ರಿಷಭ್ ಪಂತ್ ಮತ್ತೊಬ್ಬ ಗಿಲ್​ಕ್ರಿಸ್ಟ್​: ಲೆಜೆಂಡ್​ ಆಟಗಾರನಿಂದ ಪ್ರಶಂಸೆ

ಟೀಂ ಇಂಡಿಯಾದ ಬೆಸ್ಟ್ ಕ್ಯಾಪ್ಟನ್ ಎನಿಸಿರುವ ಮಹೇಂದ್ರ ಸಿಂಗ್ ಧೋನಿ ಟೆಸ್ಟ್ ಪಂದ್ಯಗಳಲ್ಲಿ ಕೇವಲ ಆರು ಶತಕ ಗಳಿಸಿದ್ದಾರೆ.

zahir | news18
Updated:January 6, 2019, 8:48 PM IST
ರಿಷಭ್ ಪಂತ್ ಮತ್ತೊಬ್ಬ ಗಿಲ್​ಕ್ರಿಸ್ಟ್​: ಲೆಜೆಂಡ್​ ಆಟಗಾರನಿಂದ ಪ್ರಶಂಸೆ
ರಿಷಭ್ ಪಂತ್
zahir | news18
Updated: January 6, 2019, 8:48 PM IST
ಟೀಂ ಇಂಡಿಯಾದ ಭರವಸೆಯ ವಿಕೆಟ್​ ಕೀಪರ್ ರಿಷಭ್ ಪಂತ್​ ಆಸ್ಟ್ರೇಲಿಯಾ ಪ್ರವಾಸದಲ್ಲಿ ತಾನು ಧೋನಿಯ ಉತ್ತರಾಧಿಕಾರಿ ಎಂಬುದನ್ನು ನಿರೂಪಿಸಿದ್ದಾರೆ. ನಾಲ್ಕನೇ ಟೆಸ್ಟ್​ ಪಂದ್ಯದಲ್ಲಿ ಭರ್ಜರಿ 159 ರನ್ ಸಿಡಿಸಿದ ಪಂತ್ ಆಟಕ್ಕೆ ಇದೀಗ ವಿಶ್ವದ ಲೆಜೆಂಡ್ ಆಟಗಾರರು ಮನ ಸೋತಿದ್ದಾರೆ.

ಆಸೀಸ್ ನೆಲದ ಚೊಚ್ಚಲ ಟೆಸ್ಟ್​ನಲ್ಲೇ ಸಿಕ್ಸರ್ ಸಿಡಿಸಿ ದಾಖಲೆ ನಿರ್ಮಿಸಿದ್ದ 21ರ ಎಡಗೈ ದಾಂಡಿಗ, ಬಳಿಕ 11 ಕ್ಯಾಚ್​ಗಳನ್ನು ಪಡೆಯುವ ಮೂಲಕ ಮೊದಲ ಟೆಸ್ಟ್ ಪಂದ್ಯದಲ್ಲಿ ಅತಿ ಹೆಚ್ಚು ಕ್ಯಾಚ್ ಪಡೆದ ವಿಕೆಟ್ ಕೀಪರ್ ಎಂಬ ವಿಶ್ವದಾಖಲೆ ಬರೆದಿದ್ದರು. ಇದರ ನಡುವೆ ಕಾಂಗರೂ ನೆಲದಲ್ಲಿ ಬ್ಯಾಟಿನಿಂದ ಮಾತ್ರವಲ್ಲ ಬಾಯಿಯಿಂದಲೂ ಉತ್ತರ ನೀಡಬಲ್ಲ ಆಟಗಾರನಾಗಿ ರಿಷಭ್ ಗುರುತಿಸಿಕೊಂಡಿದ್ದರು.

ಇವೆಲ್ಲದರ ನಡುವೆ​ ಇದೀಗ ವಿಶ್ವದ ವಿಕೆಟ್​ ಕೀಪಿಂಗ್ ದಿಗ್ಗಜ ಆಸ್ಟ್ರೇಲಿಯಾ ಮಾಜಿ ಆಟಗಾರ ಆ್ಯಡಮ್​ ಗಿಲ್​ಕ್ರಿಸ್ಟ್​ ಜತೆ ಯುವ ದಾಂಡಿಗನನ್ನು ಹೋಲಿಸಲಾಗುತ್ತಿದೆ. ಇಂತಹ ಹೋಲಿಕೆ ಮಾಡಿರುವುದು ಮತ್ತೊಬ್ಬ ಲೆಜೆಂಡ್ ಆಟಗಾರ ರಿಕಿ ಪಾಟಿಂಗ್ ಎಂಬುದೇ ವಿಶೇಷ.

ಇದನ್ನೂ ಓದಿ: ಚಾಲನಾ ಪರವಾನಗಿ-ಆಧಾರ್ ಜೋಡಣೆ: ಶೀಘ್ರದಲ್ಲೇ ಜಾರಿಯಾಗಲಿದೆ ಹೊಸ ನಿಯಮ

ರಿಷಭ್ ಪ್ರತಿಭಾವಂತ ಆಟಗಾರನಾಗಿದ್ದು, ಮುಂದೆ ಟೀಂ ಇಂಡಿಯಾದ ಅತ್ಯುತ್ತಮ ವಿಕೆಟ್ ಕೀಪರ್ ಬ್ಯಾಟ್ಸ್​ಮನ್​ ಆಗಿ ಹೊರ ಹೊಮ್ಮಲಿದ್ದಾರೆ ಎಂದು ರಿಕಿ ಪಾಟಿಂಗ್ ಭವಿಷ್ಯ ನುಡಿದಿದ್ದಾರೆ. ಈ ಯುವ ಆಟಗಾರನ ಬ್ಯಾಟಿಂಗ್ ಕೌಶಲ್ಯವು ಅಧ್ಭುತವಾಗಿದ್ದು, ಕೀಪಿಂಗ್​ನಲ್ಲೇ ಮತ್ತಷ್ಟು ಪಳಗಬೇಕಿದೆ.

ಇದನ್ನೂ ಓದಿ: ಬೀಟ್​ ರೂಟ್​ನಿಂದ ಸಿಗುವ ಆರೋಗ್ಯಕರ ಲಾಭಗಳು ಅಷ್ಟಿಷ್ಟಲ್ಲ..!

ಧೋನಿಯನ್ನು ಮೀರಿ ಬೆಳೆಯುವ ಎಲ್ಲ ಸಾಮರ್ಥ್ಯ ಪಂತ್​ನಲ್ಲಿದ್ದು, ಹೀಗಾಗಿಯೇ ಆಸೀಸ್ ನೆಲದಲ್ಲಿ ರಿಷಭ್ ಬ್ಯಾಟ್​ನಿಂದ ಶತಕ ಸಿಡಿದಿದೆ. ಪಂತ್​ನಲ್ಲಿ ನನಗೆ ಮತ್ತೊಬ್ಬ ಗಿಲ್ಲಿ(ಗಿಲ್​ಕ್ರಿಸ್ಟ್​)ಯನ್ನು ಕಾಣುತ್ತಿದ್ದಾನೆ ಎಂದು ಹೊಗಳಿದ್ದಾರೆ. ಅಲ್ಲದೆ ಐಪಿಎಲ್​ನಲ್ಲಿ ದೆಹಲಿ ತಂಡದಲ್ಲಿರುವ ರಿಷಭ್​ಗೆ ಕೋಚ್​ ಆಗಿ ಕಾರ್ಯ ನಿರ್ವಹಿಸುತ್ತಿರುವುದು ನನ್ನ ಅದೃಷ್ಟ ಎಂದು ಪಾಟಿಂಗ್ ತಿಳಿಸಿದ್ದಾರೆ.
Loading...

ಇದನ್ನೂ ಓದಿ: ಇನ್‌ಸ್ಟಾಗ್ರಾಮ್‌ನಲ್ಲಿ ಅಪಹಾಸ್ಯ ವೀಡಿಯೊ ಹಾಕಿ ಜೈಲು ಸೇರಿದ ಯುವಕ

ಟೀ ಇಂಡಿಯಾದ ಬೆಸ್ಟ್ ಕ್ಯಾಪ್ಟನ್ ಎನಿಸಿರುವ ಮಹೇಂದ್ರ ಸಿಂಗ್ ಧೋನಿ ಟೆಸ್ಟ್ ಪಂದ್ಯಗಳಲ್ಲಿ ಕೇವಲ ಆರು ಶತಕ ಗಳಿಸಿದ್ದಾರೆ. ಆದರೆ, ರಿಷಭ್ ಪಂತ್  ಕೇವಲ 9 ಟೆಸ್ಟ್​​ಗಳಲ್ಲೇ 2 ಶತಕ ಸಿಡಿಸಿದ್ದಾರೆ. ಹೀಗಾಗಿ ಧೋನಿಗಿಂತಲೂ ಹೆಚ್ಚಿನ ಶತಕಗಳನ್ನು ಪಂತ್ ದಾಖಲಿಸುವ ವಿಶ್ವಾಸವಿದೆ ಎಂದು ರಿಕಿ ಪಾಟಿಂಗ್ ಹೇಳಿದ್ದಾರೆ.

ಇದನ್ನೂ ಓದಿ: ಡಿಜಿಟಲ್​ ಯುಗದಲ್ಲಿ ವಿಶ್ವದ ಗಮನ ಸೆಳೆದ ಹೊಸ ಆವಿಷ್ಕಾರಗಳು

First published:January 6, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ