ಆಸ್ಟ್ರೇಲಿಯಾದ ಮಾಜಿ ನಾಯಕ ಹಾಗೂ ಬ್ಯಾಟ್ಸ್ ಮನ್ ರಿಕಿ ಪಾಂಟಿಂಗ್ (Ricky Ponting) ಅವರ ಆರೋಗ್ಯ ಹಠಾತ್ ಹದಗೆಟ್ಟಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಟ್ರೇಲಿಯಾ ಮತ್ತು ವೆಸ್ಟ್ ಇಂಡೀಸ್ (AUS vs WI) ನಡುವಿನ ಟೆಸ್ಟ್ ಪಂದ್ಯ ಪರ್ತ್ನಲ್ಲಿ ನಡೆಯುತ್ತಿದೆ. ಮೊದಲ ಟೆಸ್ಟ್ ಪಂದ್ಯದ ವೇಳೆ ರಿಕಿ ಪಾಂಟಿಂಗ್ ಕಾಮೆಂಟರಿ ಮಾಡುತ್ತಿದ್ದರು. ಆದರೆ, ಇದ್ದಕ್ಕಿದ್ದಂತೆ ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ (Hospital )ದಾಖಲಿಸಲಾಗಿದೆ. ಪಾಂಟಿಂಗ್ ಅವರ ಸ್ಥಿತಿ ಪ್ರಸ್ತುತ ಸ್ಥಿರವಾಗಿದೆ ಎಂದು ತಿಳಿದುಬಂದಿದೆ.
ಆಸ್ಪತ್ರೆಗೆ ದಾಖಲಾದ ಪಾಂಟಿಂಗ್:
ರಿಕಿ ಪಾಂಟಿಂಗ್ ಅವರು ಚಾನೆಲ್ 7ಗಾಗಿ ಕಾಮೆಂಟರಿ ಮಾಡುತ್ತಾರೆ. ಪರ್ತ್ನಲ್ಲಿ ನಡೆಯುತ್ತಿರುವ ವೆಸ್ಟ್ ಇಂಡೀಸ್ ಮತ್ತು ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಪಂದ್ಯದಲ್ಲಿ ಅವರು ಕಾಮೆಂಟರಿ ಪ್ಯಾನೆಲ್ನಲ್ಲಿದ್ದರು. ಪಂದ್ಯವು ಭೋಜನ ವಿರಾಮವನ್ನು ತೆಗೆದುಕೊಂಡಾಗ ಮಾತ್ರ ಪಾಂಟಿಂಗ್ ಕಾಮೆಂಟರಿ ಕೊಠಡಿಯನ್ನು ತೊರೆದರು. ಸ್ವಲ್ಪ ಹೊತ್ತಿನ ನಂತರ ಆಸ್ಪತ್ರೆಗೆ ಕರೆದುಕೊಂಡು ಹೋಗಿರುವುದಾಗಿ ವರದಿಯಾಗಿದೆ. ಪಂದ್ಯದ ಮೂರನೇ ದಿನದ ಊಟದ ವಿರಾಮದ ವೇಳೆ ಪಾಂಟಿಂಗ್ಗೆ ಎದೆನೋವು ಕಾಣಿಸಿಕೊಂಡಿತು. ತನಗೆ ಹುಷಾರಿಲ್ಲ ಎಂದು ಜೊತೆ ಕೆಲಸ ಮಾಡುವವರಿಗೆ ಹೇಳಿದ್ದಾರೆ. ಅಲ್ಲದೆ ಆಸ್ಪತ್ರೆಗೆ ಹೋಗಬೇಕೆಂದರು. ಈ ಮಾತನ್ನು ಹೇಳಿದ ತಕ್ಷಣ ವೈದ್ಯಕೀಯ ತಂಡ ಅವರನ್ನು ಆಸ್ಪತ್ರೆಗೆ ಕರೆದೊಯ್ದಿದೆ ಎಂದು ತಿಳಿದುಬಂದಿದೆ.
Former Australia skipper Ricky Ponting taken to hospital after heart scare while commentating during day three of Australia's first test against West Indies at Perth Stadium, reports Reuters.
(Photo source: Ponting's Twitter handle) pic.twitter.com/EyKFEzrLsl
— ANI (@ANI) December 2, 2022
ಇದನ್ನೂ ಓದಿ: IND vs BAN 2022: ಶ್ರೀಲಂಕಾ ಸರಣಿಯಿಂದ ಟೀಂ ಇಂಡಿಯಾ ತ್ರಿಮೂರ್ತಿಗಳು ಔಟ್? ಹಿಟ್ಮ್ಯಾನ್ ಕೈ ತಪ್ಪುತ್ತಾ ಕ್ಯಾಪ್ಟನ್ಸಿ?
ಸೂರ್ಯಕುಮಾರ್ ಯಾದವ್ ಹೊಗಳಿದ ಪಾಟಿಂಗ್:
ಟೀಂ ಇಂಡಿಯಾದಲ್ಲಿ ಸೂರ್ಯಕುಮಾರ್ ಯಾದವ್ ಅವರು ಎಬಿ ಡಿವಿಲಿಯರ್ಸ್ ಪಾತ್ರ ನಿರ್ವಹಿಸುತ್ತಿದ್ದಾರೆ. ಅವರು ಯಾವುದೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡುವ ಸಾಮರ್ಥ್ಯ ಹೊಂದಿದ್ದಾರೆ. ಆದರೆ ಅವರನ್ನು 4 ಅಥವಾ 5ನೇ ಸ್ಥಾನದಲ್ಲಿ ಕಳಿಹಿಸುವುದು ಉತ್ತಮ ಎಂದು ರಿಕಿ ಪಾಂಟಿಂಗ್ ಹೇಳಿದ್ದಾರೆ. ಪವರ್ ಪ್ಲೇನಲ್ಲಿ ಯಾರು ಬೇಕಾದರೂ ರನ್ ಗಳಿಸಬಹುದು. ಆದರೆ ಪವರ್ ಪ್ಲೇ ಅಂತ್ಯದಲ್ಲಿ ಸೂರ್ಯಕುಮಾರ್ ಯಾದವ್ ಉತ್ತಮವಾಗಿ ಬ್ಯಾಟಿಂಗ್ ಮಾಡುತ್ತಾರೆ. ಹೀಗಾಗಿ ಅವರು ಅಂತ್ಯದಲ್ಲಿ ಬ್ಯಾಟಿಂಗ್ಗೆ ಬರುವುದು ಉತ್ತಮವಾಗಿದೆ.
ಸೂರ್ಯಕುಮಾರ್ ಯಾದವ್ ಅವರನ್ನು ಓಪನರ್ ಆಗಿ ಕಳುಹಿಸಲಾಗದು. ಜೊತೆಗೆ ವಿರಾಟ್ ಕೊಹ್ಲಿ ಮೂರನೇ ಸ್ಥಾನದಲ್ಲಿ ಬರುವುದರಿಂದ 4 ಅಥವಾ 5ನೇ ಸ್ಥಾನಗಳಲ್ಲಿ ಯಾದವ್ ಆಡುವುದು ತಂಡಕ್ಕೂ ಸಹ ಉತ್ತಮ ರಿಸಲ್ಟ್ ನೀಡುತ್ತದೆ ಎಂದು ಪಾಂಟಿಂಗ್ ಹೇಳಿದ್ದಾರೆ. ಸದ್ಯ ಆಸ್ಪತ್ರೆಯಲ್ಲಿ ದಾಖಲಾಗಿರುವ ಪಾಟಿಂಗ್ ಅವರು ಆದಷ್ಟು ಬೇಗ ಗುಣಮುಖರಾಗಲಿ ಎಂದು ಅಭಿಮಾನಿಗಳು ಹಾರೈಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ