ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಕುಟುಂಬದಲ್ಲಿ ಕಲಹ ಉಂಟಾಗಿದ್ದು ಹೀಗಾಗಿ ಅವರು ನ್ಯಾಷನಲ್ ಕ್ಯಾಂಪ್ ತೊರೆದು ಇಂಗ್ಲೆಂಡ್ಗೆ ತೆರಳಿದ್ದಾರೆ ಎನ್ನುವ ವಿಚಾರ ಸಾಕಷ್ಟು ಚರ್ಚೆ ಆಗುತ್ತಿದೆ. ಈ ಬಗ್ಗೆ ಪಿವಿ ಸಿಂಧು ಪ್ರತಿಕ್ರಿಯೆ ನೀಡಿದ್ದು, ಇದು ಕೇವಲ ವದಂತಿ ಎಂದು ಹೇಳಿದ್ದಾರೆ.
ಬ್ಯಾಡ್ಮಿಂಟನ್ ಕೋಚ್ ಪುಲ್ಲೇಲಾ ಗೋಪಿಚಂದ್ ಜೊತೆ ಹಾಗು ಕುಟುಂಬದ ಜೊತೆ ಮನಸ್ತಾಪ ಇದೆ ಎನ್ನುವ ಸುದ್ದಿ ಹರಿದಾಡಿತ್ತು. ಈ ಹಿನ್ನೆಲೆಯಲ್ಲಿ ಪಿವಿ ಸಿಂಧು ಪ್ರತಿಕ್ರಿಯೆ ನೀಡಿದ್ದಾರೆ. ನಾನು ಕೆಲ ದಿನಗಳ ಹಿಂದೆ ಲಂಡನ್ಗೆ ಬಂದಿದ್ದೇನೆ. ಪುನಶ್ಚೇತನ ಹಾಗೂ ಪೌಷ್ಠಿಕ ವೃದ್ಧಿ ಕೇಂದ್ರಕ್ಕಾಗಿ ನಾನು ಇಲ್ಲಿಗೆ ಬಂದಿರುವುದು. ನನ್ನ ಪಾಲಕರ ಒಪ್ಪಿಗೆ ಪಡೆದೇ ನಾನು ಇಲ್ಲಿಗೆ ಬಂದಿದ್ದೇನೆ. ನನಗೋಸ್ಕರ ಎಲ್ಲವನ್ನು ತ್ಯಾಗ ಮಾಡಿದವರ ಜೊತೆ ನಾನೇಕೆ ಮನಸ್ತಾಪ ಮಾಡಿಕೊಳ್ಳಲಿ ಎಂದು ಸಿಂಧು ಪ್ರಶ್ನೆ ಮಾಡಿದ್ದಾರೆ.