ಇಂಡಿಯನ್ ಪ್ರೀಮಿಯರ್ ಲೀಗ್ 2023 ರ (IPL 2023) 50ನೇ ಪಂದ್ಯವು ದೆಹಲಿಯ ಅರುಣ್ ಜೇಟ್ಲಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB vs DC) ನಡುವೆ ನಡೆಯಿತು. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ ನಿಗದಿತ 20 ಓವರ್ನಲ್ಲಿ 181 ರನ್ ಗಳಿಸುವ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ 182 ರನ್ ಗಳ ಟಾರ್ಗೆಟ್ ನೀಡಿತು. ಈ ಮೊತ್ತ ಬೆನ್ನಟ್ಟಿದ ಡೆಲ್ಲಿ ತಂಡ 16.4 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 187 ರನ್ ಗಳಿಸುವ ಮೂಲಕ 7ವಿಕೆಟ್ಗಳ ಜಯ ದಾಖಲಿಸಿತು. ಈ ಮೂಲಕ ಆರ್‌ಸಿಬಿ ತಂಡಕ್ಕೆ ಮತ್ತೊಂದು ಸೋಲಾಗಿದ್ದು, ಪ್ಲೇಆಫ್ ಹಾದಿ ಇನ್ನಷ್ಟು ಕಠಿಣವಾಗಿದೆ. ಇದರಿಂದಾಗಿ ಆರ್‌ಸಿಬಿ ತಂಡವು ಮುಂಬರಲಿರುವ ಎಲ್ಲಾ ಪಂದ್ಯಗಳನ್ನು ಉತ್ತಮ ರನ್ರೇಟ್ ಮೂಲಕ ಗೆಲ್ಲಲೇಬೇಕಾದ ಒತ್ತಡದಲ್ಲಿದೆ.
ಫಿಲಿಪ್ ಸಾಲ್ಟ್ ಭರ್ಜರಿ ಬ್ಯಾಟಿಂಗ್:
ಡೇವಿಡ್ ವಾರ್ನರ್ 22 ರನ್, ಫಿಲಿಪ್ ಸಾಲ್ಟ್ 45 ಎಸೆತದಲ್ಲಿ 6 ಸಿಕ್ಸ್ ಮತ್ತು 8 ಬೌಂಡರಿ ನೆರವಿನಿಂದ 87 ರನ್ ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖರಾದರು. ಉಳಿದಂತೆ ಮಿಚೆಲ್ ಮಾರ್ಷ್ 26 ರನ್ ಮತ್ತು ರಿಲೆ ರುಸ್ಸೋ 35 ರನ್ ಗಳಿಸಿದರೆ ಕೊನೆಯಲ್ಲಿ ಅಕ್ಷರ್ ಪಟೇಲ್ 8 ರನ್ ಗಳಿಸಿದರು. ಈ ಮೂಲಕ ಡೆಲ್ಲಿ ತಂಡಕ್ಕೆ ಸತತ 2ನೇ ಗೆಲುವು ದಾಖಲಾಗಿದೆ.
ಬೌಲಿಂಗ್ನಲ್ಲಿ ಎಡವಿದ ಆರ್‌ಸಿಬಿ:
ಇನ್ನು, ಬ್ಯಾಟಿಂಗ್ನಲ್ಲಿ ಉತ್ತಮವಾಗಿ ಪ್ರದರ್ಶನ ನೀಡಿದ ಆರ್‌ಸಿಬಿ ತಂಡ ಬೌಲಿಂಗ್ನಲ್ಲಿ ಎಡವಿತು. ಆರ್‌ಸಿಬಿ ಪರ ಮೊಹಮ್ಮದ್ ಸಿರಾಜ್ 2 ಓವರ್ಗೆ 28 ರನ್ ನೀಡಿದರು. ಉಳಿದಂತೆ, ಜೋಸ್ ಹೆಝಲ್ವುಡ್ 3 ಓವರ್ಗೆ 29 ರನ್ ನೀಡಿ 1 ವಿಕೆಟ್, ವನಿಂದು ಹಸರಂಗ 4 ಓವರ್ಗೆ 32 ರನ್, ಕರಣ್ ಶರ್ಮಾ 3 ಓವರ್ಗೆ 33 ರನ್ ಮತ್ತು ಹರ್ಷಲ್ ಪಟೇಲ್ 2 ಓವರ್ಗೆ 32 ರನ್ ನೀಡಿ 1 ವಿಕೆಟ್ ಪಡೆದರು.
ಉತ್ತಮ ಬ್ಯಾಟಿಂಗ್ ಮಾಡಿದ ಆರ್‌ಸಿಬಿ:
ಬೆಂಗಳೂರು ಪರ ವಿರಾಟ್ ಕೊಹ್ಲಿ 55 ರನ್, ಫಾಫ್ ಡು ಪ್ಲೆಸಿಸ್ 45 ರನ್, ಗ್ಲೆನ್ ಮ್ಯಾಕ್ಸ್‌ವೆಲ್ ಶೂನ್ಯ, ಮಹಿಪಾಲ್ ಲೊಮ್ರೋರ್ 54 ರನ್, ದಿನೇಶ್ ಕಾರ್ತಿಕ್ 11 ರನ್ ಮತ್ತು ಅನುಜ್ ರಾವತ್ 8 ರನ್ ಗಳಿಸಿದರು. ಈ ಮೂಲಕ ತಂಡದ ಮೊತ್ತ ಹೆಚ್ಚಿಸುವಲ್ಲಿ ಸಹಾಯಕರಾದರು. ಆದರೆ ಈ ಆಟಗಾರರ ಹೋರಾಟ ವ್ಯರ್ಥವಾಯಿತು. ಅಲ್ಲದೇ ಉತ್ತಮ ಮೊತ್ತದ ಟಾರ್ಗೆಟ್ ನೀಡಿದರೂ ಆರ್‌ಸಿಬಿ ಬೌಲರ್ಗಳು ಇದನ್ನು ಕಾಪಾಡಿಕೊಳ್ಳುವಲ್ಲಿ ಯಶಸ್ವಿಯಾಗಲಿಲ್ಲ.
ಇದನ್ನೂ ಓದಿ: Virat Kohli: ಐಪಿಎಲ್‌ನಲ್ಲಿ ವಿಶ್ವದಾಖಲೆ ನಿರ್ಮಿಸಿದ ಕಿಂಗ್ ಕೊಹ್ಲಿ! ರೆಕಾರ್ಡ್ಗಳೆಲ್ಲಾ ಪೀಸ್ ಪೀಸ್
ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಆರಂಭಿಕರು ಉತ್ತಮ ಆರಂಭ ನೀಡಿದರು. ಫಾಫ್ ಡುಪ್ಲೆಸಿಸ್ ಆಕ್ರಮಣಕಾರಿ ಆಟ ಪ್ರದರ್ಶಿಸಿದರೆ, ವಿರಾಟ್ ಕೊಹ್ಲಿ ನಾಯಕನಿಗೆ ಉತ್ತಮ ಸಾಥ್ ನೀಡಿದರು. ಈ ಮೂಲಕ ಮೊದಲ ವಿಕೆಟ್‌ಗೆ 50ಕ್ಕೂ ಹೆಚ್ಚು ರನ್‌ಗಳ ಜೊತೆಯಾಟವಾಡಿದರು. ಆದರೆ ಬಳಿಕ ಗ್ಲೆನ್ ಮ್ಯಾಕ್ಸ್ ವೆಲ್ ಗೋಲ್ಡನ್ ಡಕೌಟ್ ಆದರು. ಬಳಿಕ ಕೊಹ್ಲಿ ಮತ್ತು ಮಹಿಪಾಲ್ ಆರ್‌ಸಿಬಿ 82 ರನ್‌ಗಳಿಗೆ ಎರಡು ವಿಕೆಟ್ ಕಳೆದುಕೊಂಡಿತು. ಮಹಿಪಾಲ್ ಸಿಕ್ಸರ್ ಗಳ ಮೂಲಕ ಆಕ್ರಮಣಕಾರಿ ಆಟವಾಡಿದರು.
ಐಪಿಎಲ್‌ನಲ್ಲಿ ಕೊಹ್ಲಿ ಸಾಧನೆ:
ಇನ್ನು, ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ 12 ರನ್ ಗಳಿಸಿದ ತಕ್ಷಣ ವಿರಾಟ್ ಕೊಹ್ಲಿ ಲೀಗ್‌ನಲ್ಲಿ 7 ಸಾವಿರ ರನ್ ಪೂರೈಸಿದರು. ಐಪಿಎಲ್ ಇತಿಹಾಸದಲ್ಲಿ ಈ ಸಾಧನೆ ಮಾಡಿದ ಮೊದಲ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಕೊಹ್ಲಿ ಪಾತ್ರರಾಗಿದ್ದಾರೆ. ಈ ಪಂದ್ಯಕ್ಕೂ ಮುನ್ನ ಕೊಹ್ಲಿ ಐಪಿಎಲ್‌ನಲ್ಲಿ 6988 ರನ್ ಗಳಿಸಿದ್ದರು ಮತ್ತು ಐಪಿಎಲ್‌ನ ಟಾಪ್ ಸ್ಕೋರರ್ ಆಗಿದ್ದರು. ಆದರೆ, ಡೆಲ್ಲಿ ವಿರುದ್ಧ 7 ಸಾವಿರ ರನ್ ಪೂರೈಸಿದರು. ವಿರಾಟ್ ಐಪಿಎಲ್‌ನಲ್ಲಿ ಗರಿಷ್ಠ 5 ಶತಕ ಗಳಿಸಿದ್ದಾರೆ. 233ನೇ ಪಂದ್ಯದಲ್ಲಿ 7 ಸಾವಿರ ರನ್ ಪೂರೈಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ