• Home
  • »
  • News
  • »
  • sports
  • »
  • Rishabh Pant: ಅಪಘಾತದ ಬಳಿಕ ರಿಷಭ್ ಪಂತ್​ಗೆ ಮತ್ತೊಂದು ಸಮಸ್ಯೆ, ಈ ವಿಷಯ ನಿಜವಾದ್ರೆ ಪಂತ್​ ದಂಡ ಕಟ್ಟಬೇಕಂತೆ!

Rishabh Pant: ಅಪಘಾತದ ಬಳಿಕ ರಿಷಭ್ ಪಂತ್​ಗೆ ಮತ್ತೊಂದು ಸಮಸ್ಯೆ, ಈ ವಿಷಯ ನಿಜವಾದ್ರೆ ಪಂತ್​ ದಂಡ ಕಟ್ಟಬೇಕಂತೆ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Rishabh Pant: ರಿಷಭ್ ಪಂತ್ ಅವರ ಕಾರಿಗೆ ವಿಮೆ ಮಾಡದಿದ್ದರೆ, ಅವರಿಗೆ ಹೊಸ ಸಮಸ್ಯೆ ಉದ್ಭವಿಸಬಹುದು. ಹೌದು, ಅಪಘಾತದ ನಡುವೆ ಪಂತ್​ಗೆ ಮತ್ತೊಂದು ಹೊಸ ಸಮಸ್ಯೆ ತಲೆದೂರಿದೆ.

  • Share this:

ಭಾರತೀಯ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ ರಿಷಭ್ ಪಂತ್ ಕಾರು ಅಪಘಾತಕ್ಕೀಡಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಪಂತ್ (Rishabh Pant) ದೆಹಲಿಯಿಂದ (Delhi) ತನ್ನ ತವರು ರೂರ್ಕಿಗೆ ಹೋಗುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಈ ಭೀಕರ ಅಪಘಾತದಲ್ಲಿ ಪಂತ್‌ಗೆ ಸಾಕಷ್ಟು ಗಾಯಗಳಾಗಿವೆ. ಇದಲ್ಲದೇ ಈಗ ಹೊಸ ಸಮಸ್ಯೆಯೊಂದು ಅವರಿಗೆ ಉದ್ಭವವಾಗುವಂತಿದೆ. ಹೌದು, ಕೆಲ ಮಾಧ್ಯಮ ವರದಿಗಳ ಪ್ರಕಾರ, ಪಂತ್ ಅವರ ಕಾರು ವಿಮೆ (Car Insurance) 2021ರಲ್ಲಿ (ನ್ಯೂಸ್ 18 ಕನ್ನಡ ಇದನ್ನು ಖಚಿತಪಡಿಸುವುದಿಲ್ಲ) ಕೊನೆಗೊಂಡಿದೆಯಂತೆ. ಏನಾದರೂ ಈ ವಿಚಾರ ನಿಜವಾದಲ್ಲಿ ಪಂತ್‌ಗೆ ಸಮಸ್ಯೆಗಳು ಉಂಟಾಗಬಹುದು. ಭಾರತದಲ್ಲಿ ವಿಮೆ ಇಲ್ಲದೆ ಕಾರು ಚಾಲನೆ ಮಾಡುವುದು ಅಪರಾಧದ ವರ್ಗಕ್ಕೆ ಬರುತ್ತದೆ. ಅಲ್ಲದೇ ಇದಕ್ಕೆ ದಂಡವನ್ನು ಕಟ್ಟಬೇಕಾಗುತ್ತದೆ.


ವಿಮೆ ಕುರಿತ ಮಾಹಿತಿ:


ವಾಸ್ತವವಾಗಿ, ಅನೇಕ ಬಾರಿ ಜನರು ವಾಹನ ವಿಮೆಯನ್ನು ತೆಗೆದುಕೊಳ್ಳಲು ಮರೆಯುತ್ತಾರೆ. ಕೆಲವರಂತೂ ವಿಮೆ ಅಗತ್ಯವಿಲ್ಲ ಎಂದು ಭಾವಿಸುತ್ತಾರೆ. ಇದು ಸರಿಯಲ್ಲ. ಪಂತ್‌ ಕಾರಿಗೆ ವಿಮೆ ಇದೆಯೇ ಅಥವಾ ಇಲ್ಲವೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ, ಆದರೆ ಒಂದು ವೇಳೆ ಪಂತ್​ ಕಾರಿನ ವಿಮೆ ಮುಗಿದಲ್ಲಿ ಏನಾಗಬಹುದು? ಯಾವೆಲ್ಲಾ ಕ್ರಮವನ್ನು ಕೈಗೊಳ್ಳಬಹುದು ಎಂಬ ಮಾಹಿತಿ ನೋಡೋಣ. ಅಪಘಾತಕ್ಕೀಡಾದ ಪಂತ್ ಅವರ ಕಾರು Mercedes-AMG GLE 43 4MATIC ಕೂಪೆ ಆಗಿತ್ತು. ಇದರ ಬೆಲೆ ಬರೋಬ್ಬರಿ 80 ಲಕ್ಷದಷ್ಟಾಗುತ್ತದೆ.


ದಂಡ ಮತ್ತು ಶಿಕ್ಷೆ:


ವಿಮೆ ಇಲ್ಲದೆ ಕಾರು ಚಾಲನೆ ಮಾಡುವುದು ಮೋಟಾರು ವಾಹನ ಕಾಯ್ದೆ 2019ರ ಅಡಿಯಲ್ಲಿ ಕಾನೂನುಬಾಹಿರ ಮತ್ತು ಅಪರಾಧದ ಅಡಿಯಲ್ಲಿ ಬರುತ್ತದೆ. ಇದರ ಅಡಿಯಲ್ಲಿ, ತಪ್ಪಿತಸ್ಥರೆಂದು ಕಂಡುಬಂದ ವ್ಯಕ್ತಿಗೆ ದಂಡ ಅಥವಾ ಜೈಲು ಶಿಕ್ಷೆ ಅಥವಾ ಎರಡನ್ನೂ ವಿಧಿಸಬಹುದು. ವಿಮೆ ಇಲ್ಲದೇ ವಾಹನ ಚಾಲನೆ ಮಾಡಿ ಸಿಕ್ಕಿಬಿದ್ದರೆ ಮೊದಲ ಬಾರಿಗೆ 2000 ರೂ., ಎರಡನೇ ಬಾರಿಗೆ 4000 ರೂ. 3 ತಿಂಗಳ ಜೈಲು ಶಿಕ್ಷೆಯೂ ಆಗಬಹುದು.


ಇದನ್ನೂ ಓದಿ: Rishabh Pant: ರಿಷಭ್​ ಪಂತ್​ ಈ ಬಾರಿ ಐಪಿಎಲ್​ ಆಡೋದು ಡೌಟ್​, ಹಾಗಿದ್ರೆ ಯಾರಾಗ್ತಾರೆ ಡೆಲ್ಲಿ ಕ್ಯಾಪ್ಟನ್​?


ಅಪಘಾತದ ಸಂಪೂರ್ಣ ಚಿತ್ರಣ ಬಿಚ್ಚಿಟ್ಟ ಹುಡುಗರು:


ರಜತ್ ಮತ್ತು ನಿಶು ನ್ಯೂಸ್ 18 ಇಂಡಿಯಾಗೆ ಆಂಬ್ಯುಲೆನ್ಸ್ ರಿಷಬ್ ಪಂತ್ ಅವರನ್ನು ಕರೆದುಕೊಂಡು ಸರ್ಕಾರಿ ಆಸ್ಪತ್ರೆಗೆ ಹೋಗುತ್ತಿದೆ ಎಂದು ಹೇಳಿದರು. ಆದರೆ ನಾವು ಹತ್ತಿರದಲ್ಲಿ ಸಮರ್ಥ ಆಸ್ಪತ್ರೆ ಇದೆ, ನಾವು ಶೀಘ್ರದಲ್ಲೇ ಅಲ್ಲಿಗೆ ತಲುಪಬಹುದು, ಅವರಿಗೆ ತಕ್ಷಣದ ಚಿಕಿತ್ಸೆಯ ಅಗತ್ಯವಿದೆ, ಏಕೆಂದರೆ ಅವರು ದೇಶದ ಕ್ರಿಕೆಟಿಗ ಎಂದು ಹೇಳಿದೆವು. ರಾಜ್ಯ ಸರ್ಕಾರದ 108 ಆಂಬ್ಯುಲೆನ್ಸ್ ಸೇವೆಯು ಸಾಮಾನ್ಯವಾಗಿ ರೋಗಿಗಳನ್ನು ಸರ್ಕಾರಿ ಆಸ್ಪತ್ರೆಗಳಿಗೆ ಮಾತ್ರ ಕರೆದೊಯ್ಯುತ್ತದೆ. ಆದರೆ ಹುಡುಗರ ಆಜ್ಞೆಯ ಮೇರೆಗೆ ಚಾಲಕ ಪಂತ್ ಅವರನ್ನು ಅಪಘಾತ ಸ್ಥಳದ ಸಮೀಪವಿರುವ ಸಕ್ಷಮ್ ಆಸ್ಪತ್ರೆಗೆ ಕರೆದೊಯ್ದನು.

ರಜತ್ ಮತ್ತು ನಿಶು ನಾವು ಕಾರಿನಿಂದ ರಿಷಬ್ ಪಂತ್ ಅವರ ಸೂಟ್‌ಕೇಸ್ ಅನ್ನು ಹೊರತೆಗೆದಿದ್ದೇವೆ, ಸ್ವಲ್ಪ ಹಣವೂ ಚೆಲ್ಲಾಪಿಲ್ಲಿಯಾಗಿತ್ತು. ಅವರ ಬಟ್ಟೆಗೂ ಬೆಂಕಿ ಹತ್ತಿಕೊಂಡಿದ್ದತ್ತು. ನಾವು ಅವರನ್ನು ಆಂಬ್ಯುಲೆನ್ಸ್‌ನಲ್ಲಿ ಕರೆದೊಯ್ಯುವಾಗ, ಅವರು ಗಾಯಗೊಂಡರೂ ಸಹ ಗಾಬರಿಯಾಗಿರಲಿಲ್ಲ. ಇಷ್ಟು ದೊಡ್ಡ ಅಪಘಾತವನ್ನು ಕಂಡು ಬೆಚ್ಚಿಬಿದ್ದಿದ್ದೆವು ಕೂಡ. ಅವರನ್ನು ಸಕ್ಷಮ್ ಆಸ್ಪತ್ರೆಗೆ ದಾಖಲಿಸಿದ ನಂತರ, ನಾವು ಅಲ್ಲಿಯೇ ಇರಲು ಬಯಸಿದ್ದೆವು, ಆದರೆ ಪೊಲೀಸರು ನಮ್ಮನ್ನು ಬಿಡಲು ಹೇಳಿದರು. ವಾಹನದಿಂದ ವಶಪಡಿಸಿಕೊಂಡ ಮಾಲುಗಳಿಗೆ ಸಂಬಂಧಿಸಿದಂತೆ ಪೊಲೀಸರು ನಮ್ಮ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ. ಕೈಯಲ್ಲಿ ಚಿನ್ನದ ಸರ, ಬಳೆ, ಸೂಟ್ ಕೇಸ್, ನೋಟುಗಳಿದ್ದವು. ಎಲ್ಲವನ್ನೂ ಪೊಲೀಸರಿಗೆ ಕೊಟ್ಟಿದ್ದೆವು. ದರೋಡೆ ನಡೆದಿಲ್ಲ ಎಂದು ಹೇಳಿದ್ದಾರೆ.
Published by:shrikrishna bhat
First published: