ಭಾರತ-ಇಂಗ್ಲೆಂಡ್: ಮೂರನೇ ಟೆಸ್ಟ್​​ಗೆ ಕಾರ್ತಿಕ್ ಬದಲು ರಿಷಭ್ ಪಂತ್​ಗೆ ಸ್ಥಾನ..?

news18
Updated:August 17, 2018, 7:31 PM IST
ಭಾರತ-ಇಂಗ್ಲೆಂಡ್: ಮೂರನೇ ಟೆಸ್ಟ್​​ಗೆ ಕಾರ್ತಿಕ್ ಬದಲು ರಿಷಭ್ ಪಂತ್​ಗೆ ಸ್ಥಾನ..?
news18
Updated: August 17, 2018, 7:31 PM IST
ನ್ಯೂಸ್ 18 ಕನ್ನಡ

ನಾಳೆಯಿಂದ(ಆ. 18) ಇಂಗ್ಲೆಂಡ್​ನ ನ್ಯಾಟಿಂಗ್​​ಹ್ಯಾಮ್​​ನಲ್ಲಿ ಭಾರತ-ಇಂಗ್ಲೆಂಡ್ ನಡುವಣ ಮೂರನೇ ಟೆಸ್ಟ್ ಪಂದ್ಯ ಆರಂಭವಾಗಲಿದೆ. ಈಗಾಗಲೇ ಆಡಿರುವ 2 ಪಂದ್ಯದಲ್ಲಿ ಸೋಲುಂಡಿರುವ ಟೀಂ ಇಂಡಿಯಾ 3ನೇ ಟೆಸ್ಟ್​ನಲ್ಲಿ ಗೆಲ್ಲಲೇ ಬೇಕಾದ ಒತ್ತಡದಲ್ಲಿದೆ.

ಅಂತೆಯೆ ತಂಡದಲ್ಲಿ ಒಂದಿಷ್ಟು ಬದಲಾವಣೆಯ ಗಾಳಿ ಬೀಸುವ ಸಾಧ್ಯೆತಯೂ ಇದೆ. ಈಗಾಗಲೇ ಗಾಯದಿಂದ ಸಂಪೂರ್ಣ ಗುಣಮುಖರಾಗಿರುವ ಜಸ್​ಪ್ರೀತ್ ಬುಮ್ರಾ ಮೂರನೇ ಟೆಸ್ಟ್​ನಲ್ಲಿ ಆಡುವುದು ಖಚಿತವಾಗಿದೆ. ಇದರ ಜೊತೆಗೆ ಕಳಪೆ ಫಾರ್ಮ್​​ನಲ್ಲಿರುವ ದಿನೇಶ್ ಕಾರ್ತಿಕ್ ಬದಲು ಯುವ ಆಟಗಾರ ರಿಷಭ್ ಪಂತ್​ಗೆ ಸ್ಥಾನ ಸಿಗುವ ಲಕ್ಷಣಗಳಿವೆ. ಈಗಾಗಲೇ ಅಭ್ಯಾಸದಲ್ಲಿ ತೊಡಗಿಕೊಂಡಿರುವ ಪಂತ್ ಆಡುವ 11ರಲ್ಲಿ ಸೇರ್ಪಡೆ ಆಗುವುದು ಖಚಿತವಾಗಿದೆ. ಪಂತ್ ಅವರು ಕೀಪಿಂಗ್ ಜೊತೆಗೆ ಬ್ಯಾಟಿಂಗ್​ನಲ್ಲೂ ಭರ್ಜರಿ ಫಾರ್ಮ್​​ನಲ್ಲಿದ್ದು, ಹೆಚ್ಚಿನ ನಿರೀಕ್ಷೆ ಇಡಲಾಗಿದೆ. ನಾಯಕ ವಿರಾಟ್ ಕೊಹ್ಲಿ ಕೂಡ ಬೆನ್ನು ನೋವಿನಿಂದ ಗುಣಮುಖರಾಗಿದ್ದು, ನಾನು 3ನೇ ಟೆಸ್ಟ್​​ನಲ್ಲಿ ಆಡಲು ಫೀಟ್ ಎಂದಿದ್ದಾರೆ. ಆರ್. ಅಶ್ವಿನ್ ಹಾಗೂ ಹಾರ್ದಿಕ್ ಪಾಂಡ್ಯ ಸಹ ಫಿಟ್ ಆಗಿದ್ದು ಕಣಕ್ಕಿಳಿಯಲು ಸಿದ್ದರಾಗಿದ್ದಾರೆ.

ಇನ್ನು ನ್ಯಾಟಿಂಗ್​​ಹ್ಯಾಮ್​​ನಲ್ಲಿ ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾದ ಪ್ರದರ್ಶನ ನೋಡುವುದಾದರೆ:

First published:August 17, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...