ಸೆಪ್ಟೆಂಬರ್ನಲ್ಲಿ ಏಷ್ಯಾಕಪ್ನಲ್ಲಿ ಮೊಣಕಾಲಿನ ಗಾಯದಿಂದಾಗಿ ಭಾರತದ ಸ್ಟಾರ್ ಆಲ್ರೌಂಡರ್ ರವೀಂದ್ರ ಜಡೇಜಾ (Ravindra Jadeja) ಕ್ರಿಟ್ನಿಂದ ಹೊರಗುಳಿದಿದ್ದರು. ಇದರ ನಡುವೆ ಅವರ ಪತ್ನಿ ರಿವಾಬಾ ಜಡೇಜಾ ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ (Gujarat Election 2022) ಸ್ಪರ್ಧಿಸಿದ್ದರು. ಅವರು ಜಾಮ್ನಗರ ಉತ್ತರ ಕ್ಷೇತ್ರದಿಂದ ಭಾರತೀಯ ಜನತಾ ಪಕ್ಷದಿಂದ (BJP) ಸ್ಪರ್ಧಿಸಿದ್ದರು. ಅಲ್ಲದೇ ಚುನಾವಣೆಯಲ್ಲಿ 57% ಕ್ಕಿಂತ ಹೆಚ್ಚು ಮತಗಳನ್ನು ಗಳಿಸುವ ಮೂಲಕ ತಮ್ಮ ಪ್ರತಿಸ್ಪರ್ಧಿ ಆಮ್ ಆದ್ಮಿ ಪಕ್ಷದ (AAP) ಅಭ್ಯರ್ಥಿ ಕರ್ಶನ್ಭಾಯ್ ಕಾರ್ಮುರ್ ಅವರನ್ನು ಸೋಲಿಸಿ MLA ಆಗಿ ಆಯ್ಕೆ ಆಗಿದ್ದಾರೆ. ಪತ್ನಿ ಚುನಾವಣೆಯಲ್ಲಿ ಗೆದ್ದ ಬಳಿಕ ಜಡೇಜಾ ಅವರು ರಿವಾಬಾ ಅವರಿಗೆ ಟ್ವೀಟ್ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ. ಅಲ್ಲದೇ ಅವರ ವಿಡಿಯೋ ಒಂದು ಫೋಟೋ ವೈರಲ್ ಆಗಿದ್ದು, ಎಲ್ಲಡೆ ತೀರ್ವ ಆಕ್ರೋಶ ವ್ಯಕ್ತವಾಗುತ್ತಿದೆ.
ಪತ್ನಿಗೆ ಶುಭಕೋರಿದ ಜಡ್ಡು:
ರವೀಂದ್ರ ಜಡೇಜಾ ಅವರು ರಿವಾಬಾ ಅವರೊಂದಿಗಿನ ಚಿತ್ರವನ್ನು ಹಂಚಿಕೊಂಡಿದ್ದಾರೆ ಮತ್ತು ಶೀರ್ಷಿಕೆಯಲ್ಲಿ ಗುಜರಾತಿ ಭಾಷೆಯಲ್ಲಿ ಸಂದೇಶವನ್ನು ಬರೆದಿದ್ದಾದ್ದು, “ಹಲೋ ಎಂಎಲ್ಎ, ನೀವು ನಿಜವಾಗಿಯೂ ಅದಕ್ಕೆ ಅರ್ಹರು, ಜಾಮ್ನಗರದ ಜನರು ಗೆದ್ದಿದ್ದಾರೆ. ನನ್ನ ಹೃದಯದಿಂದ ಎಲ್ಲಾ ಜನರಿಗೆ ನನ್ನ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ. ಜಾಮನಗರದ ಕಾಮಗಾರಿಗಳು ಉತ್ತಮವಾಗಿ ನಡೆಯಲಿ. ಜೈ ಮಾತಾಜಿ" ಎಂದು ಬರೆದಿದ್ದಾರೆ.
Hello MLA you truly deserve it. જામનગર ની જનતા નો વિજય થયો છે. તમામ જનતા નો ખુબ ખુબ દીલથી આભાર માનુ છુ. જામનગર ના કામો ખુબ સારા થાય એવી માં આશાપુરા ને વિનંતી. જય માતાજી🙏🏻 #મારુજામનગર pic.twitter.com/2Omuup5CEW
— Ravindrasinh jadeja (@imjadeja) December 9, 2022
ಆದರೆ, ಪತ್ನಿಯ ಗೆಲುವಿನ ಸಂದರ್ಭದಲ್ಲಿ ರವೀಂದ್ರ ಜಡೇಜಾ ತೋರಿದ ರೀತಿ ಇದೀಗ ಟೀಕೆಗೆ ಗುರಿಯಾಗಿದೆ. ರಿವಾಬಾ ಗೆಲ್ಲುತ್ತಿದ್ದಂತೆ, ಜಡೇಜಾ ಗಾಳಿಯಲ್ಲಿ ಹಣ ಎಸೆದು ಸಂಭ್ರಮಿಸಿದರು. ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಆದರೆ, ಕೆಲವರು ಜಡೇಜಾ ಅವರ ಈ ನಡೆಯನ್ನು ಟೀಕಿಸುತ್ತಿದ್ದಾರೆ. ಹಣ ನೀಡದೆ ಎಸೆದು ಹೋಗುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
— Out Of Context Cricket (@GemsOfCricket) December 9, 2022
ಜಡೇಜಾ-ರಿವಾಬಾ ವಿವಾಹ:
ರಿವಾಬಾ ರವೀಂದ್ರ ಜಡೇಜಾ ಅವರನ್ನು 17 ಏಪ್ರಿಲ್ 2016 ರಂದು ರಾಜ್ಕೋಟ್ನಲ್ಲಿ ಖಾಸಗಿ ಸಮಾರಂಭದಲ್ಲಿ ಸಂಬಂಧಿಕರು ಮತ್ತು ಆಪ್ತ ಸ್ನೇಹಿತರ ಸಮ್ಮುಖದಲ್ಲಿ ವಿವಾಹವಾದರು. ಒಂದು ವರ್ಷದ ನಂತರ, ದಂಪತಿಗಳು ನಿಧಾನ್ಯ ಎಂಬ ಮಗಳಿಗೆ ಪೋಷಕರಾದರು. ದೀಪಿಕಾ ಪಡುಕೋಣೆ ಜೊತೆಗೆ ಸಂಜಯ್ ಲೀಲಾ ಬನ್ಸಾಲಿಯವರ ಪದ್ಮಾವತ್ ಚಿತ್ರದ ವಿರುದ್ಧ 2018 ರಲ್ಲಿ ರಾಷ್ಟ್ರವ್ಯಾಪಿ ಪ್ರತಿಭಟನೆಯಲ್ಲಿ ರಿವಾಬಾ ಭಾಗವಹಿಸಿದ್ದರು. ಅವರ ಒಳಗೊಳ್ಳುವಿಕೆಯೊಂದಿಗೆ, ಅವರು ಬಿಜೆಪಿಯ ಗಮನ ಸೆಳೆದರು ಮತ್ತು ಕರ್ಣಿ ಸೇನೆಯ ಮಹಿಳಾ ವಿಭಾಗದ ಮುಖ್ಯಸ್ಥೆಯಾಗಿ ನೇಮಕಗೊಂಡರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ