• Home
  • »
  • News
  • »
  • sports
  • »
  • MS Dhoni: ಧೋನಿ ನಿವೃತ್ತಿಯ ಬಗ್ಗೆ ಈ ಆಟಗಾರನಿಗೆ ಮಾತ್ರ ಹೇಳಿದ್ರಂತೆ! ಇಂಟ್ರಸ್ಟಿಂಗ್​ ಮಾಹಿತಿ ಬಿಚ್ಚಿಟ್ಟ ಕೋಚ್​

MS Dhoni: ಧೋನಿ ನಿವೃತ್ತಿಯ ಬಗ್ಗೆ ಈ ಆಟಗಾರನಿಗೆ ಮಾತ್ರ ಹೇಳಿದ್ರಂತೆ! ಇಂಟ್ರಸ್ಟಿಂಗ್​ ಮಾಹಿತಿ ಬಿಚ್ಚಿಟ್ಟ ಕೋಚ್​

ಧೋನಿ

ಧೋನಿ

MS Dhoni: ​2019ರ ವಿಶ್ವಕಪ್ ನಲ್ಲಿ ಭಾರತ ತಂಡದ ಪರ ಕೊನೆಯ ಬಾರಿಗೆ ಕಾಣಿಸಿಕೊಂಡ ನಂತರ ಧೋನಿ 2020 ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತಿ ಘೋಷಿಸಿದ್ದರು.

  • Trending Desk
  • 2-MIN READ
  • Last Updated :
  • Share this:

ಕ್ಯಾಪ್ಟನ್ ಕೂಲ್ ಅಂತಾನೆ ಖ್ಯಾತಿ ಪಡೆದಿದ್ದಂತಹ ಮಹೇಂದ್ರ ಸಿಂಗ್ ಧೋನಿ (MS Dhoni) ಅವರನ್ನು ಕ್ರಿಕೆಟ್ ಆಟದ ಇತಿಹಾಸದಲ್ಲಿಯೇ ಒಬ್ಬ ಶ್ರೇಷ್ಠ ನಾಯಕ ಅಂತ ಪರಿಗಣಿಸಲಾಗಿದೆ. ಭಾರತದ ಮಾಜಿ ವಿಕೆಟ್ ಕೀಪರ್ ಬ್ಯಾಟರ್ ನಾಯಕನಾಗಿ ಎಲ್ಲಾ ಐಸಿಸಿ ಟ್ರೋಫಿಗಳನ್ನು ಗೆದ್ದ ಹಿರಿಮೆ ಇವರದು ಅಂತ ಹೇಳಿದರೆ ತಪ್ಪಾಗುವುದಿಲ್ಲ. 2007 ರಲ್ಲಿ ಉದ್ಘಾಟನಾ ಟಿ20 ವಿಶ್ವಕಪ್ ಗೆಲುವು, 2011ರಲ್ಲಿ ಏಕದಿನ ವಿಶ್ವಕಪ್ ಗೆಲುವು ಮತ್ತು ಎರಡು ವರ್ಷಗಳ ನಂತರ ಚಾಂಪಿಯನ್ಸ್ ಟ್ರೋಫಿ ಗೆಲುವಿನಲ್ಲಿ ಭಾರತ ಕ್ರಿಕೆಟ್ ತಂಡವನ್ನು ಮುನ್ನಡೆಸಿದ ಕೀರ್ತಿ ಇವರಿಗೆ ಸಲ್ಲುತ್ತದೆ.


2020ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ:


2019ರ ವಿಶ್ವಕಪ್ ನಲ್ಲಿ ಭಾರತ ತಂಡದ ಪರ ಕೊನೆಯ ಬಾರಿಗೆ ಕಾಣಿಸಿಕೊಂಡ ನಂತರ ಧೋನಿ 2020 ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತಿ ಘೋಷಿಸಿದ್ದರು. ಆದಾಗ್ಯೂ, ಭಾರತದ ಮಾಜಿ ಫೀಲ್ಡಿಂಗ್ ತರಬೇತುದಾರ ಆರ್ ಶ್ರೀಧರ್ ಅವರು ಈಗ ರಿಷಭ್ ಪಂತ್ ಅವರೊಂದಿಗಿನ ಸಂಭಾಷಣೆಯಲ್ಲಿ ಧೋನಿ ಭಾರತಕ್ಕಾಗಿ ತಮ್ಮ ಕೊನೆಯ ಪಂದ್ಯವನ್ನು ಆಡಲಿದ್ದಾರೆ ಅನ್ನೋ ಸ್ಫೋಟಕ ಮಾಹಿತಿಯನ್ನು ಮೊದಲೇ ತಿಳಿದಿದ್ದರು ಅಂತ ಬಹಿರಂಗಪಡಿಸಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಭಾರತದ ವಿಶ್ವಕಪ್ ಸೆಮಿಫೈನಲ್ ಪಂದ್ಯದ ಮೊದಲು ಈ ಇಬ್ಬರು ವಿಕೆಟ್ ಕೀಪರ್ ಗಳ ನಡುವಿನ ಸಂಭಾಷಣೆಯನ್ನು ಶ್ರೀಧರ್ ಈಗ ಬಹಿರಂಗಪಡಿಸಿದ್ದಾರೆ.


ಪುಸ್ತಕದಲ್ಲಿ ಹಂಚಿಕೊಂಡ ಶ್ರೀಧರ್:


"ಮ್ಯಾಂಚೆಸ್ಟರ್ ನಲ್ಲಿ ನ್ಯೂಜಿಲೆಂಡ್ ವಿರುದ್ಧದ ನಮ್ಮ ವಿಶ್ವಕಪ್ ಸೆಮಿಫೈನಲ್ ಪಂದ್ಯದ ಹಿಂದಿನ ದಿನ ನಮಗೆಲ್ಲಾ ಮೀಸಲು ದಿನವಾಗಿತ್ತು ಮತ್ತು ಆ ದಿನ ಬೆಳಿಗ್ಗೆ ನಾನು ಉಪಾಹಾರ ಮಾಡುವ ಹಾಲ್ ನಲ್ಲಿ ಮೊದಲೇ ಹೋಗಿ ಟಿಫಿನ್ ಮಾಡುತ್ತಿದ್ದೆ. ಟಿಫಿನ್ ಮುಗಿಸಿ ನಾನು ಕಾಫಿ ಕುಡಿಯುತ್ತಿದ್ದಾಗ ಎಂ ಎಸ್ ಧೋನಿ ಮತ್ತು ರಿಷಭ್ ಒಳಗೆ ಬಂದು, ಅವರ ತಟ್ಟೆಗೆ ತಿಂಡಿಯನ್ನು ಹಾಕಿಕೊಂಡು ನನ್ನ ಮೇಜಿನ ಬಳಿ ಬಂದು ಕುಳಿತರು" ಎಂದು ಶ್ರೀಧರ್ ತಮ್ಮ 'ಕೋಚಿಂಗ್ ಬಿಯಾಂಡ್- ಮೈ ಡೇಸ್ ವಿತ್ ದಿ ಇಂಡಿಯನ್ ಕ್ರಿಕೆಟ್ ಟೀಂ’ ಎಂಬ ಪುಸ್ತಕದಲ್ಲಿ ಈ ಘಟನೆಯ ಬಗ್ಗೆ ಹಂಚಿಕೊಂಡಿದ್ದಾರೆ.


"ಹಿಂದಿಯಲ್ಲಿ ಎಂ ಎಸ್ ಧೋನಿ ಜೊತೆ ಮಾತನಾಡಿದ ರಿಷಭ್, 'ಭೈಯಾ, ಕೆಲವು ಹುಡುಗರು ಇಂದೇ ಖಾಸಗಿಯಾಗಿ ಲಂಡನ್ ಗೆ ತೆರಳಲು ಯೋಜಿಸುತ್ತಿದ್ದಾರೆ. ನೀವು ಬರ್ತೀರಾ, ನಿಮಗೆ ಆಸಕ್ತಿ ಇದೆಯೇ' ಅಂತ ಕೇಳಿದರು. ಇದಕ್ಕೆ ಉತ್ತರಿಸಿದ ಧೋನಿ 'ಇಲ್ಲ, ರಿಷಭ್, ತಂಡದೊಂದಿಗೆ ನನ್ನ ಕೊನೆಯ ಬಸ್ ಡ್ರೈವ್ ಅನ್ನು ನಾನು ಮಿಸ್ ಮಾಡಿಕೊಳ್ಳಲು ಬಯಸುವುದಿಲ್ಲ' ಎಂದು ಎಂ ಎಸ್ ಧೋನಿ ಉತ್ತರಿಸಿದರು” ಎಂದು ಶ್ರೀಧರ್ ಹೇಳಿದರು.


ಇದನ್ನೂ ಓದಿ: IND vs SL: ನಾಳೆ ಭಾರತ-ಶ್ರೀಲಂಕಾ ಅಂತಿಮ ಹಣಾಹಣಿ, ಹೇಗಿದೆ ಪಿಚ್​ ರಿಪೋರ್ಟ್​? ಟೀಂ ಇಂಡಿಯಾ ದಾಖಲೆ ಏನು?


ಧೋನಿ ಮೇಲಿನ ಗೌರವ:


ಧೋನಿ ಮೇಲಿನ ಗೌರವದಿಂದಾಗಿ ನಾನು ಈ ಸಂಭಾಷಣೆಯನ್ನು ಯಾರ ಬಳಿಯೂ ಹಂಚಿಕೊಂಡಿರಲಿಲ್ಲ ಎಂದು ಶ್ರೀಧರ್ ಹೇಳಿದ್ದಾರೆ. "ಆ ವ್ಯಕ್ತಿಯ ಮೇಲಿನ ಗೌರವದಿಂದ ನಾನು ಈ ಸಂಭಾಷಣೆಯ ಬಗ್ಗೆ ಯಾರೊಂದಿಗೂ ಹಂಚಿಕೊಂಡಿರಲಿಲ್ಲ. ಅವರು ನನ್ನ ಮೇಲೆ ವಿಶ್ವಾಸವಿಟ್ಟು ನನ್ನ ಮುಂದೆ ಮಾತನಾಡಿದ್ದರು. ನಾನು ರವಿ ಶಾಸ್ತ್ರಿ, ಅರುಣ್ ಅವರಿಗೂ ಮತ್ತು ನನ್ನ ಹೆಂಡತಿಗೂ ಸಹ ಈ ವಿಷಯವನ್ನು ಹೇಳಿರಲಿಲ್ಲ" ಎಂದು ಶ್ರೀಧರ್ ಹೇಳಿದರು.


ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಧೋನಿ ಅವರು ರನೌಟ್ ಆದ ಕ್ಷಣವೂ ಪಂದ್ಯದ ಪ್ರಮುಖ ತಿರುವಾಗಿತ್ತು. ಭಾರತದ ಮಾಜಿ ನಾಯಕ 72 ಎಸೆತಗಳಲ್ಲಿ 50 ರನ್ ಗಳಿಸಿದ್ದರು, ಆದರೆ ಇವರು ವಿಕೆಟ್ ಒಪ್ಪಿಸಿದಾಗ ತಂಡಕ್ಕೆ ಪಂದ್ಯವನ್ನು ಗೆಲ್ಲಲು ಒಂಬತ್ತು ಎಸೆತಗಳಲ್ಲಿ ಇನ್ನೂ 24 ರನ್ ಗಳ ಅಗತ್ಯವಿತ್ತು. ಕೊನೆಗೆ ಭಾರತ ತಂಡವು ಈ ಮುಖ್ಯವಾದ ಪಂದ್ಯವನ್ನು 18 ರನ್ ಗಳಿಂದ ಸೋತಿತ್ತು.

Published by:shrikrishna bhat
First published: