• Home
  • »
  • News
  • »
  • sports
  • »
  • IND vs NZ: ಪಂತ್ ಮುಂದಿನ MS ಧೋನಿ ಎಂದ ಕ್ರಿಕೆಟ್​ ಸ್ಪೆಷಲಿಸ್ಟ್, ಯಾಕೆಂದು ಕೇಳಿದ್ರೆ ಅಚ್ಚರಿ ಆಗ್ತೀರಾ!

IND vs NZ: ಪಂತ್ ಮುಂದಿನ MS ಧೋನಿ ಎಂದ ಕ್ರಿಕೆಟ್​ ಸ್ಪೆಷಲಿಸ್ಟ್, ಯಾಕೆಂದು ಕೇಳಿದ್ರೆ ಅಚ್ಚರಿ ಆಗ್ತೀರಾ!

ಪಂತ್​-ಧೋನಿ

ಪಂತ್​-ಧೋನಿ

ವಿಕೆಟ್ ಕೀಪರ್ ರಿಷಭ್ ಪಂತ್‌ರಿಂದ ನೆರವು ಪಡೆದ ಚಾಹಲ್ ವಿಕೆಟ್ ಕಬಳಿಸುವಲ್ಲಿ ಪಂತ್ ಸಲಹೆ ಅತ್ಯಂತ ಮಹತ್ವದ್ದಾಯಿತು. ಗಾಳಿಯಲ್ಲಿ ನಿಧಾನವಾಗಿ ಬೌಲಿಂಗ್ ಮಾಡುವಂತೆ ಚಾಹಲ್‌ಗೆ ಸಲಹೆ ನೀಡಿದ ರಿಷಭ್, ಫಿಲಿಪ್ಸ್ ಕ್ಲೀನ್ ಬೌಲ್ಡ್ ಆಗುವಂತೆ ಮಾಡಿದರು.

  • Share this:

ಭಾರತ ಮತ್ತು ನ್ಯೂಜಿಲ್ಯಾಂಡ್ (IND vs NZ)  ವಿರುದ್ಧದ ಟಿ20 ಸರಣಿಯನ್ನು ಭಾರತ ಈಗಾಗಲೇ ವಶಪಡಿಸಿಕೊಂಡಿದ್ದು, ನಾಳೆ ನಡೆಯಲಿರುವ ಏಕದಿನ ಸರಣಿಯ ಕೊನೆಯ ಪಂದ್ಯವನ್ನು ಗೆದ್ದುಮ ಸರಣಿಯನ್ನು ಸಮಬಲ ಸಾಧಿಸಲು ಭಾರತ ತಂಡ ನಾಳೆ ಕಾದಾಡಲಿದೆ. ಆದರೆ 2ನೇ ಟಿ20 ಪಂದ್ಯದಲ್ಲಿ ಭಾರತದ ಪರ ದೀಪಕ್ ಹೂಡಾ 4 ವಿಕೆಟ್ ಕಬಳಿಸಿದ ನಂತರ, ಲೆಗ್ ಸ್ಪಿನ್ನರ್ ಯಜುವೇಂದ್ರ ಚಾಹಲ್ (Yuzvendra Chahal) 2 ವಿಕೆಟ್‌ಗಳನ್ನು ಪಡೆದುಕೊಂಡರು. ತಮ್ಮ ಸ್ಪಿನ್ನಿಂಗ್ ಬೌಲಿಂಗ್ ದಾಳಿಯಿಂದ ಗ್ಲೆನ್ ಫಿಲಿಪ್ಸ್ ಮತ್ತು ಜೇಮ್ಸ್ ನೀಶಮ್ ಅವರನ್ನು ಯಜುವೇಂದ್ರ ಪೆವಿಲಿಯನ್‌ಗೆ ಅಟ್ಟುವಲ್ಲಿ ಯಶಸ್ವಿಆಗುವ ಮೂಲಕ ಪಂದ್ಯ ಗೆಲ್ಲಿಸಲು ಸಹಾಯಕರಾದರು. ಆದರೆ ಚಹಾಲ್​​ಗೆ ಬೌಲಿಂಗ್​ ಮಾಡಲು ಸಲಹೆ ನಿಡಿದ್ದು, ಪಂತ್ (Rishabh Pant)​ ಎಂಬ ವಿಷಯ ಇದೀಗ ಬಹಿರಂಗವಾಗಿದೆ.


ಪಂತ್ ಸಲಹೆಯಂತೆ ಬೌಲಿಂಗ್ ಮಾಡಿದ ಚಾಹಲ್:


ವಿಕೆಟ್ ಕೀಪರ್ ರಿಷಭ್ ಪಂತ್‌ರಿಂದ ನೆರವು ಪಡೆದ ಚಾಹಲ್ ವಿಕೆಟ್ ಕಬಳಿಸುವಲ್ಲಿ ಪಂತ್ ಸಲಹೆ ಅತ್ಯಂತ ಮಹತ್ವದ್ದಾಯಿತು. ಗಾಳಿಯಲ್ಲಿ ನಿಧಾನವಾಗಿ ಬೌಲಿಂಗ್ ಮಾಡುವಂತೆ ಚಾಹಲ್‌ಗೆ ಸಲಹೆ ನೀಡಿದ ರಿಷಭ್, ಫಿಲಿಪ್ಸ್ ಕ್ಲೀನ್ ಬೌಲ್ಡ್ ಆಗುವಂತೆ ಮಾಡಿದರು. ಟಿವಿ ನಿರೂಪಕರು ಕೂಡ ಪಂತ್ ಅವರು ಚಾಹಲ್‌ಗೆ ನೀಡಿರುವ ಸಲಹೆಯನ್ನು ಮೆಚ್ಚಿಕೊಂಡಿದ್ದು, ಪಂದ್ಯದ ಟ್ರಿಕ್ ಗೊತ್ತಿದೆ ಎಂದು ವಿಕೆಟ್ ಕೀಪರ್ ಅನ್ನು ಹೊಗಳಿದ್ದಾರೆ.


ಸೂರ್ಯಕುಮಾರ್ ಭರ್ಜರಿ ಬ್ಯಾಟಿಂಗ್​:


ಇನ್ನು, ಟಿ20 ಮೂರು ಸರಣಿ ಪಂದ್ಯಗಳಲ್ಲಿ ಭಾರತ ಗೆಲುವನ್ನು ದಾಖಲಿಸಿ ಸರಣಿ ಗೆದ್ದಿತು. ಅಗ್ರ ಶ್ರೇಯಾಂಕದ T20I ಬ್ಯಾಟ್ಸ್‌ಮನ್ ಸೂರ್ಯಕುಮಾರ್ ಯಾದವ್ 11 ಬೌಂಡರಿ ಮತ್ತು 7 ಸಿಕ್ಸರ್‌ಗಳನ್ನು ಸಿಡಿಸಿದ್ದು 217.65 ಸ್ಟ್ರೈಕ್ ರೇಟ್‌ನಲ್ಲಿ 51 ಎಸೆತಗಳಲ್ಲಿ 111 ರನ್‌ಗಳನ್ನು ಗಳಿಸಿ ಸೋಲಿಲ್ಲದ ಸರದಾರ ಎಂಬುದನ್ನು ನಿರೂಪಿಸಿದ್ದಾರೆ. 49 ಬಾಲ್‌ಗಳಲ್ಲಿ ಅವರ ಎರಡನೆಯ T20I ಶತಕ ಸಿಡಿಸಿ ಮಿಂಚಿದ್ದರು. ತಂಡವು ಒಟ್ಟು20 ಓವರ್‌ಗಳಲ್ಲಿ 191/6 ರಷ್ಟು ಸವಾಲಿನ ಗುರಿ ನೀಡಲು ಕಾರಣವಾಯಿತು. ಬೆನ್ನಟ್ಟಲು ಸಾಧ್ಯವಾಗದ ನ್ಯೂಜಿಲ್ಯಾಂಡ್‌ ತಂಡವು 18.5 ಓವರ್‌ಗಳಲ್ಲಿ 126 ರನ್‌ಗಳಿಗೆ ಕುಸಿದು ಭಾರತ ತಂಡಕ್ಕೆ ಶರಣಾಯಿತು.


ದೀಪಕ್ ಹೂಡಾ ನಾಲ್ಕು ವಿಕೆಟ್‌ಗಳನ್ನು ಕಿತ್ತರೆ, ಯಜುವೇಂದ್ರ ಚಾಹಲ್ ಮತ್ತು ಮೊಹಮ್ಮದ್ ಸಿರಾಜ್ ತಲಾ ಎರಡು ವಿಕೆಟ್‌ಗಳನ್ನು ತಮ್ಮ ಖಾತೆಗೆ ಸೇರಿಸಿಕೊಂಡರು. ಇತ್ತ ಭುವನೇಶ್ವರ್ ಕುಮಾರ್ ಕೂಡ ಒಂದು ವಿಕೆಟ್ ಪಡೆದುಕೊಂಡರು. ಪಂದ್ಯದ ನಂತರದ ಸಮಾರಂಭದಲ್ಲಿ ತಂಡದ ಆಟಗಾರರ ಕುರಿತು ಅನಿಸಿಕೆ ಹಂಚಿಕೊಂಡ ಹಾರ್ದಿಕ್ ಪಾಂಡ್ಯ, ತಂಡದ ಸಂಪೂರ್ಣ ಪ್ರದರ್ಶನ ಇದಾಗಿದ್ದು, ಇದಕ್ಕಿಂತ ಉತ್ತಮ ಪ್ರದರ್ಶನ ಯಾರೂ ಕೊಡಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ. 30 ರನ್‌ಗಳ ಮುನ್ನಡೆಯನ್ನು ಸೂರ್ಯಕುಮಾರ್ ತಂಡಕ್ಕೆ ನೀಡಿದ್ದು ಬೌಲಿಂಗ್ ಕೂಡ ಅಷ್ಟೇ ಆಕ್ರಮಣಕಾರಿಯಾಗಿತ್ತು ಎಂದು ತಿಳಿಸಿದ್ದರು.


ಇದನ್ನೂ ಓದಿ: FIFA World Cup 2022: ಈ ರೀತಿಯ ಟೀ ಶರ್ಟ್‌ ಧರಿಸಿದಕ್ಕೆ ಪತ್ರಕರ್ತನ ಬಂಧನ, ಫಿಫಾ ವಿಶ್ವಕಪ್​ನಲ್ಲಿ ಹೆಚ್ಚಾಯ್ತು ನಿಯಮಗಳ ಕಿರಿಕಿರಿ


ಉತ್ತಮ ಪ್ರದರ್ಶನ ನೀಡಿದ್ದೇವೆ; ಹಾರ್ದಿಕ್ ಪಾಂಡ್ಯ:


ನಮಗೆ ಸವಾಲಾಗಿ ಕಾಣುವ ಎಲ್ಲಾ ಸಂದರ್ಭಗಳನ್ನೂ ಅರಿತುಕೊಂಡು ಉತ್ತಮ ಪ್ರದರ್ಶನ ನೀಡುವ ಭರವಸೆಯನ್ನು ಹೊಂದಿದ್ದೆವು ಎಂದು ತಿಳಿಸಿರುವ ಪಾಂಡ್ಯ ಕ್ರೀಡಾಂಗಣದಲ್ಲಿ ತುಂಬಿದ್ದ ಮಳೆ ನೀರಿನಿಂದ ಬೌಲಿಂಗ್ ಮಾಡುವುದು ಕಷ್ಟವಾಗಿತ್ತು, ಅದಾಗ್ಯೂ ತಮ್ಮದೇ ಆದ ಯೋಜನೆಗಳನ್ನು ಮುಂದಿಟ್ಟುಕೊಂಡು ಆಟಗಾರರು ಆಡಿದ್ದಾರೆ ಎಂದು ಪಾಂಡ್ಯ ತಿಳಿಸಿದ್ದಾರೆ. ಹೂಡಾ ತಮ್ಮ ಸ್ಪಿನ್ನಿಂಗ್ ಕೈ ಚಳಕವನ್ನು ಪ್ರದರ್ಶಿಸಿದ ಕಾರಣ ಪಾಂಡ್ಯ ಪಂದ್ಯದಲ್ಲಿ ತಮ್ಮ ಬೌಲಿಂಗ್ ವೈಖರಿ ಪ್ರದರ್ಶಿಸಲಿಲ್ಲ. ತಮ್ಮ ಅಪ್ರಸ್ತುತಿಯ ಹೊರತಾಗಿಯೂ ತಂಡದ ಹೆಚ್ಚಿನ ಆಟಗಾರರು ಬೌಲಿಂಗ್ ವಿಭಾಗದಲ್ಲಿ ಮುನ್ನಡೆಗೆ ಬರಲು ಇಚ್ಛಿಸುವುದಾಗಿ ಹಾರ್ದಿಕ್ ತಿಳಿಸಿದ್ದಾರೆ.


ಒಗ್ಗಟ್ಟು ಯಶಸ್ಸಿಗೆ ಕಾರಣ:


ಆಟಗಾರರು ಪರಸ್ಪರ ಬೆಂಬಲ ನೀಡುತ್ತಿದ್ದು, ಶಿಬಿರದಲ್ಲಿ ಸಂತೋಷದ ವಾತಾವರಣ ಏರ್ಪಟ್ಟಿತ್ತು ಎಂದು ತಿಳಿಸಿದ್ದಾರೆ. ಆಟಗಾರರ ಒಗ್ಗಟ್ಟು ತಂಡದ ಯಶಸ್ಸಿಗೆ ಕಾರಣವಾಗಿದೆ ಎಂದು ಹಾರ್ದಿಕ್ ತಿಳಿಸಿದ್ದಾರೆ. ಜೊತೆಗೆ ಎದುರಾಳಿ ಆಟಗಾರರ ವಿಕೆಟ್ ಕೀಳಬೇಕೆಂದು ನಾವು ಬಯಸಿದರೂ ಬೌಲರ್‌ಗಳಿಗೆ ಸಾಕಷ್ಟು ವಿಶ್ರಾಂತಿ ದೊರೆಯುವುದೂ ಅಗತ್ಯವಾಗಿದೆ ಎಂದು ತಿಳಿಸಿದ್ದರು.


ಸೂರ್ಯಕುಮಾರ್ ಬ್ಯಾಟಿಂಗ್ ವೈಖರಿ ಹೊಗಳಿದ ವಿಲಿಯಮ್ಸ್:


ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಸೂರ್ಯಕುಮಾರ್ ಅಭ್ಯಾಸದ ಅವಧಿಯಲ್ಲಿ ಮಾಡಿದ ಸತತ ಪರಿಶ್ರಮವೇ ಇದಕ್ಕೆ ಕಾರಣ ಎಂದು ತಿಳಿಸಿದ್ದಾರೆ. ಬ್ಯಾಟಿಂಗ್ ವಿಷಯದಲ್ಲಿ ನಮ್ಮ ಯೋಜನೆ ಸ್ಪಷ್ಟವಾಗಿತ್ತು. 170ರ ಸಮಾನ ಸ್ಕೋರ್ ಅನ್ನು ತಲುಪಲು ಕೊನೆಯವರೆಗೂ ಬ್ಯಾಟಿಂಗ್ ಮಾಡಬೇಕೆಂದು ನಿರ್ಧರಿಸಿದ್ದೆ ಎಂದು ತಿಳಿಸಿರುವ ಸೂರ್ಯ, ಪರಿಸ್ಥಿತಿಯನ್ನು ಗಣನೆಗೆ ತೆಗೆದುಕೊಳ್ಳದೇ ಒಳ್ಳೆಯ ಉದ್ದೇಶವನ್ನು ಹೊಂದಿ ಆಟಬೇಕು ಎಂದು ತಿಳಿಸಿದ್ದಾರೆ. ನ್ಯೂಜಿಲ್ಯಾಂಡ್ ನಾಯಕ ಕೇನ್ ವಿಲಿಯಮ್ಸ್ ಸೂರ್ಯಕುಮಾರ್ ಬ್ಯಾಟಿಂಗ್ ವೈಖರಿಯನ್ನು ಕೊಂಡಾಡಿದ್ದು, ಇಂತಹ ಶಾಟ್‌ಗಳನ್ನು ನಾನು ನೋಡಿಯೇ ಇಲ್ಲ ಎಂದು ತಿಳಿಸಿದ್ದಾರೆ.

Published by:shrikrishna bhat
First published: