ಐಪಿಎಲ್ (IPL 2023) ಆರಂಭದಿಂದಲೂ ಸಿಎಸ್‌ಕೆ ನಾಯಕ ಎಂಎಸ್ ಧೋನಿ (MS Dhoni) ಅವರ ಆಕ್ರಮಣಕಾರಿ ಬ್ಯಾಟಿಂಗ್ ಅನ್ನು ಅಭಿಮಾನಿಗಳು ಆನಂದಿಸುತ್ತಿದ್ದಾರೆ. ಚೆನ್ನೈ ತಂಡ (CSK) ತನ್ನ 5ನೇ ಪಂದ್ಯದಲ್ಲಿ ಆರ್‌ಸಿಬಿಯನ್ನು ತವರು ನೆಲದಲ್ಲಿ ಎದುರಿಸಲು ಸಜ್ಜಾಗಿದೆ. 2019ರಲ್ಲಿ RCB ಕೊನೆಯ ಪಂದ್ಯದಲ್ಲಿ ಧೋನಿ ತಂಡ ಸೋಲನ್ನಪ್ಪಿತ್ತು. ಆ ಸಮಯದಲ್ಲಿ ಧೋನಿ ತಮ್ಮ ಫಿನಿಶಿಂಗ್ ಶೈಲಿಯನ್ನು ತೋರಿಸಿದರು ಮತ್ತು ತಂಡಕ್ಕೆ ಟ್ರಬಲ್‌ಶೂಟರ್ ಆದರು. ಆದರೆ ದುರದೃಷ್ಟವಶಾತ್, ಮಹಿ ತಂಡವನ್ನು ಗೆಲ್ಲಿಸಲು ಕೇವಲ ಒಂದು ಹೆಜ್ಜೆ ದೂರದಲ್ಲಿರುವಾಗ ಸೋಲನ್ನಪ್ಪಿದರು.
2019ರಲ್ಲಿ ಚೆನ್ನೈಗೆ ಸೋಲು:
2019ರಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿಯೇ ಎರಡೂ ತಂಡಗಳು ಮುಖಾಮುಖಿಯಾಗಿದ್ದವು. ಆರ್‌ಸಿಬಿಯ ನಾಯಕತ್ವವನ್ನು ವಿರಾಟ್ ಕೊಹ್ಲಿ ಕೈಯಲ್ಲಿತ್ತು, ಆದರೆ ಪಾರ್ಥಿವ್ ಪಟೇಲ್ ಅವರ ಅರ್ಧಶತಕದ ಇನ್ನಿಂಗ್ಸ್‌ನ ಆಧಾರದ ಮೇಲೆ ಆರ್‌ಸಿಬಿ 161 ರನ್ ಗಳಿಸಿತು. ಪಂದ್ಯ ಕೂಡ ಸಿಎಸ್‌ಕೆ ಪರವಾಗಿತ್ತು. ಆದರೆ ಬ್ಯಾಟಿಂಗ್ ಬಂದ ಕೂಡಲೇ ಶೇನ್ ವ್ಯಾಟ್ಸನ್, ಫಾಫ್ ಡು ಪ್ಲೆಸಿಸ್ ಮತ್ತು ಸುರೇಶ್ ರೈನಾ ಅವರಂತಹ ದಿಗ್ಗಜರು ಬೇಗ ಔಟ್ ಆದರು . ಅಂಬಟಿ ರಾಯುಡು 29 ರನ್‌ಗಳ ಇನಿಂಗ್ಸ್ ಆಡಿದರೂ ಅದನ್ನು ದೊಡ್ಡ ಇನ್ನಿಂಗ್ಸ್ ಆಗಿ ಪರಿವರ್ತಿಸಲು ಸಾಧ್ಯವಾಗಲಿಲ್ಲ.
ಈ ಸಂಕಷ್ಟದ ಸಂದರ್ಭದಲ್ಲಿ ಧೋನಿ ಮಾತ್ರ ತಂಡದ ಜವಾಬ್ದಾರಿಯನ್ನು ಹೊತ್ತುಕೊಂಡರು. ಅವರು ಕೇವಲ 48 ಎಸೆತಗಳಲ್ಲಿ 4 ಬೌಂಡರಿ ಮತ್ತು 7 ಸಿಕ್ಸರ್‌ಗಳ ಸಹಾಯದಿಂದ 84 ರನ್ ಗಳಿಸಿದರು. ಆದರೆ ತಂಡದ ಗೆಲುವಿಗೆ ಕೇವಲ 1 ರನ್ ಮಾತ್ರ ಬಾಕಿ ಉಳಿದಿತ್ತು. ಆದರೆ ಕೊನೆ ಎಸೆತದಲ್ಲಿ 1 ರನ್ ಗಳಿಸಲು ಸಾಧ್ಯವಾಗದೇ ಸೋಲ್ಲನ್ನಪ್ಪಿದರು.
ಇದನ್ನೂ ಓದಿ: RCB vs CSK: ನಾಳೆ ಬೆಂಗಳೂರಲ್ಲಿ ಆರ್‌ಸಿಬಿ ಮ್ಯಾಚ್ ನಡೆಯೋದೇ ಡೌಟ್! ಕ್ರಿಕೆಟ್ ಅಭಿಮಾನಿಗಳಿಗೆ ಶಾಕಿಂಗ್ ನ್ಯೂಸ್
ಸೇಡು ತೀರಿಸಿಕೊಳ್ಳುತ್ತಾರಾ ಧೋನಿ?:
ಐಪಿಎಲ್ 2023 ರಲ್ಲಿ ಧೋನಿ ಹಳೆಯ ಶೈಲಿಯಲ್ಲಿ ಕಾಣಿಸಿಕೊಂಡಿದ್ದಾರೆ. ಇದೇ ಮೈದಾನದಲ್ಲಿ 4 ವರ್ಷಗಳ ಹಿಂದೆ ಆದ ಸೋಲನ್ನು ಸರಿಪಡಿಸಿಕೊಳ್ಳಲು ಅವರಿಗೆ ಉತ್ತಮ ಅವಕಾಶವಿದೆ. ಕಳೆದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಸಿಎಸ್‌ಕೆ ಸೋಲನುಭವಿಸಿತ್ತು. ಇಂತಹ ಪರಿಸ್ಥಿತಿಯಲ್ಲಿ ಈ ಪಂದ್ಯ ತಂಡಕ್ಕೆ ಅತ್ಯಂತ ಮಹತ್ವದ್ದಾಗಿದೆ. ಉಭಯ ತಂಡಗಳು 4 ಪಂದ್ಯಗಳನ್ನು ಆಡಿದ್ದು ಮೂರನೇ ಗೆಲುವಿನ ನಿರೀಕ್ಷೆಯಲ್ಲಿವೆ. ಈ ಅಮೋಘ ಪಂದ್ಯದಲ್ಲಿ ಯಾವ ತಂಡ ಗೆಲ್ಲಲಿದೆ ಎಂಬುದು ಈಗ ಕುತೂಹಲ ಮೂಡಿಸಿದೆ.
ಇಂಪ್ಯಾಕ್ಟ್ ಪ್ಲೇಯರ್ ಆಗಿ ಬರ್ತಾರಾ ಧೋನಿ?:
ಇನ್ನು, ಧೋನಿ ಹಳೆಯ ಪಂದ್ಯದ ಸೇಡನ್ನು ತೀರಿಸಿಕೊಳ್ಳಲು ಹೊಸ ಪ್ಲ್ಯಾನ್ ಮಾಡಿದ್ದಾರೆ ಎನ್ನಲಾಗಿದೆ. ಅಲ್ಲದೇ ಅವರು ಮೊಣಕಾಲು ಗಾಯದ ಸಮಸ್ಯೆಯಿಂದ ಬಳಲುತ್ತಿರುವುದರಿಂದ ಒಂದು ವೇಳೆ ಇಂದಿನ ಪಂದ್ಯದಲ್ಲಿ ಸಿಎಸ್‌ಕೆ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಿದರೆ ಧೋನಿ ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕಿಳಿಯಬಹುದು. ಮುಂಬೈ ಪಂದ್ಯದಲ್ಲಿ ರೋಹಿತ್ ಶರ್ಮಾ ಸಹ ಇದೇ ರೀತಿ ಮಾಡಿದ್ದರು. ಹೀಗಾದ್ದಲ್ಲಿ ಧೋನಿ ಬದಲಿಗೆ ಡಿವೋನ್ ಕಾನ್ವೆ ವಿಕೆಟ್ ಕೀಪರ್ ಆಗಿ ಕಾರ್ಯನಿರ್ವಹಿಸಬಹುದು. ಜೊತೆಗೆ ತಂಡದ ನಾಯಕತ್ವವನ್ನು ಜಡೇಜಾ ನಿರ್ವಹಿಸಬಹುದು.
RCB vs CSK ಸಂಭಾವ್ಯ ಪ್ಲೇಯಿಂಗ್ 11:
RCB ಸಂಭಾವ್ಯ ಪ್ಲೇಯಿಂಗ್ 11: ಫಾಫ್ ಡು ಪ್ಲೆಸಿಸ್ (ಸಿ) , ವಿರಾಟ್ ಕೊಹ್ಲಿ , ಎಂಕೆ ಲೊಮ್ರೋರ್ , ಜಿಜೆ ಮ್ಯಾಕ್ಸ್ ವೆಲ್ , ಡಬ್ಲ್ಯು ಹಸರಂಗ , ಶಹಬಾಜ್ ಅಹ್ಮದ್ , ಡಬ್ಲ್ಯುಡಿ ಪಾರ್ನೆಲ್ , ದಿನೇಶ್ ಕಾರ್ತಿಕ್ (wk), ಮೊಹಮ್ಮದ್ ಸಿರಾಜ್ , HV ಪಟೇಲ್ , ವಿಜಯ್ ಕುಮಾರ್ ವೈಶಾಕ್.
CSK ಸಂಭಾವ್ಯ ಪ್ಲೇಯಿಂಗ್ 11: ರುತುರಾಜ್ ಗಾಯಕ್‌ವಾಡ್, ಡೆವೊನ್ ಕಾನ್ವೇ, ಅಜಿಂಕ್ಯ ರಹಾನೆ, ಮೋಯಿನ್ ಅಲಿ , ರವೀಂದ್ರ ಜಡೇಜಾ , ಎಸ್ ದುಬೆ , ಎಸ್‌ಎಸ್‌ಬಿ ಮಗಳ, ಎಂಎಸ್ ಧೋನಿ(ಸಿ), ಟಿಯು ದೇಶಪಾಂಡೆ , ಎಂ ತೀಕ್ಷಣ , ಆಕಾಶ್ ಸಿಂಗ್.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ