ರಿಷಭ್ ಪಂತ್ (Rishabh Pant) ಕಾರು ಭೀಕರ ಅಪಘಾತ (Deadly Accident) ಕ್ಕೀಡಾಗಿದೆ. ಬೆಳಗ್ಗೆ 5:30 ಉತ್ತರಖಾಂಡ ಮಂಗಳೌರಿನಲ್ಲಿ ಈ ಅಪಘಾತ ಸಂಭವಿಸಿದೆ. ಇನ್ನೂ ರಿಷಭ್ ಪಂತ್ ಅವರ ಸ್ಥಿತಿ ಚಿಂತಾಜಕನಕವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಡೆಹ್ರಾಡೂನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನೂ ರಿಷಭ್ ಪಂತ್ ಕಾರು ಅಪಘಾತವಾದಗ ನಡೆಯಬಾರದ ಘಟೆನಯೊಂದು ನಡೆದಿದೆ. ರಿಷಭ್ ಪಂತ್ ಕಾರು ಅಪಘಾತವಾದಗ ಕೆಲವೊಂದಿಷ್ಟು ಜನ ಅಲ್ಲಿಗೆ ಓಡಿ ಬಂದಿದ್ದಾರೆ. ರಿಷಭ್ ಪಂತ್ ಹರಸಾಹಸ ಮಾಡಿ ಕಿಟಕಿ (Window) ಯಿಂದ ಹೊರಗಡೆ ಹಾರಿದ್ದಾರೆ. ಡಿವೈಡರ್ ಮಧ್ಯದಲ್ಲಿ ರಿಷಭ್ ಪಂತ್ ಮಲಗಿಕೊಂಡು ಸಹಾಯಕ್ಕಾಗಿ ಕೂಗಿದ್ದಾರೆ. ಈ ವೇಳೆ ಅಲ್ಲಿ ನೆರೆದಿದ್ದವರಲ್ಲಿ ಆ್ಯಂಬುಲೆನ್ಸ್ (Ambulance) ಗೆ ಕಾಲ್ ಮಾಡೋದು ಬಿಟ್ಟು ಕಾರಿನಲ್ಲಿದ್ದ ಹಣ (Money) ಕದಿದ್ದಾರೆ ಅಂತ ವರದಿಯಾಗಿದೆ.
ಮಾನವೀಯತೆ ಮರೆತ ಜನ!
ರಿಷಭ್ ಪಂತ್ ಆ್ಯಕ್ಸಿಡೆಂಟ್ ಆಗಿ ಕೆಳಗೆ ಬಿದ್ದಿದ್ದಾರೆ. ಈ ವೇಳೆ ಅಲ್ಲಿಗೆ ಬಂದ ಒಂದಿಷ್ಟು ಜನ ಯಾರಿಗೆ ಏನಾಗಿದೆ ಅಂತ ಮೊದಲು ನೋಡಿದ್ದಾರೆ. ನಂತರ ಅದು ರಿಷಭ್ ಪಂತ್ ಅಂತ ಗೊತ್ತಾಗುತ್ತಿದ್ದಂತೆ ಮೊಬೈಲ್ ತೆಗೆದು ವಿಡಿಯೋ ಮಾಡಿಕೊಂಡಿದ್ದಾರೆ. ಆ್ಯಂಬುಲೆನ್ಸ್ಗೆ ಕಾಲ್ ಮಾಡಿ ಅಂದರೂ, ರಿಷಭ್ ಬ್ಯಾಗ್ನಲ್ಲಿದ್ದ ಹಣವನ್ನು ದೋಚಿ ಎಸ್ಕೇಪ್ ಆಗಿದ್ದಾರಂತೆ. ಇನ್ನೂ ಮೂಲಗಳ ವರದಿ ಪ್ರಕಾರ ಸ್ವತಃ ರಿಷಭ್ ಪಂತ್ ಅವ್ರೇ ಆ್ಯಂಬುಲೆನ್ಸ್ಗೆ ಕರೆ ಮಾಡಿದ್ದಾರಂತೆ.
ಪೊಲೀಸರಿಗೆ ಈ ಬಗ್ಗೆ ಮಾಹಿತಿ ಕೊಟ್ಟ ರಿಷಭ್ ಪಂತ್!
ಇನ್ನೂ ಈ ಘಟನೆ ಬಗ್ಗೆ ಪೊಲೀಸರಿಗೆ ಸ್ವತಃ ರಿಷಭ್ ಪಂತ್ ಹೇಳಿದ್ದಾರಂತೆ. ನನ್ನ ಬ್ಯಾಗ್ ಅನ್ನು ಕೆಲವೊಂದಿಷ್ಟು ಬಂದು ಅದರಲ್ಲಿದ್ದ ಹಣ ತೆಗೆದುಕೊಂಡು ಹೋಗಿದ್ದಾರೆ. ನಾನೇ ಕೊನೆಗೆ ಆ್ಯಂಬುಲೆನ್ಸ್ ಕರೆ ಮಾಡಿದ್ದೀನಿ ಅಂತ ರಿಷಭ್ ಪೊಲೀಸರ ಬಳಿ ಹೇಳಿದ್ದಾರೆ. ಇನ್ನೂ ಈ ಸುದ್ಧಿ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ. ಮಾನವೀಯತೆ ಸತ್ತು ಹೋಗಿದೆ ಅಂತ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಇದನ್ನೂ ಓದಿ: ರಿಷಭ್ ಪಂತ್ ಕುರಿತು ಮಹತ್ವದ ಹೇಳಿಕೆ ನೀಡಿದ ಬಿಸಿಸಿಐ
ದೇಶಕ್ಕಾಗಿ ಆಡಿದವನಿಗೆ ಹೀಗಾ ಮಾಡೋದು!
ಅನೇಕ ನೆಟ್ಟಿಗರು ಈ ಘಟನೆ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ದೇಶಕ್ಕಾಗಿ, ನಮ್ಮ ಖುಷಿಗಾಗಿ ಕ್ರಿಕೆಟ್ ಆಡಿ ಮನರಂಜನೆ ಕೊಟ್ಟ ವ್ಯಕ್ತಿಗೆ ಹೀಗಾ ಮಾಡೋದು ಅಂತ ಪ್ರಶ್ನೆ ಮಾಡಿದ್ದಾರೆ. ಜೊತೆಗೆ ರಿಷಭ್ ಪಂತ್ ಅಂತಾಲೇ ಅಲ್ಲ, ಯಾರೇ ವ್ಯಕ್ತಿ ಈ ರೀತಿಯ ಸ್ಥಿತಿಯಲ್ಲಿದ್ದಾಗ ಹೀಗೆ ಮಾಡೋದು ನಿಜಕ್ಕೂ ನಾಚೀಕೆಗೇಡು ಅಂತ ಆಕ್ರೋಶ್ ಹೊರಹಾಕುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ