ಹಿಜಾಬ್ ಹಾಕಲು ನಿರಾಕರಣೆ: ಇರಾನ್ ಪಂದ್ಯಾವಳಿಯಿಂದಲೇ ಹೊರಬಂದ ಚೆಸ್ ಪಟು ಸೌಮ್ಯ


Updated:June 13, 2018, 5:10 PM IST
ಹಿಜಾಬ್ ಹಾಕಲು ನಿರಾಕರಣೆ: ಇರಾನ್ ಪಂದ್ಯಾವಳಿಯಿಂದಲೇ ಹೊರಬಂದ ಚೆಸ್ ಪಟು ಸೌಮ್ಯ

Updated: June 13, 2018, 5:10 PM IST
-ನ್ಯೂಸ್ 18

ಮುಂಬೈ(ಜೂ.13): ಭಾರತದ ಚೆಸ್ ಪಟು ಸೌಮ್ಯ ಸ್ವಾಮಿನಾಥನ್ ಇರಾನ್ ಸರಣಿಯಿಂದಲೇ ಹಿಂದೆ ಸರಿದಿದ್ದಾರೆ. ಇರಾನಿನಲ್ಲಿ ಅಲ್ಲಿನ ಸಂಪ್ರದಾಯದ ಪ್ರಕಾರ ಮಹಿಳೆಯರಿಗೆ ಹಿಜಾಬ್ ಕಡ್ಡಾಯವಾಗಿರುವುದರಿಂದ ಹಿಜಾಬ್ ತೊಡಲು ನಿರಾಕರಿಸಿರುವ ಸೌಮ್ಯ ಸ್ವಾಮಿನಾಥನ್ ಟೂರ್ನಿಯಿಂದಲೇ ಹೊರಬಂದಿದ್ದಾರೆ.

ತಮ್ಮ ನಿರ್ಧಾರವನ್ನ ಫೇಸ್ಬುಕ್​ನಲ್ಲಿ ಪ್ರಕಟಿಸಿರುವ ಸೌಮ್ಯ ಸ್ವಾಮಿನಾಥನ್, ಕಠಿನ ಶಬ್ದಗಳ ಮೂಲಕ ಅಭಿಮಾನಿಗಳಿಗೆ ವಿವರಣೆ ಕೊಟ್ಟಿದ್ದಾರೆ.

ಜುಲೈ 26ರಿಂದ ಆಗಸ್ಟ್​ 2ರವರೆಗೆ ಇರಾನಿನಲ್ಲಿ ನಡೆಯಲಿರುವ ಏಷಿಯನ್ ನೆಶನ್ ಕಪ್ ಚೆಸ್ ಟೂರ್ನಿಯಿಂದ ಹೊರಗುಳಿಯುತ್ತಿರುವುದನ್ನ ತಿಳಿಸಲು ನನಗೆ ತುಂಬಾ ಬೇಸರವೆನಿಸುತ್ತಿದೆ. ನನಗೆ ಬಲವಂತವಾಗಿ ಹಿಜಾಬ್ ಅಥವಾ ಬುರ್ಖಾ ತೊಡಲು ನನಗೆ ಇಷ್ಟವಿಲ್ಲ. ಇರಾನಿನನಲ್ಲಿ ಹಿಜಾಬ್ ಕಡ್ಡಾಯ ಕಾನೂನಿನಿಂದ ನೇರವಾಗಿ ನನ್ನ ಮಾನವ ಹಕ್ಕುಗಳು, ಅಭಿವ್ಯಕ್ತಿ ಸ್ವಾತಂತ್ರ್ಯ. ಚಿಂತನಾ ಸ್ವಾತಂತ್ರ್ಯ, ಆತ್ಮಸಾಕ್ಷಿ ಮತ್ತು ನನ್ನ ಧರ್ಮದ ಉಲ್ಲಂಘನೆಯಾಗಲಿದೆ. ಸದ್ಯದ, ವಾತಾವರಣದಲ್ಲಿ ನನ್ನ ಹಕ್ಕುಗಳನ್ನ ಕಾಪಾಡಿಕೊಳ್ಳಲು ಇರಾನಿಗೆ ಹೋಗದಿರುವುದೇ ಸೂಕ್ತವೆನಿಸುತ್ತಿದೆ ಎಂದು ತಿಳಿಸಿದ್ದಾರೆ.

ಕ್ರೀಡೆ ಮೇಲೆ ಡ್ರೆಸ್ ಕೋಡ್ ಬಲವಂತವಾಗಿ ಹೇರುವಂತಿಲ್ಲ. ಕ್ರೀಡಾಕಾರರಾಗಿ ಕೆಲವು ಕಡೆ ನಾವು ಕಾಂಪ್ರಮೈಸ್ ಆಗಿದ್ದರೂ ಕೆಲವು ಕಡೆ ಆಗಬಾರದು. ಆಟಗಾರರ ಹಕ್ಕುಗಳು ಮತ್ತು ಕಲ್ಯಾಣಕ್ಕೆ ಕನಿಷ್ಠ ಆದ್ಯತೆ ಕೊಟ್ಟಿರುವುದು ನನಗೆ ನಿಜಕ್ಕೂ ಬೇಸರವೆನಿಸುತ್ತಿದೆ.

ಪ್ರತೀ ಬಾರಿ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿದ್ದೇನೆ. ದೇಶವನ್ನ ಪ್ರತಿನಿಧಿಸುವುದು ಅತ್ಯಂತ ದೊಡ್ಡ ಗೌರವ. ಆದರೆ, ಅಂತಹ ಪ್ರಮುಖ ಕ್ರೀಡಾಕೂಟದಲ್ಲಿ ನಾನು ಸ್ಪರ್ಧೆ ಮಾಡುತ್ತಿಲ್ಲ ಎಂಬುದು ನಿಜಕ್ಕೂ ಅತ್ಯಂತ ಬೇಸರವೆನಿಸುತ್ತಿದೆ. ನಮ್ಮ ಕ್ರೀಡಾ ಅಭ್ಯುದಯಕ್ಕಾಗಿ ಹಲವು ವಿಷಯಗಳಲ್ಲಿ ಹೊಂದಾಣಿಕೆ ಮಾಡಿಕೊಂಡಿರುತ್ತೇವೆ. ಆದರೆ, ಕೆಲವು ವಿಷಯಗಳಲ್ಲಿ ಹೊಂದಾಣಿಕೆ ಮಾಡಿಕೊಳ್ಳಬಾರದು ಎಂದು ಸೌಮ್ಯ ಹೇಳಿದ್ದಾರೆ.

 
First published:June 13, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...