Reliance industries: ಒಲಿಂಪಿಕ್ಸ್‌, ಕಾಮನ್‌ವೆಲ್ತ್‌ ಮತ್ತು ಏಷ್ಯನ್ ಗೇಮ್ಸ್‌ಗೆ ಐಒಎ ಜೊತೆಗೆ ರಿಲಯನ್ಸ್‌ ಇಂಡಸ್ಟ್ರೀಸ್‌ ಒಪ್ಪಂದ

ಜಾಗತಿಕ ಕ್ರೀಡೆಯಲ್ಲಿ ಭಾರತ ಪ್ರಮುಖ ಸ್ಥಾನಕ್ಕೇರುವುದನ್ನು ನೋಡುವುದು ನಮ್ಮ ಕನಸಾಗಿತ್ತು. ಐಒಎ ಜೊತೆಗೆ ನಮ್ಮ ಪಾಲುದಾರಿಕೆಯು ರಿಲಯನ್ಸ್‌ ಫೌಂಡೇಶನ್‌ ಕ್ರೀಡೆಗೆ ಬೆಂಬಲ ನೀಡುವ ನಿಟ್ಟಿನಲ್ಲಿ ಹೊಂದಿರುವ ಬದ್ಧತೆಯನ್ನು ಸಾಬೀತುಪಡಿಸುತ್ತದೆ ಎಂದು ಐಒಸಿ ಸದಸ್ಯೆ ಮತ್ತು ರಿಲಾಯನ್ಸ್‌ ಇಂಡಸ್ಟ್ರೀಸ್‌ ಲಿಮಿಟೆಡ್‌ ನಿರ್ದೇಶಕಿ ನೀತಾ ಎಂ ಅಂಬಾನಿ ಹೇಳಿದ್ದಾರೆ.

ರಿಲಯನ್ಸ್‌ ಇಂಡಸ್ಟ್ರೀಸ್‌

ರಿಲಯನ್ಸ್‌ ಇಂಡಸ್ಟ್ರೀಸ್‌

  • Share this:
    ಮುಂಬೈ, ಜುಲೈ 29, 2022: ಮುಖೇಶ್‌ ಅಂಬಾನಿ (Mukesh Ambani) ನೇತೃತ್ವದ ರಿಲಯನ್ಸ್ ಇಂಡಸ್ಟ್ರೀಸ್‌ (Reliance industries) ಮತ್ತು ಇಂಡಿಯನ್ ಒಲಿಂಪಿಕ್‌ ಅಸೊಸಿಯೇಶನ್ (IOA) ದೀರ್ಘಕಾಲಿಕ ಒಪ್ಪಂದಕ್ಕೆ ಬುಧವಾರ ಸಹಿ ಹಾಕಿದ್ದು, ಕಾಮನ್‌ವೆಲ್ತ್‌ ಗೇಮ್ಸ್‌ (Commenwealth Game), ಏಷ್ಯನ್ ಗೇಮ್ಸ್ (Asian Game) ಮತ್ತು ಒಲಿಂಪಿಕ್ ಗೇಮ್ಸ್‌ (Olympic Game) ಸೇರಿದಂತೆ ಹಲವು ಕ್ರೀಡಾಕೂಟಗಳಲ್ಲಿ ಭಾರತೀಯ ಅಥ್ಲೀಟ್‌ಗಳಿಗೆ ಬೆಂಬಲ ನೀಡಲಿವೆ. ಈ ಒಪ್ಪಂದದ ಅಡಿಯಲ್ಲಿ ರಿಲಯನ್ಸ್‌ ಮತ್ತು ಐಒಎ ಒಟ್ಟಾಗಿ 2024 ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಮೊಟ್ಟ ಮೊದಲ ಬಾರಿಗೆ ಇಂಡಿಯಾ ಹೌಸ್  (India House) ಅನ್ನು ಸ್ಥಾಪಿಸಲಿವೆ. ಒಲಿಂಪಿಕ್‌ ಕಾರ್ಯಕ್ರಮಕ್ಕೆ ರಿಲಯನ್ಸ್‌ನ ಬದ್ಧತೆಗೆ ಇದು ಸಾಕ್ಷಿಯಾಗಿದೆ.

    ಜಾಗತಿಕ ಕ್ರೀಡೆಯಲ್ಲಿ ಭಾರತ ಪ್ರಮುಖ ಸ್ಥಾನಕ್ಕೇರುವುದನ್ನು ನೋಡುವುದು ನಮ್ಮ ಕನಸಾಗಿತ್ತು. ಐಒಎ ಜೊತೆಗೆ ನಮ್ಮ ಪಾಲುದಾರಿಕೆಯು ರಿಲಯನ್ಸ್‌ ಫೌಂಡೇಶನ್‌ ಕ್ರೀಡೆಗೆ ಬೆಂಬಲ ನೀಡುವ ನಿಟ್ಟಿನಲ್ಲಿ ಹೊಂದಿರುವ ಬದ್ಧತೆಯನ್ನು ಸಾಬೀತುಪಡಿಸುತ್ತದೆ ಎಂದು ಐಒಸಿ ಸದಸ್ಯೆ ಮತ್ತು ರಿಲಾಯನ್ಸ್‌ ಇಂಡಸ್ಟ್ರೀಸ್‌ ಲಿಮಿಟೆಡ್‌ ನಿರ್ದೇಶಕಿ ನೀತಾ ಎಂ ಅಂಬಾನಿ ಹೇಳಿದ್ದಾರೆ.

    “ಇಂಡಿಯನ್ ಒಲಿಂಪಿಕ್ ಅಸೋಸಿಯೇಶನ್‌ ಜೊತೆಗೆ ಪಾಲುದಾರಿಕೆ ಮಾಡಿಕೊಂಡಿದ್ದಕ್ಕೆ ರಿಲಯನ್ಸ್ ಇಂಡಸ್ಟ್ರೀಸ್‌ ಮತ್ತು ಶ್ರೀಮತಿ ನೀತಾ ಅಂಬಾನಿಯವರಿಗೆ ನಾನು ಧನ್ಯವಾದಗಳನ್ನು ತಿಳಿಸುತ್ತೇನೆ. ಹಲವು ವರ್ಷಗಳಿಂದಲೂ ಇವರು ಭಾರತೀಯ ಕ್ರೀಡೆಗಳಿಗೆ ಬೆಂಬಲ ನೀಡುತ್ತಿದ್ದಾರೆ ಮತ್ತು ಒಲಿಂಪಿಕ್ ಚಳವಳಿಗೆ ಧುಮುಕುವಂತೆ ಮುಂದಿನ ತಲೆಮಾರಿನ ಯುವಕರಿಗೆ ಇವರು ಸ್ಫೂರ್ತಿ ನೀಡುತ್ತಿದ್ದಾರೆ. ಪ್ಯಾರಿಸ್‌ 2024 ರಲ್ಲಿ ಇಂಡಿಯಾ ಹೌಸ್ ಸ್ಥಾಪನೆ ಒಂದು ವಿಶಿಷ್ಟ ಕ್ಷಣವಾಗಿದೆ. ಒಲಿಂಪಿಕ್‌ನಲ್ಲಿ ಭಾರತದ ಬದ್ಧತೆಯನ್ನು ಈ ಕ್ರಮ ಇನ್ನಷ್ಟು ಸಾಬೀತುಪಡಿಸುತ್ತದೆ” ಎಂದು ಐಒಎ ಪ್ರಧಾನ ಕಾರ್ಯದರ್ಶಿ ರಾಜೀವ್‌ ಮೆಹ್ತಾ ಹೇಳಿದ್ದಾರ

    ಇದನ್ನೂ ಓದಿ: Jio And Airtel: ಅದ್ಭುತ ಕೊಡುಗೆ! ಕೇವಲ 91 ರೂಪಾಯಿಗೆ ಅನಿಯಮಿತ ಕರೆ ಮತ್ತು 3GB ಡೇಟಾ ಉಚಿತ

    ರಿಲಯನ್ಸ್ ಫೌಂಡೇಷನ್‌ಗೆ 'ಸಮಾಜದ ಒಳಿತಿಗೆ ಕ್ರೀಡೆ' (Sports For Social Good’) ಪ್ರಶಸ್ತಿಗೆ ಭಾಜನವಾಗಿದೆ.

    ಇಲ್ಲಿನ ತಾಜ್ ಮಹಲ್ ಪ್ಯಾಲೇಜ್(Taj Mahal Palace)‌ ಹೋಟೆಲ್‌ನಲ್ಲಿ ಶನಿವಾರ ನಡೆದ ಸ್ಪೋರ್ಟ್ಸ್‌ಸ್ಟಾರ್‌ ಏಸಸ್‌ ಪ್ರಶಸ್ತಿ –2022 (Sportstar Aces Prize 2022) ಪ್ರದಾನ ಕಾರ್ಯಕ್ರಮದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ (Reliance industries ltd) ಕಾರ್ಯನಿರ್ವಾಹಕ ನಿರ್ದೇಶಕ ನಿಖಿಲ್ ಮೇಸ್ವಾನಿ ಈ ಗೌರವ ಸ್ವೀಕರಿಸಿದರು.










    ಇದನ್ನೂ ಓದಿ: Morning Digest: ಅತ್ತೆ ಮೇಲೆ ಕಣ್ಣಾಕಿದ ಗೆಳೆಯ ಫಿನಿಶ್, ದುಬಾರಿಯಾದ ಚಿನ್ನ, ಇದಪ್ಪಾ ಅದೃಷ್ಟ; ಬೆಳಗಿನ ಟಾಪ್ ನ್ಯೂಸ್

    ದಿ ಹಿಂದೂ ಸಮೂಹದ ಮುಖ್ಯಸ್ಥೆ ಮಾಲಿನಿ ಪಾರ್ಥಸಾರಥಿ ಮಾತನಾಡಿ, 'ಈ ವರ್ಷದ 'ಸಮಾಜದ ಒಳಿತಿಗೆ ಕ್ರೀಡೆ' ಪ್ರಶಸ್ತಿಯನ್ನು ರಿಲಯನ್ಸ್ ಪ್ರತಿಷ್ಠಾನ ಭಾಜನರಾಗಿರುವುದನ್ನು ಪ್ರಕಟಿಸಲು ಖುಷಿಯಾಗುತ್ತಿದೆ. ಯುವ ಕ್ರೀಡಾ ಚಟುವಟಿಕೆಗಳ ಮೂಲಕ ಕ್ರೀಡಾ ಕೌಶಲ ಬೆಳೆಸಲು ‍ಪ್ರತಿಷ್ಠಾನವು ಬದ್ಧತೆ ತೋರುತ್ತಿದೆ' ಎಂದು ಶ್ಲಾಘಿಸಿದರು.

    'ನೀತಾ ಅಂಬಾನಿ ನೇತೃತ್ವದಲ್ಲಿ ರಿಲಯನ್ಸ್ ಪ್ರತಿಷ್ಠಾನವು ತ್ಯಾಗ ಮನೋಭಾವ, ಆಸಕ್ತಿ ಹಾಗೂ ಕಾಳಜಿಯಿಂದ ಕೆಲಸದಲ್ಲಿ ತೊಡಗಿದೆ. ಅಂತರರಾಷ್ಟ್ರೀಯ ಒಲಿಂಪಿಕ್‌ ಸಮಿತಿ ಸದಸ್ಯರೂ ಆಗಿರುವ ನೀತಾ ಅಂಬಾನಿ ಅವರ ಅವಿರತ ಪ್ರಯತ್ನದಿಂದ, 2023ರ ಅಂತರರಾಷ್ಟ್ರೀಯ ಒಲಿಂಪಿಕ್‌ ಸಮಿತಿ ಅಧಿವೇಶನವನ್ನು ಮುಂಬೈನಲ್ಲಿ ನಡೆಸಲು ಘೋಷಣೆ ಮಾಡಿರುವುದು ಗಮನಾರ್ಹ ವಿಚಾರ‌’ ಎಂದರು.


    ‘ಭಾರತದ ನಿರ್ಗತಿಕ ಹಾಗೂ ಸೌಲಭ್ಯ ವಂಚಿತ ಯುವಜನತೆಯನ್ನು ಗುರಿಯಾಗಿಸಿ ವಿವಿಧ ಕಾರ್ಯಕ್ರಮಗಳ ಮೂಲಕ ಅವರ ಏಳಿಗೆಗಾಗಿ ರಿಲಯನ್ಸ್‌ ಪ್ರತಿಷ್ಠಾನ ದೊಡ್ಡ ಪ್ರಮಾಣದಲ್ಲಿ ಹೂಡಿಕೆ ಮಾಡಿದೆ. ಪ್ರಮುಖ ಕ್ರೀಡೆಗಳಾದ ಫುಟ್‌ಬಾಲ್‌ ಹಾಗೂ ಕ್ರಿಕೆಟ್‌ನಲ್ಲಿ ಕೌಶಲ ಬೋಧನೆ, ತರಬೇತಿ ನೀಡುತ್ತಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

    Published by:Harshith AS
    First published: