• ಹೋಂ
  • »
  • ನ್ಯೂಸ್
  • »
  • ಕ್ರೀಡೆ
  • »
  • RCB vs RR: ಟಾಸ್​ ಗೆದ್ದ ಬೆಂಗಳೂರು, ಪಂದ್ಯ ಗೆದ್ದರಷ್ಟೇ ಆರ್​ಸಿಬಿ ಪ್ಲೇಆಫ್​ ಆಸೆ ಜೀವಂತ!

RCB vs RR: ಟಾಸ್​ ಗೆದ್ದ ಬೆಂಗಳೂರು, ಪಂದ್ಯ ಗೆದ್ದರಷ್ಟೇ ಆರ್​ಸಿಬಿ ಪ್ಲೇಆಫ್​ ಆಸೆ ಜೀವಂತ!

RCB vs RR

RCB vs RR

IPL 2023, RCB vs RR: ಈಗಾಗಲೇ ಟಾಸ್​ ಆಗಿದ್ದು, ಟಾಸ್​ ಗೆದ್ದ, ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ನಾಯಕ ಫಾಫ್​ ಡು ಪ್ಲೇಸಿಸ್​ ಮೊದಲು ಬ್ಯಾಟಿಂಗ್​ ಆಯ್ಕೆ ಮಾಡಿಕೊಂಡಿದ್ದಾರೆ.

  • Share this:

ರಾಜಸ್ಥಾನ ರಾಯಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB vs RR) ತಂಡಗಳು ಈಗ ಜೈಪುರದ ಸವಾಯಿ ಮಾನ್ಸಿಂಗ್ ಸ್ಟೇಡಿಯಂನಲ್ಲಿ (Sawai Mansingh Stadium) ಐಪಿಎಲ್ 2023ರ (IPL 2023) ಮಹತ್ವದ ಪಂದ್ಯದಲ್ಲಿ ಮುಖಾಮುಖಿ ಆಗಿದೆ. ಇದು ಎರಡೂ ತಂಡಗಳಿಗೆ ಗೆಲ್ಲಲೇಬೇಕಾದ ಪಂದ್ಯವಾಗಿದೆ. ಈ ಎರಡೂ ತಂಡಗಳೂ ಸಹ ಪ್ಲೇಆಫ್​ ದೃಷ್ಟಿಯಿಂದ ಇಂದಿನ ಪಂದ್ಯವನ್ನು ಗೆಲ್ಲಲೇಬೇಕಿದೆ. ಹೀಗಾಗಿ ಉಭಯ ತಂಡಗಳ ನಡುವೆ ಬಿಗ್​ ಫೈಟ್​ ನಡೆಯುವ ಸಾಧ್ಯತೆ ಎದ್ದು ಕಾಣುತ್ತಿದೆ. ಈಗಾಗಲೇ ಟಾಸ್​ ಆಗಿದ್ದು, ಟಾಸ್​ ಗೆದ್ದ, ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ನಾಯಕ ಫಾಫ್​ ಡು ಪ್ಲೇಸಿಸ್​ ಮೊದಲು ಬ್ಯಾಟಿಂಗ್​ ಆಯ್ಕೆ ಮಾಡಿಕೊಂಡಿದ್ದಾರೆ.


ಜೈಪುರ ಪಿಚ್ ವರದಿ:


ಎರಡು ಪಂದ್ಯಗಳನ್ನು ಮೊದಲು ಬ್ಯಾಟಿಂಗ್ ಮಾಡಿದ ತಂಡಗಳು ಗೆದ್ದಿವೆ ಮತ್ತು ಎರಡು ಚೇಸಿಂಗ್ ಮೂಲಕ ಗೆದ್ದಿವೆ. ಪಿಚ್ ಸ್ವಲ್ಪ ನಿಧಾನವಾಗಿರಬಹುದು ಎಂದು ನಿರೀಕ್ಷಿಸಲಾಗಿದೆ ಆದರೆ ಇಲ್ಲಿ 200+ ಪ್ಲಸ್ ಮೊತ್ತವನ್ನು ಗಳಿಸಬಹುದು. ಸವಾಯಿ ಮಾನ್ಸಿಂಗ್ ಸ್ಟೇಡಿಯಂ ಪಿಚ್ ವೇಗ ಮತ್ತು ಸ್ಪಿನ್ ಎರಡಕ್ಕೂ ಅನುಕೂಲಕರವಾಗಿದ್ದು, ಬೌಲರ್‌ಗಳಿಗೆ ಅನುಕೂಲಕರವಾಗಿದೆ. ಐಪಿಎಲ್‌ನ ಇತಿಹಾಸದುದ್ದಕ್ಕೂ, ಈ ಮೈದಾನದಲ್ಲಿ ಕೇವಲ ಒಂದು ತಂಡ ಮಾತ್ರ 200 ರನ್‌ಗಳ ಗಡಿ ದಾಟಲು ಯಶಸ್ವಿಯಾಗಿದೆ ಮತ್ತು ಒಬ್ಬ ಬ್ಯಾಟ್ಸ್‌ಮನ್ ಮಾತ್ರ ಶತಕ ಗಳಿಸಿದ್ದಾರೆ. ಹೆಚ್ಚುವರಿಯಾಗಿ, ಈ ಕ್ರೀಡಾಂಗಣದಲ್ಲಿನ ಗಡಿಗಳು ಭಾರತದ ಇತರ ಸ್ಥಳಗಳಿಗಿಂತ ದೊಡ್ಡದಾಗಿದೆ.


ಹೆಡ್​ ಟು ಹೆಡ್​:


ಆರ್​ಸಿಬಿ ಮತ್ತು ರಾಜಸ್ಥಾನ್​ ತಂಡಗಳು ಐಪಿಎಲ್​ನಲ್ಲಿ ಈವರೆಗೆ 29 ಪಂದ್ಯಗಳಲ್ಲಿ ಮುಖಾಮುಖಿ ಆಗಿದ್ದವು. RCB 14 ಮತ್ತು ರಾಜಸ್ಥಾನ ತಂಡ 12 ಪಂದ್ಯ ಗೆದ್ದಿದೆ. ಇನ್ನು, ಈ ಸೀಸನ್​ನ ಮೊದಲ ಮುಖಾಮುಖಿಯಲ್ಲಿ ರಾಜಸ್ಥಾನ್​ ವಿರುದ್ಧ ಆರ್​ಸಿಬಿ ತಂಡ 7 ರನ್​ಗಳ ರೋಚಕ ಗೆಲುವು ದಾಖಲಿಸಿತ್ತು. ರಾಯಲ್ ಚಾಲೆಂಜರ್ಸ್ ಬೆಂಗಳೂರು ತನ್ನ ಉಳಿದ ಮೂರು ಪಂದ್ಯಗಳನ್ನು ಗೆದ್ದರೂ ಬೆಂಗಳೂರು ಎಲ್ಲಾ ಮೂರು ಪಂದ್ಯಗಳನ್ನು ಗೆಲ್ಲುವುದು ಅವಶ್ಯಕವಾಗಿದೆ.


ಇದನ್ನೂ ಓದಿ: Rcb Playoff Scenario: ರಾಜಸ್ಥಾನ​ ವಿರುದ್ಧ ಗೆದ್ದರಷ್ಟೇ ಆರ್​ಸಿಬಿಗೆ ಉಳಿಗಾಲ! ಸೋತ್ರೆ ಮನೆಗೆ ವಾಪಸ್ಸಾ?


ಆರ್​-ಆರ್​ಸಿಬಿ ಪ್ಲೇಆಫ್​ ರೇಸ್​:


ಆರ್​ಸಿಬಿ ತಂಡಕ್ಕೆ ಮಾತ್ರವಲ್ಲದೇ ರಾಜಸ್ಥಾನ್​ ತಂಡಕ್ಕೂ ಇಂದಿನ ಪಂದ್ಯ ಅತ್ಯಂತ ಮಹತ್ವದ್ದಾಗಿದೆ. ಎರಡೂ ತಂಡಗಳಿಗೆ ಪ್ಲೇಆಫ್​ಗಾಗಿ ಈ ಪಂದ್ಯ ಹೆಚ್ಚು ಪ್ರಮುಖವಾಗಿದೆ. ಗೆದ್ದ ತಂಡ ಪ್ಲೇಆಫ್​ ಆಸೆ ಜೀವಂತವಾಗಿ ಉಳಿಯಲಿದೆ. ಪ್ಲೇಆಫ್​ ಲೆಕ್ಕಾಚಾರ ನೋಡುವುದಾದರೆ, ಐಪಿಎಲ್ ಅಂಕಪಟ್ಟಿಯ್ಲಲಿ ರಾಜಸ್ಥಾನ್​ ತಂಡ 12 ಅಂಕಗಳೊಂದಿಗೆ 5ನೇ ಸ್ಥಾನದಲ್ಲಿದ್ದು, 10 ಅಂಕಗಳೊಂದಿಗೆ ಆರ್​ಸಿಬಿ ತಂಡ 7ನೇ ಸ್ಥಾನದಲ್ಲಿದೆ. ಏನಾದರೂ ರಾಜಸ್ಥಾನ್​ ವಿರುದ್ಧ ಇಂದು ಆರ್​ಸಿಬಿ ಸೋತರೆ ಪ್ಲೇಆಫ್​ ಹಾದಿ ಬಹುತೇಕ ಅಂತ್ಯವಾಗಗಲಿದೆ. ಆದರೆ ಏನಾದರೂ ಪ್ಲೇಆಫ್​ ತಲುಪಬೇಕಾದರೆ ಆರ್​ಸಿಬಿ ಮುಂದಿನ 2 ಪಂದ್ಯ ಗೆದ್ದರೂ ಬೇರೆ ತಂಡಗಳ ಸೋಲಿಗಾಗಿ ಕಾಯಬೇಕಾಗುತ್ತದೆ.
ಆರ್​ಸಿಬಿ-ರಾಜಸ್ಥಾನ್​ ಪ್ಲೇಯಿಂಗ್​ 11:


ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಪ್ಲೇಯಿಂಗ್​ 11: ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ (ನಾಯಕ), ಅನುಜ್ ರಾವತ್, ಗ್ಲೆನ್ ಮ್ಯಾಕ್ಸ್‌ವೆಲ್, ಮಹಿಪಾಲ್ ಲೊಮ್ರೋರ್, ದಿನೇಶ್ ಕಾರ್ತಿಕ್ (WK), ಮೈಕಲ್ ಬ್ರೇಸ್‌ವೆಲ್, ವೇಯ್ನ್ ಪಾರ್ನೆಲ್, ಕರ್ಣ್ ಶರ್ಮಾ, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್.


ರಾಜಸ್ಥಾನ್​ ರಾಯಲ್ಸ್ ಪ್ಲೇಯಿಂಗ್​ 11: ಯಶಸ್ವಿ ಜೈಸ್ವಾಲ್, ಜೋಸ್ ಬಟ್ಲರ್, ಸಂಜು ಸ್ಯಾಮ್ಸನ್ (ವಿಕೆ/ನಾಯಕ), ಜೋ ರೂಟ್, ಧ್ರುವ್ ಜುರೆಲ್, ಶಿಮ್ರಾನ್ ಹೆಟ್ಮೆಯರ್, ರವಿಚಂದ್ರನ್ ಅಶ್ವಿನ್, ಆಡಮ್ ಝಂಪಾ, ಸಂದೀಪ್ ಶರ್ಮಾ, ಕೆಎಂ ಆಸಿಫ್, ಯುಜ್ವೇಂದ್ರ ಚಾಹಲ್.

top videos
    First published: