ಭಾರತ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಭ್ ಪಂತ್ (Rishabh Pant) ಅಭಿಮಾನಿಗಳಿಗೆ ಶುಭ ಸುದ್ದಿಯೊಂದನ್ನು ನೀಡಿದ್ದಾರೆ. ರಸ್ತೆ ಅಪಘಾತವಾದ ನಾಲ್ಕು ತಿಂಗಳ ನಂತರ, ಪಂತ್ ಮೊದಲ ಬಾರಿಗೆ ಊರುಗೋಲು ಇಲ್ಲದೆ ನಡೆಯುತ್ತಿರುವುದು ಕಂಡುಬಂದಿದೆ. ಈ ಮಾಹಿತಿಯನ್ನು ಅವರೇ ಸಾಮಾಜಿಕ ಜಾಲತಾಣಗಳ ಮೂಲಕ ಅಭಿಮಾನಿಗಳಿಗೆ ಹಂಚಿಕೊಂಡಿದ್ದಾರೆ. ಆದರೆ, ಅವರು ಯಾವಾಗ ಸ್ಪರ್ಧಾತ್ಮಕ ಕ್ರಿಕೆಟ್‌ಗೆ (Cricket) ಮರಳಲು ಸಾಧ್ಯವಾಗುತ್ತದೆ ಎಂಬುದು ಯಾರಿಗೂ ತಿಳಿದಿಲ್ಲ. ಇನ್ನು, ಡಿಸೆಂಬರ್ ಅಂತ್ಯದಲ್ಲಿ, ಪಂತ್ ಅಪಾಯಕಾರಿ ಕಾರು ಅಪಘಾತದಿಂದ ಗಾಯಗೊಂಡಿದ್ದರು. ದೀರ್ಘಕಾಲದವರೆಗೆ ಕ್ರಿಕೆಟ್‌ನಿಂದ ದೂರವಿರಬೇಕಾಯಿತು. ಆದರೆ, ಈಗ 5 ತಿಂಗಳ ನಂತರ, ಪಂತ್ ಹೆಚ್ಚು ಉತ್ತಮವಾಗಿ ಕಾಣುತ್ತಿದ್ದಾರೆ.
ಹೊಸ ವಿಡಿಯೋ ಹಂಚಿಕೊಂಡ ಪಂತ್:
ಕಳೆದ ಕೆಲವು ತಿಂಗಳುಗಳಿಂದ ರಿಷಭ್ ಪಂತ್ ಊರುಗೋಲುಗಳ ಸಹಾಯವಿಲ್ಲದೇ ನಡೆಯುತ್ತಿರುವುದು ಕಂಡುಬಂದಿದೆ. ಅವರ ಆರೋಗ್ಯ ಈಗ ಸುಧಾರಿಸಿದೆ. ಇದರಿಂದಾಗಿ ಪಂತ್‌ಗೆ ಕೋಲಿನ ಬೆಂಬಲ ಬೇಕಾಗಿಲ್ಲ ಎನ್ನುವುದು ಸ್ಪಷ್ಟವಾಗಿದೆ. ಪಂತ್ ಟ್ವಿಟ್ಟರ್ ನಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ತನ್ನ ಊರುಗೋಲನ್ನು ಎಸೆಯುತ್ತಿರುವುದನ್ನು ಕಾಣಬಹುದು. ಇದಾದ ಬಳಿಕ ಪಂತ್ ಕೂಡ ಕೋಲು ರಹಿತ ವಾಕಿಂಗ್ ಮಾಡಿದ್ದಾರೆ. ಕೆಜಿಎಫ್ ಚಿತ್ರದ ಸಂಗೀತ ವಿಡಿಯೋದಲ್ಲಿ ಪ್ಲೇ ಆಗುತ್ತಿದೆ. ಚಿತ್ರದ ಪ್ರಮುಖ ಪಾತ್ರವಾದ ರಾಕಿ ಭಾಯಿ ಶೈಲಿಯಲ್ಲಿ ಪಂತ್ ಎಂಟ್ರಿಕೊಟ್ಟಿದ್ದಾರೆ.
Happy NO MORE CRUTCHES Day!#RP17 pic.twitter.com/mYbd8OmXQx
— Rishabh Pant (@RishabhPant17) May 5, 2023
ರಿಷಬ್ ಪಂತ್ 2022ರ ಕೊನೆಯಲ್ಲಿ ದೆಹಲಿಯಿಂದ ರೂರ್ಕಿಯಲ್ಲಿರುವ ತನ್ನ ಮನೆಗೆ ಹಿಂದಿರುಗುತ್ತಿದ್ದಾಗ ರಸ್ತೆ ಅಪಘಾತಕ್ಕೆ ಓಳಗಾಗಿದ್ದರು. ಹೊಸ ವರ್ಷದಂದು ತಾಯಿಯ ಮನೆಗೆ ಹಿಂತಿರುಗುತ್ತಿದ್ದ ವೇಳೆ ಈ ಅವಘಡ ಸಂಭವಿಸಿತ್ತು. ಇದೇ ವೇಳೆ ಮಧ್ಯರಾತ್ರಿ ವಾಹನ ಚಲಾಯಿಸುತ್ತಿದ್ದ ವೇಳೆ ನಿದ್ದೆಗೆಟ್ಟು ಈ ಅವಘಡ ಆದ್ದರಿಂದ ಸ್ವಲ್ಪದರಲ್ಲೇ ಪಂತ್ ಪ್ರಾಣ ಉಳಿಯಿತು. ಅಲ್ಲಿದ್ದ ರಸ್ತೆ ಮಾರ್ಗದ ಬಸ್ ಚಾಲಕ ಅವರನ್ನು ರಕ್ಷಿಸಿದ್ದರು. ಈ ವೇಳೆ ಅಪಘಾತದ ತೀರ್ವತೆಗೆ ರಿಷಭ್ ಪಂತ್ ಅವರ ಕಾರು ಸುಟ್ಟು ಕರಕಲಾಗಿತ್ತು.
ಇದನ್ನೂ ಓದಿ: IPL 2023: ಮುಂದಿನ ಪಂದ್ಯದಲ್ಲಿ RCB ಪ್ಲೇಯಿಂಗ್ 11ನಲ್ಲಿ ಬದಲಾವಣೆ, ಬೆಂಗಳೂರು ತಂಡಕ್ಕೆ ಬಂತು ಆನೆಬಲ
ಐಪಿಎಲ್ ವೇಳೆ ಕಾಣಿಸಿಕೊಂಡ ಪಂತ್:
ಸುಮಾರು 2 ವರ್ಷಗಳ ನಂತರ ದೆಹಲಿ ತನ್ನ ತವರು ಮೈದಾನದಲ್ಲಿ ಈ ವರ್ಷ ಡೇಲ್ಲಿ ಐಪಿಎಲ್ ಪಂದ್ಯವಾಡಿತು. ಈ ಪಂದ್ಯ ವೀಕ್ಷಿಸಲು ಬಂದಿದ್ದ ಡೆಲ್ಲಿ ಕ್ಯಾಪಿಟಲ್ಸ್ ಅಭಿಮಾನಿಗಳಿಗೆ ಕ್ರೀಡಾಂಗಣದಲ್ಲಿ ಅಚ್ಚರಿ ಕಾದಿತ್ತು. ಗಾಯಗೊಂಡಿರುವ ತಂಡದ ಮಾಜಿ ನಾಯಕ ರಿಷಭ್ ಪಂತ್ ತವರು ಮೈದಾನದಲ್ಲಿ ದೆಹಲಿಯ ಮೊದಲ ಪಂದ್ಯ ವೀಕ್ಷಿಸಲು ಬಂದಿದ್ದರು.
ಶಸ್ತ್ರಚಿಕಿತ್ಸೆ ಬಳಿಕ ಚೇತರಿಸಿಕೊಂಡ ಪಂತ್:
ರಿಷಭ್ ಪಂತ್ ಅಪಘಾತವಾದ ಬಳಿಕ ಅಭಿಮಾನಿಗಳಿಗೆ ಸಂದೇಶ ಒಂದನ್ನು ನೀಡಿದ್ದರು. ತಮ್ಮ ಆರೋಗ್ಯದ ಕುರಿತು ತಾವೇ ಟ್ವೀಟ್ ಹಾಗೂ ಇನ್ಸ್‌ಸ್ಟಾ ಗ್ರಾಮ್ ಮೂಲಕ ಪಂತ್ ಅಪ್ಡೇಡ್ ನೀಡುತ್ತಿರುತ್ತಾರೆ . ನಾನು ಎಲ್ಲರಿಗೂ ವಿನಮ್ರ ಮತ್ತು ಕೃತಜ್ಞನಾಗಿದ್ದೇನೆ. ನಿಮ್ಮ ಅಪಾರ ಬೆಂಬಲಕ್ಕೆ ನನ್ನ ಅನಂತಾನಂತ ಧನ್ಯವಾದಗಳು. ಇದೀಗ ನಾನು ಅನಾರೋಗ್ಯದಿಂದ ಸುಧಾರಿಸಿಕೊಳ್ಳುತ್ತಿದ್ದೇನೆ. ಇವನ್ನೆಲ್ಲ ನಿಮಗೆ ಹೇಳಬೇಕು ಅಂತ ಅನಿಸಿತು. ನಾನು ನಿಮಗೆ ಕೃತಜ್ಞನಾಗಿದ್ದೇನೆ. ಇದು ನನ್ನ ಆರೋಗ್ಯದ ಚೇತರಿಕೆಯ ಹಾದಿ. ನಿಮ್ಮೆಲ್ಲರಿಗೂ ನನ್ನ ಕೃತಜ್ಞತೆಗಳು. ಈ ರೀತಿಯ ಪದಗಳಲ್ಲಿ ಕೃತಜ್ಞತೆ ಹೇಳುವುದಕ್ಕೆ ಸಾಲುವುದದೇ ಇಲ್ಲ. ಎಂದು ರಿಷಭ್ ಪಂತ್ ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ