ಪಂತ್​ರನ್ನು ಹೊಗಳಿ ಈಗಲೇ ಅಟ್ಟಕ್ಕೆ ಏರಿಸಬೇಡಿ ಎಂದ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ

ಅನೇಕ ಕ್ರಿಕೆಟ್ ದಿಗ್ಗಜರು ಪಂತ್​​​ರನ್ನು ಹಾಡಿಹೊಗಳುತ್ತಿದ್ದಾರೆ. ಆದರೆ ಕ್ರಿಕೆಟ್ ಕ್ಷೇತ್ರದಲ್ಲಿ ಪಂತ್ ಕಲಿಯುವುದು ಇನ್ನು ತುಂಬಾನೆಯಿದೆ. ಈಗಲೇ ಅವರನ್ನು ಅಷ್ಟೊಂದು ಹೊಗಳಬೇಡಿ ಎಂದು ಫಾರೋಕ್ ಎಂಜಿನಿಯರ್ ಹೇಳಿದ್ದಾರೆ.

Vinay Bhat | news18
Updated:January 11, 2019, 3:18 PM IST
ಪಂತ್​ರನ್ನು ಹೊಗಳಿ ಈಗಲೇ ಅಟ್ಟಕ್ಕೆ ಏರಿಸಬೇಡಿ ಎಂದ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ
ರಿಷಭ್ ಪಂತ್ (Pic: Twitter)
Vinay Bhat | news18
Updated: January 11, 2019, 3:18 PM IST
ಟೀಂ ಇಂಡಿಯಾ ವಿಕೆಟ್ ಕೀಪರ್ ಡೆಲ್ಲಿ ಡ್ಯಾಶರ್ ರಿಷಭ್ ಪಂತ್ ಆಸ್ಟ್ರೇಲಿಯಾ ಟೆಸ್ಟ್​ ಸರಣಿ ಬಳಿಕ ಹೆಚ್ಚು ಸುದ್ದಿಯಲ್ಲಿದ್ದಾರೆ. ಅನೇಕ ಕ್ರಿಕೆಟ್ ದಿಗ್ಗಜರು ಪಂತ್​​​ರನ್ನು ಹಾಡಿಹೊಗಳುತ್ತಿದ್ದಾರೆ. ರಿಷಭ್ ಎಂ ಎಸ್ ಧೋನಿ ಸ್ಥಾನಕ್ಕೆ ಹೇಳಿಮಾಡಿಸಿದ ಆಟಗಾರ ಎಂದೇ ಹೇಳಲಾಗುತ್ತಿದೆ.

ಈ ಮಧ್ಯೆ ಭಾರತ ಕ್ರಿಕೆಟ್ ತಂಡದ ಮಾಜಿ ವಿಕೆಟ್ ಕೀಪರ್ ಫಾರೋಕ್ ಎಂಜಿನಿಯರ್ ಅವರು, 'ಕ್ರಿಕೆಟ್ ಕ್ಷೇತ್ರದಲ್ಲಿ ಪಂತ್ ಕಲಿಯುವುದು ಇನ್ನು ತುಂಬಾನೆಯಿದೆ. ಈಗಲೇ ಅವರನ್ನು ಅಷ್ಟೊಂದು ಹೊಗಳಬೇಡಿ' ಎಂದಿದ್ದಾರೆ.

ಇದನ್ನೂ ಓದಿ: ಪಾಂಡ್ಯ-ರಾಹುಲ್ ಹೇಳಿಕೆಗೂ ಟೀಂ ಇಂಡಿಯಾಕ್ಕೂ ಯಾವುದೇ ಸಂಬಂಧವಿಲ್ಲ: ವಿರಾಟ್ ಕೊಹ್ಲಿ

'ವಿಕೆಟ್ ಕೀಪರ್ ಆಗಿ ಮತ್ತು ಬ್ಯಾಟಿಂಗ್​ನಲ್ಲಿ ಪಂತ್ ಇನ್ನಷ್ಟು ಸುಧಾರಿಸಬೇಕಿದೆ. ತಾಂತ್ರಿಕವಾಗಿ ಅವರು ಕಲಿಯಬೇಕಾಗಿರುವುದು ಸಾಕಷ್ಟಿದೆ. ಪಂತ್​ಗೆ ಇನ್ನು ಭವಿಷ್ಯವಿದೆ. ತಪ್ಪುಗಳನ್ನು ತಿದ್ದಿ ಮುನ್ನಡೆಯಬೇಕು. ಮುಂದಿನ ದಿನಗಳಲ್ಲಿ ರಿಷಭ್ ಒಬ್ಬ ಅತ್ಯುತ್ತಮ ವಿಕೆಟ್ ಕೀಪರ್ ಆಗಿ ಹೊರಹೊಮ್ಮುತ್ತಾರೆ. ಆದರೆ, ಈಗಲೇ ಅವರನ್ನು ಅಷ್ಟೊಂದು ಹೊಗಳಬೇಡಿ' ಎಂದಿದ್ದಾರೆ.

ಇದನ್ನೂ ಓದಿ: ದ್ರಾವಿಡ್ ದಾಖಲೆಗಳ ಆಳಕ್ಕೆ ಇಳಿದರೆ ಸಿಕ್ಕುತ್ತೆ ಇನ್ನಷ್ಟು ದಾಖಲೆ; ಹ್ಯಾಪಿ ಬರ್ತ್​​ಡೇ ರಾಹುಲ್

ಆಸೀಸ್ ಸರಣಿಯಲ್ಲಿ ಅದ್ಭುತ ಪ್ರದರ್ಶನ ತೋರಿದ ರಿಷಭ್ ಪಂತ್ 7 ಇನ್ನಿಂಗ್ಸ್​ನಲ್ಲಿ 1 ಶತಕದೊಂದಿಗೆ ಒಟ್ಟು 350 ರನ್ ಕಲೆಹಾಕಿದ್ದರು. ಅಲ್ಲದೆ ಐಸಿಸಿ ಟೆಸ್ಟ್​ ರ್ಯಾಂಕಿಂಗ್​​ನಲ್ಲು ಕಮಾಲ್ ಮಾಡಿದ್ದರು. 21 ಸ್ಥಾನಗಳ ಏರಿಕೆ ಕಾಣುವ ಮೂಲಕ ಪಂತ್ ಅವರು 17ನೇ ಸ್ಥಾನಕ್ಕೇರಿದ್ದಾರೆ.
Loading...

First published:January 11, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...