RCB vs SRH: ಶತಕ ಸಿಡಿಸಿ ಅಬ್ಬರಿಸಿದ ಕಿಂಗ್​ ಕೊಹ್ಲಿ, ಆರ್​ಸಿಬಿಗೆ ಭರ್ಜರಿ ಗೆಲುವು

ಆರ್​ಸಿಬಿಗೆ ಭರ್ಜರಿ ಜಯ

ಆರ್​ಸಿಬಿಗೆ ಭರ್ಜರಿ ಜಯ

RCB vs SRH: ಆರ್​ಸಿಬಿ ಪರ ಆರಂಭಿಕರಾಗಿ ಕಣಕ್ಕಿಳಿದ ವಿರಾಟ್ ಕೊಹ್ಲಿ ಮ,ತ್ತು ನಾಯಕ ಫಾಫ್​ ಡು ಪ್ಲೇಸಿಸ್​ ಹೈದರಾಬಾದ್​ ಬೌಲರ್​ಗಳ ಬೆವರಿಳಿಸಿದರು. ವಿರಾಟ್ ಕೊಹ್ಲಿ ಇಂದು ಬೆಂಕಿ ಬ್ಯಾಟಿಂಗ್​ ಮಾಡುವ ಮೂಲಕ ಶತಕ ಸಿಡಿಸಿದರು.

  • Share this:

ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಐಪಿಎಲ್ ನ (IPL 2023) 65ನೇ ಲೀಗ್ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ (RCB vs SRH) ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 186 ರನ್ ಗಳ ಬೃಹತ್ ಮೊತ್ತ ಕಲೆಹಾಕಿತು. ಹೈದರಾಬಾದ್​ ಪರ ಹೆನ್ರಿಕ್ ಕ್ಲಾಸೆನ್ (Heinrich Klaasen) ಶತಕ ಸಿಡಿಸಿ ಮಿಂಚಿದರು. ಕ್ಲಾಸಿನ್​ ಭರ್ಜರಿ ಶತಕದ ನೆರವಿನಿಂದ ಹೈದರಬಾದ್​ ಆರ್​ಸಿಬಿ ತಂಡಕ್ಕೆ ಉತ್ತಮ ಮೊತ್ತದ ಟಾರ್ಗೆಟ್​ ನೀಡಿತು. ಈ ಮೊತ್ತ ಬೆನ್ನಟ್ಟಿದ ಆರ್​ಸಿಬಿ ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ವಿರಾಟ್ ಕೊಹ್ಲಿ (Virat Kohli) ಮತ್ತು ನಾಯಕ ಫಾಫ್​ ಡು ಪ್ಲೇಸಿಸ್​ ಶತಕದ ಜೊತೆಯಾಟದ ಮೂಲಕ ತಂಡಕ್ಕೆ ಭರ್ಜರಿ ಗೆಲುವು ತಂದುಕೊಟ್ಟರು. ಆರ್​ಸಿಬಿ 19.2 ಓವರ್​ಗಳಲ್ಲಿ 2  ವಿಕೆಟ್​ ನಷ್ಟಕ್ಕೆ 187 ರನ್​ ಗಳಿಸುವ ಮೂಲಕ 8 ವಿಕೆಟ್​ಗಳ ಭರ್ಜರಿ ಗೆಲುವು ದಾಖಲಿಸಿತು. ಈ ಮೂಲಕ ಆರ್​ಸಿಬಿ ಪ್ಲೇಆಫ್​ ಹಂತಕ್ಕೆ ಸನಿಹವಾಗಿದ್ದಲ್ಲದೇ ಅಂಕಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಿದೆ.


ಅಬ್ಬರಿಸಿದ ಕಿಂಗ್​ ಕೊಹ್ಲಿ:


ಇನ್ನು, ಹೈದರಾಬಾದ್​ ನೀಡಿದ ಟಾರ್ಗೆಟ್​ ಬೆನ್ನಟ್ಟಿದ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡ 8 ವಿಕೆಟ್​ಗಳ ಭರ್ಜರಿ ಗೆಲುವು ಸಾಧಿಸಿತು. ಆರ್​ಸಿಬಿ ಪರ ಆರಂಭಿಕರಾಗಿ ಕಣಕ್ಕಿಳಿದ ವಿರಾಟ್ ಕೊಹ್ಲಿ ಮ,ತ್ತು ನಾಯಕ ಫಾಫ್​ ಡು ಪ್ಲೇಸಿಸ್​ ಹೈದರಾಬಾದ್​ ಬೌಲರ್​ಗಳ ಬೆವರಿಳಿಸಿದರು. ವಿರಾಟ್ ಕೊಹ್ಲಿ ಇಂದು ಬೆಂಕಿ ಬ್ಯಾಟಿಂಗ್​ ಮಾಡುವ ಮೂಲಕ ಆಕರ್ಷಕ ಶತಕ ಸಿಡಿಸಿದರು. ಕೊಹ್ಲಿ 63 ಎಸೆತದಲ್ಲಿ 12 ಫೋರ್​ ಮತ್ತು 4 ಸಿಕ್ಸ್ ಮೂಲಕ 100 ರನ್ ಗಳಿಸಿದರು. ಕೊಹ್ಲಿ 94 ರನ್ ಆದಾಗ ಭುವನೇಶ್ವರ್​ ಕುಮಾರ್​ ಬೌಲಿಂಗ್​ನಲ್ಲಿ ಸಿಕ್ಸ್ ಸಿಡಿಸುವ ಮೂಲಕ ಶತಕ ಸಿಡಿಸಿದರು. ಇನ್ನು, ನಾಯಕ ಡು ಪ್ಲೇಸಿಸ್​ ಕೊಹ್ಲಿ ಉತ್ತಮ ಸಾಥ್​ ನೀಡಿದರು. ಜೊತೆಗೆ ಆಕರ್ಷಕ ಅರ್ಧಶತಕ ಸಿಡಿಸಿ ಮಿಂಚಿದರು. ಫಾಫ್​ 46 ಎಸೆತದಲ್ಲಿ 2 ಸಿಕ್ಸ್ ಮತ್ತು 7 ಬೌಂಡರಿ ಮೂಲಕ 71 ರನ್ ಚಚ್ಚಿದರು.



ಭರ್ಜರಿ ಶತಕ ಸಿಡಿಸಿದ ಕ್ಲಾಸಿನ್:


ಹೈದರಾಬಾದ್​ ಬ್ಯಾಟ್ಸ್‌ಮನ್ ಹೆನ್ರಿಚ್ ಕ್ಲಾಸೆನ್ 49 ಎಸೆತಗಳಲ್ಲಿ ಶತಕ ಪೂರೈಸಿದರು. ಅವರು ತಮ್ಮ ಶತಕ ಇನ್ನಿಂಗ್ಸ್‌ನಲ್ಲಿ 8 ಬೌಂಡರಿ ಮತ್ತು 6 ಸಿಕ್ಸರ್‌ಗಳನ್ನು ಬಾರಿಸಿದರು. ಮೂರನೇ ವಿಕೆಟ್‌ಗೆ ನಾಯಕ ಏಡನ್ ಮಾರ್ಕ್ರಾಮ್ ಅವರೊಂದಿಗೆ ಕ್ಲಾಸೆನ್ 76 ರನ್ ಜೊತೆಯಾಟವಾಡಿದರು. ಮಾರ್ಕ್ರಾಮ್ ಔಟಾದ ನಂತರ, ಕ್ಲಾಸೆನ್ ಹ್ಯಾರಿ ಬ್ರೂಕ್ ಜೊತೆಗೆ ನಾಲ್ಕನೇ ವಿಕೆಟ್‌ಗೆ 74 ರನ್ ಸೇರಿಸಿದರು. ಹರ್ಷಲ್ ಪಟೇಲ್ ಕ್ಲಾಸೆನ್ ಬೌಲಿಂಗ್ ನಲ್ಲಿ 104 ರನ್ ಗಳ ಇನಿಂಗ್ಸ್ ಅಂತ್ಯಗೊಳಿಸಿದರು.


ಇದನ್ನೂ ಓದಿ: IPL 2023: ಸೆಹ್ವಾಗ್​ ಕೋಪಕ್ಕೆ ಕಾರಣವಾದ ಗಿಲ್​-ಪೃಥ್ವಿ ಶಾ ಅಹಂಕಾರ! ಅಷ್ಟಕ್ಕೂ ಏನಾಯ್ತು?

top videos


    ಐಪಿಎಲ್ ಇತಿಹಾಸದಲ್ಲಿ ಸನ್‌ರೈಸರ್ಸ್ ಹೈದರಾಬಾದ್‌ನಿಂದ ಶತಕ ಸಿಡಿಸಿದ ನಾಲ್ಕನೇ ಬ್ಯಾಟ್ಸ್‌ಮನ್ ಇವರು. ಪ್ರಸಕ್ತ ಋತುವಿನಲ್ಲಿ, ಹ್ಯಾರಿ ಬ್ರೂಕ್ ನಂತರ ಹೈದರಾಬಾದ್ ಪರ ಶತಕ ಬಾರಿಸಿದ ಎರಡನೇ ಬ್ಯಾಟ್ಸ್‌ಮನ್ ಎನಿಸಿಕೊಂಡರು. ಐಪಿಎಲ್ 2023 ರಲ್ಲಿ ಹೆನ್ರಿಕ್ ಕ್ಲಾಸೆನ್ ಒಂದು ಶತಕ ಮತ್ತು 2 ಅರ್ಧ ಶತಕಗಳನ್ನು ಗಳಿಸಿದ್ದಾರೆ. ಇನ್ನು, ಮೈಕೆಲ್ ಬ್ರೇಸ್‌ವೆಲ್ RCB ಪರ 13 ರನ್‌ಗಳಿಗೆ ಎರಡು ವಿಕೆಟ್ ಪಡೆದರು. ಮೊಹಮ್ಮದ್ ಸಿರಾಜ್ 4 ಓವರ್ ಗಳಲ್ಲಿ 17 ರನ್ ನೀಡಿ ಒಂದು ವಿಕೆಟ್ ಪಡೆದರು.

    First published: