• ಹೋಂ
  • »
  • ನ್ಯೂಸ್
  • »
  • ಕ್ರೀಡೆ
  • »
  • RCB vs SRH: ಟಾಸ್​ ಗೆದ್ದ ಬೆಂಗಳೂರು, ಇಂದು ವಿನ್​ ಆದ್ರೆ ಆರ್​ಸಿಬಿ ಪ್ಲೇಆಫ್​ ಬಹುತೇಕ ಖಚಿತ!

RCB vs SRH: ಟಾಸ್​ ಗೆದ್ದ ಬೆಂಗಳೂರು, ಇಂದು ವಿನ್​ ಆದ್ರೆ ಆರ್​ಸಿಬಿ ಪ್ಲೇಆಫ್​ ಬಹುತೇಕ ಖಚಿತ!

RCB vs SRH

RCB vs SRH

RCB vs SRH: ಐಪಿಎಲ್ 2023ರಲ್ಲಿ ಆರ್​ಸಿಬಿ 5ನೇ ಸ್ಥಾನದಲ್ಲಿದೆ. ಆರ್​ಸಿಬಿ 12 ಪಂದ್ಯಗಳಲ್ಲಿ 6 ಗೆಲುವಿನೊಂದಿಗೆ 12 ಅಂಕ ಹೊಂದಿದೆ. ಇಂದಿನ ಪಂದ್ಯದಲ್ಲಿ ಹೈದರಾಬಾದ್ ತಂಡ ಸೋತರೆ ಆರ್​ಸಿಬಿ ಟಾಪ್-4ರಲ್ಲಿ ಬರಲಿದೆ.

  • Share this:

ಐಪಿಎಲ್ (IPL 2023) ಮೊದಲ ಬಾರಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್‌ರೈಸರ್ಸ್ ಹೈದರಾಬಾದ್ (SRH vs RCB) ತಂಡಗಳು ಸೆಣಸಾಡುತ್ತಿದೆ. ಆರ್​ಸಿಬಿ ತಂಡಕ್ಕೆ ಈ ಪಂದ್ಯ ಅತ್ಯಂತ ಮಹತ್ವದ್ದಾಗಿದೆ. ಇಂದಿನ ಪಂದ್ಯದಲ್ಲಿ ಆರ್​ಸಿಬಿ ಗೆದ್ದರೆ ಪ್ಲೇಆಫ್‌ ಸ್ಥಾನ ಜೀವಂತವಾಗಿರಲಿದೆ. ಇತ್ತ ಸನ್​ರೈಸರ್ಸ್​ ಹೈದರಾಬಾದ್​ ತಂಡ ಈಗಾಗಲೇ ಪ್ಲೇಆಫ್​ನಿಂದ ಹೊರನಡೆದಿದ್ದು, ಹೈದರಾಬಾದ್​ಗೆ ಇದು ಔಪಚಾರಿಕ ಪಂದ್ಯವಾಗಿದೆ. ಆದರೆ ಇಂದಿನ ಪಂದ್ಯ ಗೆದ್ದರೆ ಆರ್​ಸಿಬಿ ಪ್ಲೇಆಫ್​ ಖಚಿತವಾಗುವುದಿಲ್ಲ. ಬದಲಿಗೆ ಇನ್ನಷ್ಟು ಸನಿಹವಾಗುತ್ತಾರೆ ಅಷ್ಟೆ. ಇನ್ನು, ಈಗಾಗಲೇ ಟಾಸ್​ ಆಗಿದ್ದು, ಟಾಸ್​ ಗೆದ್ದ ಆರ್​ಸಿಬಿ ನಾಯಕ ಫಾಫ್​ ಡು ಪ್ಲೇಸಿಸ್ ಮೊದಲಿಗೆ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.


ಹೆಡ್ ಟು ಹೆಡ್ ರೆಕಾರ್ಡ್:


ಸನ್‌ರೈಸರ್ಸ್ ಹೈದರಾಬಾದ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಇದುವರೆಗೆ 22 ಬಾರಿ ಮುಖಾಮುಖಿಯಾಗಿದೆ. ಇದರಲ್ಲಿ ಹೈದರಾಬಾದ್​ ತಂಡವು 12 ಪಂದ್ಯಗಳನ್ನು ಗೆದ್ದಿದ್ದರೆ, ಬೆಂಗಳೂರು ತಂಡವು 9 ಬಾರಿ ಗೆಲುವಿನ ರುಚಿ ಕಂಡಿದೆ. ಒಂದು ಪಂದ್ಯ ರದ್ದಾಗಿತ್ತು.


ಪಿಚ್ ವರದಿ:


ಈ ಸ್ಥಳದಲ್ಲಿ ರನ್‌ಗಳು ಸುಲಭವಾಗಿ ಬಂದಿಲ್ಲ ಆದರೆ ಇದು ಲಕ್ನೋದಷ್ಟು ಕೆಟ್ಟ ಮೈದಾನವಲ್ಲ. ಈ ಮೈದಾನದಲ್ಲಿ ಐಪಿಎಲ್ 2023ರಲ್ಲಿ 6 ಪಂದ್ಯಗಳಲ್ಲಿ 4 ಪಂದ್ಯಗಳನ್ನು ಮೊದಲು ಬ್ಯಾಟಿಂಗ್ ಮಾಡಿದ ತಂಡಗಳು ಗೆದ್ದಿವೆ. ಈ ಫ್ಲಾಟ್ ಟ್ರ್ಯಾಕ್‌ನಲ್ಲಿ ಬ್ಯಾಟ್ಸ್‌ಮನ್‌ಗಳಿಗೆ ಸಹಾಯಕವಾಗಿದೆ. ಪಂದ್ಯದ ದಿನದಂದು ಈ ಸ್ಥಳದಲ್ಲಿ ಹವಾಮಾನ ಮುನ್ಸೂಚನೆಯು 39 ರ ಹೆಚ್ಚಿನ ತಾಪಮಾನದೊಂದಿಗೆ ಸ್ಪಷ್ಟವಾಗಿರುತ್ತದೆ. ಮಳೆಯ ಮುನ್ಸೂಚನೆ ಇಲ್ಲ.


ಇದನ್ನೂ ಓದಿ: IPL 2023: ಪಂದ್ಯಕ್ಕೂ ಮುನ್ನ ಕೊಹ್ಲಿಗೆ ಬಿಗ್​ ಶಾಕ್! ನಿಯಮ ಉಲ್ಲಂಘಿಸಿದ ವಿರಾಟ್, ಧೋನಿ


ಇನ್ನು, ರಾಜೀವ್​ ಗಾಂಧಿ ಕ್ರಿಕೆಟ್ ಸ್ಟೇಡಿಯಂನಲ್ಲಿಆರ್​ಸಿಬಿ ತಂಡ ಕೊನೆಯ ಬಾರಿ 2015ರಲ್ಲಿ ಜಯ ಸಾಧಿಸಿತ್ತು. ಅದೂ ಸಹ ಡಕ್​ ವರ್ಥ್​ ಲೂಯಿಸ್​ ನಿಯಮದ ಪ್ರಕಾರವಾಗಿದೆ. ಹೀಗಾಗಿ 8 ವರ್ಷಗಳಿಂದ ಆರ್​ಸಿಬಿ ಈ ಮೈದಾನದಲ್ಲಿ ಗೆದ್ದಿಲ್ಲ. ಐಪಿಎಲ್‌ನಲ್ಲಿ ಆರ್​ಸಿಬಿ ಮತ್ತು ಸನ್‌ರೈಸರ್ಸ್ ಹೈದರಾಬಾದ್ 21 ಬಾರಿ ಮುಖಾಮುಖಿಯಾಗಿದೆ. ಈ 21 ಪಂದ್ಯಗಳಲ್ಲಿ ಸನ್‌ರೈಸರ್ಸ್ 11 ಗೆದ್ದಿದ್ದರೆ, RCB 9 ಪಂದ್ಯ ಗೆದ್ದಿದೆ. ಹೈದರಾಬಾದ್​ ಸ್ವಲ್ಪ ಉತ್ತಮವಾದ ದಾಖಲೆ ಹೊಂದಿದ್ದರೂ ಸಹ ಆರ್​ಸಿಬಿ ಉತ್ತಮ ಲಯದಲ್ಲಿದೆ. ಈ ಎರಡು ತಂಡಗಳ ನಡುವಿನ ಒಂದು ಪಂದ್ಯ ಟೈ ಆಗಿತ್ತು.


ಐಪಿಎಲ್ 2023 ಪ್ಲೇಆಫ್​ ಲೆಕ್ಕಾಚಾರ:


ಐಪಿಎಲ್ 2023ರಲ್ಲಿ ಆರ್​ಸಿಬಿ 5ನೇ ಸ್ಥಾನದಲ್ಲಿದೆ. ಆರ್​ಸಿಬಿ 12 ಪಂದ್ಯಗಳಲ್ಲಿ 6 ಗೆಲುವಿನೊಂದಿಗೆ 12 ಅಂಕ ಹೊಂದಿದೆ. ಇಂದಿನ ಪಂದ್ಯದಲ್ಲಿ ಹೈದರಾಬಾದ್ ತಂಡ ಸೋತರೆ ಆರ್​ಸಿಬಿ ಟಾಪ್-4ರಲ್ಲಿ ಬರಲಿದೆ. ಹೈದರಾಬಾದ್ ಈಗಾಗಲೇ ಪ್ಲೇ ಆಫ್ ರೇಸ್‌ನಿಂದ ಹೊರಬಿದ್ದಿದೆ. ಹೈದರಾಬಾದ್‌ ಒಂದು ವೇಳೆ ಗೆದ್ದರೆ ಇಂದು ಎರಡು ತಂಡಗಳಿಗೆ ಜಾಕ್‌ಪಾಟ್‌ ಹೊಡೆಯಲಿದೆ. ಹೌದು, ಆರ್​ಸಿಬಿ ಸೋತರೆ ಚೆನ್ನೈ ಸೂಪರ್ ಕಿಂಗ್ಸ್, ಲಕ್ನೋ ಸೂಪರ್ ಜೈಂಟ್ಸ್‌ಗೆ ಲಾಭವಾಗಲಿದೆ. ಮುಂದಿನ ಪಂದ್ಯವನ್ನು ಆಡದೆ ಪ್ಲೇ ಆಫ್‌ನಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳಲಿದ್ದಾರೆ. ಏಕೆಂದರೆ ಈ ಎರಡೂ ತಂಡಗಳು 7 ಪಂದ್ಯಗಳನ್ನು ಗೆದ್ದಿವೆ ಮತ್ತು ಅದೇ ಸಮಯದಲ್ಲಿ ಅವರ 1 ಪಂದ್ಯವು ಮಳೆಯಿಂದ ರದ್ದಾಗಿತ್ತು. ರನ್ ರೇಟ್‌ನಲ್ಲೂ ಇಬ್ಬರೂ ಉತ್ತಮ ಸ್ಥಿತಿಯಲ್ಲಿದ್ದಾರೆ.




ಆರ್​ಸಿಬಿ- ಹೈದರಾಬಾದ್​ ಪ್ಲೇಆಫ್​:


ಆರ್​ಸಿಬಿ ಪ್ಲೇಯಿಂಗ್​ 11: ಫಾಫ್ ಡು ಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ಅನೂಜ್ ರಾವತ್ (ವಿಕೆಟ್ ಕೀಪರ್) , ಗ್ಲೆನ್ ಮ್ಯಾಕ್ಸ್ ವೆಲ್ , ಮಹಿಪಾಲ್ ಲೊಮ್ರೋರ್ , ದಿನೇಶ್ ಕಾರ್ತಿಕ್, ಮೈಕಲ್ ಬ್ರೇಸ್ ವೆಲ್ , ವೇಯ್ನ್ ಪಾರ್ನೆಲ್ , ಕರ್ಣ್ ಶರ್ಮಾ , ಹರ್ಷಲ್ ಪಟೇಲ್ , ಮೊಹಮ್ಮದ್ ಸಿರಾಜ್.


ಹೈದರಾಬಾದ್​ ಪ್ಲೇಯಿಂಗ್​ 11: ಅಭಿಷೇಕ್ ಶರ್ಮಾ, ರಾಹುಲ್ ತ್ರಿಪಾಠಿ, ಏಡೆನ್ ಮಾರ್ಕ್ರಾಮ್ (ನಾಯಕ), ಹೆನ್ರಿಚ್ ಕ್ಲಾಸೆನ್ (ವಿಕೆಟ್ ಕೀಪರ್), ಹ್ಯಾರಿ ಬ್ರೂಕ್, ಗ್ಲೆನ್ ಫಿಲಿಪ್ಸ್, ಅಬ್ದುಲ್ ಸಮದ್, ಕಾರ್ತಿಕ್ ತ್ಯಾಗಿ, ಮಯಾಂಕ್ ದಾಗರ್, ಭುವನೇಶ್ವರ್ ಕುಮಾರ್, ನಿತೀಶ್ ರೆಡ್ಡಿ.

First published: