(VIDEO): ಐತಿಹಾಸಿಕ ಗೆಲುವಿನ ಬಳಿಕ ಪಂತ್​ ಮಾಡಿದ 'ಬೇಬಿ ಸಿಟ್ಟರ್' ಡ್ಯಾನ್ಸ್ ಫುಲ್ ವೈರಲ್

ಇದೇ ಮೊದಲ ಬಾರಿಗೆ ಕಾಂಗರೂಗಳ ನಾಡಿನಲ್ಲಿ ಟೆಸ್ಟ್​ ಸರಣಿ ಗೆದ್ದು ಬೀಗಿರುವ ಟೀಂ ಇಂಡಿಯಾ ಆಟಗಾರರು ಸಂತೋಷ ತಾಳಲಾರದೆ ಮೈದಾನದಲ್ಲೆ ಸಖತ್ ಸ್ಟೆಪ್ಸ್ ಹಾಕಿದರು. ಅದರಲ್ಲು ರಿಷಭ್ ಪಂತ್ ಮಾಡಿದ ನೃತ್ಯ ಎಲ್ಲರ ಗಮನ ಸೆಳೆಯಿತು.

Vinay Bhat | news18
Updated:January 9, 2019, 10:31 AM IST
(VIDEO): ಐತಿಹಾಸಿಕ ಗೆಲುವಿನ ಬಳಿಕ ಪಂತ್​ ಮಾಡಿದ 'ಬೇಬಿ ಸಿಟ್ಟರ್' ಡ್ಯಾನ್ಸ್ ಫುಲ್ ವೈರಲ್
Pic: Twitter
Vinay Bhat | news18
Updated: January 9, 2019, 10:31 AM IST
ಸಿಡ್ನಿ: ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟ್ರೋಫಿ ಗೆಲ್ಲುವ ಮೂಲಕ ಟೀಂ ಇಂಡಿಯಾ ಐತಿಹಾಸಿಕ ಸಾಧನೆ ಮಾಡಿದೆ. ಇದೇ ಮೊದಲ ಬಾರಿಗೆ ಕಾಂಗರೂಗಳ ನಾಡಿನಲ್ಲಿ ಟೆಸ್ಟ್​ ಸರಣಿ ಗೆದ್ದು ಬೀಗಿದ್ದು, ಆಟಗಾರರ ಸಂತಸ ಮುಗಿಲು ಮುಟ್ಟಿದೆ.

ಈ ಸಂದರ್ಭ ಸಂತೋಷ ತಾಳಲಾರದೆ ಭಾರತೀಯ ಆಟಗಾರರು ಮೈದಾನದಲ್ಲೆ ಸಖತ್ ಸ್ಟೆಪ್ಸ್ ಹಾಕಿದರು. ಅದರಲ್ಲು ರಿಷಭ್ ಪಂತ್ ಮಾಡಿದ ನೃತ್ಯ ಎಲ್ಲರ ಗಮನ ಸೆಳೆಯಿತು.

ಅಂತಿಮ ನಾಲ್ಕನೇ ಟೆಸ್ಟ್​ ವೇಳೆ ಆಸ್ಟ್ರೇಲಿಯಾ ನಾಯಕ ಟಿಮ್ ಪೇಯ್ನ್​​ ಅವರು ರಿಷಭ್ ಪಂತ್ ಬ್ಯಾಟಿಂಗ್ ಮಾಡುವಾಗ ಬೇಬಿ ಸಿಟ್ಟರ್ (ಮಕ್ಕಳನ್ನು ನೋಡಿಕೊಳ್ಳುವವ)​ ಎಂದೇಳಿ ಕಾಲೆಳೆದಿದ್ದರು. ಇದಕ್ಕೆ ಭಾರತ್ ಆರ್ಮಿ ಅಭಿಮಾನಿಗಳ ಸಂಘ ಪಂದ್ಯದ ಮೂರನೇ ದಿನ ರಿಷಭ್ ಪಂತ್ ಸೆಂಚುರಿ ಸಿಡಿಸಿದ ವೇಳೆ 'ಭಾರತಕ್ಕೆ ರಿಷಭ್ ಪಂತ್ ಸಿಕ್ಕಿದ್ದಾರೆ, ಇವರು ಸಿಕ್ಸ್​​ ಕೂಡ ಬಾರಿಸುತ್ತಾರೆ, ನಿಮ್ಮ ಮಕ್ಕಳನ್ನೂ ನೋಡಿಕೊಳ್ಳುತ್ತಾರೆ' ಎಂಬರ್ಥದಲ್ಲಿ ಹಾಡನ್ನು ಹಾಡಿ ಸರಿಯಾಗೆ ಚಾಟಿ ಬೀಸಿದ್ದರು.

ಇದನ್ನೂ ಓದಿ: IPL​ vs PSL: ಐಪಿಎಲ್​ನ ಒಬ್ಬ ಆಟಗಾರನಿಗೆ ಸಿಗುವ ಮೊತ್ತಕ್ಕೆ ಇಡೀ ಪಾಕ್ ತಂಡವನ್ನೇ ಖರೀದಿಸಬಹುದು..!

ಇದೀಗ ಪಂದ್ಯ ಮುಗಿದ ಬಳಿಕ ಟೀಂ ಇಂಡಿಯಾ ಸಂಭ್ರಮಾಚರಣೆಯಲ್ಲಿ ತೊಡಗಿರುವ ವೇಳೆ ಭಾರತ್ ಆರ್ಮಿ ಮತ್ತೆ ಇದೆ ಹಾಡನ್ನು ಹಾಡಿದೆ. ವಿಶೇಷ ಎಂದರೆ ಈ ಹಾಡಿಗೆ ಪಂತ್ ನೃತ್ಯ ಮಾಡಿದ್ದು, ಸಾಮಾಜಿಕ ತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

 ಆಸೀಸ್ ಸರಣಿಯಲ್ಲಿ ಪಂತ್ ಅವರು 7 ಇನ್ನಿಂಗ್ಸ್​ನಲ್ಲಿ 1 ಶತಕದೊಂದಿಗೆ ಒಟ್ಟು 350 ರನ್ ಕಲೆಹಾಕಿದ್ದು, ಐಸಿಸಿ ಟೆಸ್ಟ್​ ರ್ಯಾಂಕಿಂಗ್​​ನಲ್ಲು ಕಮಾಲ್ ಮಾಡಿದ್ದಾರೆ. 21 ಸ್ಥಾನಗಳ ಏರಿಕೆ ಕಾಣುವ ಮೂಲಕ ಪಂತ್ ಅವರು 17ನೇ ಸ್ಥಾನಕ್ಕೇರಿದ್ದಾರೆ.

 First published:January 9, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ