ಆಸೀಸ್ ಸರಣಿಯಲ್ಲಿ ರಿಷಭ್: 'ಕೀಪಿಂಗ್, ಬ್ಯಾಟಿಂಗ್ ಜೊತೆ ಸ್ಲೆಡ್ಜಿಂಗ್'​​​ನಲ್ಲೂ ಮಿಂಚಿದ ಪಂತ್

ಇದೆ ಮೊದಲ ಬಾರಿ ಆಸ್ಟ್ರೇಲಿಯಾ ಪ್ರವಾಸ ಬೆಳೆಸಿದ ಡೆಲ್ಲಿ ಡ್ಯಾಶರ್ ರಿಷಭ್ ಪಂತ್ ಆಸೀಸ್ ಟೆಸ್ಟ್​ ಸರಣಿಯಲ್ಲಿ ಹೆಚ್ಚು ಸುದ್ದಿಯಲ್ಲಿದ್ದ ಆಟಗಾರ. ಬ್ಯಾಟಿಂಗ್, ಕೀಪಿಂಗ್​ನಲ್ಲಿ ಮಾತ್ರವಲ್ಲದೆ ಸ್ಲೆಡ್ಜಿಂಗ್​ನಲ್ಲು ಬಾಯಿಯಿಂದ ಉತ್ತರ ನೀಡಿ ಮಿಂಚಿದರು.

Vinay Bhat | news18
Updated:January 7, 2019, 12:41 PM IST
ಆಸೀಸ್ ಸರಣಿಯಲ್ಲಿ ರಿಷಭ್: 'ಕೀಪಿಂಗ್, ಬ್ಯಾಟಿಂಗ್ ಜೊತೆ ಸ್ಲೆಡ್ಜಿಂಗ್'​​​ನಲ್ಲೂ ಮಿಂಚಿದ ಪಂತ್
ರಿಷಭ್ ಪಂತ್ (Twitter, Edited)
Vinay Bhat | news18
Updated: January 7, 2019, 12:41 PM IST

ಸಿಡ್ನಿ (ಜ. 07): ಏಳು ದಶಕಗಳ ಬಳಿಕ ಟೀಂ ಇಂಡಿಯಾ ಆಸ್ಟ್ರೇಲಿಯಾ ಮಣ್ಣಿನಲ್ಲಿ ಚೊಚ್ಚಲ ಟೆಸ್ಟ್​ ಸರಣಿ ಗೆದ್ದ ಸಾಧನೆ ಮಾಡಿದೆ. ವಿದೇಶಿ ನೆಲದಲ್ಲಿ ಭಾರತ ಕ್ರಿಕೆಟ್ ತಂಡ ವೀಕ್ ಎನ್ನುತ್ತಿದ್ದವರಿಗೆ ಕೊಹ್ಲಿ ಪಡೆ ಹೊಸ ಇತಿಹಾಸ ಬರೆಯುವ ಮೂಲಕ ಸರಿಯಾಗೆ ಉತ್ತರ ನೀಡಿದೆ. 


ನಾಲ್ಕು ಪಂದ್ಯಗಳ ಟೆಸ್ಟ್​ ಸರಣಿಯಲ್ಲಿ ಟೀಂ ಇಂಡಿಯಾ ಬ್ಯಾಟ್ಸ್​ಮನ್​ಗಳು-ಬೌಲರ್​ಗಳು ಭರ್ಜರಿ ಪ್ರದರ್ಶನ ತೋರಿದ್ದರು. ಅದರಲ್ಲು ಇದೆ ಮೊದಲ ಬಾರಿ ಆಸ್ಟ್ರೇಲಿಯಾ ಪ್ರವಾಸ ಬೆಳೆಸಿದ ಡೆಲ್ಲಿ ಡ್ಯಾಶರ್ ರಿಷಭ್ ಪಂತ್ ಆಸೀಸ್ ಟೆಸ್ಟ್​ ಸರಣಿಯಲ್ಲಿ ಹೆಚ್ಚು ಸುದ್ದಿಯಲ್ಲಿದ್ದ ಆಟಗಾರ. ಬ್ಯಾಟಿಂಗ್, ಕೀಪಿಂಗ್​ನಲ್ಲಿ ಮಾತ್ರವಲ್ಲದೆ ಸ್ಲೆಡ್ಜಿಂಗ್​ನಲ್ಲು ಬಾಯಿಯಿಂದ ಉತ್ತರ ನೀಡಿ ಮಿಂಚಿದರು.


ಇದನ್ನೂ ಓದಿ: 'ವಿರಾಟ್ ಕೊಹ್ಲಿ' ಕಾಂಗರೂಗಳ ನಾಡಲ್ಲಿ ಟೆಸ್ಟ್​ ಸರಣಿ ಗೆದ್ದ ಭಾರತದ ಪ್ರಥಮ ನಾಯಕ

ಇಡೀ ಸರಣಿಯಲ್ಲಿ ಪಂತ್ 20 ಕ್ಯಾಚ್ ಪಡೆದು, ಟೆಸ್ಟ್​ ಸರಣಿಯೊಂದರಲ್ಲಿ ಅತಿ ಹೆಚ್ಚು ಕ್ಯಾಚ್ ಪಡೆದ ಭಾರತದ ಮೊದಲ ವಿಕೆಟ್ ಕೀಪರ್ ಎಂಬ ದಾಖಲೆಯನ್ನು ಮಾಡಿದರು. ಅಷ್ಟೆ ಅಲ್ಲದೆ ಆಸೀಸ್ ನೆಲದಲ್ಲಿ ಶತಕ ಗಳಿಸಿದ ಭಾರತದ ಮೊದಲ ವಿಕೆಟ್ ಕೀಪರ್ ಕಿರೀಟವನ್ನು ಪಂತ್ ತೊಟ್ಟರು.ಬ್ಯಾಟಿಂಗ್​ನಲ್ಲು ತಮ್ಮ ಸಾಮರ್ಥ್ಯ ತೋರಿಸಿದ ಪಂತ್ 7 ಇನ್ನಿಂಗ್ಸ್​ನಲ್ಲಿ 1 ಶತಕದೊಂದಿಗೆ ಒಟ್ಟು 350 ರನ್ ಕಲೆಹಾಕಿದ್ದಾರೆ. ಈ ಸರಣಿಯಲ್ಲಿ ಚೇತೇಶ್ವರ್ ಪೂಜಾರ ಬಳಿಕ ಅತಿ ಹೆಚ್ಚು ರನ್​​​ಗಳಿದ ಎರಡನೇ ಬ್ಯಾಟ್ಸ್​ಮನ್​​​​ ಪಂತ್ ಆಗಿದ್ದಾರೆ.


ಇನ್ನು ಸ್ಲೆಡ್ಜಿಂಗ್​ನಲ್ಲಿ ಕಾಂಗರೂಗಳಿಗೆ ಬಿಸಿ ಮುಟ್ಟಿಸಿದ ಪಂತ್ ಆಸ್ಟ್ರೇಲಿಯಾ ನಾಯಕನಗಿ ಸರಿಯಾಗೆ ಕಾಲೆಳೆದರು. ಮೊದಲ ಪಂತ್ ಬ್ಯಾಟ್ ಮಾಡುವ ವೇಳೆಟಿಮ್ ಪೇಯ್ನ್ ಅವರು ನೀನು ಬೇಬಿ ಸಿಟ್ಟಿಂಗ್ ಮಾಡು ಎಂದು ಹೇಳಿದ್ದರು. ಇದಕ್ಕೆ ನೀನು ತಾತ್ಕಾಲಿಕ ನಾಯಕ ಎಂದು ಹೇಳಿ ಹೇಳಿ ಪಂತ್ ಸೇಡುತೀರಿಸಿಕೊಂಡಿದ್ದರು.


ಇದನ್ನು ಓದಿ: ಕನ್ನಡಿಗನ ಸ್ಥಾನಕ್ಕೆ ಮತ್ತೊಬ್ಬ ಕನ್ನಡಿಗ: ಟೀಂ ಇಂಡಿಯಾ ಆರಂಭಿಕ ಸಮಸ್ಯೆಗೆ ಸಿಕ್ಕಿದೆ ಪರಿಹಾರ
Loading...

ಕೊನೆಯ ಟೆಸ್ಟ್ ಆರಂಭಕ್ಕೂ ಮೊದಲು ಆಸ್ಟ್ರೇಲಿಯಾ ಪ್ರಧಾನಿಯನ್ನು ಭೇಟಿಯಾದ ಟೀಂ ಇಂಡಿಯಾ ಆಟಗಾರರು, ಈ ವೇಳೆ ಪಂತ್​ರನ್ನು ಸ್ವಾಗತಿಸಿ ನಿಮ್ಮಂತೆ ಸ್ಪರ್ಧಾತ್ಮಕ ಆಟವನ್ನು ಇಷ್ಟ ಪಡುತ್ತೇನೆ ಎಂದು ಹೇಳಿದ್ದರು. ಈ ಮೂಲಕ ರಿಷಭ್ ಪಂತ್ ಟೂರ್ನಿಯುದ್ದಕ್ಕು ಉತ್ತಮ ಆಟ ಪ್ರದರ್ಶಿಸಿ ತಂಡದ ಗೆಲುವಿನಲ್ಲು ಪ್ರಮುಖ ಪಾತ್ರವಹಿಸಿದ್ದರು.


 
First published:January 7, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ