SRH vs RR Live Score, IPL 2023: ಮುಂಬೈ ವಿರುದ್ಧ ಬೆಂಗಳೂರು ತಂಡಕ್ಕೆ ಭರ್ಜರಿ ಗೆಲುವು

SRH vs RR Live Score, IPL 2023: ರಾಯಲ್ ಚಾಲೆಂಜರ್ಸ್ ಬೆಂಗಳೂರು ಫಾಫ್ ಡು ಪ್ಲೆಸಿಸ್ (Faf du Plessis)​ ನಾಯಕತ್ವದಲ್ಲಿ 5 ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ (RCB vs MI) ತಂಡವನ್ನು ಎದುರಿಸಲಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಫಾಫ್ ಡು ಪ್ಲೆಸಿಸ್ (Faf du Plessis)​ ನಾಯಕತ್ವದಲ್ಲಿ 5 ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ (RCB vs MI) ತಂಡವನ್ನು ಎದುರಿಸಲಿದೆ. ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (M. Chinnaswamy Stadium) ಈ ಪಂದ್ಯ ನಡೆಯುತ್ತಿದೆ. ಪ್ರಸಕ್ತ ಋತುವಿನಲ್ಲಿ ಉಭಯ ತಂಡಗಳ ಮೊದಲ ಪಂದ್ಯ ಇದಾಗಿದೆ. ದಕ್ಷಿಣ ಆಫ್ರಿಕಾದ ಡುಪ್ಲೆಸಿಯನ್ನು ನಾಯಕರನ್ನಾಗಿ ಮಾಡಲಾಗಿದೆ. ಮೊದಲು ಬ್ಯಾಟಿಂಗ್​ ಮಾಡಿದ ಮುಂಬೈ 20 ಓವರ್​ನಲ್ಲಿ 7 ವಿಕೆಟ್​ ನಷ್ಟಕ್ಕೆ 171 ರನ್​ ಗಳಿಸಿತು. ಈ ಟಾರ್ಗೆಟ್​ ಬೆನ್ನಟ್ಟಿದ ಆರ್​ಸಿಬಿ ತಂಡ 16.2 ಓವರ್​ಗೆ 2 ವಿಕೆಟ್​ ನಷ್ಟಕ್ಕೆ 172 ರನ್​ ಗಳಿಸುವ ಮೂಲಕ ಬರೋಬ್ಬರಿ 8 ವಿಕೆಟ್​ಗಳ ಜಯ ದಾಖಲಿಸಿತು.

ಮತ್ತಷ್ಟು ಓದು ...
02 Apr 2023 23:04 (IST)

ಆರ್​ಸಿಬಿಗೆ ಗೆಲುವು

ಮೊದಲು ಬ್ಯಾಟಿಂಗ್​ ಮಾಡಿದ ಮುಂಬೈ 20 ಓವರ್​ನಲ್ಲಿ 7 ವಿಕೆಟ್​ ನಷ್ಟಕ್ಕೆ 171 ರನ್​ ಗಳಿಸಿತು. ಈ ಟಾರ್ಗೆಟ್​ ಬೆನ್ನಟ್ಟಿದ ಆರ್​ಸಿಬಿ ತಂಡ 16.2 ಓವರ್​ಗೆ 2 ವಿಕೆಟ್​ ನಷ್ಟಕ್ಕೆ 172 ರನ್​ ಗಳಿಸುವ ಮೂಲಕ ಬರೋಬ್ಬರಿ 8 ವಿಕೆಟ್​ಗಳ ಜಯ ದಾಖಲಿಸಿತು.

02 Apr 2023 22:51 (IST)

ಗೆಲುವಿನ ಸನಿಹಕ್ಕೆ ಆರ್​ಸಿಬಿ

ಆರ್‌ಸಿಬಿ ಮುಂಬೈಗೆ ಪ್ರಾಬಲ್ಯ ಸಾಧಿಸಲು ಅವಕಾಶ ನೀಡಲಿಲ್ಲ.  ನಾಯಕ ಡು ಪ್ಲೆಸಿಸ್ ಬಳಿಕ ಇದೀಗ ವಿರಾಟ್ ಕೊಹ್ಲಿ ಕೂಡ ಅರ್ಧಶತಕ ಪೂರೈಸಿದ್ದಾರೆ. ಆರ್‌ಸಿಬಿ ಗೆಲುವಿನ ನಸಿಹ ಬಂದಿದೆ.

02 Apr 2023 22:19 (IST)

ಆರ್​ಸಿಬಿ ಭರ್ಜರಿ ಬ್ಯಾಟಿಂಗ್​

ಓವರ್​: 8
ರನ್​: 75
ವಿಕೆಟ್​: 0

ವಿರಾಟ್​ ಕೊಹ್ಲಿ: 27
ಫಾಫ್​ ಡುಪ್ಲೇಸಿಸ್​: 44

02 Apr 2023 21:42 (IST)

ಆರ್​ಸಿಬಿ ಬೌಲಿಂಗ್​

ಆರ್​ಸಿಬಿ ಪರ ಕರಣ್ ಶರ್ಮಾ 2 ವಿಕೆಟ್​ ಪಡೆದರು. ಉಳಿದಂತೆ ಮೊಹಮ್ಮದ್ ಸಿರಾಜ್, ರೆಸ್ಸೆ ಟೋಪ್ಲಿ, ಆಕಾಶ್​ ದೀಪ್​ , ಹರ್ಷಲ್​ ಪಟೇಲ್, ಮಿಚೆಲ್​ ಬ್ರಾಸ್ವೇಲ್​ ತಲಾ 1 ವಿಕೆಟ್​ ಪಡೆದು ಮಿಂಚಿದರು.

 

02 Apr 2023 21:40 (IST)

ತಿಲಕ್ ವರ್ಮಾ ಭರ್ಜರಿ ಬ್ಯಾಟಿಂಗ್​

ಟಾಸ್​ ಸೋತು ಮೊದಲು ಬ್ಯಾಟಿಂಗ್​ ಮಾಡಿದ  20 ಓವರ್​ನಲ್ಲಿ 7 ವಿಕೆಟ್​ ನಷ್ಟಕ್ಕೆ 171 ರನ್​ ಗಳಿಸಿತು. ರೋಹಿತ್ ಶರ್ಮಾ 1 ರನ್, ಇಶಾನ್ ಕಿಶನ್ 10 ರನ್, ಸೂರ್ಯಕುಮಾರ್ ಯಾದವ್ 15 ರನ್, ಕ್ಯಾಮೆರಾನ್ ಗ್ರೀನ್ 5 ರನ್, ಟಿಮ್ ಡೇವಿಡ್ 4 ರನ್​, ನೆಹಾಲ್ ವಧೇರಾ 21 ರನ್, ರಿತಿಕ್ ಶೋಕೀನ್ 5 ರನ್, ತಿಲಕ್ ವರ್ಮಾ 84 ರನ್, ಅರ್ಷದ್ ಖಾನ್ 15 ರನ್​ ಗಳಿಸಿದರು.

02 Apr 2023 21:30 (IST)

ರಾಜಕೀಯ ಒತ್ತಡದ ಮಧ್ಯೆಯೂ ipl ಮ್ಯಾಚ್​ ನೋಡಲು ಬಂದ ಮಾಜಿ ಸಿಎಂ ಸಿದ್ದರಾಮಯ್ಯ

ರಾಜಕೀಯ ಒತ್ತಡದ ಮಧ್ಯೆಯೂ ipl ಮ್ಯಾಚ್​ ನೋಡಲು ಬಂದ ಮಾಜಿ ಸಿಎಂ ಸಿದ್ದರಾಮಯ್ಯ. ಇವರೊಂದಿಗೆ ಬಸವರಾಜ್​ ಹೊರಟ್ಟಿ, ಬಸವರಾಜ ರಾಯರೆಡ್ಡಿ ಆಗಮಿಸಿದ್ದರು.

02 Apr 2023 21:23 (IST)

ತಿಲಕ್​ ವರ್ಮಾ ಅರ್ಧಶತಕ

ತಿಲಕ್ ವರ್ಮಾ ಅದ್ಭುತ ಅರ್ಧಶತಕವನ್ನು ಗಳಿಸುವ ಮೂಲಕ ಮುಂಬೈ ಇಂಡಿಯನ್ಸ್ ಪರ ಉತ್ತಮ ಮೊತ್ತ ಕಲೆಹಾಕಿದರು. ತಿಲಕ್ 32 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಅವರು ಆಕಾಶದೀಪ್ ಎಸೆತದಲ್ಲಿ ಸಿಕ್ಸರ್ ಬಾರಿಸುವ ಮೂಲಕ ತಮ್ಮ ಅರ್ಧಶತಕ ಪೂರೈಸಿದರು.

02 Apr 2023 21:22 (IST)

1 ಓವರ್​ನಲ್ಲಿ 5 ವೈಡ್​ ಬಾಲ್​

19ನೇ ಓವರ್​ ಮಾಡಿದ ಮೊಹಮ್ಮದ್ ಸಿರಾಜ್​ ಒಂದೇ ಓವರ್​ನಲ್ಲಿ 5 ವೈಡ್​ ಬಾಲ್​ ಹಾಕಿದ್ದಾರೆ.

02 Apr 2023 21:10 (IST)

7ನೇ ವಿಕೆಟ್​ ಪತನ, ಅಲ್ಪ ಮೊತ್ತಕ್ಕೆ ಕುಸಿಯುತ್ತಾ ಮುಂಬೈ

ರಿತಿಕ್ ಶೋಕೀನ್ 5 ರನ್​ ಗಳಿಸಿ ವಿಕೆಟ್​ ಒಪ್ಪಿಸಿದರು.

02 Apr 2023 21:10 (IST)

7ನೇ ವಿಕೆಟ್​ ಪತನ, ಅಲ್ಪ ಮೊತ್ತಕ್ಕೆ ಕುಸಿಯುತ್ತಾ ಮುಂಬೈ

ರಿತಿಕ್ ಶೋಕೀನ್ 5 ರನ್​ ಗಳಿಸಿ ವಿಕೆಟ್​ ಒಪ್ಪಿಸಿದರು.

02 Apr 2023 20:48 (IST)

ಸಂಕಷ್ಟದಲ್ಲಿ ಮುಂಬೈ ತಂಡ

ನೆಹಾಲ್ ವಧೇರಾ 21 ರನ್​ ಗಳಿಸಿ ಔಟ್​ ಆಗಿದ್ದಾರೆ. 14 ಓವರ್​ಗೆ 5 ವಿಕೆಟ್​ ಕಳೆದುಕೊಂಡು 99 ರನ್​​ ಗಳಿಸಿದೆ.

02 Apr 2023 20:21 (IST)

ಮುಂಬೈ 4ನೇ ವಿಕೆಟ್​ ಪತನ

ರೋಹಿತ್​ ಶರ್ಮಾ ಬೆನ್ನಲ್ಲೇ ಕ್ಯಾಮರೂನ್​ ಗ್ರೀನ್​ 5 ರನ್ ಮತ್ತು ಸೂರ್ಯಕುಮಾರ್ ಯಾದವ್​ 15 ರನ್​ ಗಳಿಸಿ ವಿಕೆಟ್​ ಒಪ್ಪಿಸಿದರು.

02 Apr 2023 20:21 (IST)

ಮುಂಬೈ 4ನೇ ವಿಕೆಟ್​ ಪತನ

ರೋಹಿತ್​ ಶರ್ಮಾ ಬೆನ್ನಲ್ಲೇ ಕ್ಯಾಮರೂನ್​ ಗ್ರೀನ್​ 5 ರನ್ ಮತ್ತು ಸೂರ್ಯಕುಮಾರ್ ಯಾದವ್​ 15 ರನ್​ ಗಳಿಸಿ ವಿಕೆಟ್​ ಒಪ್ಪಿಸಿದರು.

02 Apr 2023 20:03 (IST)

ರೋಹಿತ್​ ಶರ್ಮಾ ಔಟ್​

ರೋಹಿತ್​ ಶರ್ಮಾ ಮತ್ತೊಮ್ಮೆ ವಿಫಲರಾಗಿದ್ದು, 10 ಎಸೆತದಲ್ಲಿ ಕೇವಲ 1 ರನ್​ ಗಳಿಸಿ ಆಕಶ್​ ದೀಪ್​ಗೆ ವಿಕೆಟ್​ ಒಪ್ಪಿಸಿದರು.

02 Apr 2023 19:55 (IST)

ಮುಂಬೈ 2ನೇ ವಿಕೆಟ್​ ಪತನ

ರಿಕ್ ಟೋಪ್ಲಿ ಕ್ಯಾಮರೂನ್ ಗ್ರೀನ್ ಅವರನ್ನು ಔಟ್​ ಮಾಡುವ ಮೂಲಕ ಮುಂಬೈಗೆ ಎರಡನೇ ಹೊಡೆತ ನೀಡಿದರು. ನಾಲ್ಕನೇ ಓವರ್ ನ ಮೂರನೇ ಎಸೆತದಲ್ಲಿ ಗ್ರೀನ್ 5 ರನ್ ಗಳಿಸಿ ಪೆವಿಲಿಯನ್ ಗೆ ಮರಳಿದರು. ಮುಂಬೈ ಇಂಡಿಯನ್ಸ್ 4 ಓವರ್ ಗಳಲ್ಲಿ 17 ಓವರ್ ಗಳಲ್ಲಿ 2 ವಿಕೆಟ್ ಕಳೆದುಕೊಂಡಿದೆ.

02 Apr 2023 19:46 (IST)

ಮುಂಬೈ ಮೊದಲ ವಿಕೆಟ್​ ಪತನ

 ಮುಂಬೈ ಇಂಡಿಯನ್ಸ್ ಆರಮಭಿಕ ಆಟಗಾರ ಇಶಾನ್ ಕಿಶನ್  10 ರನ್​​ ಗಳಿಸಿ ವಿಕೆಟ್​ ಒಪ್ಪಿಸಿದರು.

02 Apr 2023 19:29 (IST)

ಉಭಯ ತಂಡಗಳ ಹೈವೋಲ್ಟೇಜ್​ ಪಂದ್ಯ

ರೋಹಿತ್ ನಾಯಕತ್ವದಲ್ಲಿ, ಮುಂಬೈ ಐಪಿಎಲ್ ಪ್ರಶಸ್ತಿಯನ್ನು ದಾಖಲೆಯ 5 ಬಾರಿ ಗೆದ್ದಿದೆ ಆದರೆ RCB ಇನ್ನೂ ಮೊದಲ ಪ್ರಶಸ್ತಿಯನ್ನು ಗೆಲ್ಲಬೇಕಾಗಿದೆ. ಕಳೆದ ಋತುವಿನಲ್ಲಿ ಅವರು ತಮ್ಮ ನಾಯಕನನ್ನು ಕೂಡ ಬದಲಾಯಿಸಿದರು. ಈ ಪಂದ್ಯವನ್ನು ನೀವು ಜೀಯೋ ಸಿನಿಮಾ ಮತ್ತು ಸ್ಟಾರ್​ ಸ್ಪೋರ್ಟ್ಸ್​ನಲ್ಲಿ ನೇರಪ್ರಸಾರ ವೀಕ್ಷಿಸಬಹುದು.

ಇದನ್ನೂ ಓದಿ: RCB vs MI: ಟಾಸ್​ ಗೆದ್ದ ಆರ್​ಸಿಬಿ, ಬಲಿಷ್ಠ ತಂಡ ಕಣಕ್ಕಿಳಿಸಿದ ಬೆಂಗಳೂರು

02 Apr 2023 19:20 (IST)

ಆರ್​ಸಿಬಿ ಪ್ಲೇಯಿಂಗ್​ 11:

ವಿರಾಟ್ ಕೊಹ್ಲಿ, ಫಾಫ್ ಡುಪ್ಲೆಸಿ (c), ಗ್ಲೆನ್ ಮ್ಯಾಕ್ಸ್‌ವೆಲ್, ಮೈಕೆಲ್ ಬ್ರೇಸ್‌ವೆಲ್, ಶಹಬಾಜ್ ಅಹ್ಮದ್, ದಿನೇಶ್ ಕಾರ್ತಿಕ್ (wk), ಕರ್ಣ್ ಶರ್ಮಾ, ಹರ್ಷಲ್ ಪಟೇಲ್, ಆಕಾಶದೀಪ್, ರಿಕ್ ಟೋಪ್ಲಿ, ಮೊಹಮ್ಮದ್ ಸಿರಾಜ್.

02 Apr 2023 19:17 (IST)

ಮುಂಬೈ ಪ್ಲೇಯಿಂಗ್​ 11: 

ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್ (ವಿಕೆಟ್-ಕೀಪರ್), ಸೂರ್ಯಕುಮಾರ್ ಯಾದವ್, ಕ್ಯಾಮೆರಾನ್ ಗ್ರೀನ್, ತಿಲಕ್ ವರ್ಮಾ, ಟಿಮ್ ಡೇವಿಡ್, ನೆಹಾಲ್ ವಧೇರಾ, ರಿತಿಕ್ ಶೋಕೀನ್, ಪಿಯೂಷ್ ಚಾವ್ಲಾ ಜೋಫ್ರಾ ಆರ್ಚರ್ , ಅರ್ಷದ್ ಖಾನ್.

 

02 Apr 2023 19:03 (IST)

ಟಾಸ್​ ಗೆದ್ದ ಆರ್​ಸಿಬಿ ಬೌಲಿಂಗ್​ ಆಯ್ಕೆ

ಟಾಸ್​ ಆಗಿದ್ದು,  ಆರ್​ಸಿಬಿ ತಂಡ ಟಾಸ್​ ಗೆದ್ದಿದ್ದು, ಮೊದಲು ಬೌಲಿಂಗ್​ ಆಯ್ಕೆ ಮಾಡಿದೆ. ಹೀಗಾಗಿ ಮುಂಬೈ ಇಂಡಿಯನ್ಸ್ ತಂಡ ಮೊದಲು ಬ್ಯಾಟಿಂಗ್​ ಮಾಡಲಿದೆ.