ಐಪಿಎಲ್ 2023ರ 15ನೇ ಪಂದ್ಯದವು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಲಕ್ನೋ ಸೂಪರ್ ಜೈಂಟ್ಸ್ (RCB vs LSG) ವಿರುದ್ಧ ನಡೆದವು. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಆಂಡಿದ ಆರ್ಸಿಬಿ ತಂಡ ಭರ್ಜರಿ ಬ್ಯಾಟಿಂಗ್ ಮಾಡಿತು. RCB ಪರ ವಿರಾಟ್ ಕೊಹ್ಲಿ (Virat Kohli), ಫಾಫ್ ಡು ಪ್ಲೆಸಿಸ್ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ (Glenn Maxwell) ಅರ್ಧಶತಕಗಳೊಂದಿಗೆ 20 ಓವರ್‌ಗಳಲ್ಲಿ 2 ವಿಕೆಟ್‌ಗೆ 212 ರನ್ ಗಳಿಸಿತು. ಈ ಮೊತ್ತ ಬೆನ್ನಟ್ಟಿದ ಲಕ್ನೋ ತಂಡ 20 ಓವರ್ಗೆ 9 ವಿಕೆಟ್‌ಗೆ 213 ರನ್ ಗಳಿಸುವ ಮೂಲಕ ರೋಚಕ ಜಯ ದಾಖಲಿಸಿತು.
ಬೆಂಗಳೂರಲ್ಲಿ ಅಬ್ಬರಿಸಿದ ಪೂರನ್:
ಇನ್ನು, ಲಕ್ನೋ ತಂಡ 20 ಓವರ್ಗೆ 9 ವಿಕೆಟ್‌ಗೆ 213 ರನ್ ಗಳಿಸುವ ಮೂಲಕ ಚಿನ್ನಸ್ವಾಮಿ ಮೈದಾನದಲ್ಲಿ ಆರ್ಸಿಬಿ ವಿರುದ್ಧ ಕೆಎಲ್ ರಾಹುಲ್ ಪಡೆ ರೋಚಕ ಜಯ ದಾಖಲಿಸಿತು. ಲಕ್ನೋ ಪರ ಕೈಲಿ ಮಯ್ಯರ್ ಶೂನ್ಯ, ನಾಯಕ ಕೆಎಲ್ ರಾಹುಲ್ 18 ರನ್, ದೀಪಕ್ ಹೂಡ 9 ರನ್, ಕೃನಲ್ ಪಾಂಡ್ಯ 0 ರನ್ ಸಿಡಿದರು. ಆದರೆ ಪಂದ್ಯದ ಗತಿಯನ್ನೇ ಬದಲಿಸಿದ ಮಾರ್ಕೋಸ್ ಸ್ಟೋಯ್ನಿಸ್ 30 ಎಸೆತದಲ್ಲಿ 5 ಸಿಕ್ಸ್ ಮತ್ತು 6 ಫೋರ್ ಮೂಲಕ 65 ರನ್ ಗಳಿಸಿದರು. ಅವರಂತೆ ನಿಕೋಲಸ್ ಪೂರನ್ 19 ಎಸೆತದಲ್ಲಿ 7 ಸಿಕ್ಸ್ ಮತ್ತು 4 ಪೋರ್ ಮೂಲಕ ಬರೋಬ್ಬರಿ 62 ರನ್ ಗಳಿಸಿದರು. ಆಯೂಶ್ ಬದೋನಿ 30 ರನ್, ಜಯದೇವ್ ಉನದ್ಕಟ್ 9 ರನ್ ಮತ್ತು ರವಿ ಬಿಷ್ಣೋಯ್ 3 ರನ್ ಗಳಿಸಿದರು.
𝗪𝗛𝗔𝗧. 𝗔. 𝗚𝗔𝗠𝗘 🤯🤯🤯@LucknowIPL pull off a last-ball win!
A roller-coaster of emotions in Bengaluru 🔥🔥
Follow the match ▶️ https://t.co/76LlGgKZaq#TATAIPL | #RCBvLSG pic.twitter.com/96XwaYaOqT
— IndianPremierLeague (@IPL) April 10, 2023
ಇತ್ತ ಆರ್ಸಿಬಿ ಬೌಲರ್ಗಳೂ ಸಹ ಹೆಚ್ಚಿನ ರನ್ ಬಿಟ್ಟುಕೊಡುವ ಮೂಲಕ ಮತ್ತೆ ಬೌಲಿಂಗ್ನಲ್ಲಿ ಎಡವೊದರು. ಆರ್ಸಿಬಿ ಪರ ಮೊಹಮ್ಮದ್ ಸಿರಾಜ್ ಮತ್ತು ವಾಯ್ನೆ ಪರ್ನೆಲ್ ತಲಾ 3 ವಿಕೆಟ್ ಪಡೆದರು. ಉಳಿದಂತೆ ಹರ್ಷಲ್ ಪಟೇಲ್ 2 ವಿಕೆಟ್ ಮತ್ತು ಕರ್ಣ ಶರ್ಮಾ 1 ವಿಕೆಟ್ ಪಡೆದರು.ದರೆ ಹರ್ಷಲ್ ಪಟೇಲ್ ಮತ್ತು ಕರ್ಣ ಶರ್ಮಾ ತಲಾ 48 ರನ್ ಬಿಟ್ಟುಕೊಟ್ಟು ದುಬಾರಿಯಾದರು.
ಇದನ್ನೂ ಓದಿ: Rinku Singh: ರಿಂಕು ಸಿಂಗ್ ಮೇಲೆ ನೀಲಿ ಚಿತ್ರತಾರೆಗೆ ಪ್ಯಾರ್! 'ರಿಂಕು ದಿ ಕಿಂಗ್' ಅಂತ ಫೋಟೋ ಹಂಚಿಕೊಂಡ ನಟಿ!
ಬ್ಯಾಟಿಂಗ್ನಲ್ಲಿ ಅಬ್ಬರಿಸಿದ K.G.F:
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ವಿರಾಟ್ ಕೊಹ್ಲಿ ಮತ್ತು ನಾಯಕ ಫಾಫ್ ಡುಪ್ಲೇಸಿಸ್ ಭರ್ಜರಿಯಾಗಿ ಆಟವಾಡಿದರು. ಬಳಿಕ ಬಂದ ಗ್ಲೇನ್ ಮ್ಯಾಕ್ಸ್‌ವೆಲ್ ಸಹ ಅಬ್ಬರದ ಬ್ಯಾಟಿಂಗ್ ಮೂಲಕ ಮೂವರು ಸಹ ಆಕರ್ಷಕ ಅರ್ಧಶತಕ ಸಿಡಿಸಿದರು. ವಿರಾಟ್ ಕೊಹ್ಲಿ 44 ಎಸೆತದಲ್ಲಿ 4 ಸಿಕ್ಸ್ 4 ಪೋರ್ ಮೂಲಕ 61 ರನ್ ಗಳಿಸಿದರೆ, ಫಾಫ್ ಡುಪ್ಲೇಸಿಸ್ 46 ಎಸೆತದಲ್ಲಿ 5 ಸಿಕ್ಸ್ ಮತ್ತು 5 ಫೋರ್ ಮೂಲಕ 79 ರನ್ ಹಾಗೂ ಗ್ಲೇನ್ ಮ್ಯಾಕ್ಸ್‌ವೆಲ್ 29 ಎಸೆತದಲ್ಲಿ 6 ಸಿಕ್ಸ್ ಮತ್ತು 3 ಫೋರ್ ಮೂಲಕ 59 ರನ್ ಕೊನೆಯಲ್ಲಿ ದಿನೇಶ್ ಕಾರ್ತಿಕ್ 1 ರನ್ ಗಳಿಸುವ ಮೂಲಕ ತಂಡದ ಮೊತ್ತ ಇನ್ನೂರು ರನ್ ಗಡಿ ದಾಟಲು ಸಹಾಯಕರಾದರು.
ಚಿನ್ನಸ್ವಾಮಿಯಲ್ಲಿ ರನ್ ಪ್ರವಾಹ:
ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಿದ ಲಕ್ನೋ ತಂಡದ ಬೌಲರ್ಸ್ ಆರ್ಸಿಬಿ ವಿರುದ್ಧ ಇಂದು ದುಬಾರಿಯಾದರು. ಕೊಹ್ಲಿ, ಡುಪ್ಲೇಸಿಸ್ ಮತ್ತು ಮ್ಯಾಕ್ಸ್‌ವೆಲ್ ಕಟ್ಟಿಹಾಕುವಲ್ಲಿ ವಿಫಲರಾದರು. ಲಕ್ನೋ ಪರ, ಮಾರ್ಕ್ ವುಡ್ ಮತ್ತು ಅಮಿತ್ ಮಿಶ್ರಾ ತಲಾ ಒಂದು ವಿಕೆಟ್ ಪಡೆದರು. ಉಳದಂತೆ ಜಯದೇವ್ ಉನದ್ಕಟ್ 27 ರನ್, ಆವೇಶ್ ಖಾನ್ 53 ರನ್, ಕೃನಲ್ ಪಅಂಡ್ಯ 35 ರನ್ ನೀಡುವ ಮೂಲಕ ದುಬಾರಿಯಾದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ