ಇಂಡಿಯನ್ ಪ್ರೀಮಿಯರ್ ಲೀಗ್ 2023 ರ (IPL 2023) 50 ನೇ ಪಂದ್ಯವು ದೆಹಲಿಯ ಅರುಣ್ ಜೇಟ್ಲಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB vs DC) ನಡುವೆ ನಡೆಯುತ್ತಿದೆ. ಈ ಪಂದ್ಯದಲ್ಲಿ ಆರ್‌ಸಿಬಿ ನಾಯಕ ಫಾಫ್ ಡುಪ್ಲೆಸಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ ನಿಗದಿತ 20 ಓವರ್ನಲ್ಲಿ 4 ವಿಕೆಟ್ ನಷ್ಟಕ್ಕೆ 181 ರನ್ ಗಳಿಸುವ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ 182 ರನ್ ಗಳ ಬಿಗ್ ಟಾರ್ಗೆಟ್ ನೀಡಿದೆ.
7 ಸಾವಿರ ರನ್ ಪೂರೈಸಿದ ಕೊಹ್ಲಿ:
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ 12 ರನ್ ಗಳಿಸಿದ ತಕ್ಷಣ ವಿರಾಟ್ ಕೊಹ್ಲಿ ಲೀಗ್‌ನಲ್ಲಿ 7 ಸಾವಿರ ರನ್ ಪೂರೈಸಿದರು. ಐಪಿಎಲ್ ಇತಿಹಾಸದಲ್ಲಿ ಈ ಸಾಧನೆ ಮಾಡಿದ ಮೊದಲ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಕೊಹ್ಲಿ ಪಾತ್ರರಾಗಿದ್ದಾರೆ. ಈ ಪಂದ್ಯಕ್ಕೂ ಮುನ್ನ ಕೊಹ್ಲಿ ಐಪಿಎಲ್‌ನಲ್ಲಿ 6988 ರನ್ ಗಳಿಸಿದ್ದರು ಮತ್ತು ಐಪಿಎಲ್‌ನ ಟಾಪ್ ಸ್ಕೋರರ್ ಆಗಿದ್ದರು. ಆದರೆ, ಡೆಲ್ಲಿ ವಿರುದ್ಧ 7 ಸಾವಿರ ರನ್ ಪೂರೈಸಿದರು. ವಿರಾಟ್ ಐಪಿಎಲ್‌ನಲ್ಲಿ ಗರಿಷ್ಠ 5 ಶತಕ ಗಳಿಸಿದ್ದಾರೆ. 233ನೇ ಪಂದ್ಯದಲ್ಲಿ 7 ಸಾವಿರ ರನ್ ಪೂರೈಸಿದ್ದಾರೆ.
7⃣0⃣0⃣0⃣ 𝗜𝗣𝗟 𝗥𝗨𝗡𝗦 𝗙𝗢𝗥 𝗞𝗜𝗡𝗚 𝗞𝗢𝗛𝗟𝗜! 👑@imVkohli becomes the first batter to surpass this milestone in IPL 🫡
TAKE. A. BOW 👏#TATAIPL | #DCvRCB | @RCBTweets pic.twitter.com/VP4dMvLTwY
— IndianPremierLeague (@IPL) May 6, 2023
ಇದನ್ನೂ ಓದಿ: Virat Kohli: ಐಪಿಎಲ್‌ನಲ್ಲಿ ವಿಶ್ವದಾಖಲೆ ನಿರ್ಮಿಸಿದ ಕಿಂಗ್ ಕೊಹ್ಲಿ! ರೆಕಾರ್ಡ್ಗಳೆಲ್ಲಾ ಪೀಸ್ ಪೀಸ್
ಅಬ್ಬರಿಸಿದ ಆರ್‌ಸಿಬಿ ಬ್ಯಾಟರ್ಸ್:
ಇನ್ನು, ಡೆಲ್ಲಿ ವಿರುದ್ಧ ಆರ್‌ಸಿಬಿ ಬ್ಯಾಟ್ಸ್ಮನ್ಗಳು ಭರ್ಜರಿ ಬ್ಯಾಟಿಂಗ್ ಮಾಡಿದರು. ಬೆಂಗಳೂರು ಪರ ವಿರಾಟ್ ಕೊಹ್ಲಿ 55 ರನ್, ಫಾಫ್ ಡು ಪ್ಲೆಸಿಸ್ 45 ರನ್, ಗ್ಲೆನ್ ಮ್ಯಾಕ್ಸ್‌ವೆಲ್ ಶೂನ್ಯ, ಮಹಿಪಾಲ್ ಲೊಮ್ರೋರ್ 54 ರನ್, ದಿನೇಶ್ ಕಾರ್ತಿಕ್ 11 ರನ್ ಮತ್ತು ಅನುಜ್ ರಾವತ್ 8 ರನ್ ಗಳಿಸಿದರು. ಈ ಮೂಲಕ ತಂಡದ ಮೊತ್ತ ಹೆಚ್ಚಿಸುವಲ್ಲಿ ಸಹಾಯಕರಾದರು.
ಆರ್‌ಸಿಬಿ - ಡೆಲ್ಲಿ ಕ್ಯಾಪಿಟಲ್ಸ್ ಪ್ಲೇಯಿಂಗ್ 11:
ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ಲೇಯಿಂಗ್ 11: ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ (ನಾಯಕ), ಅನುಜ್ ರಾವತ್, ಗ್ಲೆನ್ ಮ್ಯಾಕ್ಸ್‌ವೆಲ್, ಮಹಿಪಾಲ್ ಲೊಮ್ರೋರ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಕೇದಾರ್ ಜಾಧವ್, ವನಿಂದು ಹಸರಂಗ, ಕರ್ಣ್ ಶರ್ಮಾ, ಮೊಹಮ್ಮದ್ ಸಿರಾಜ್, ಜೋಶ್ ಹ್ಯಾಜಲ್‌ವುಡ್.
ಡೆಲ್ಲಿ ಕ್ಯಾಪಿಟಲ್ಸ್ ಪ್ಲೇಯಿಂಗ್ 11: ಡೇವಿಡ್ ವಾರ್ನರ್ (ನಾಯಕ), ಫಿಲಿಪ್ ಸಾಲ್ಟ್ (ವಿಕೆಟ್ ಕೀಪರ್), ಮಿಚೆಲ್ ಮಾರ್ಷ್, ರಿಲೆ ರುಸ್ಸೋ, ಮನೀಶ್ ಪಾಂಡೆ, ಅಮನ್ ಹಕೀಮ್ ಖಾನ್, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಮುಖೇಶ್ ಕುಮಾರ್, ಇಶಾಂತ್ ಶರ್ಮಾ, ಖಲೀಲ್ ಅಹ್ಮದ್.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ