಾತ್ರಿ 11 ಗಂಟೆಗೆ ರಿತಿಕಾ ಅವರು ತಮ್ಮ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆಕೆಗೆ 17 ವರ್ಷ ವಯಸ್ಸಾಗಿತ್ತು. ಕುಸ್ತಿಯಲ್ಲಿ ಸೋತಿದ್ದಕ್ಕೆ ನೊಂದು ಆಕೆ ಈ ಅತಿರೇಕದ ಕ್ರಮಕ್ಕೆ ಮುಂದಾಗಿದ್ದಿರಬಹುದು ಎಂದು ಶಂಕಿಸಲಾಗಿದೆ.

ರಾಜಸ್ಥಾನದ ಭರತಪುರ್​ನಲ್ಲಿ ಮಾರ್ಚ್ 12ರಿಂದ 14ರವರೆಗೆ ಮೂರು ದಿನಗಳ ಕಾಲ ನಡೆದ ರಾಜ್ಯ ಮಟ್ಟದ ವಿವಿಧ ವಯೋಮಾನದ ಕುಸ್ತಿ ಪಂದ್ಯಾವಳಿಯಲ್ಲಿ ರಿತಿಕಾ ಫೋಗಾಟ್ ಪಾಲ್ಗೊಂಡಿದ್ದರು. ಫೈನಲ್​ವರೆಗೂ ಏರಿದ್ದ ರಿತಿಕಾ ಮಾರ್ಚ್ 14ರಂದು ನಡೆದ ಪ್ರಶಸ್ತಿ ಸುತ್ತಿನಲ್ಲಿ ಕೇವಲ ಒಂದು ಅಂಕದಿಂದ ಸೋಲನುಭವಿಸಿದ್ದರು. ಈ ಸೋಲಿನ ಆಘಾತ ತಾಳಲಾರದೆ ಜೀವನವನ್ನೇ ಅಂತ್ಯಗೊಳಿಸುವ ನಿರ್ಧಾರಕ್ಕೆ ಬಂದಳಾ ಎಂಬುದು ದುರ್ದೈವ.

ದ್ರೋಣಾಚಾರ್ಯ ಪ್ರಶಸ್ತಿ ವಿಜೇತ ವ್ರೆಸ್ಲಿಂಗ್ ಕೋಚ್ ಮಹಾಬೀರ್ ಪಹಲ್ವಾನ್ ಫೋಗಾಟ್ ಅವರಿಂದ ತರಬೇತಿ ಪಡೆದಿದ್ದ ರಿತಿಕಾ ಫೋಗಾಟ್ ಭವಿಷ್ಯದ ಕುಸ್ತಿಪಟು ಎಂದು ಪರಿಗಣಿಸಲ್ಪಟ್ಟಿದ್ದರು. ರಿತಿಕಾ ಸೆಣಸಿದ್ದ ಪಂದ್ಯವನ್ನ ಅವರ ಗುರು ಮಹಾಬೀರ್ ಅವರೂ ವೀಕ್ಷಿಸಿದ್ದರು. ಗೀತಾ ಫೋಗಾಟ್, ಬಬಿತಾ ಫೋಗಾಟ್, ವಿನೇಶಾ ಫೋಗಾಟ್ ಅವರು ಇದೇ ಮಹಾಬೀರ್ ಫೋಗಾಟ್ ಅವರ ಮಕ್ಕಳಾಗಿದ್ದಾರೆ. ಆದರೆ ರಿತಿಕಾ ಫೋಗಾಟ್ ಅವರು ಗೀತಾ ಫೋಗಾಟ್ ಅವರ ಚಿಕ್ಕಮ್ಮನ ಮಗಳಾಗಿದ್ದಾಳೆ.

ಇದನ್ನೂ ಓದಿ: Fastag Problems – ಫಾಸ್​ಟ್ಯಾಗ್, ಸಮಸ್ಯೆಗಳ ಆಗರ – ವಾಹನ ಸವಾರರಿಗೆ ಕಿರಿಕಿರಿ

2016ರಲ್ಲಿ ತೆರೆ ಕಂಡ ಅಮೀರ್ ಖಾನ್ ಅಭಿನಯದ ‘ದಂಗಲ್’ ಸಿನಿಮಾ ಇದೇ ಫೋಗಾಟ್ ಕುಟುಂಬದ ಕುಸ್ತಿ ಸಾಧನೆಯ ಕಥಾವಸ್ತು ಹೊಂದಿದೆ.

ಇದೇ ವೇಳೆ ರಿತಿಕಾ ಫೋಗಾಟ್ ಅವರ ಸಾವಿಗೆ ಹಲವರು ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ. ಮಾಜಿ ಕೇಂದ್ರ ಸಚಿವ ಜನರಲ್ ವಿ.ಕೆ. ಸಿಂಗ್ ಅವರು ಆಟಗಾರರು ಒತ್ತಡಕ್ಕೆ ಒಳಗಾಗುತ್ತಿರುವುದು ಹೆಚ್ಚಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಕೆಲ ದಶಕಗಳ ಹಿಂದೆ ಇದ್ದ ಪರಿಸ್ಥಿತಿಗಿಂತ ಈಗಿನದ್ದು ಭಿನ್ನವಾಗಿದೆ. ಹಿಂದೆ ಅಥ್ಲೀಟ್​ಗಳಿಗೆ ಅಂಥ ಒತ್ತಡಗಳಿರಲಿಲ್ಲ. ಈಗ ಒತ್ತಡ ಹೆಚ್ಚಾಗಿದೆ. ಅಥ್ಲೀಟ್​ಗಳಿಗೆ ತರಬೇತಿ ನೀಡುವಾಗ ಈ ಒತ್ತಡಳನ್ನ ಎದುರಿಸುವ ಬಗೆ ಬಗ್ಗೆಯೂ ಅರಿವು ಮೂಡಿಸುವುದು ಅಗತ್ಯವಿದೆ ಎಂದು ವಿಕೆ ಸಿಂಗ್ ಅಭಿಪ್ರಾಯಪಟ್ಟಿದೆ.
Published by: Vijayasarthy SN
First published: March 18, 2021, 9:58 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories