IPL 2022: RCB ತಂಡದ ಸಂಪೂರ್ಣ ವೇಳಾಪಟ್ಟಿ, ಮಾರ್ಚ್ 27ರಂದು ಮೊದಲ ಪಂದ್ಯ

ಬೆಂಗಳೂರು ತಂಡದ ಮುಂದಿನ ನಾಯಕ ಯಾರು ಎನ್ನುವುದನ್ನು ಆರ್ ಸಿಬಿ ಈವರೆಗೂ ಬಹಿರಂಗಪಡಿಸಿಲ್ಲ. ಈ ನಡುವೆ ಬಿಸಿಸಿಐ ಈಗಾಗಲೇ ಐಪಿಎಲ್ 2022ರ ವೇಳಾಪಟ್ಟಿ ಬಿಡುಗಡೆ ಮಾಡಿದ್ದು, ಆರ್​ ಸಿಬಿ ತಂಡದ ವೇಳಾಪಟ್ಟಿ ಈ ರೀತಿ ಇದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಇಂಡಿಯನ್ ಪ್ರೀಮಿಯರ್ ಲೀಗ್ 2022 (IPL 2022) ವೇಳಾಪಟ್ಟಿ ಈಗಾಗಲೇ ಬಿಡುಗಡೆಯಾಗಿದೆ. ಇದೇ ಮಾರ್ಚ್ 26 ರಿಂದ ಐಪಿಎಲ್ 2022 ರ ಮೊದಲ ಪಂದ್ಯ ನಡೆಯಲಿದೆ. ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ (CSK vs KKR) ಮುಖಾಮುಖಿಯಾಗಲಿದೆ. ಇನ್ನು, ಈ ಬಾರಿಯ ಐಪಿಎಲ್​ ನಲ್ಲಿ ಆದರೂ ಬೆಂಗಳೂರು ರಾಯಲ್ ಚಾಲೆಂಜರ್ಸ್ (RCB) ತಂಡ ಪ್ರಶಸ್ತಿ ಗೆಲ್ಲುತ್ತದೆ ಎಂಬ ಆಸೆಯಲ್ಲಿ ಅಭಿಮಾನಿಗಳಿದ್ದು, ತಂಡದ ಮುಂದಿನ ನಾಯಕ ಯಾರು ಎನ್ನುವುದನ್ನು ಆರ್ ಸಿಬಿ ಈವರೆಗೂ ಬಹಿರಂಗಪಡಿಸಿಲ್ಲ. ಈ ನಡುವೆ ಬಿಸಿಸಿಐ ಈಗಾಗಲೇ ಐಪಿಎಲ್ 2022ರ ವೇಳಾಪಟ್ಟಿ (Schedule) ಬಿಡುಗಡೆ ಮಾಡಿದ್ದು, ಆರ್​ ಸಿಬಿ ತಂಡದ ವೇಳಾಪಟ್ಟಿ ಈ ರೀತಿ ಇದೆ.

ಮಾರ್ಚ್ 12ಕ್ಕೆ RCB ನಾಯಕನ ಘೋಷಣೆ: 

2022r ಐಪಿಎಲ್ ನಿಂದ ಆರ್​ ಸಿಬಿ ತಂಡದ ನಾಯಕನಾಗಿದ್ದ ವಿರಾಟ್ ಕೊಹ್ಲಿ ನಾಯಕತ್ವದಿಂದ ಕೆಳಗಿಳಿದಿದ್ದು, ಮುಂದಿನ ನಾಯಕ ಯಾರಗಲಿದ್ದಾರೆ ಎಂಬ ಪ್ರಶ್ನೆ ಎಲ್ಲರಲ್ಲಿಯೂ ಮನೆಮಾಡಿದೆ. ಈ ನಡುವೆ ಬೆಂಗಳೂರು ಪ್ರಾಂಚೈಸಿ ಇದೇ ಮಾರ್ಚ್ 12ರಂದು ಸಂಜೆ 4 ಗಂಟೆಗೆ ಆರ್​ ಸಿಬಿ ತಂಡದ ಮುಂದಿನ ನಾಯಕ ಯಾರು ಎನ್ನುವುದಕ್ಕೆ ತೆರೆ ಎಳೆಯುವುದಾಗಿ ಅಧಿಕೃತವಾಗಿ ಘೋಷಿಸಿದೆ.

ಐಪಿಎಲ್ 2022ರ RCB ವೇಳಾಪಟ್ಟಿ:

ಮಾರ್ಚ್ 27 - ಪಂಜಾಬ್ ಕಿಂಗ್ಸ್ Vs  ರಾಯಲ್ ಚಾಲೆಂಜರ್ಸ್ ಬೆಂಗಳೂರು (ಸಮಯ: ರಾತ್ರಿ 7:30)

ಮಾರ್ಚ್ 30 - ರಾಯಲ್ ಚಾಲೆಂಜರ್ಸ್ ಬೆಂಗಳೂರು Vs ಕೋಲ್ಕತ್ತಾ ನೈಟ್ ರೈಡರ್ಸ್ (ಸಮಯ: ರಾತ್ರಿ 7:30)

ಏಪ್ರಿಲ್ 5 - ರಾಜಸ್ಥಾನ ರಾಯಲ್ಸ್ Vs ರಾಯಲ್ ಚಾಲೆಂಜರ್ಸ್ ಬೆಂಗಳೂರು (ಸಮಯ: ರಾತ್ರಿ 7:30)

ಏಪ್ರಿಲ್ 9 - ರಾಯಲ್ ಚಾಲೆಂಜರ್ಸ್ ಬೆಂಗಳೂರು Vs ಮುಂಬೈ ಇಂಡಿಯನ್ಸ್ (ಸಮಯ: ರಾತ್ರಿ 7:30)

ಏಪ್ರಿಲ್ 12 - ಚೆನ್ನೈ ಸೂಪರ್ ಕಿಂಗ್ಸ್ Vs ರಾಯಲ್ ಚಾಲೆಂಜರ್ಸ್ ಬೆಂಗಳೂರು (ಸಮಯ: ರಾತ್ರಿ 7:30)

ಏಪ್ರಿಲ್ 16 - ಡೆಲ್ಲಿ ಕ್ಯಾಪಿಟಲ್ಸ್ Vs ರಾಯಲ್ ಚಾಲೆಂಜರ್ಸ್ ಬೆಂಗಳೂರು (ಸಮಯ: ರಾತ್ರಿ 7:30)

ಏಪ್ರಿಲ್ 19 – ಲಕ್ನೋ ಸೂಪರ್ ಜೈಂಟ್ಸ್ Vs ರಾಯಲ್ ಚಾಲೆಂಜರ್ಸ್ ಬೆಂಗಳೂರು (ಸಮಯ: ರಾತ್ರಿ 7:30)

ಇದನ್ನೂ ಓದಿ: IPL 2022 ವೇಳಾಪಟ್ಟಿ ಬಿಡುಗಡೆ: ಮಾರ್ಚ್ 26 ರಂದು CSK-KKR ಮೊದಲ ಪಂದ್ಯ

ಏಪ್ರಿಲ್ 23 - ರಾಯಲ್ ಚಾಲೆಂಜರ್ಸ್ ಬೆಂಗಳೂರು Vs ಸನ್ ರೈಸರ್ಸ್ ಹೈದರಾಬಾದ್ (ಸಮಯ: ರಾತ್ರಿ 7:30)

ಏಪ್ರಿಲ್ 30 - ಗುಜರಾತ್ ಟೈಟಾನ್ಸ್ Vs ರಾಯಲ್ ಚಾಲೆಂಜರ್ಸ್ ಬೆಂಗಳೂರು (ಸಮಯ: ಮಧ್ಯಾಹ್ನ 3:30)

ಮೇ 4 - ರಾಯಲ್ ಚಾಲೆಂಜರ್ಸ್ ಬೆಂಗಳೂರು Vs ಚೆನ್ನೈ ಸೂಪರ್ ಕಿಂಗ್ಸ್ (ಸಮಯ: ರಾತ್ರಿ 7:30)

ಮೇ 8 - ಸನ್ ರೈಸರ್ಸ್ ಹೈದರಾಬಾದ್ Vs ರಾಯಲ್ ಚಾಲೆಂಜರ್ಸ್ ಬೆಂಗಳೂರು (ಸಮಯ: ಮಧ್ಯಾಹ್ನ 3:30)

ಮೇ 13 – ರಾಯಲ್ ಚಾಲೆಂಜರ್ಸ್ ಬೆಂಗಳೂರು Vs ಪಂಜಾಬ್ ಕಿಂಗ್ಸ್ (ಸಮಯ: ರಾತ್ರಿ 7:30)

ಮೇ 19 – ರಾಯಲ್ ಚಾಲೆಂಜರ್ಸ್ ಬೆಂಗಳೂರು Vs ಗುಜರಾತ್ ಟೈಟಾನ್ಸ್ (ಸಮಯ: ರಾತ್ರಿ 7:30)

ಈ ಬಾರಿ ಐಪಿಎಲ್​ ನಲ್ಲಿ 10 ತಂಡ:

ಐಪಿಎಲ್ 2022ರ 15ನೇ ಆವೃತ್ತಿಯಲ್ಲಿ ಬರೊಬ್ಬರಿ 10 ತಂಡಗಳು ಪ್ರಶಸ್ತಿಗಾಗಿ ಸೆಣಸಾಡಲಿವೆ. ಚೊಚ್ಚಲಬಾರಿಗೆ ಗುಜರಾತ್ ಟೈಟಾನ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಐಪಿಎಲ್​ ನಲ್ಲಿ ಆಡಲಿವೆ. ಪಂದ್ಯಗಳು ಮಾರ್ಚ್ 26 ರಿಂದ ಪ್ರಾರಂಭವಾಗಲಿದ್ದು, ಫೈನಲ್​ ಪಂದ್ಯವು ಮೇ 29 ರಂದು ನಡೆಯಲಿದೆ ಎಂದು ಬಿಸಿಸಿಐ ತಿಳಿಸಿದೆ.

ಇದನ್ನೂ ಓದಿ: IPL: ಐಪಿಎಲ್ 15ನೇ ಅವೃತ್ತಿಯ ಮಹಾ ಕಾದಾಟಕ್ಕೆ ನಾಯಕನ ಆಯ್ಕೆ ಮಾಡಿದ 9 ತಂಡಗಳು

ಪ್ರತಿ ಸಲದಂತೆಯೇ ಈ ಬಾರಿಯೂ ಟೂರ್ನಿಯಲ್ಲಿ ವಾರಾಂತ್ಯದ ದಿನಗಳಲ್ಲಿ 2 ಪಂದ್ಯಗಳನ್ನು ಆಯೋಜಿಸಲಾಗಿದೆ. ಆದರೂ ಹೆಚ್ಚಿನ ಪಂದ್ಯಗಳು ರಾತ್ರಿ 7:30ರಿಂದ ಆರಂಭವಾಗಲಿದ್ದು,  ಈ ಬಾರಿ ಒಟ್ಟು 12 ಡಬಲ್ ಹೆಡರ್ ಪಂದ್ಯಗಳು ಅಂದರೆ ಒಂದೇ ದಿನ ಎರಡು ಪಂದ್ಯಗಳು ನಡೆಯಲಿವೆ.
Published by:shrikrishna bhat
First published: