• ಹೋಂ
  • »
  • ನ್ಯೂಸ್
  • »
  • ಕ್ರೀಡೆ
  • »
  • IPL 2023 CSK: ಧೋನಿಯಿಂದಾಗಿ ಸಿಎಸ್‌ಕೆ ತೊರೆಯಲು ಬಯಸಿದ್ರಾ ಜಡೇಜಾ? ಏನಿದು ಶಾಕಿಂಗ್ ನ್ಯೂಸ್?

IPL 2023 CSK: ಧೋನಿಯಿಂದಾಗಿ ಸಿಎಸ್‌ಕೆ ತೊರೆಯಲು ಬಯಸಿದ್ರಾ ಜಡೇಜಾ? ಏನಿದು ಶಾಕಿಂಗ್ ನ್ಯೂಸ್?

ಧೋನಿ-ಜಡೇಜಾ

ಧೋನಿ-ಜಡೇಜಾ

IPL 2023: ಜಡೇಜಾ ಅವರು ತಂಡಕ್ಕೆ ಬಂದು ಸೇರುವ ಮುಂಚೆ ನಾಯಕ ಎಂಎಸ್ ಧೋನಿ ಅವರೊಂದಿಗೆ ಸುದೀರ್ಘ ಮಾತುಕತೆ ನಡೆಸಿದ್ದಾರಂತೆ. ಅವರ ಮಧ್ಯೆ ಇದ್ದ ತಪ್ಪು ತಿಳುವಳಿಕೆಯನ್ನು ಈಗ ಇಬ್ಬರು ಬಗೆಹರಿಸಿಕೊಂಡಿದ್ದಾರಂತೆ ಎಂದು ಹೇಳಲಾಗುತ್ತಿದೆ.

  • Trending Desk
  • 5-MIN READ
  • Last Updated :
  • New Delhi, India
  • Share this:

ಇನ್ನೇನು ಕೆಲವೇ ದಿನಗಳಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ (IPL 2023)  16ನೇ ಸೀಸನ್ ಶುರುವಾಗಲಿದ್ದು, ಎಲ್ಲಾ ಆಟಗಾರರು ಬಹುತೇಕವಾಗಿ ಅವರ ಫ್ರಾಂಚೈಸಿ ತಂಡಗಳನ್ನು ಬಂದು ಸೇರಿಕೊಂಡು ಅಭ್ಯಾಸದಲ್ಲಿ ನಿರತರಾಗಿದ್ದಾರೆ. ಐಪಿಎಲ್ ನಲ್ಲಿ ಆಡಲಿರುವ 10 ತಂಡಗಳಲ್ಲಿ, ಕ್ಯಾಪ್ಟನ್ ಕೂಲ್ ಮಹೇಂದ್ರ ಸಿಂಗ್ ಧೋನಿ ಅವರ ಚೆನ್ನೈ ಸೂಪರ್ ಕಿಂಗ್ಸ್ (CSK) ಅಭಿಮಾನಿಗಳ ನೆಚ್ಚಿನ ತಂಡವಾಗಿ ಉಳಿದಿದೆ.  41 ವರ್ಷ ವಯಸ್ಸಿನ ಧೋನಿ (Dhoni) ಅವರ ಆಕ್ರಮಣಕಾರಿ ಬ್ಯಾಟಿಂಗ್ ಮತ್ತು ಶಾಂತ ಸ್ವಭಾವದ ನಾಯಕತ್ವವನ್ನು ಮತ್ತೊಮ್ಮೆ ನೋಡಿ ಕಣ್ತುಂಬಿ ಕೊಳ್ಳಲು ಕ್ರಿಕೆಟ್ ಅಭಿಮಾನಿಗಳು ಕಾತುರತೆಯಿಂದ ಕಾಯುತ್ತಿದ್ದಾರೆ. ಧೋನಿ ಅವರ ನಾಯಕತ್ವದಲ್ಲಿ ಸಿಎಸ್‌ಕೆ ತಂಡವು ನಾಲ್ಕು ಬಾರಿ ಐಪಿಎಲ್ ಟ್ರೋಫಿಯನ್ನು ಮಡಿಲಿಗೆ ಹಾಕಿಕೊಂಡಿದ್ದು, ಒಂಬತ್ತು ಬಾರಿ ಐಪಿಎಲ್ ಫೈನಲ್ ಪಂದ್ಯಗಳನ್ನು ಆಡಿದೆ ಅಂತ ಹೇಳಬಹುದು ಆಡಿದೆ.


ಸಿಎಸ್‌ಕೆ ತಂಡವನ್ನು ಸೇರಿಕೊಂಡ ಜಡೇಜಾ:


ಸಿಎಸ್‌ಕೆ ತಂಡದ ಇನ್ನಿತರೆ ಆಟಗಾರರ ಬಗ್ಗೆ ನಾವು ಆಲೋಚನೆ ಮಾಡಿದಾಗ, ನಮಗೆ ಮೊದಲು ನೆನಪಿಗೆ ಬರುವ ಆಟಗಾರರಲ್ಲಿ ಸ್ಟಾರ್ ಆಲ್​ರೌಂಡರ್​ ರವೀಂದ್ರ ಜಡೇಜಾ ಮೊದಲಿಗರು. ಈಗಾಗಲೇ ಮುಂಬರುವ ಐಪಿಎಲ್ 2023 ಸೀಸನ್ ಅನ್ನು ಆಡಲು ರವೀಂದ್ರ ಜಡೇಜಾ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಸೇರಿಕೊಂಡಿದ್ದಾರೆ. ಆದರೆ, ಈ ಸ್ಟಾರ್ ಆಲ್​ರೌಂಡರ್​ ತನ್ನ ಫ್ರ್ಯಾಂಚೈಸಿ ತಂಡವನ್ನು ಬಂದು ಸೇರುವ ಮುಂಚೆ ಒಂದು ದೊಡ್ಡ ನಾಟಕವೇ ನಡೆದಿತ್ತು.


ಜಡೇಜಾ ಸಿಎಸ್‌ಕೆ ತಂಡವನ್ನು ಸೇರುವ ಮುನ್ನ ಏನೆಲ್ಲಾ ಆಯಿತು?


ಜಡೇಜಾ ಅವರು ತಂಡಕ್ಕೆ ಬಂದು ಸೇರುವ ಮುಂಚೆ ನಾಯಕ ಎಂಎಸ್ ಧೋನಿ ಅವರೊಂದಿಗೆ ಸುದೀರ್ಘ ಮಾತುಕತೆ ನಡೆಸಿದ್ದಾರಂತೆ. ಅವರ ಮಧ್ಯೆ ಇದ್ದ ತಪ್ಪು ತಿಳುವಳಿಕೆಯನ್ನು ಈಗ ಇಬ್ಬರು ಬಗೆಹರಿಸಿಕೊಂಡಿದ್ದಾರಂತೆ ಎಂದು ಹೇಳಲಾಗುತ್ತಿದೆ. ಇವರಿಬ್ಬರು ಪರಸ್ಪರ ಮಾತಾಡುವ ಮುಂಚೆ ತಂಡದ ಅನುಭವಿ ಸಿಇಒ ಕಾಶಿ ವಿಶ್ವನಾಥನ್ ಅವರೊಂದಿಗೆ ಮಾತನಾಡಿದ್ದಾರಂತೆ.


ಇದನ್ನೂ ಓದಿ: MS Dhoni: ಪ್ರ್ಯಾಕ್ಟೀಸ್​ ಮಾಡೋಕೆ ಗ್ರೌಂಡ್​ಗೆ ಬಂದ ಧೋನಿ, ಕಿಕ್ಕಿರಿದು ಸೇರಿದ್ದ ಅಭಿಮಾನಿಗಳಿಂದ ಜೈಕಾರ!


ಐಪಿಎಲ್ ನ 16ನೇ ಸೀಸನ್ ಪ್ರಾರಂಭವಾಗುವ ಮೊದಲು ಜಡೇಜಾ ಅವರು ಧೋನಿ ಮತ್ತು ಕಾಶಿ ಅವರ ಜೊತೆ ಅವರನ್ನು ಬೇಸರಗೊಳಿಸಿದ ಅನೇಕ ವಿಷಯಗಳ ಬಗ್ಗೆ ಮತ್ತು ಜಡೇಜಾ ಅವರು ಏನನ್ನು ನಿರೀಕ್ಷಿಸುತ್ತಾರೆ ಎಂಬುದರ ಬಗ್ಗೆ ಸ್ಪಷ್ಟವಾಗಿ ತಿಳಿಸಿದರಂತೆ ಎಂದು ಹೇಳಲಾಗುತ್ತಿದೆ.


ಧೋನಿ ಜೊತೆ ಮಾತಾಡಿದ ಜಡೇಜಾ:


ಧೋನಿ ಮತ್ತು ವಿಶ್ವನಾಥನ್ ಅವರು ಜಡೇಜಾ ಅವರ ನೇಮಕ ಮತ್ತು ಕಳೆದ ಋತುವಿನ ಮಧ್ಯದಲ್ಲಿ ತಂಡದ ನಾಯಕತ್ವದಿಂದ ವಜಾ ಮಾಡಿದ ಘಟನೆಗಳ ಬಗ್ಗೆ ಇದ್ದ ಅನೇಕ ಸಂದೇಹಗಳನ್ನು ಮಾತಾಡಿ ಪರಿಹರಿಸಿಕೊಂಡರು. ಕಳೆದ ಆವೃತ್ತಿಯಲ್ಲಿ ಈ ತಂಡವು ಕೇವಲ 4 ಪಂದ್ಯಗಳನ್ನು ಗೆದ್ದು ಪಾಯಿಂಟ್ಸ್ ಟೇಬಲ್ ನಲ್ಲಿ ಒಂಬತ್ತನೇ ಸ್ಥಾನದಲ್ಲಿತ್ತು.




ಜಡೇಜಾ ಒಂದೆರಡು ಕಾರಣಗಳಿಗಾಗಿ ತುಂಬಾನೇ ಅಸಮಾಧಾನಗೊಂಡಿದ್ದರಂತೆ. ಅವರು ತಮ್ಮ ನಾಯಕತ್ವದಿಂದ ವಜಾ ಮಾಡಿದ್ದು ಮತ್ತು ಅವರ ಕಾರ್ಯಕ್ಷಮತೆಯ ಬಗ್ಗೆ ಸಂದೇಹ ಪಟ್ಟಿದ್ದನ್ನು ನೋಡಿ ಕೋಪಗೊಂಡಿದ್ದರು. ಆ ಆವೃತ್ತಿಯಲ್ಲಿ ಜಡೇಜಾ ಅವರು ಆಡಿದ 10 ಪಂದ್ಯಗಳಲ್ಲಿ 19ರ ಸರಾಸರಿಯಲ್ಲಿ 116 ರನ್ ಗಳಿಸಿ, 5 ವಿಕೆಟ್ ಮಾತ್ರ ಪಡೆದಿದ್ದರು.


ಮಾಹಿ ವಿವರಣೆ ಕೇಳಿದ ಬಳಿಕವೇ ತಂಡದಲ್ಲಿ ಆಡಲು ಒಪ್ಪಿಕೊಂಡ್ರಂತೆ ಜಡ್ಡು:


ಸಿಎಸ್‌ಕೆ ತೊರೆಯಲು ಮಾಡಿದ್ದ ನಿರ್ಧಾರದಲ್ಲಿ ಧೋನಿ ಅವರ ನಾಯಕತ್ವದ ಬಗ್ಗೆ ನೀಡಿದ ಹೇಳಿಕೆಯೂ ದೊಡ್ಡ ಪಾತ್ರ ವಹಿಸಿತ್ತು ಅಂತ ಹೇಳಲಾಗುತ್ತಿದೆ. ಅದು ಅನವಶ್ಯಕವೆಂದು ಅವರಿಗೆ ಅನ್ನಿಸಿದ್ದು, ಮಾಹಿ ತನ್ನ ಬಗ್ಗೆ ಇಂತಹ ಮಾತುಗಳನ್ನು ಹೇಳುತ್ತಾರೆಂದು ಎಂದಿಗೂ ನಿರೀಕ್ಷಿಸಿರಲಿಲ್ಲ ಎಂದು ಹೇಳಿದ್ದರಂತೆ ಜಡೇಜಾ.

top videos


    ಆದರೆ ಈಗ ಜಡೇಜಾಗೆ ಧೋನಿ ಅವರು ಎಲ್ಲವನ್ನೂ ಸ್ಪಷ್ಟವಾಗಿ ವಿವರಿಸಿದ್ದಾರೆ, ನಂತರವೇ ಜಡೇಜಾ ಐಪಿಎಲ್ 2023ರಲ್ಲಿ ತಂಡಕ್ಕಾಗಿ ಆಡಲು ಒಪ್ಪಿಕೊಂಡರಂತೆ ಎಂದು ಹೇಳಲಾಗುತ್ತಿದೆ.

    First published: