ಇನ್​​​ಸ್ಟಾದಲ್ಲಿ ಪಂತ್ ಹವಾ: ರಿಷಭ್ ಜೊತೆಗಿರುವ ಈ ಲೇಡಿ ಯಾರು..?

ಆಸ್ಟ್ರೇಲಿಯಾ ಟೆಸ್ಟ್​​ ಸರಣಿ ಬಳಿಕ ಭಾರತಕ್ಕೆ ಮರಳಿರುವ ಪಂತ್ ಜಾಲಿ ಮೂಡ್​​ನಲ್ಲಿದ್ದಾರೆ. ಈ ಮಧ್ಯೆ ಪಂತ್ ಅವರು ತನ್ನ ಪ್ರಿಯತಮೆ ಜೊತೆ ಇರುವ ಫೋಟೋವನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು ಎಲ್ಲಡೆ ವೈರಲ್ ಆಗುತ್ತಿದೆ.

ರಿಷಭ್ ಪಂತ್- ಇಶಾ ನೇಗಿ (Pic: Instagram)

ರಿಷಭ್ ಪಂತ್- ಇಶಾ ನೇಗಿ (Pic: Instagram)

  • News18
  • Last Updated :
  • Share this:
ಟೀಂ ಇಂಡಿಯಾದ ಉದಯೋನ್ಮುಕ ವಿಕೆಟ್ ಕೀಪರ್ ಬ್ಯಾಟ್ಸ್​ಮನ್​ ರಿಷಭ್ ಪಂತ್​​ ಈಗಾಗಲೇ ಟೆಸ್ಟ್​​ ಕ್ರಿಕೆಟ್​ನಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದು, ಏಕದಿನ ಕ್ರಿಕೆಟ್​​​ನತ್ತ ಕಣ್ಣುಹಾಯಿಸುತ್ತಿದ್ದಾರೆ.

ಸದ್ಯ ಆಸ್ಟ್ರೇಲಿಯಾ ಟೆಸ್ಟ್​​ ಸರಣಿ ಬಳಿಕ ಭಾರತಕ್ಕೆ ಮರಳಿರುವ ಪಂತ್ ಜಾಲಿ ಮೂಡ್​​ನಲ್ಲಿದ್ದಾರೆ. ಈ ಮಧ್ಯೆ ಪಂತ್ ಅವರು ತನ್ನ ಪ್ರಿಯತಮೆ ಜೊತೆ ಇರುವ ಫೋಟೋವನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು ಎಲ್ಲಡೆ ವೈರಲ್ ಆಗುತ್ತಿದೆ.

ಪಂತ್ ಜೊತೆ ಪಕ್ಕಾ ಮಾಡೆಲ್​ನಂತೆ ಕಂಗೊಳಿಸುತ್ತಿರುವ ಈ ಯುವತಿಯ ಹೆಸರು ಇಶಾ ನೇಗಿ. ಪಂತ್ ಅವರು 'ನಾನು ನಿಮ್ಮನ್ನು ಖುಷಿಯಾಗಿರಿಸಲು ಇಷ್ಟಪಡುತ್ತೇನೆ.. ಯಾಕಂದ್ರೆ ನಿಮ್ಮಿಂದಲೇ ನಾನು ಇಷ್ಟೊಂದು ಖುಷಿಯಾಗಿದ್ದೇನೆ' ಎಂದು ಬರೆದು ಫೋಟೋವನ್ನು ಶೇರ್ ಮಾಡಿದ್ದಾರೆ.

ಇದನ್ನೂ ಓದಿ: ಎಡಗೈ ಬ್ಯಾಟ್ಸ್​ಮನ್​ನಿಂದ ರೈಟ್ ಹ್ಯಾಂಡ್​​ನಲ್ಲಿ ನಿಂತು ಸಿಕ್ಸ್​: ಸ್ವಿಚ್ ಹಿಟ್ ವಿಡಿಯೋ ವೈರಲ್

  
View this post on Instagram
 

I just want to make you happy because you are the reason I am so happy ❤️


A post shared by Rishabh Pant (@rishabpant) on


​ಇನ್ನು ಇದೇ ಫೋಟೋವನ್ನು ಇಶಾ ಕೂಡ ಹಂಚಿಕೊಂಡಿದ್ದು, 'ನನ್ನ ಪ್ರೀತಿಯ ಸ್ನೇಹಿತ, ನನ್ನ ಬೆಸ್ಟ್​ ಫ್ರೆಂಡ್​​, ನನ್ನ ಜೀವ, ಮೈ ಮೆನ್' ಎಂದು ಬರೆದು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: #10YearChallenge: 10 ವರ್ಷಗಳ ಹಿಂದೆ 'ಅಮೂಲ್ ಬೇಬಿ', ಈಗ ಕಿಂಗ್ ಕೊಹ್ಲಿ

  
View this post on Instagram
 

My man, my soulmate, my best friend, the love of my life. @rishabpant


A post shared by Įsha Negi 👑 (@ishanegi_) on


ಸದ್ಯ ಕುಟುಂಬಿಕರ ಜೊತೆ ಸಮಯ ಕಳೆಯುತ್ತಿರುವ ಪಂತ್ ಆಸ್ಟ್ರೇಲಿಯಾ ಏಕದಿನ ಹಾಗೂ ನ್ಯೂಜಿಲೆಂಡ್ ಸರಣಿಯಿಂದ ಹೊರಗುಳಿದಿದ್ದಾರೆ. ಅಂತೆಯೆ ಮುಂಬರುವ ವಿಶ್ವಕಪ್​​​ನಲ್ಲಿ ಆಡುವ ಬರವಸೆ ಹೊಂದಿದ್ದಾರೆ.

First published: