ಭಾರತದ ಸ್ಟಾರ್ ಕ್ರಿಕೆಟಿಗ ರಿಷಭ್ ಪಂತ್ಗೆ ಇಂಡು ಭೀಕರ ಅಪಘಾತ ಆಗಿದ್ದು, ದೆಹಲಿ-ಡೆಹ್ರಾಡೂನ್ ಹೆದ್ದಾರಿಯಲ್ಲಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಐಷಾರಾಮಿ ಕಾರು ಬೆಂಕಿಗೆ ಆಹುತಿಯಾಗಿದೆ. ಆದರೆ ಪಂತ್ (Rishabh Pant) ಸ್ವಲ್ಪದರಲ್ಲೇ ಪಾರಾಗಿದ್ದಾರೆ. ಆದಾಗ್ಯೂ, ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಮೂರು ವರ್ಷಗಳ ಹಿಂದೆ ತಮ್ಮ ಹಿರಿಯ ಸಹ ಆಟಗಾರ ಶಿಖರ್ ಧವನ್ (Shikhar Dhawan) ಅವರ ಮಾತನ್ನು ಕೇಳಿದ್ದರೆ, ಅವರು ಈ ಅಪಘಾತದಿಂದ ಪಾರಾಗುತ್ತಿದ್ದರು ಎಂಬ ಮಾತುಗಳು ಕೇಳಿಬರುತ್ತಿವೆ. ವಾಸ್ತವವಾಗಿ, ಪಂತ್ ತನ್ನ ತಾಯಿಯನ್ನು ನೋಡಲು ರೂರ್ಕಿಗೆ ಹೋಗುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಅಪಘಾತದಲ್ಲಿ ಪಂತ್ (25) ತಲೆ, ಬೆನ್ನು ಮತ್ತು ಕಾಲಿಗೆ ಗಾಯಗಳಾಗಿದ್ದು, ಅವರ ಸ್ಥಿತಿ ಸ್ಥಿರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಉತ್ತರಾಖಂಡದ (Uttarakhand) ಹರಿದ್ವಾರ ಜಿಲ್ಲೆಯಲ್ಲಿ ಮುಂಜಾನೆ 5.30ರ ಸುಮಾರಿಗೆ ಈ ದುರ್ಘಟನೆ ನಡೆದಿದೆ.
ಪಂತ್-ಧವನ್ ವಿಡಿಯೋ ವೈರಲ್:
ಭೀಕರ ಅಪಘಾತದಲ್ಲಿ ಪಂತ್ ಪಾರಾದ ನಂತರ, ಇದೀಗ ಶಿಖರ್ ಧವನ್ ಮತ್ತು ರಿಷಬ್ ಪಂತ್ ಅವರ ಅದೇ ಹಳೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಮತ್ತೆ ವೈರಲ್ ಆಗುತ್ತಿದೆ, ಇದರಲ್ಲಿ ಹಿರಿಯ ಕ್ರಿಕೆಟಿಗರು ನಿಧಾನವಾಗಿ ಚಾಲನೆ ಮಾಡುವಂತೆ ಸಲಹೆ ನೀಡಿದ್ದರು. ಇಬ್ಬರು ಆಟಗಾರರ ನಡುವಿನ 11 ಸೆಕೆಂಡುಗಳ ಸಂಭಾಷಣೆಯ ವೈರಲ್ ಆಗಿದೆ. ಈ ವೀಡಿಯೊ ಐಪಿಎಲ್ ಸಮಯದ್ದು. ಇವರಿಬ್ಬರೂ ಐಪಿಎಲ್ ಫ್ರಾಂಚೈಸಿ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡುತ್ತಿದ್ದಾರೆ. ವೀಡಿಯೊದಲ್ಲಿ ಪರಸ್ಪರ ಸಂಭಾಷಣೆಯ ಸಮಯದಲ್ಲಿ, ಪಂತ್ ಧವನ್ಗೆ, 'ನೀವು ನನಗೆ ಒಂದು ಸಲಹೆಯನ್ನು ನೀಡಲು ಬಯಸುವಿರಾ?' ಧವನ್ ತಕ್ಷಣವೇ ಉತ್ತರಿಸಿದರು, 'ಗಾಡಿ ಆರಾಮ್ ಸೆ ಚಲಯ ಕರ್' ಇದರ ನಂತರ ಇಬ್ಬರೂ ಜೋರಾಗಿ ನಗಲು ಪ್ರಾರಂಭಿಸಿದರು. ಆಗ ಪಂತ್, 'ಸರಿ, ನಾನು ನಿಮ್ಮ ಸಲಹೆಯನ್ನು ಸ್ವೀಕರಿಸುತ್ತೇನೆ ಮತ್ತು ಈಗ ನಾನು ಆರಾಮವಾಗಿ ಕಾರನ್ನು ಓಡಿಸುತ್ತೇನೆ' ಎಂದು ಹೇಳುತ್ತಾರೆ.
.@SDhawan25 ने एक वीडियो में ऋषभ पंत को सलाह देते हुए कहा था कि गाड़ी आराम से चलाया कर...
Prayers for your speedy recovery 🙏 #RishabhPant #Rishabpant #Pant @BCCI pic.twitter.com/Le4Jw7WSTx
— Shiv Chaudhary (@shivchaudhary0) December 30, 2022
ಹರಿದ್ವಾರದ ಹಿರಿಯ ಪೊಲೀಸ್ ಅಧೀಕ್ಷಕ ಅಜಯ್ ಸಿಂಗ್ ಅವರು ಪಂತ್ ನಿದ್ರೆಗೆ ಜಾರಿದ್ದರಿಂದ ಈ ಅಪಘಾತ ಉಂಟಾಯಿತು ಎಂದು ಹೇಳಿದ್ದಾರೆ. ಅವರ ಮರ್ಸಿಡಿಸ್ ಬೆಂಜ್ ಕಾರು ಡಿವೈಡರ್ಗೆ ಡಿಕ್ಕಿ ಹೊಡೆದ ನಂತರ ಬೆಂಕಿ ಹೊತ್ತಿಕೊಂಡಿದೆ. ಅದೇ ವೇಳೆ ಅಲ್ಲಿಯೇ ಹಾದು ಹೋಗುತ್ತಿದ್ದ ಹರಿಯಾಣ ರೋಡ್ವೇಸ್ ಬಸ್ನ ಚಾಲಕ ಮತ್ತು ಉಳಿದ ಸಿಬ್ಬಂದಿ ಆತನನ್ನು ಹೊತ್ತಿ ಉರಿಯುತ್ತಿದ್ದ ಕಾರಿನಿಂದ ಹೊರತೆಗೆದರು. ಅಪಘಾತದಲ್ಲಿ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಸಂಪೂರ್ಣ ಭಸ್ಮವಾಗಿದೆ. ತುರ್ತು ಚಿಕಿತ್ಸಾ ಘಟಕದಲ್ಲಿ ಪಂತ್ಗೆ ಚಿಕಿತ್ಸೆ ನೀಡಿದ ಡಾ. ಸುಶೀಲ್ ನಗರ್, ಪಂತ್ಗೆ ತಲೆ ಮತ್ತು ಮೊಣಕಾಲು ಗಾಯಗಳಾಗಿದೆ.
ರಿಷಬ್ ಪಂತ್ ತಾಯಿಯನ್ನು ನೋಡಲು ಹೊರಟಿದ್ದರು:
ಪಂತ್ ಅವರನ್ನು ಆಸ್ಪತ್ರೆಗೆ ಕರೆತಂದಾಗ, ಅವರು ಸಂಪೂರ್ಣವಾಗಿ ಪ್ರಜ್ಞೆ ಹೊಂದಿದ್ದರು. ಅವರು ಮನೆಗೆ ಹೋಗಿ ತನ್ನ ತಾಯಿಯನ್ನು ಅಚ್ಚರಿಗೊಳಿಸಲು ಬಯಸಿದ್ದಾಗಿ ಹೇಳಿಕೊಂಡಿದ್ದರಂತೆ. ಇನ್ನು, ಎಕ್ಸ್-ರೇ ತೋರಿಸುತ್ತದೆ. ಬಲ ಮೊಣಕಾಲಿಗೆ ಗಾಯವಾಗಿದ್ದು, ಎಷ್ಟು ಗಂಭೀರವಾಗಿದೆ ಎಂಬುದು ಎಂಆರ್ಐ ಅಥವಾ ಹೆಚ್ಚಿನ ತನಿಖೆಯಿಂದ ತಿಳಿಯಲಿದೆ.
ಡೆಹ್ರಾಡೂನ್ನ ಮ್ಯಾಕ್ಸ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಆಶಿಶ್ ಯಾಗ್ನಿಕ್, ಮೂಳೆ ತಜ್ಞರು ಮತ್ತು ಪ್ಲಾಸ್ಟಿಕ್ ಸರ್ಜನ್ಗಳ ತಂಡವು ರಿಷಭ್ ಪಂತ್ಗೆ ಚಿಕಿತ್ಸೆ ನೀಡುತ್ತಿದೆ. ಫೆಬ್ರವರಿಯಲ್ಲಿ ನಡೆಯಲಿರುವ ಬಾರ್ಡರ್ ಗವಾಸ್ಕರ್ ಟ್ರೋಫಿಗೆ ಮುಂಚಿತವಾಗಿ ಈ ಅವಘಡ ನಡೆದಿರುವುದು ಟೀಂ ಇಂಡಿಯಾಗೆ ತುಂಬಲಾರದ ನಷ್ಟವಾಗಿದೆ.. ಬಾಂಗ್ಲಾದೇಶ ವಿರುದ್ಧದ ಎರಡು ಟೆಸ್ಟ್ಗಳ ಸರಣಿಯಲ್ಲಿ ಭಾರತದ ಗೆಲುವಿನಲ್ಲಿ ಪಂತ್ ದೊಡ್ಡ ಪಾತ್ರವನ್ನು ವಹಿಸಿದ್ದಾರೆ. ಮಿರ್ಪುರದಲ್ಲಿ ನಡೆದ ಎರಡನೇ ಟೆಸ್ಟ್ನಲ್ಲಿ ಪಂತ್ 93 ರನ್ಗಳ ಮ್ಯಾಚ್ ವಿನ್ನಿಂಗ್ ಇನ್ನಿಂಗ್ಸ್ ಆಡಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ