• Home
  • »
  • News
  • »
  • sports
  • »
  • Kantara: ರಿಷಬ್ ಶೆಟ್ಟಿ ಭೇಟಿಯಾದ ಎಬಿಡಿ, ಕಾಂತಾರ ಸಿನಿಮಾದ ಡೈಲಾಗ್ ಹೊಡೆದ RCB ಪ್ಲೇಯರ್

Kantara: ರಿಷಬ್ ಶೆಟ್ಟಿ ಭೇಟಿಯಾದ ಎಬಿಡಿ, ಕಾಂತಾರ ಸಿನಿಮಾದ ಡೈಲಾಗ್ ಹೊಡೆದ RCB ಪ್ಲೇಯರ್

ರಿಷಬ್-ಎಬಿಡಿ

ರಿಷಬ್-ಎಬಿಡಿ

Kantara: ವಿಶ್ವದೆಲ್ಲೆಡೆ ಕಾಂತಾರ ಸಿನಿಮಾ ಇನ್ನು ಥಿಯೇಟರ್​ನಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಜನರೇ ಇದನ್ನ ಮುಗಿ ಬಿದ್ದು ನೋಡುತ್ತಿದ್ದಾರೆ. ಇದರ ನಡುವೆ ಮಿಸ್ಟರ್ 360 ಡಿಗ್ರಿ ಖ್ಯಾತಿಯ ಎಬಿ ಡಿವಿಲಿಯರ್ಸ್ (Ab de Villiers) ಅವರನ್ನು ರಿಷಬ್ ಶೆಟ್ಟಿ ಭೇಟಿ ಆಗಿದ್ದಾರೆ.

ಮುಂದೆ ಓದಿ ...
  • Share this:

ಬಾಲಿವುಡ್ (Kantara Bollywood) ಸೇರಿದಂತೆ ದೇಶದೆಲ್ಲಡೆ ಕಾಂತಾರ ಸಿನಿಮಾ ಕೋಟಿ ಕೋಟಿ ಕಲೆಕ್ಷನ್ ಮಾಡುತ್ತಿದೆ. ಕೇವಲ 19 ದಿನಕ್ಕೇನೆ ಬಾಲಿವುಡ್​ನಲ್ಲಿ ಸಿನಿಮಾ 50 ಕೋಟಿ ಕ್ರಾಸ್ ಆಗುತ್ತಿದೆ. ಕೆಜಿಎಫ್ (KGF Part-1) ಪಾರ್ಟ್​-1 ದಾಖಲೆಯನ್ನೂ ಮುರಿದು ಹಾಕಿದೆ.  ನಟ-ನಿರ್ದೇಶಕ ರಿಷಬ್ ಶೆಟ್ಟಿ ಚೆನ್ನಾಗಿಯೇ ತೆರೆ ಮೇಲೆ ತಂದಿದ್ದಾರೆ. ವಿಶ್ವದೆಲ್ಲೆಡೆ ಕಾಂತಾರ ಸಿನಿಮಾ ಇನ್ನು ಥಿಯೇಟರ್​ನಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಜನರೇ ಇದನ್ನ ಮುಗಿ ಬಿದ್ದು ನೋಡುತ್ತಿದ್ದಾರೆ. ಇದರ ನಡುವೆ ಮಿಸ್ಟರ್ 360 ಡಿಗ್ರಿ ಖ್ಯಾತಿಯ ಎಬಿ ಡಿವಿಲಿಯರ್ಸ್ (Ab de Villiers) ಅವರನ್ನು ರಿಷಬ್ ಶೆಟ್ಟಿ ಭೇಟಿ ಆಗಿದ್ದಾರೆ.


ರಿಷಬ್-ಎಬಿಡಿ ಭೇಟಿ:


ಹೌದು, ಕಾಂತಾರ ಎಷ್ಟರ ಮಟ್ಟಿಗೆ ಹವಾ ಸೃಷ್ಟಿಸಿದೆ ಎಂದರೆ ದೇಶದಲ್ಲಿ ಮಾತ್ರವಲ್ಲದೇ ವಿದೇಶಗಳಲ್ಲಿಯೂ ಸದ್ದು ಮಾಡುತ್ತಿದೆ. ಹೀಗಾಗಿ ನಿನ್ನೆ ಬೆಂಗಳೂರಿಗೆ ಆಗಮಿಸಿದ್ದ ಆರ್​ಸಿಬಿ ಆಟಗಾರ ಎಬಿಡಿ ವಿಲಿಯರ್ಸ್​ ಅವರು ಕಾಂತಾರ ಸಿನಿಮಾದ ನಟ-ನಿರ್ದೇಶಕ ರಿಷಬ್ ಶೆಟ್ಟಿ ಅವರನ್ನು ಭೇಟಿ ಆಗಿದ್ದಾರೆ. ಅಲ್ಲದೇ ಈ ವೇಳೆ ರಿಷಬ್ ಮತ್ತು ಎಬಿಡಿ ಇಬ್ಬರೂ ಕಾಂತಾರ ಚಿತ್ರದ ಡೈಲಾಗ್ ಹೇಳಿದ್ದಾರೆ. ಈ ವಿಡಿಯೋವನ್ನು ಹೊಂಬಾಳೆ ಫಿಲ್ಮ್ಸ್ ಮತ್ತು ರಿಷಬ್ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ‘ಇದು ಪಂದ್ಯ. ನಿಜವಾದ 360ಯನ್ನು ಇಂದು ಭೇಟಿ ಮಾಡಿದ್ದೇನೆ. ನಮ್ಮ ಬೆಂಗಳೂರಿಗೆ ಸೂಪರ್​ ಹೀರೋ ಮರಳಿ ಬಂದಿದ್ದಾರೆ’ ಎಂದು ರಿಷಬ್​ ಶೆಟ್ಟಿ ಅವರು ಬರೆದುಕೊಂಡಿದ್ದಾರೆ.



ಮತ್ತೆ ಬೆಂಗಳೂರಿಗೆ ಮರಳಿದ ಎಬಿಡಿ:


ಇನ್ನು, ಆರ್​ಸಿಬಿ ಆಟಗಾರ ಮತ್ತು ದಕ್ಷಿಣ ಆಪ್ರಿಕಾ ಮಾಜಿ ಆಟಗಾರ ಮಿಸ್ಟರ್ 360 ಖ್ಯಾತಿಯ ಎಬಿಡಿ ವಿಲಿಯರ್ಸ್​ ಮತ್ತೆ ಬೆಂಗಳೂರಿಗೆ ಮರಳಿದ್ದಾರೆ. ಆದರೆ ಅವರು ಐಪಿಎಲ್ ಹರಾಜಿಗೂ ಮುನ್ನ ಬಂದಿರುವುದು ಹಲವು ಅಚ್ಚರಿಗೆ ಕಾರಣವಾಗಿದ್ದು, ಅಭಿಮಾನಿಗಳು ಹಲವು ರೀತಿಯಲ್ಲಿ ಮಾತನಾಡುತ್ತಿದ್ದಾರೆ. ಅಲ್ಲದೇ ಕಾಂತಾರ ರಿಷಬ್ ಜೊತೆ ಎಬಿಡಿ ಇದ್ದುದ್ದರಿಂದ ಅನೇಕರು, ರಿಷಬ್​ ಶೆಟ್ಟಿ ಮತ್ತು ಎಬಿ ಡಿವಿಲಿಯರ್ಸ್ ಇಬ್ಬರೂ ಕೂಡ ಕ್ಲೈಮ್ಯಾಕ್ಸ್​ ತಜ್ಞರು. ಕೊನೆಯ 20 ನಿಮಿಷದಲ್ಲಿ ಸಖತ್​ ಥ್ರಿಲ್​ ನೀಡುತ್ತಾರೆ ಎಂದು ಫ್ಯಾನ್ಸ್​ ಹೇಳುತ್ತಿದ್ದಾರೆ.


ಇದನ್ನೂ ಓದಿ: Kantara Cartoon: ಕಾಂತಾರ ಭಾರೀ ಗೆಲುವು! ಬಾಲಿವುಡ್ ಸ್ಟಾರ್​​ಗಳ ಕಾರ್ಟೂನ್ ವಿಡಿಯೋ ವೈರಲ್


ಕೋಚ್​ ಆಗ್ತಾರಾ ವಿಲಿಯರ್ಸ್​:


ಐಪಿಎಲ್ ಹರಾಜಿಗೂ ಮುನ್ನ ಆರ್​ಸಿಬಿ ತಂಡಕ್ಕೆ ಎಬಿಡಿ ಮರಳಿರುವುದು ಹಲವು ಕುತೂಹಲವನ್ನು ಕೆರಳಿಸಿದೆ. ಅಲ್ಲದೇ ಅವರು ತಂಡದ ಕೋಚ್​ ಆಗಿ ಕೆಲಸ ಮಾಡುತ್ತಾರಾ ಎಂಬ ಪ್ರಶ್ನೆ ಇದೀಗ ಎಲ್ಲರಲ್ಲಿಯೂ ಕಾಡುತ್ತಿದೆ. ಆದರೆ ಇದರ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ದೊರಕಿಲ್ಲ.


ಇದರ ನಡುವೆ ಎಬಿಡಿ ಮುಂದಿನ ವರ್ಷ ಬೆಂಗಳೂರು ತಂಡದಲ್ಲಿ ಕಾಣಿಸಿಕೊಳ್ಳಲಿದ್ದೇನೆ ಎಂದು ಹೇಳಿದ್ದಾರೆ. ಅಲ್ಲದೇ ನನ್ನ ಎರಡನೇ ತವರು ಬೆಂಗಳೂರಿಗೆ ಮರಳಲು ಕಾತರದಿಂದಿದ್ದೇನೆ ಮತ್ತು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಭಿಮಾನಿಗಳನ್ನು ನೋಡುವ ಆಸೆಯಿದೆ ಎಂದಿದ್ದಾರೆ.


ಇದನ್ನೂ ಓದಿ: T20 WC 2022 PAK vs SA: ಆಫ್ರಿಕಾ ವಿರುದ್ಧ ಪಾಕ್​ ತಂಡಕ್ಕೆ ಭರ್ಜರಿ ಜಯ, ಟೀಂ ಇಂಡಿಯಾಗೆ ಹೆಚ್ಚಿದ ಟೆನ್ಷನ್


ಕಾಂತಾರ ಓಟಕ್ಕೆ ಬಾಲಿವುಡ್​ ನಡುಕ:


ಹೌದು, ಬಾಲಿವುಡ್​ ನಲ್ಲಿ ಕಾಂತಾರ ಸಿನಿಮಾದ ಕ್ರೇಜ್ ಜಾಸ್ತಿ ಇದೆ. ಕಲೆಕ್ಷನ್ ಲೆಕ್ಕ ಕೂಡ ಮೂರೇ ವಾರದಲ್ಲಿ ಕೇವಲ 19 ದಿನದಲ್ಲಿಯೇ 50 ಕೋಟಿ ದಾಟಿ ಹೋಗಿದೆ. ಇದರಿಂದ ಬಾಲಿವುಡ್​ ಸಿನಿಮಾಗಳ ಮೇಲೆ ಏಟು ಬೀಳ್ತಾನೇ ಬಂದಿದೆ.  ಅಕ್ಷಯ್ ಕುಮಾರ್ ಅಭಿನಯದ ರಾಮ್ ಸೇತು ಸಿನಿಮಾ ಕೂಡ ಡಲ್ ಆಗಿದೆ. ಹೀಗಿರೋವಾಗ  ಕಾಂತಾರ ಸಿನಿಮಾ ಕ್ರೇಜ್ ಕಂಡು ಬಾಲಿವುಡ್ ನಾಯಕ ನಟರು ಏನ್ ಹೇಳಬಹುದು?ಎಂದು ವಿಡಿಯೋ ಮೂಲಕ ವಿಡಂಬನಾತ್ಮಕವಾಗಿಯೇ ತೋರಲಾಗಿದೆ.

Published by:shrikrishna bhat
First published: