ಟೀಂ ಇಂಡಿಯಾ ಸ್ಟಾರ್ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ (Rishabh Pant) ಶುಕ್ರವಾರ ಡಿಸೆಂಬರ್ 30ರಂದು ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದಾರೆ. ಅವರನ್ನು ಡೆಹ್ರಾಡೂನ್ನ (Dehradun) ಮ್ಯಾಕ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಪಂತ್ ಚೇತರಿಕೆಗಾಗಿ ದೇಶದೆಲ್ಲಡೆ ಪ್ರಾರ್ಥನೆ ಮುಂದುವರಿದಿದೆ. 25 ವರ್ಷದ ಪಂತ್ ದೇಶೀಯ ಕ್ರಿಕೆಟ್ನಲ್ಲಿ ದೆಹಲಿಯನ್ನು ಪ್ರತಿನಿಧಿಸುತ್ತಿದ್ದಾರೆ. ಡೆಹ್ರಾಡೂನ್ನಿಂದ ಪಂತ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ವಿಮಾನದಲ್ಲಿ (Airlifted )ತರಲು ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಸಂಸ್ಥೆ (DDCA) ಸಿದ್ಧತೆ ನಡೆಸಿದೆ. ಶುಕ್ರವಾರ ಪಂತ್ ಅವರ ಕಾರು ಅಪಘಾತಕ್ಕೀಡಾಗಿತ್ತು. ಇದರಲ್ಲಿ ಅವರು ಸ್ವಲ್ಪದರಲ್ಲೇ ಬದುಕುಳಿದ್ದು ಒಂದು ಪವಾಡವೇ ಸರಿ ಎನ್ನುವಂತಾಗಿದೆ.
ಪಂತ್ ಏರ್ಲಿಫ್ಟ್:
ಸುದ್ದಿ ಸಂಸ್ಥೆ ANI ವರದಿ ಪ್ರಕಾರ, DDCA ನಿರ್ದೇಶಕ ಶ್ಯಾಮ್ ಶರ್ಮಾ, 'ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಸಂಸ್ಥೆ (DDCA) ಡೆಹ್ರಾಡೂನ್ನ ಮ್ಯಾಕ್ಸ್ ಆಸ್ಪತ್ರೆಗೆ ತೆರಳುತ್ತಿದೆ. ಅಲ್ಲಿ ಅವರು ರಿಷಭ್ ಪಂತ್ ಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲಿದ್ದಾರೆ. ಅಗತ್ಯವಿದ್ದರೆ, ನಾವು ಪಂತ್ ಅವರನ್ನು ದೆಹಲಿಗೆ ಸ್ಥಳಾಂತರಿಸುತ್ತೇವೆ ಮತ್ತು ಪ್ಲಾಸ್ಟಿಕ್ ಸರ್ಜರಿಗಾಗಿ ನಾವು ಅವನನ್ನು ವಿಮಾನದಲ್ಲಿ ಕರೆದೊಯ್ಯುವ ಹೆಚ್ಚಿನ ಸಾಧ್ಯತೆಗಳಿವೆ‘ ಎಂದು ಹೇಳಿರುವುದಾಗಿ ವರದಿ ಆಗಿದೆ.
Rishabh Pant accident | A team of Delhi & District Cricket Association (DDCA) is going to Max Hospital Dehradun to monitor his health, if required we'll shift him to Delhi & chances are high that we'll airlift him to Delhi for plastic surgery: Shyam Sharma, Director DDCA to ANI pic.twitter.com/85Z3MxuMeu
— ANI (@ANI) December 31, 2022
ನೋವು ಮತ್ತು ಊತದಿಂದಾಗಿ ಪಂತ್ ಅವರ ಪಾದದ ಮತ್ತು ಮೊಣಕಾಲಿನ ಎಂಆರ್ಐ ಸ್ಕ್ಯಾನ್ ಅನ್ನು ಒಂದು ದಿನಕ್ಕೆ ಮುಂದೂಡಲಾಗಿದೆ. ಡೆಹ್ರಾಡೂನ್ನ ಮ್ಯಾಕ್ಸ್ ಆಸ್ಪತ್ರೆಯಲ್ಲಿ ಪಂತ್ಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ವಿಕೆಟ್ ಕೀಪರ್ನ ಬಲ ಮೊಣಕಾಲಿನ ಅಸ್ಥಿರಜ್ಜು ಗಾಯವಾಗಿದೆ ಎಂದು ಶಂಕಿಸಿದ್ದಾರೆ. ಅದಕ್ಕಾಗಿಯೇ ಮೊಣಕಾಲಿನ ಮೇಲೆ ಸ್ಪ್ಲಿಂಟಿಂಗ್ ಮಾಡಲಾಗಿದೆ. ಅದೇ ಸಮಯದಲ್ಲಿ, ಅವರ ಬಲ ಪಾದದ ಅಸ್ಥಿರಜ್ಜು ಗಾಯದ ಸಾಧ್ಯತೆಯಿದೆ. ಸದ್ಯ ಪಂತ್ ಅವರ ಸ್ಥಿತಿ ಸ್ಥಿರವಾಗಿದ್ದು, ಅವರು ಜಾಗೃತರಾಗಿದ್ದಾರೆ ಮತ್ತು ಮಾತನಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.
ಭೀಕರ ಅಪಘಾತಕ್ಕೆ ಒಳಗಾದ ಪಂತ್:
ರಿಷಬ್ ಪಂತ್ ಶುಕ್ರವಾರ (ಡಿಸೆಂಬರ್ 30) ದೆಹಲಿಯಿಂದ ರಸ್ತೆ ಮೂಲಕ ತನ್ನ ಮನೆ ರೂರ್ಕಿಗೆ ಹೋಗುತ್ತಿದ್ದಾಗ ಅಪಘಾತ ಸಂಭವಿಸಿದ್ದು, ಅವರು ತಮ್ಮದೇ ಆದ ಮರ್ಸಿಡಿಸ್ ಬೆಂಜ್ ಕಾರನ್ನು ಚಲಾಯಿಸುತ್ತಿದ್ದರು. ನಿದ್ರೆಯ ಕಾರಣ, ಅವರ ಕಾರಿನ ಬ್ಯಾಲೆನ್ಸ್ ತಪ್ಪಿದ್ದು ಕಾರು ಡಿವೈಡರ್ಗೆ ಡಿಕ್ಕಿ ಹೊಡೆದಿದೆ. ಇದಾದ ನಂತರ, ಪಂತ್ ಕಿಟಕಿ ಮುರಿದು ಹೊರಬರಲು ಪ್ರಯತ್ನಿಸಿದರು, ಅದರಲ್ಲಿ ಅವರ ಬಸ್ ಚಾಲಕ ಮತ್ತು ಕಂಡಕ್ಟರ್ ಸಹಾಯ ಪಡೆದರು. ಹೊಸ ವರ್ಷದ ಸಂದರ್ಭದಲ್ಲಿ ತನ್ನ ತಾಯಿಯನ್ನು ಅಚ್ಚರಿಗೊಳಿಸಲು ಪಂತ್ ಬಯಸಿದ್ದರು ಎಂದು ಸ್ವತಃ ಅವರೇ ಹೇಳಿಕೊಂಡಿರುವುದಾಗಿ ತಿಳಿದುಬಂದಿದೆ.
ಇದನ್ನೂ ಓದಿ: Rishabh Pant: ರಿಷಭ್ ಪಂತ್ ಮೊಣಕಾಲು-ಪಾದದ MRI ಸ್ಯ್ಕಾನ್, ಇಂದೇ ನಿರ್ಧಾರವಾಗಲಿದೆ ಪಂತ್ ಕ್ರಿಕೆಟ್ ವೃತ್ತಿಜೀವನ!
ಪಂತ್ ಜೀವ ಉಳಿಸಿದವರಿಗೆ ಸನ್ಮಾನ:
ಹರಿಯಾಣ ರಾಜ್ಯ ಸಾರಿಗೆ ಸಂಸ್ಥೆ ಇದೀಗ ಪಂತ್ ಜೀವ ಉಳಿಸಿದ ಕಂಡೆಕ್ಟರ್ ಮತ್ತು ಚಾಲಕನಿಗೆ ಸನ್ಮಾನ ಮಾಡಿದೆ. ರಿಷಭ್ ಪಂತ್ ಅಪಘಾತವಾದ ಕಾರಿನಿಂದ ಹೊರಬರಲು ಸಹಾಯ ಮಾಡಿದ್ದಕ್ಕಾಗಿ ಹರಿಯಾಣ ರಾಜ್ಯ ಸಾರಿಗೆ ನಿಗಮದ ಚಾಲಕ ಸುಶೀಲ್ ಕುಮಾರ್ ಮತ್ತು ಕಂಡಕ್ಟರ್ ಪರಮ್ಜೀತ್ ಅವರನ್ನು ಗೌರವಿಸಿದೆ. ಇದರ ನಡುವೆ ರಾಜ್ಯ ಸರ್ಕಾರವೂ ಸಹ ಇವರಿಬ್ಬರಿಗೂ ಗೌರವಿಸಬಹುದು ಎಂದು ವರದಿಯಾಗಿದೆ. ಇವರಿಬ್ಬರಿಗೆ ಪ್ರಶಸ್ತಿ ಪತ್ರ ಮತ್ತು ಸ್ಮರಣಿಕೆಯನ್ನು ನೀಡಿ ಹರಿಯಾಣ ರಾಜ್ಯ ಸಾರಿಗೆ ನಿಗಮ ಗೌರವಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ