ಜಡೇಜಾಗೆ ನೀಡಿದ್ದ ಪಂದ್ಯಶ್ರೇಷ್ಠ ಪ್ರಶಸ್ತಿಯ 1 ಲಕ್ಷ ರೂ. ಚೆಕ್ ಕಸದ ತೊಟ್ಟಿಯಲ್ಲಿ ಪತ್ತೆ

9.5 ಓವರ್ ಬೌಲಿಂಗ್ ಮಾಡಿದ ಜಡೇಜಾ 1 ಮೇಡನ್ ಜೊತೆ ಕೇವಲ 34 ರನ್ ನೀಡಿ 4 ವಿಕೆಟ್ ಕಬಳಿಸಿದ್ದರು. ಇವರ ಈ ಸಾಧನೆಗೆ ಪೇಟಿಎಂ ಪ್ರಾಯೋಜಕತ್ವದಿಂದ 1 ಲಕ್ಷ ರೂ. ಗಳ ದೊಡ್ಡದಾದ ಡಮ್ಮಿ ಚೆಕ್​​ ನೀಡಿ ಪಂದ್ಯಶ್ರೇಷ್ಠ ಪ್ರಶಸ್ತಿ ನೀಡಲಾಗಿತ್ತು. ಆದರೆ ಈ ಚೆಕ್ ಸದ್ಯ ಕಸದ ತೊಟ್ಟಿಯಲ್ಲಿ ಪತ್ತೆಯಾಗಿದೆ.

Vinay Bhat | news18
Updated:November 12, 2018, 3:13 PM IST
ಜಡೇಜಾಗೆ ನೀಡಿದ್ದ ಪಂದ್ಯಶ್ರೇಷ್ಠ ಪ್ರಶಸ್ತಿಯ 1 ಲಕ್ಷ ರೂ. ಚೆಕ್ ಕಸದ ತೊಟ್ಟಿಯಲ್ಲಿ ಪತ್ತೆ
ಜಡೇಜಾಗೆ ನೀಡಿದ್ದ ಚೆಕ್ ಕಸದ ತೊಟ್ಟಿಯಲ್ಲಿ
  • Advertorial
  • Last Updated: November 12, 2018, 3:13 PM IST
  • Share this:
ನ್ಯೂಸ್ 18 ಕನ್ನಡ

ಪ್ರವಾಸಿ ವೆಸ್ಟ್​ ಇಂಡೀಸ್ ವಿರುದ್ಧ ಟೀಂ ಇಂಡಿಯಾ ಈಗಾಗಲೇ ಟೆಸ್ಟ್​, ಏಕದಿನ ಹಾಗೂ ಟಿ-20 ಸರಣಿನ್ನು ಗೆದ್ದು ಬೀಗಿದೆ. ಈ ಮಧ್ಯೆ 5ನೇ ಏಕದಿನ ಪಂದ್ಯದಲ್ಲಿ ಜಡೇಜಾಗೆ ನೀಡಿದ್ದ ಚೆಕ್ ವಿಚಾರ ಸದ್ಯ ಎಲ್ಲೆಡೆ ಹರಿದಾಡುತ್ತಿದೆ.

ವಿಂಡೀಸ್ ವಿರುದ್ಧದ 5ನೇ ಏಕದಿನ ಪಂದ್ಯದಲ್ಲಿ ಭಾರತ 9 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿತ್ತು. ಕೆರಿಬಿಯನ್ನರನ್ನು ಕೇವಲ 104 ರನ್​ಗೆ ಆಲೌಟ್ ಮಾಡಿ ಭಾರತ ಸರಣಿಯನ್ನು ಕೈವಶ ಮಾಡಿಕೊಂಡಿತ್ತು. ವೆಸ್ಟ್​ ಇಂಡೀಸ್ ತಂಡವನ್ನು ಅಲ್ಪ ಮೊತ್ತಕ್ಕೆ ಕಟ್ಟಿಹಾಕಲು ನೆರವಾಗಿದ್ದು ರವೀಂದ್ರ ಜಡೇಜಾ. 9.5 ಓವರ್ ಬೌಲಿಂಗ್ ಮಾಡಿದ ಜಡ್ಡು 1 ಮೇಡನ್ ಜೊತೆ ಕೇವಲ 34 ರನ್ ನೀಡಿ 4 ವಿಕೆಟ್ ಕಬಳಿಸಿದ್ದರು. ಇವರ ಈ ಸಾಧನೆಗೆ ಪೇಟಿಎಂ ಪ್ರಾಯೋಜಕತ್ವದಿಂದ 1 ಲಕ್ಷ ರೂ. ಗಳ ದೊಡ್ಡದಾದ ಡಮ್ಮಿ ಚೆಕ್​​ ನೀಡಿ ಪಂದ್ಯಶ್ರೇಷ್ಠ ಪ್ರಶಸ್ತಿ ನೀಡಲಾಗಿತ್ತು.

ಇದನ್ನೂ ಓದಿ: ಮಿಂಚಿದ ಮಿಥಾಲಿ: ಪಾಕಿಸ್ತಾವನ್ನು ಬಗ್ಗುಬಡಿದ ಭಾರತದ ವನಿತೆಯರು

ಆದರೆ, ಜಡೇಜಾ ಅವರಿಗೆ ನೀಡಿದ್ದ ಡಮ್ಮಿ ಚೆಕ್ ಈಗ ಕಸದ ತೊಟ್ಟಿಯಲ್ಲಿ ಪತ್ತೆಯಾಗಿದೆ. ಪ್ರಶಸ್ತಿ ವಿತರಣೆ ಬಳಿಕ ಮೈದಾನವನ್ನು ಸ್ವಚ್ಛ ಗೊಳಿಸುವ ವೇಳೆ ಈ ದೊಡ್ಡದಾದ ಚೆಕ್​​​ ಅನ್ನು ಕೂಡ ಹೊರ ಹಾಕಲಾಗಿದೆ. ಇದನ್ನು ಸ್ವಚ್ಛತಾ ಕೆಲಸಗಾರರೊಬ್ಬರು ಗಮನಿಸಿದ್ದಾರೆ. ಅಷ್ಟೇ ಅಲ್ಲದೆ ಈ ವಿಚಾರ ಎನ್​ಜಿಒ ಸಂಸ್ಥೆಗೆ ತಿಳಿದಿದ್ದು, ಫೋಟೋವನ್ನು ತನ್ನ ಫೇಸ್​​ಬುಕ್​ ಖಾತೆಯಲ್ಲಿ ಹಂಚಿ ಕೊಂಡಿದೆ. ಈ ಘಟನೆಗೆ ಸಾಕಷ್ಟು ಕಮೆಂಟ್​ಗಳು ಬರುತ್ತಿದ್ದು, ಪರಿಸರವಾದಿಗಳು ಬಿಸಿಸಿಐ ವಿರುದ್ಧ ಕಿಡಿ ಕಾರಿದ್ದಾರೆ.First published:November 12, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ