ಐಪಿಎಲ್ 2022ರ (IPL 2022) 15ನೇ ಆವೃತ್ತಿಯ 69ನೇ ಪಂದ್ಯದಲ್ಲಿ ಇಂದು ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ (MI vs DC) ತಂಡಗಳು ಸೆಣಸಾಡಲಿವೆ. ಇಂದಿನ ಪಂದ್ಯವು ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆಯಲಿದೆ. ಈಗಾಗಲೇ ಇಂದಿನ ಪಂದ್ಯದ ಮೇಲೆ ಕ್ರೀಡಾಭಿಮಾನಿಗಳ ಚಿತ್ತ ನೆಟ್ಟಿದ್ದು, ಕುತೂಹಲಕಾರಿ ಪಂದ್ಯ ಇದಾಗಿದೆ. ಹೌದು, ಡೆಲ್ಲಿ ತಂಡಕ್ಕೆ ಇಂದಿನ ಪಂದ್ಯ ಅತ್ಯಂತ ಮಹತ್ವದ್ದಾಗಿದ್ದು, ಪ್ಲೇ ಆಫ್ ಹಂತಕ್ಕೆ ಏರಲು ಡೆಲ್ಲಿ ಈ ಪಂದ್ಯವನ್ನು ಗೆಲ್ಲಲೇ ಬೇಕಿದೆ. ಆದರೆ ಡೆಲ್ಲಿ ಗೆಲುವು ಸೋಲಿನ ಮೇಲೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಪ್ಲೇ ಆಫ್ ನಿರ್ಧಾರವಾಗಲಿದೆ.
ಹೀಗಾಗಿ ಇಂದಿನ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ಗೆಲ್ಲಲಿ ಎಂದು ಆರ್ಸಿಬಿ ಅಭಿಮಾನಿಗಳು ಬೇಡಿಕೊಳ್ಳುತ್ತಿದ್ದಾರೆ. ಅಲ್ಲದೇ ಇದರ ನಡುವೆ ಟ್ವಿಟರ್ ನಲ್ಲಿ RCB = ರಾಯಲ್ ಚಾಲೆಂಜರ್ಸ್ ಬಾಂಬೆ ಎನ್ನುವುದು ಟ್ರೆಂಡ್ ಆಗಿದೆ.
RCB = ರಾಯಲ್ ಚಾಲೆಂಜರ್ಸ್ ಬಾಂಬೆ:
ಇಂದಿನ ಮುಂಬೈ ಮತ್ತು ಡೆಲ್ಲಿ ಪಂದ್ಯದಲ್ಲಿ ಮುಂಬೈ ಗೆದ್ದರೆ ಬೆಂಗಳೂರು ತಂಡ ನೇರವಾಗಿ ಪ್ಲೇ ಆಫ್ ಹಂತಕ್ಕೆ ತಲುಪಲಿದೆ. ಹೀಗಾಗಿ ಟ್ವೀಟರ್ ನಲ್ಲಿ RCB = ರಾಯಲ್ ಚಾಲೆಂಜರ್ಸ್ ಬಾಂಬೆ ನ್ನುವುದು ಸಖತ್ ಟ್ರೆಂಡ್ ಆಗುತ್ತಿದ್ದು, ಆರ್ಸಿಬಿ ಅಭಿಮಾನಿಗಳು ಇಂದು ಮುಂಬೈ ಇಂಡಿಯನ್ಸ್ ತಂಡ ಗೆಲ್ಲಲಿ ಎಂದು ಕೇಳಿಕೋಳ್ಳುತ್ತಿದ್ದಾರೆ.
Tonight, RCB = Royal Challengers Bombay 😄 #MIvDC #IPL2022 pic.twitter.com/leQm04ozXG
— Wasim Jaffer (@WasimJaffer14) May 21, 2022
ಇದನ್ನೂ ಓದಿ: IPL 2022 Rohit Sharma: ರೋಹಿತ್ ಶರ್ಮಾ ಹೇಳಿಕೆಗೆ RCB ಅಭಿಮಾನಿಗಳ ಬೇಸರ, ಅಂತದೇನಂದ್ರು ಗೊತ್ತಾ ಹಿಟ್ಮ್ಯಾನ್?
ಬ್ಲೂ ಬಣ್ಣದಲ್ಲಿ ಬದಲಾದ ಆರ್ಸಿಬಿ ಲೋಗೊ:
ಇನ್ನು, ಆರ್ಸಿಬಿ ಇನ್ನೊಂದುಇ ಹೆಜ್ಜೆ ಮುಂದೆ ಹೋಗಿ, ತನ್ನ ಅಧಿಕೃತ ಟ್ವಿಟರ್ ನಲ್ಲಿ ಲೊಗೋ ಬದಲಾಗಿದೆ. ಹೌದು, ನೀಲಿ ಬಣ್ಣದಲ್ಲಿ ಲೋಗೋವನ್ನು ಬದಲಿಸಿದ್ದು, ಇಂದಿನ ಪಂದ್ಯ ರೋಹಿತ್ ಅವರಿಗೆ ಶುಭವಾಗಲಿ. ಇಂದಿನ ಪಂದ್ಯ ಮುಂಬೈ ಗೆಲ್ಲಲಿ ಎನ್ನುವುದು ಆರ್ಸಿಬಿ ಅಭಿಮಾನಿಗಲ ಆಶಯ ಎಂದು ಟ್ವಿಟರ್ ನಲ್ಲಿ ಪೋಸ್ಟ್ ಮಾಡಿದೆ. ಈ ಮೂಲಕ ಇಂದಿನ ಪಂದ್ಯ ಆರ್ಸಿಬಿ ತಂಡಕ್ಕೆ ಎಷ್ಟು ಮುಖ್ಯವಾಗಿದೆ ಎಂದು ತಿಳಿದುಬರುತ್ತಿದೆ.
“I am banking on Rohit to come good.” - Faf du Plessis
All RCB fans are, skipper! 😁 We’re all backing Ro and Co. against DC tonight. 💙😀#PlayBold #WeAreChallengers #IPL2022 #RCB #RedTurnsBlue pic.twitter.com/thXuybDxxz
— Royal Challengers Bangalore (@RCBTweets) May 21, 2022
ಹೌದು, ಈಗಾಗಲೇ ಗುಜರಾತ್, ರಾಜಸ್ಥಾನ್ ಮತ್ತು ಲಕ್ನೋ ತಂಡಗಳು ಫ್ಲೇ ಆಫ್ ತಲುಪಿದೆ. ಕ್ವಾಲಿಫೈಯರ್ ಹಂತಕ್ಕೆ ಇನ್ನೊಂದು ತಂಡದ ಅವಶ್ಯಕತೆ ಇದ್ದು, ರೇಸ್ ನಲ್ಲಿ ಡೆಲ್ಲಿ ಮತ್ತು ಆರ್ಸಿಬಿ ತಂಡ್ಗಳು ಇವೆ. ಈಗಾಗಲೇ 14 ಅಂಕಗಳೊಂದಿಗೆ ಡೆಲ್ಲಿ 5ನೇ ಸ್ಥಾನದಲ್ಲಿದೆ. ಇಂದಿನ ಪಂದ್ಯ ಗೆದ್ದಲ್ಲಿ 16 ಅಂಕಗಳೊಂದಿಗೆ 4ನೇ ಸ್ಥಾನಕ್ಕೆ ಜಿಗಿದು ಪ್ಲೇ ಆಫ್ ತಲುಪಲಿದೆ. ಆದರೆ ಡೆಲ್ಲಿ ಗೆದ್ದಲ್ಲಿ ಆರ್ಸಿಬಿ ತಂಡ ಟೂರ್ನಿಯಿಂದ ಬಹುತೇಕ ಹೊರಬೀಳಲಿದೆ. ಹೌದು, ಆರ್ಸಿಬಿ 16 ಅಂಕಗಳೊಂದಿಗೆ 4ನೇ ಸ್ಥಾನದಲ್ಲಿದ್ದು, ಡೆಲ್ಲಿ ಗೆದ್ದರೆ 16 ಅಂಕಗೊಂದಿಗೆ ಎರಡೂ ತಂಡಗಳು ಸಮಬಲ ಸಾಧಿಸುತ್ತದೆ. ಆಗ ರನ್ ರೇಟ್ ಪರಿಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ. ಒಂದೊಮ್ಮೆ ಇಂದಿನ ಪಂದ್ಯವನ್ನು ಡೆಲ್ಲಿ ಗೆದ್ದರೂ ಉತ್ತಮ ರನ್ ರೇಟ್ ಇರದಿದ್ದಲ್ಲಿ ಆರ್ಸಿಬಿ ಮುಂದಿನ ಹಂತಕ್ಕೆ ತಲುಪಲಿದೆ.
ಇದನ್ನೂ ಓದಿ: IPL 2022 DC vs MI: ಡೆಲ್ಲಿ ತಂಡಕ್ಕೆ ಮುಂಬೈ ಸವಾಲ್, ಇಂದಿನ ಪಂದ್ಯದ ಫಲಿತಾಂಶದ ಮೇಲೆ RCB ಫ್ಲೇ ಆಫ್ ಭವಿಷ್ಯ ನಿರ್ಧಾರ
MI vs DC ಸಂಭಾವ್ಯ ತಂಡ:
ಮುಂಬೈ ಇಂಡಿಯನ್ಸ್: ಇಶಾನ್ ಕಿಶನ್ (wk), ರೋಹಿತ್ ಶರ್ಮಾ (c), ಡೇನಿಯಲ್ ಸಾಮ್ಸ್, ತಿಲಕ್ ವರ್ಮಾ, ರಮಣದೀಪ್ ಸಿಂಗ್, ಟ್ರಿಸ್ಟಾನ್ ಸ್ಟಬ್ಸ್, ಟಿಮ್ ಡೇವಿಡ್, ಸಂಜಯ್ ಯಾದವ್ / ಬಸಿಲ್ ಥಂಪಿ, ಜಸ್ಪ್ರೀತ್ ಬುಮ್ರಾ, ರಿಲೆ ಮೆರೆಡಿತ್ / ಫ್ಯಾಬಿಯನ್ ಅಲೆನ್, ಮಯಾಂಕ್ ಮಾರ್ಕಂಡೆ.
ಡೆಲ್ಲಿ ಕ್ಯಾಪಿಟಲ್ಸ್: ಡೇವಿಡ್ ವಾರ್ನರ್, ಸರ್ಫರಾಜ್ ಖಾನ್/ಪೃಥ್ವಿ ಶಾ, ಮಿಚೆಲ್ ಮಾರ್ಷ್, ರಿಷಬ್ ಪಂತ್ (c & wk), ಲಲಿತ್ ಯಾದವ್, ರೋವ್‌ಮನ್ ಪೊವೆಲ್, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಅನ್ರಿಚ್ ನಾರ್ಟ್ಜೆ, ಖಲೀಲ್ ಅಹ್ಮದ್.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ