1984ರ ಒಲಿಂಪಿಕ್ಸ್ನಲ್ಲಿ ಪಿಟಿ ಉಷಾ ಮೆಡಲ್ ಮಿಸ್ ಮಾಡಿಕೊಳ್ಳಲು ಗಂಜಿ ಕಾರಣವಾಯ್ತಾ?
Updated:August 16, 2018, 8:08 PM IST
Updated: August 16, 2018, 8:08 PM IST
- ನ್ಯೂಸ್18 ಕನ್ನಡ
ಬೆಂಗಳೂರು(ಆ. 16): ಭಾರತದಲ್ಲಿ ರನ್ನಿಂಗ್ ರೇಸ್ ಎಂದರೆ ಪಿಟಿ ಉಷಾ ಹೆಸರೇ ಮೊದಲು ಮನಸಿಗೆ ಬರುವುದು. ಓಟದ ರಾಣಿ, ಗೋಲ್ಡನ್ ಗರ್ಲ್ ಎಂದೇ ಖ್ಯಾತರಾಗಿದ್ದ ಪಿಟಿ ಉಷಾ ಎಂಬತ್ತರ ದಶಕದಲ್ಲಿ ಭಾರತದ ಅತ್ಯಂತ ಜನಪ್ರಿಯ ಕ್ರೀಡಾಪಟು ಎನಿಸಿದ್ದರು. ಏಷ್ಯಾ ಮಟ್ಟದಲ್ಲಿ ಪಿಟಿ ಉಷಾ ಅವರನ್ನು ಮೀರಿಸುವ ಓಟಗಾರ್ತಿಯೇ ಇರಲಿಲ್ಲ. 100 ಮೀಟರ್ 200 ಮೀಟರ್ ಮತ್ತು 400 ಮೀಟರ್ ಓಟದ ಸ್ಪರ್ಧೆಯಲ್ಲಿ ಪಿಟಿ ಉಷಾ ಅಕ್ಷರಶಃ ಏಷ್ಯನ್ ಕ್ವೀನ್ ಆಗಿದ್ದರು. ಎಂಬತ್ತರ ದಶಕದಲ್ಲಿ ಅವರು ಉಚ್ಛ್ರಾಯ ಸ್ಥಿತಿಯಲ್ಲಿದ್ದರು. 1984ರ ಒಲಿಂಪಿಕ್ಸ್ನಲ್ಲಿ ಪಿಟಿ ಉಷಾ 4ನೇ ಸ್ಥಾನ ಪಡೆದರು. ಕೇವಲ 1/100 ಸೆಕೆಂಡ್ ಅಂತರದಲ್ಲಿ ಕಂಚಿನ ಪದಕ ಮಿಸ್ ಮಾಡಿಕೊಂಡರು. ಒಂದು ವೇಳೆ ಅವರು ಪದಕ ಜಯಿಸಿದ್ದರೆ ಒಲಿಂಪಿಕ್ಸ್ ಟ್ರ್ಯಾಕ್ ಇವೆಂಟ್ನಲ್ಲಿ ಪದಕ ಗೆದ್ದ ಮೊದಲ ಭಾರತೀಯ ವ್ಯಕ್ತಿ ಎನಿಸುತ್ತಿದ್ದರು.
ಯಾಕೆ ಮಿಸ್ ಆಯ್ತು?
ಒಲಿಂಪಿಕ್ಸ್ನಲ್ಲಿ ಪದಕ ಗೆಲ್ಲಲು ವಿಫಲವಾಗಿದ್ದು ಹೇಗೆ ಎಂಬುದಕ್ಕೆ ಪಿ.ಟಿ. ಉಷಾ ಇದೀಗ ಇಂಟರೆಸ್ಟಿಂಗ್ ಕಾರಣ ಕೊಟ್ಟಿದ್ದಾರೆ. 1984ರ ಒಲಿಂಪಿಕ್ಸ್ ನಡೆದದ್ದು ಅಮೆರಿಕದ ಲಾಸ್ ಏಂಜಲಿಸ್ ನಗರದಲ್ಲಿ. ಅಲ್ಲಿ ಸಿಗೋದು ಅರೆಬೆಂದ ಚಿಕನ್, ಬೇಕ್ ಮಾಡಿದ ಆಲೂ ಇತ್ಯಾದಿ ತಿಂಡಿಗಳೇ. ಕೇರಳದ ಹಳ್ಳಿ ಹುಡುಗಿಗೆ ಇಂಥ ಊಟ ರುಚಿಸೀತೇ? ಕೇರಳದಿಂದ ತಂದ ಅಕ್ಕಿ ಗಂಜಿ ಮತ್ತು ಉಪ್ಪಿನ ಕಾಯಿಯೇ ಗತಿ ಆಯ್ತು. ಕ್ರೀಡಾಪಟುಗಳಿಗೆ ಪೌಷ್ಟಿಕಾಂಶ ಅತ್ಯಗತ್ಯವಾಗಿರುತ್ತದೆ. ಒಲಿಂಪಿಕ್ಸ್ನಲ್ಲಿ ಪಾಲ್ಗೊಂಡಿದ್ದ ಇತರ ದೇಶಗಳ ಅಥ್ಲೀಟ್ಗಳಿಗೆ ಸಿಗುತ್ತದೆ ಸವಲತ್ತು, ಸೌಲಭ್ಯ, ಆಹಾರ ನೋಡಿ ಪಿ.ಟಿ.ಉಷಾ ಹೊಟ್ಟೆಯುರಿ ಪಟ್ಟುಕೊಳ್ಳುತ್ತಿದ್ದರಂತೆ. ತಮ್ಮ ದೇಶದ ಅಥ್ಲೀಟ್ಗಳಿಗೆ ಇಂಥ ಸೌಲಭ್ಯ ಯಾವಾಗ ಸಿಗುತ್ತದೆ ಎಂದು ಯೋಚಿಸುತ್ತಿದ್ದರಂತೆ.400 ಮೀಟರ್ ರೇಸ್ನ ಫೈನಲ್ನಲ್ಲಿ ಪಿಟಿ ಉಷಾ ಮೊದಲ 300 ಮೀಟರ್ ಚೆನ್ನಾಗಿಯೇ ಓಡಿದ್ದರು. ಕೊನೆಯ 35 ಮೀಟರ್ನಲ್ಲಿ ಗೋಲ್ಡನ್ ಕ್ವೀನ್ ಸುಸ್ತಾಗಿ ಹೋಗಿದ್ದರು. ಉಷಾಗಿಂತ ಹಿಂದಿದ್ದ ರೊಮೇನಿಯಾದ ಕ್ರಿಸ್ಟಿಯೇನಾ ಕೋಜೋಕಾರು ಅಂತಿಮ ಕ್ಷಣದಲ್ಲಿ ಪ್ರಬಲವಾಗಿ ಓಡಿ ಗುರಿ ಮುಟ್ಟಿದರು. ಅವರಿಗೂ ಉಷಾ ಅವರಿಗೂ ಇದ್ದ ಅಂತ ಕೇವಲ ನೂರನೇ ಒಂದು ಸೆಕೆಂಡ್ ಮಾತ್ರ. ತಾನು ಅಕ್ಕಿ ಗಂಜಿ ತಿಂದು ದಿನದೂಡಿದ್ದರಿಂದಲೇ ಅಗತ್ಯ ದೈಹಿಕ ಬಲ ಸಿಗಲಿಲ್ಲ. ಪೌಷ್ಠಿಕಾಂಶಯುಕ್ತ ಆಹಾರ ತೆಗೆದುಕೊಂಡಿದ್ದರೆ ಸುಲಭವಾಗಿ ಪದಕ ಗೆಲ್ಲಬಹುದಿತ್ತು ಎಂದು ಪಿ.ಟಿ. ಉಷಾ ವಿಷಾದದೊಂದಿಗೆ ಹೇಳುತ್ತಾರೆ.

ದಂತಕಥೆಯಾಗಿರುವ ಪಿಟಿ ಉಷಾ ತಮ್ಮ ತವರು ಕೇರಳದಲ್ಲಿ ಕ್ರೀಡಾ ಅಕಾಡೆಮಿಯೊಂದನ್ನು ನಡೆಸುತ್ತಿದ್ದಾರೆ. ತನಗೆ ಸಿಗದ ಸವಲತ್ತುಗಳು ಈಗಿನ ತಲೆಮಾರಿನವರಿಗೆ ಸಿಗಬೇಕೆಂದು ಹೇಳುವ ಅವರು, ತಮ್ಮ ಅಕಾಡೆಮಿಯಲ್ಲಿ ಅತ್ಯಾಧುನಿಕ ತರಬೇತಿ ವಿಧಾನಗಳನ್ನ ಅಳವಡಿಸಲು ಯತ್ನಿಸುತ್ತಿದ್ದಾರೆ.ಇಂಡೋನೇಷ್ಯಾದಲ್ಲಿ ನಡೆಯುತ್ತಿರುವ ಈ ಬಾರಿ ಏಷ್ಯನ್ ಗೇಮ್ಸ್ನಲ್ಲಿ ಎಲ್ಲರ ಕಣ್ಣು ಮತ್ತೊಬ್ಬ ಅಥ್ಲೀಟ್ ಮೇಲೆ ನೆಟ್ಟಿದೆ. ಅಸ್ಸಾಮ್ನ ಹುಡುಗಿ ಹಿಮಾ ದಾಸ್ ತಮ್ಮ ಚಮತ್ಕಾರಿಕ ಓಟದಿಂದ ಪಿಟಿ ಉಷಾ ಅವರ ಕಾಲವನ್ನ ನೆನಪಿಸಿದ್ದಾರೆ. ಒಲಿಂಪಿಕ್ಸ್ನಲ್ಲಿ ಭಾರತಕ್ಕೆ ಪದಕ ತಂದುಕೊಡುವ ಎಲ್ಲಾ ಕ್ಷಮತೆಯನ್ನೂ ಹಿಮಾ ದಾಸ್ ಪಡೆದುಕೊಂಡಿದ್ದಾರೆ.
(ಎಎಫ್ಪಿ ವರದಿ)
ಬೆಂಗಳೂರು(ಆ. 16): ಭಾರತದಲ್ಲಿ ರನ್ನಿಂಗ್ ರೇಸ್ ಎಂದರೆ ಪಿಟಿ ಉಷಾ ಹೆಸರೇ ಮೊದಲು ಮನಸಿಗೆ ಬರುವುದು. ಓಟದ ರಾಣಿ, ಗೋಲ್ಡನ್ ಗರ್ಲ್ ಎಂದೇ ಖ್ಯಾತರಾಗಿದ್ದ ಪಿಟಿ ಉಷಾ ಎಂಬತ್ತರ ದಶಕದಲ್ಲಿ ಭಾರತದ ಅತ್ಯಂತ ಜನಪ್ರಿಯ ಕ್ರೀಡಾಪಟು ಎನಿಸಿದ್ದರು. ಏಷ್ಯಾ ಮಟ್ಟದಲ್ಲಿ ಪಿಟಿ ಉಷಾ ಅವರನ್ನು ಮೀರಿಸುವ ಓಟಗಾರ್ತಿಯೇ ಇರಲಿಲ್ಲ. 100 ಮೀಟರ್ 200 ಮೀಟರ್ ಮತ್ತು 400 ಮೀಟರ್ ಓಟದ ಸ್ಪರ್ಧೆಯಲ್ಲಿ ಪಿಟಿ ಉಷಾ ಅಕ್ಷರಶಃ ಏಷ್ಯನ್ ಕ್ವೀನ್ ಆಗಿದ್ದರು. ಎಂಬತ್ತರ ದಶಕದಲ್ಲಿ ಅವರು ಉಚ್ಛ್ರಾಯ ಸ್ಥಿತಿಯಲ್ಲಿದ್ದರು. 1984ರ ಒಲಿಂಪಿಕ್ಸ್ನಲ್ಲಿ ಪಿಟಿ ಉಷಾ 4ನೇ ಸ್ಥಾನ ಪಡೆದರು. ಕೇವಲ 1/100 ಸೆಕೆಂಡ್ ಅಂತರದಲ್ಲಿ ಕಂಚಿನ ಪದಕ ಮಿಸ್ ಮಾಡಿಕೊಂಡರು. ಒಂದು ವೇಳೆ ಅವರು ಪದಕ ಜಯಿಸಿದ್ದರೆ ಒಲಿಂಪಿಕ್ಸ್ ಟ್ರ್ಯಾಕ್ ಇವೆಂಟ್ನಲ್ಲಿ ಪದಕ ಗೆದ್ದ ಮೊದಲ ಭಾರತೀಯ ವ್ಯಕ್ತಿ ಎನಿಸುತ್ತಿದ್ದರು.
ಯಾಕೆ ಮಿಸ್ ಆಯ್ತು?
ಒಲಿಂಪಿಕ್ಸ್ನಲ್ಲಿ ಪದಕ ಗೆಲ್ಲಲು ವಿಫಲವಾಗಿದ್ದು ಹೇಗೆ ಎಂಬುದಕ್ಕೆ ಪಿ.ಟಿ. ಉಷಾ ಇದೀಗ ಇಂಟರೆಸ್ಟಿಂಗ್ ಕಾರಣ ಕೊಟ್ಟಿದ್ದಾರೆ. 1984ರ ಒಲಿಂಪಿಕ್ಸ್ ನಡೆದದ್ದು ಅಮೆರಿಕದ ಲಾಸ್ ಏಂಜಲಿಸ್ ನಗರದಲ್ಲಿ. ಅಲ್ಲಿ ಸಿಗೋದು ಅರೆಬೆಂದ ಚಿಕನ್, ಬೇಕ್ ಮಾಡಿದ ಆಲೂ ಇತ್ಯಾದಿ ತಿಂಡಿಗಳೇ. ಕೇರಳದ ಹಳ್ಳಿ ಹುಡುಗಿಗೆ ಇಂಥ ಊಟ ರುಚಿಸೀತೇ? ಕೇರಳದಿಂದ ತಂದ ಅಕ್ಕಿ ಗಂಜಿ ಮತ್ತು ಉಪ್ಪಿನ ಕಾಯಿಯೇ ಗತಿ ಆಯ್ತು. ಕ್ರೀಡಾಪಟುಗಳಿಗೆ ಪೌಷ್ಟಿಕಾಂಶ ಅತ್ಯಗತ್ಯವಾಗಿರುತ್ತದೆ. ಒಲಿಂಪಿಕ್ಸ್ನಲ್ಲಿ ಪಾಲ್ಗೊಂಡಿದ್ದ ಇತರ ದೇಶಗಳ ಅಥ್ಲೀಟ್ಗಳಿಗೆ ಸಿಗುತ್ತದೆ ಸವಲತ್ತು, ಸೌಲಭ್ಯ, ಆಹಾರ ನೋಡಿ ಪಿ.ಟಿ.ಉಷಾ ಹೊಟ್ಟೆಯುರಿ ಪಟ್ಟುಕೊಳ್ಳುತ್ತಿದ್ದರಂತೆ. ತಮ್ಮ ದೇಶದ ಅಥ್ಲೀಟ್ಗಳಿಗೆ ಇಂಥ ಸೌಲಭ್ಯ ಯಾವಾಗ ಸಿಗುತ್ತದೆ ಎಂದು ಯೋಚಿಸುತ್ತಿದ್ದರಂತೆ.400 ಮೀಟರ್ ರೇಸ್ನ ಫೈನಲ್ನಲ್ಲಿ ಪಿಟಿ ಉಷಾ ಮೊದಲ 300 ಮೀಟರ್ ಚೆನ್ನಾಗಿಯೇ ಓಡಿದ್ದರು. ಕೊನೆಯ 35 ಮೀಟರ್ನಲ್ಲಿ ಗೋಲ್ಡನ್ ಕ್ವೀನ್ ಸುಸ್ತಾಗಿ ಹೋಗಿದ್ದರು. ಉಷಾಗಿಂತ ಹಿಂದಿದ್ದ ರೊಮೇನಿಯಾದ ಕ್ರಿಸ್ಟಿಯೇನಾ ಕೋಜೋಕಾರು ಅಂತಿಮ ಕ್ಷಣದಲ್ಲಿ ಪ್ರಬಲವಾಗಿ ಓಡಿ ಗುರಿ ಮುಟ್ಟಿದರು. ಅವರಿಗೂ ಉಷಾ ಅವರಿಗೂ ಇದ್ದ ಅಂತ ಕೇವಲ ನೂರನೇ ಒಂದು ಸೆಕೆಂಡ್ ಮಾತ್ರ. ತಾನು ಅಕ್ಕಿ ಗಂಜಿ ತಿಂದು ದಿನದೂಡಿದ್ದರಿಂದಲೇ ಅಗತ್ಯ ದೈಹಿಕ ಬಲ ಸಿಗಲಿಲ್ಲ. ಪೌಷ್ಠಿಕಾಂಶಯುಕ್ತ ಆಹಾರ ತೆಗೆದುಕೊಂಡಿದ್ದರೆ ಸುಲಭವಾಗಿ ಪದಕ ಗೆಲ್ಲಬಹುದಿತ್ತು ಎಂದು ಪಿ.ಟಿ. ಉಷಾ ವಿಷಾದದೊಂದಿಗೆ ಹೇಳುತ್ತಾರೆ.

ದಂತಕಥೆಯಾಗಿರುವ ಪಿಟಿ ಉಷಾ ತಮ್ಮ ತವರು ಕೇರಳದಲ್ಲಿ ಕ್ರೀಡಾ ಅಕಾಡೆಮಿಯೊಂದನ್ನು ನಡೆಸುತ್ತಿದ್ದಾರೆ. ತನಗೆ ಸಿಗದ ಸವಲತ್ತುಗಳು ಈಗಿನ ತಲೆಮಾರಿನವರಿಗೆ ಸಿಗಬೇಕೆಂದು ಹೇಳುವ ಅವರು, ತಮ್ಮ ಅಕಾಡೆಮಿಯಲ್ಲಿ ಅತ್ಯಾಧುನಿಕ ತರಬೇತಿ ವಿಧಾನಗಳನ್ನ ಅಳವಡಿಸಲು ಯತ್ನಿಸುತ್ತಿದ್ದಾರೆ.
Loading...
(ಎಎಫ್ಪಿ ವರದಿ)
Loading...