• Home
  • »
  • News
  • »
  • sports
  • »
  • Ravindra Jadeja: ಜಡೇಜಾ ಪತ್ನಿ-ತಂಗಿ ನಡುವೆ ಎಲೆಕ್ಷನ್ ಫೈಟ್​, ಅತ್ತಿಗೆ ವಿರುದ್ಧ ಆರೋಪಗಳ ಸುರಿಮಳೆಗೈದ ಜಡ್ಡು ಸಹೋದರಿ

Ravindra Jadeja: ಜಡೇಜಾ ಪತ್ನಿ-ತಂಗಿ ನಡುವೆ ಎಲೆಕ್ಷನ್ ಫೈಟ್​, ಅತ್ತಿಗೆ ವಿರುದ್ಧ ಆರೋಪಗಳ ಸುರಿಮಳೆಗೈದ ಜಡ್ಡು ಸಹೋದರಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Gujarat Elections 2022: 2019ರ ಲೋಕಸಭೆ ಚುನಾವಣೆಗೆ ಮುನ್ನ ರಿವಾಬಾ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಚುನಾವಣಾ ಅಫಿಡವಿಟ್‌ನಲ್ಲಿ ಉಲ್ಲೇಖಿಸಿರುವ ವಿವರಗಳ ಪ್ರಕಾರ, ರಿವಾಬಾ ಜಡೇಜಾ ಅವರ ಆಸ್ತಿ 97 ಕೋಟಿ ರೂ. ಎಂದು ತಿಳಿಸಿದ್ದಾರೆ. ಇದರ ನಡುವೆ ಜಡ್ಡು ತಂಗಿ ತಮ್ಮ ಅತ್ತಿಗೆಯ ವಿರುದ್ಧವೇ ವಾಗ್ದಾಳಿ ನಡೆಸುತ್ತಿದ್ದಾರೆ.

ಮುಂದೆ ಓದಿ ...
  • News18 Kannada
  • Last Updated :
  • New Delhi, India
  • Share this:

ಅಹಮದಾಬಾದ್: ಗುಜರಾತ್ ವಿಧಾನಸಭಾ ಚುನಾವಣೆ (Gujarat Elections) ಅಖಾಡ ರಂಗೇರಿದೆ, ಅಭ್ಯರ್ಥಿಗಳ ಪ್ರಚಾರ ಜೋರಾಗಿದೆ. ರಾಜ್ಯದಲ್ಲಿ ಕುತೂಹಲ ಕೆರಳಿಸಿರುವ ಕ್ಷೇತ್ರವೆಂದರೆ ಜಾಮ್‌ನಗರ ಉತ್ತರ ಕ್ಷೇತ್ರ (Jamnagar North Constituency).ಈ ಕ್ಷೇತ್ರದಲ್ಲಿ ಭಾರತೀಯ ಕ್ರಿಕೆಟಿಗ ರವೀಂದ್ರ ಜಡೇಜಾ (Ravindra Jadeja) ಕುಟುಂಬದ ನಡುವೆ ರಾಜಕೀಯ ಪೈಪೋಟಿ ನಡೆಯುತ್ತಿದೆ. ಒಂದೆಡೆ ಜಡೇಜಾ ಪತ್ನಿ ರಿವಾಬಾ ಜಡೇಜಾ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದು (Rivaba Jadeja) ಭರದಿಂದ ಪ್ರಚಾರ ನಡೆಸುತ್ತಿದ್ದರೆ, ಮತ್ತೊಂದೆಡೆ ಜಡೇಜಾ ಅವರ ಸಹೋದರಿ ನಯನಾಬಾ ಜಡೇಜಾ ಕಾಂಗ್ರೆಸ್‌ ಪಕ್ಷದ ಪರ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಇದರ ನಡುವೆ ಪ್ರಚಾರದ ವೇಳೆ ಜಡ್ಡು ತಂಗಿ ಸ್ವತಃ ತಮ್ಮ ಅತ್ತಿಗೆಯ ವಿರುದ್ಧವೇ ವಾಗ್ದಾಳಿ ನಡೆಸಿದ್ದಾರೆ.


ಅತ್ತಿಗೆಯ ವಿರುದ್ಧವೇ ವಾಗ್ದಾಳಿ ನಡೆಸಿದ ನಾದಿನಿ:


ಇನ್ನು, ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಟೀಂ ಇಂಡಿಯಾ ಆಲ್‌ರೌಂಡರ್ ರವೀಂದ್ರ ಜಡೇಜಾ ಕುಟುಂಬ ಚರ್ಚೆಗೆ ಗ್ರಾಸವಾಗಿದೆ. ಜಡೇಜಾ ಪತ್ನಿ ರಿವಾಭಾ ಜಡೇಜಾ ಬಿಜೆಪಿಯಿಂದ ಶಾಸಕಿಯಾಗಿ ಸ್ಪರ್ಧಿಸುತ್ತಿರುವುದರಿಂದ ಇದೇ ಕ್ಷೇತ್ರದಲ್ಲಿ ಅವರ ಸಹೋದರಿ ನೈನಾ ಕಾಂಗ್ರೆಸ್ ಪರವಾಗಿ ಪ್ರಚಾರ ನಡೆಸುತ್ತಿದ್ದಾರೆ. ಜಾಮ್‌ನಗರ ಉತ್ತರ ಕ್ಷೇತ್ರದಲ್ಲಿ ಚುನಾವಣಾ ಬಿಸಿ ಹೆಚ್ಚಿದೆ. ಜೊತೆಗೆ ಮಾತಿನ ಸಮರ ನಡೆಯುತ್ತಿದೆ. ಇತ್ತೀಚೆಗೆ ಅವರ ಸಹೋದರಿ ನೈನಾ ಜಡೇಜಾ ಅವರು ರಿವಾಬಾ ಜಡೇಜಾ ಅವರನ್ನು ಟೀಕಿಸಿದ್ದಾರೆ. ಮಕ್ಕಳನ್ನು ಚುನಾವಣಾ ಪ್ರಚಾರಕ್ಕೆ ಬಳಸಿಕೊಳ್ಳಲಾಗುತ್ತಿದೆ ಎಂದು ಟೀಕಿಸಿದ್ದಾರೆ. ಈ ಕುರಿತು ಚುನಾವಣಾಧಿಕಾರಿಗಳಿಗೆ ದೂರು ನೀಡಲಾಗಿದೆ. ಮಕ್ಕಳನ್ನು ಅಡ್ಡಿಪಡಿಸುವ ಮೂಲಕ ರಿವಾಬಾ ಲಾಭ ಪಡೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ನೈನಾ ಆಕ್ರೋಶ ವ್ಯಕ್ತಪಡಿಸಿದರು. ಮತ್ತೊಂದೆಡೆ, ಬಾಲಕಾರ್ಮಿಕ ವ್ಯವಸ್ಥೆಯನ್ನು ಉತ್ತೇಜಿಸುವುದು ಅವರ ವ್ಯವಹಾರ ಶೈಲಿಯಾಗಿದೆ ಎಂದು ನೈನಾ ವಾಗ್ದಾಳಿ ನಡೆಸಿದ್ದಾರೆ.


ರಿವಾಬಾ ಅವರನ್ನು ಪ್ರಶ್ನಿಸಿದ ನೈನಾ:


ಪಶ್ಚಿಮ ರಾಜ್‌ಕೋಟ್‌ನಲ್ಲಿ ರಿವಾಬಾಗೆ ಮತದಾನದ ಹಕ್ಕು ಇದೆ. ಹಾಗಾದರೆ ಅವರು ಜಾಮ್‌ನಗರ ಉತ್ತರದಿಂದ ಹೇಗೆ ಸ್ಪರ್ಧಿಸುತ್ತಾರೆ ಎಂದು ನೈನಾ ಪ್ರಶ್ನಿಸಿದ್ದಾರೆ. ಇದೇ ವೇಳೆ ಸ್ಥಳೀಯ ಕಾಂಗ್ರೆಸ್ ಅಭ್ಯರ್ಥಿ ಬಿಪಿಂದ್ರಸಿಂಹ ಜಡೇಜಾ ಅವರನ್ನು ಗೆಲ್ಲಿಸುವಂತೆ ಮತದಾರರಲ್ಲಿ ಮನವಿ ಮಾಡಿದರು. ಜೊತೆಗೆ ಮದುವೆಯ ನಂತರವೂ ರಿವಾಬಾ ಜಡೇಜಾ ತನ್ನ ಉಪನಾಮವನ್ನು ಬದಲಾಯಿಸಲಿಲ್ಲ ಎಂದು ನೈನಾ ಟೀಕಿಸಿದ್ದಾರೆ.


ಇದನ್ನೂ ಓದಿ: Ravindra Jadeja: ಬಡತನದ ಬೆಂಕಿಯಲ್ಲಿ ಅರಳಿದ ಪ್ರತಿಭೆ ಜಡ್ಡು, ಈತನ ಲೈಫ್​ ಒಂಥರಾ ಫಿಲ್ಮಂ ಇದ್ದಂಗೆ


ಜಡ್ಡು ಪತ್ನಿ ರಿವಾಬಾ ಜಡೇಜಾ:


ರಿವಾಬಾ ಜಡೇಜಾ ಜಾಮ್‌ನಗರ ಉತ್ತರ ಕ್ಷೇತ್ರದವರು ಬಿಜೆಪಿ ಪರವಾಗಿ ಸ್ಪರ್ಧಿಸುತ್ತಿದ್ದಾರೆ ರವೀಂದ್ರ ಜಡೇಜಾ ಅವರ ಪತ್ನಿ 1990 ರಲ್ಲಿ ಜನಿಸಿದರು. ಆಕೆಯ ತಂದೆ ಉದ್ಯಮಿ. ಹರಿ ಸಿಂಗ್ ಸೋಲಂಕಿ ಕಾಂಗ್ರೆಸ್‌ನ ಸೊಸೆ. ಆಕೆಯನ್ನು ರಿವಾ ಸೋಲಂಕಿ ಎಂದೂ ಕರೆಯುತ್ತಾರೆ. ರಿವಾಬಾ ಮೆಕ್ಯಾನಿಕಲ್ ಇಂಜಿನಿಯರಿಂಗ್‌ನಲ್ಲಿ ತನ್ನ ಪದವಿಯನ್ನು ಪೂರ್ಣಗೊಳಿಸಿದ್ದಾರೆ. ರಿವಾಬಾ ಅವರು 2016 ರಲ್ಲಿ ಟೀಂ ಇಂಡಿಯಾದ ಹಿರಿಯ ಆಲ್‌ರೌಂಡರ್ ರವೀಂದ್ರ ಜಡೇಜಾ ಅವರನ್ನು ವಿವಾಹವಾದರು. ರಿವಾಬಾ 2019 ರ ಲೋಕಸಭೆ ಚುನಾವಣೆಗೆ ಮುನ್ನ ಬಿಜೆಪಿಗೆ ಸೇರ್ಪಡೆಗೊಂಡರು. ಚುನಾವಣಾ ಅಫಿಡವಿಟ್‌ನಲ್ಲಿ ಉಲ್ಲೇಖಿಸಿರುವ ವಿವರಗಳ ಪ್ರಕಾರ, ರಿವಾಬಾ ಜಡೇಜಾ ಅವರ ಆಸ್ತಿ 97 ಕೋಟಿ ರೂ. ಎಂದು ತಿಳಿಸಿದ್ದಾರೆ.


ಜಡೇಜಾ ಅವರ ಸಹೋದರಿ ನೈನಾ ಕಾಂಗ್ರೆಸ್ ಪಕ್ಷದಲ್ಲಿ ಕೆಲಸ ಮಾಡುತ್ತಿದ್ದಾರೆ. ಜಾಮ್‌ನಗರ ಜಿಲ್ಲೆಯಲ್ಲಿ ಆಕೆಗೆ ಒಳ್ಳೆಯ ಹೆಸರಿದೆ. ಮೇಲಾಗಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆಯಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ರಾಜಕೀಯದಲ್ಲಿ ತುಂಬಾ ಕ್ರಿಯಾಶೀಲರಾಗಿ.. ಸಾರ್ವಜನಿಕ ಕ್ಷೇತ್ರದಲ್ಲಿ ಓಡಾಡುತ್ತಿದ್ದಾರೆ. ಸದ್ಯ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ನಡೆಸುತ್ತಿದ್ದಾರೆ. ಜಾಮ್‌ನಗರ ಉತ್ತರ ಟಿಕೆಟ್‌ ನೈನಾ ಪಾಲಾಗುತ್ತದೆ ಎಂಬ ಪ್ರಚಾರವಿದ್ದರೂ ಕಾಂಗ್ರೆಸ್‌ ಹೈಕಮಾಂಡ್‌ ಬಿಪಿಂದ್ರ ಸಿನ್‌ ಜಡೇಜಾಗೆ ಒಲವು ತೋರಿದೆ. ನೈನಾ ಅವರ ಗೆಲುವಿಗಾಗಿ ಶ್ರಮಿಸುತ್ತಿದ್ದಾರೆ.

Published by:shrikrishna bhat
First published: