Reliance Industrie: MI ಫ್ಯಾಮಿಲಿಗೆ 2 ಹೊಸ ತಂಡಗಳ ಸೇರ್ಪಡೆ, ಇದು ಕ್ರಿಕೆಟ್‌ಗಿಂತಲೂ ಮೀರಿದ್ದು ಎಂದ ನೀತು ಅಂಬಾನಿ

ರಿಲಯನ್ಸ್ ಇಂಡಸ್ಟ್ರೀಸ್ (Reliance Industries) ಮತ್ತು ಮುಂಬೈ ಇಂಡಿಯನ್ಸ್ (Mumbai Indians) ಮಾಲೀಕರು 'MI ಎಮಿರೇಟ್ಸ್' ಮತ್ತು 'MI ಕೇಪ್ ಟೌನ್' ತಂಡಗಳನ್ನು ಖರೀದಿಸಿದ್ದು, ಇವುಗಳ ಹೊಸ ಲೋಗೋ ಮತ್ತು ಹೆಸರುಗಳನ್ನು ಇಂದು ಅನಾವರಣಗೊಳಿಸಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಮುಂಬೈ ಆಗಸ್ಟ್ 2022: ರಿಲಯನ್ಸ್ ಇಂಡಸ್ಟ್ರೀಸ್ (Reliance Industries) ಮತ್ತು ಮುಂಬೈ ಇಂಡಿಯನ್ಸ್ (Mumbai Indians) ಮಾಲೀಕರು 'MI ಎಮಿರೇಟ್ಸ್' ಮತ್ತು 'MI ಕೇಪ್ ಟೌನ್' ತಂಡಗಳನ್ನು ಖರೀದಿಸಿದ್ದು, ಇವುಗಳ ಹೊಸ ಲೋಗೋ ಮತ್ತು ಹೆಸರುಗಳನ್ನು ಇಂದು ಅನಾವರಣಗೊಳಿಸಿದೆ. UAE ಯ ಇಂಟರ್ನ್ಯಾಷನಲ್ ಲೀಗ್ T20 ನಲ್ಲಿ ಮತ್ತು ದಕ್ಷಿಣ ಆಫ್ರಿಕಾ T20 ಲೀಗ್ ನಲ್ಲಿ ಈ ಎರಡೂ ತಂಡಗಳು ಕಣಕ್ಕಿಳಿಯಲಿವೆ. ಇದೀಗ ರಿಲಯನ್ಸ್​ ಮುಂಬೈ ಇಂಡಿಯನ್ಸ್ ಜೊತೆ MI ಎಮಿರೇಟ್ಸ್ ಮತ್ತು MI ಕೇಪ್ ಟೌನ್ ತಂಡಗಳ ಮಾಲಿಕತ್ವವನ್ನು ಹೊಂದಿದೆ. ಹೀಗಾಗಿ ಇದೊಂದು ದೊಡ್ಡ ಕುಟುಂಬದಂತಾಗಿದೆ. ಇನ್ನು, ಇಂಟರ್‌ನ್ಯಾಶನಲ್‌ನಲ್ಲಿ 'ಎಂಐ ಎಮಿರೇಟ್ಸ್' UAE T20 ಲೀಗ್​ ಮತ್ತು ದಕ್ಷಿಣ ಆಫ್ರಿಕಾ T20 ಲೀಗ್‌ನಲ್ಲಿ 'MI ಕೇಪ್ ಟೌನ್' ಎಂಬ ತಂಡಗಳು ಆಡಲಿದ್ದು. ತಂಡಗಳ ಜರ್ಸಿಯ ಮತ್ತು ಲೋಗೋದ ಬಣ್ಣವು ಸಾಂಪ್ರದಾಯಿಕ ನೀಲಿ ಮತ್ತು ಚಿನ್ನದ ಬಣ್ಣದಿಂದ ಕೂಡಿದೆ.

ಹೊಸ ತಂಡಗಳ ಹೆಸರು ಘೋಷಣೆ:

ಇನ್ನು, ಇಂದು ರಿಲಯನ್ಸ್ ತನ್ನ 2 ಹೊಸ ತಂಡಗಳ ಹೆಸರುಗಳನ್ನು ಘೋಷಣೆ ಮಾಡಿದೆ. MI ಎಮಿರೇಟ್ಸ್ ಮತ್ತು MI ಕೇಪ್ ಟೌನ್ ಎಂಬ ಹೆಸರುಗಳ 2 ತಂಡಗಳನ್ನು ರಿಲಯನ್ಸ್ ಪರಿಚಯಿಸಿದೆ. ಇನ್ನು, MI ಕೇಪ್ ಟೌನ್ ಸಾಂಪ್ರದಾಯಿಕ ಮುಂಬೈ ಇಂಡಿಯನ್ಸ್ ಗುರುತನ್ನು ಹೊಂದಿದೆ. ಹೀಗಾಗಿ ಸಾಮಾಜಿಕ ಜಾಳತಾಣದಲ್ಲಿ #OneFamily ಎಂದು ಬರೆದುಕೊಂಡಿರುವ ರಿಲಯನ್ಸ್, ಕ್ರೀಡೆಯ ಮೂಲಕ ಜಾಗತಿಕವಾಗಿ ಒಂದೇ ಕುಟುಂಬವಾಗಲು ಇದು ಸಹಾಯಕವಾಗಲಿದೆ ಎಂದು ಬರೆದುಕೊಂಡಿದ್ದಾರೆ.





MI ಕ್ರಿಕೆಟ್‌ಗಿಂತಲೂ ಮೀರಿದೆ:

ಇನ್ನು, ಈ ತಂಡಗಳ ಅನಾವರಣದ ನಂತರ ಮಾತನಾಡಿದ ರಿಲಯನ್ಸ್ ಇಂಡಸ್ಟ್ರೀಸ್‌ನ ನಿರ್ದೇಶಕಿ ನೀತು ಎಂ. ಅಂಬಾನಿ, ‘MI ಎಮಿರೇಟ್ಸ್ ಮತ್ತು MI ಕೇಪ್ ಟೌನ್ ಅನ್ನು ಸ್ವಾಗತಿಸಲು ನನಗೆ ತುಂಬಾ ಸಂತೋಷವನ್ನು ನೀಡುತ್ತದೆ. ನಮ್ಮ #Onefamily ಗೆ ಈ 2 ತಂಡಗಳು ಹೊಸ ಸೇರ್ಪಡೆಯಾಗಿದೆ. ನಮಗೆ, MI ಕ್ರಿಕೆಟ್‌ಗಿಂತಲೂ ಮೀರಿದೆ. ಇದು ಕನಸು, ನಿರ್ಭೀತ ಮತ್ತು ಧನಾತ್ಮಕತೆಯನ್ನು ಬೆಳೆಸುವ ಸಾಮರ್ಥ್ಯವನ್ನು ಒಳಗೊಂಡಿದೆ. MI ಎಮಿರೇಟ್ಸ್ ಮತ್ತು MI ಕೇಪ್ ಟೌನ್ ಇವೆರಡೂ ತಂಡಗಳು ಎಂಐ ತಂಡದ ಹಾಗೇ ಉತ್ತಮವಾಗಿ ಪ್ರದರ್ಶನ ನೀಡಲಿದೆ ಎಂದು ನನಗೆ ಖಾತ್ರಿಯಿದೆ. MI ಯ ಜಾಗತಿಕ ಕ್ರಿಕೆಟ್ ಪರಂಪರೆಯನ್ನು ಇನ್ನೂ ಹೆಚ್ಚಿನ ಎತ್ತರಕ್ಕೆ ಕೊಂಡೊಯುತ್ತದೆ‘ ಎಂದು ಹೇಳಿದ್ದಾರೆ.





ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಪರಿಚಯ:

ರಿಲಯನ್ಸ್ ಭಾರತದ ಅತಿದೊಡ್ಡ ಖಾಸಗಿ ವಲಯದ ಕಂಪನಿಯಾಗಿದ್ದು, INR ನ ಏಕೀಕೃತ ಆದಾಯವನ್ನು ಹೊಂದಿದೆ. 792,756 ಕೋಟಿ ($104.6 ಶತಕೋಟಿ), INR 110,778 ಕೋಟಿ ($14.6 ಶತಕೋಟಿ) ನಗದು ಲಾಭ ಮತ್ತು ನಿವ್ವಳ ಲಾಭ ಹೊಂದಿದೆ. ಮಾರ್ಚ್ 31, 2022ಕ್ಕೆ ಕೊನೆಗೊಂಡ ವರ್ಷಕ್ಕೆ INR 67,845 ಕೋಟಿ ($9.0 ಶತಕೋಟಿ) ಇರುವುದಾಗಿ ತಿಳಿಸಿದೆ. ರಿಲಯನ್ಸ್‌ನ ಚಟುವಟಿಕೆಗಳು ಯಾವುವೆಂದರೆ, ಹೈಡ್ರೋಕಾರ್ಬನ್ ಪರಿಶೋಧನೆ ಮತ್ತು ಉತ್ಪಾದನೆ, ಪೆಟ್ರೋಲಿಯಂ ಶುದ್ಧೀಕರಣ ಮತ್ತು ಮಾರುಕಟ್ಟೆ, ಪೆಟ್ರೋಕೆಮಿಕಲ್ಸ್, ಚಿಲ್ಲರೆ ಮತ್ತು ಡಿಜಿಟಲ್ ಸೇವೆಗಳಾಗಿದೆ.

ಇದನ್ನೂ ಓದಿ: IPL Digital Rights: ಲೀಗ್ ಜೊತೆ ನಮ್ಮ ಸಂಬಂಧ ಇನ್ನಷ್ಟು ಗಾಢ, ಇದುವೇ ನಮಗೆ ಹೆಮ್ಮೆ ಎಂದ ನೀತಾ ಅಂಬಾನಿ

ಇದಲ್ಲದೇ ಭಾರತದ ಉನ್ನತ ಶ್ರೇಣಿಯ ಖಾಸಗಿ ವಲಯದ ಕಂಪನಿ 2022ರ "ವಿಶ್ವದ ಅತಿದೊಡ್ಡ ಕಂಪನಿಗಳ" ಜಾಗತಿಕ 500 ಪಟ್ಟಿಯಲ್ಲಿ ಕಂಪನಿಯು 53ನೇ ಸ್ಥಾನ ಪಡೆದುಕೊಂಡಿದೆ. ಫೋರ್ಬ್ಸ್ ಗ್ಲೋಬಲ್ 2000ರಿಂದ 2022ರ ವರೆಗಿ ವರದಿ ಪ್ರಕಾರ "ವಿಶ್ವದ ಅತಿದೊಡ್ಡ ಸಾರ್ವಜನಿಕ ಕಂಪನಿಗಳ" ಶ್ರೇಯಾಂಕದಲ್ಲಿ ಆಭರತದ ಪರ ಇದು ಅಗ್ರ ಸ್ಥಾನದಲ್ಲಿದೆ. ಭಾರತೀಯ ಕಂಪನಿಗಳಲ್ಲಿ. ಇದು ಲಿಂಕ್ಡ್‌ಇನ್‌ನ ವರದಿಯ ಪ್ರಕಾರ ಉದ್ಯೋಗಿಗಳಿಗೆ ಕೆಲಸ ಮಾಡಲು ಅತ್ಯುತ್ತಮ ಕಂಪನಿಗಳಲ್ಲಿ ಒಂದಾಗಿದೆ ರಿಲಯನ್ಸ್ ಸಹ ಒಂದಾಗಿದೆ. ವೆಬ್‌ಸೈಟ್: www.ril.com
Published by:shrikrishna bhat
First published: