ಲಾರ್ಡ್ಸ್​ ಟೆಸ್ಟ್​ನಲ್ಲಿ ಟೀಂ ಇಂಡಿಯಾದ ಸೋಲಿನ ಬಳಿಕ ರವಿ ಶಾಸ್ತ್ರಿಗೆ ಗೇಟ್​ ಪಾಸ್​?


Updated:August 13, 2018, 6:23 PM IST
ಲಾರ್ಡ್ಸ್​ ಟೆಸ್ಟ್​ನಲ್ಲಿ ಟೀಂ ಇಂಡಿಯಾದ ಸೋಲಿನ ಬಳಿಕ ರವಿ ಶಾಸ್ತ್ರಿಗೆ ಗೇಟ್​ ಪಾಸ್​?

Updated: August 13, 2018, 6:23 PM IST
ನ್ಯೂಸ್​ 18 ಕನ್ನಡ

ಲಾರ್ಡ್ಸ್​ ಟೆಸ್ಟ್​ನಲ್ಲಿ ಟೀಂ ಇಂಡಿಯಾ ಒಂದು ಇನ್ನಿಂಗ್ಸ್​ ಹಾಗೂ 159 ರನ್​ಗಳಿಂದ ಸೋಲನುಭವಿಸಿದೆ. ಈ ಸೋಲಿನಿಂದ ತಂಡವು 5 ಪಂದ್ಯಗಳ ಸೀರೀಸ್​ನಲ್ಲಿ 2-0 ಅಂತರಗಳ ಹಿನ್ನಡೆ ಕಂಡಿದೆ. ಟೀಂ ಇಂಡಿಯಾದ ಬ್ಯಾಟ್ಸ್​ಮನ್​ಗಳು ಎರಡೂ ಇನ್ನಿಂಗ್ಸ್​ಗಳಲ್ಲಿ ಇಂಗ್ಲೆಂಡ್​ ಬೌಲರ್​ಗಳೆದುರು ಅಸಹಾಯಕರಂತೆ ಕಂಡು ಬಂದಿದ್ಧಾರೆ. ಮೊದಲ ಇನ್ನಿಂಗ್ಸ್​ನಲ್ಲಿ ಟೀಂ ಇಂಡಿಯಾ 107 ರನ್​ಗಳಿಗೆ ಮುಗ್ಗರಿಸಿದರೆ, ಎರಡನೇ ಇನ್ನಿಂಗ್ಸ್​ನಲ್ಲಿ 130 ರನ್​ಗಳು ಪಡೆದು ಆಲೌಟ್​ ಆಗಿದೆ. ಆದರೀಗ ಟೀಂ ಇಂಡಿಯಾದ ಈ ಸೋಲಿನ ಬಳಿಕ ಸಾಮಾಜಿಕ ಜಾಲಾತಾಣಗಳಲ್ಲಿ ರವಿ ಶಾಸ್ತ್ರಿಯವರನ್ನು ಕೋಚ್​ ಸ್ಥಾನದಿಂದ ಕೆಳಗಿಳಿಸಬೇಕೆಂಬ ಕೂಗು ಜೋರಾಗಿದೆ. ಕೆಲವರು ರಾಹುಲ್​ ದ್ರಾವಿಡ್​ರನ್ನು ಟೀಂ ಇಂಡಿಯಾದ ಹೊಸ ಕೋಚ್​ ಆಗಿ ನೇಮಿಸುವಂತೆ ಒತ್ತಾಯಿಸುತ್ತಿದ್ದರೆ, ಮತ್ತೆ ಕೆಲವರು ಈ ಹಿಂದೆ ಟೀಂ ಇಂಡಿಯಾದ ಕೋಚ್​ ಆಗಿದ್ದ ಅನಿಲ್​ ಕುಂಬ್ಳೆಯವನ್ನು ತೆಗೆದು ಹಾಕಿದ್ದಕ್ಕಾಗಿ ದುಃಖ ವ್ಯಕ್ತಪಡಿಸುತ್ತಿದ್ದಾರೆ.

ಹೆಚ್​ಡಿ ದುಬೆ ಈ ಕುರಿತಾಗಿ ಬರೆಯುತ್ತಾ "ರವಿ ಶಾಸ್ತ್ರಿ ಟೀಂ ಇಂಡಿಯಾದ ಕೋಚ್​ ಆಗಲು ಯೋಗ್ಯರಾಗಿರಲಿಲ್ಲ. ಬಹುಶಃ ಪ್ರಖ್ಯಾತ ಕ್ರಿಕೆಟಿಗರೊಂದಿಗೆ ಅವರಿಗಿದ್ದ ನಂಟು ಇದಕ್ಕೆ ಸಹಾಯ ಮಾಡಿದೆ." ಎಂದಿದ್ದಾರೆ.


ನೇಮ್​ ಅಹಮ್​ರವರು ಈ ಕುರಿತಾಗಿ ಟ್ವೀಟ್​ ಮಾಡುತ್ತಾ ರವಿ ಶಾಸ್ತ್ರಿಯರು ಈಗ ಏನಾಗಿದೆ ಎಂಬ ಪ್ರಶ್ನೆಗೆ ಉತ್ತರಿಸಬೇಕೆಂದಿದ್ದಾರೆ.


ರವಿ ಶಾಸ್ತ್ರಿ ಟೀಂ ಇಂಡಿಯಾದ ಕೋಚ್​ ಆಗಲು ಸಮರ್ಥರಲ್ಲ ಎಂದು ವಿಕಾಸ್​ ಕುಮಾರ್​ ಅಭಿಪ್ರಾಯವಾಗಿದೆ.


ರೋಹಿತ್​ ಬಿಷ್ಟ್​ ಎಂಬವರು ಈ ಕುರಿತಾಗಿ ಬರೆದುಕೊಂಡಿದ್ದು, ಕೇವಲ 2 ಟೆಸ್ಟ್​ಗಳ ಬಳಿಕ ರೋಹಿತ್​ರನ್ನು ಹೊರಗಿಡಲಾಯಿತು. ಈಗ ರವಿ ಶಾಸ್ತ್ರಿಯನ್ನು ಹೊರಗಿಡಬೇಕೆಂದಿದ್ದಾರೆ.


ಇನ್ನು ಈ ಹಿಂದೆ ರವಿ ಶಾಸ್ತ್ರಿಯವರು ಎಜೆಬೆಸ್ಟನ್​ ಪಂದ್ಯದ ನಡುವೆ ತೂಕಡಿಸುತ್ತಿರುವುದು ಕಂಡು ಬಂದಿತ್ತು. ಈ ಕುರಿತಾಗಿ ಬಹಳಷ್ಟು ಟ್ರೋಲ್ ಆಗಿದ್ದರು. ಇನ್ನು ಕಳೆದ ವರ್ಷ ವಿರಾಟ್​ ಕೊಹ್ಲಿಯವರ ಮಾತಿನ ಅನ್ವಯ ಅನಿಲ್​ ಕುಂಬ್ಳೆಯವರನ್ನು ಕೋಚ್​ ಸ್ಥಾನದಿಂದ ತೆಗೆದು ರವಿ ಶಾಸ್ತ್ರಿಯನ್ನು ನೇಮಿಸಿಕೊಂಡಿದ್ದರೆಂಬುವುದು ಗಮನಾರ್ಹ ವಿಚಾರ
First published:August 13, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ