14 ತಿಂಗಳ ಬಳಿಕ ಭಾರತ ಏಕದಿನ ತಂಡಕ್ಕೆ ಆಲ್ರೌಂಡರ್ ರವೀಂದ್ರ ಜಡೇಜಾ ಭರ್ಜರಿ ಕಮ್ಬ್ಯಾಕ್ ಮಾಡಿದ್ದಾರೆ. ಬಾಂಗ್ಲಾದ 4 ಪ್ರಮುಖ ವಿಕೆಟ್ ಕೀಳುವ ಮೂಲಕ ಎದುರಾಳಿಗರಿಗೆ ನಡುಕ ಹುಟ್ಟಿಸಿದ್ದಾರೆ. 10 ಓವರ್ಗೆ ಕೇವಲ 29 ರನ್ ನೀಡಿ ಶಕಿಬ್ ಅಲ್ ಹಸನ್, ಮುಷ್ಫೀಕರ್ ರಹೀಮ್ ಸೇರಿದಂತೆ ಪ್ರಮುಖ ಬ್ಯಾಟ್ಸ್ಮನ್ಗಳಿಗೆ ಪೆವಿಲಿಯನ್ ಹಾದಿತೋರಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ತಮ್ಮದಾಗಿಸಿದ್ದಾರೆ.
ಈ ಮಧ್ಯೆ ಜಡೇಜಾ ಬೌಲಿಂಗ್ ಮಾಡುವ ವೇಳೆ ಎಲ್ಲರ ಕಣ್ಣು ಅವರ ಕೇಶವಿನ್ಯಾಸದ ಮೇಲಿತ್ತು. ಈ ಹಿಂದೆ ಅನೇಕ ರೀತಿಯ ಹೇರ್ ಸ್ಟೈಲ್ನಲ್ಲಿ ಜಡೇಜಾ ಮಿಂಚಿದ್ದರು. ಆದರೆ ಯಾವತ್ತು ಈ ರೀತಿ ಉದ್ದನೆಯ ಕೂದಲಿನಿಂದ ಕಾಣಿಸಿಕೊಂಡಿದ್ದಿಲ್ಲ. ಈ ಬಗ್ಗೆ ಸ್ವತಃ ಜಡೇಜಾ ಅವರೆ ಟೀಂ ಇಂಡಿಯಾದ ಫೀಲ್ಡಿಂಗ್ ಕೋಚ್ ಆರ್. ಶ್ರೀಧರ್ ನಡೆಸಿದ ಸಂದರ್ಶನದಲ್ಲಿ ತಮ್ಮ ಹೇರ್ ಸ್ಟೈಲ್ ಕುರಿತ ಸಿಕ್ರೇಟ್ ಬಿಚ್ಚಿಟ್ಟಿದ್ದಾರೆ.
ನನ್ನ ಹಳೆಯ ಹೇರ್ ಸ್ಟೈಲ್ ತುಂಬಾ ಸಮಯದಿಂದ ಇತ್ತು. ಸುಮಾರು ಎರಡೂವರೆ ತಿಂಗಳುಗಳಿಂದ ಅದೇ ಕೇಶ ವಿನ್ಯಾಸ ಇದ್ದ ಕಾರಣ ಬದಲಾಯಿಸಿದೆ ಎಂದಿದ್ದಾರೆ. ಇನ್ನು ಕೂದಲನ್ನು ಪ್ರತೀ ಸಲ ಕೈಯಿಂದ ಸರಿ ಮಾಡಿಕೊಳ್ಳುವಾಗ ನನ್ನ ತಲೆ ಚಲನೆ ಆಗುತ್ತಿತ್ತು. ಇದರಿಂದ ಕುತ್ತಿಗೆಯಲ್ಲಿ ನೋವು ಕಾಣಿಸಿಕೊಂಡಿದೆ. ಹೀಗಾಗಿ ಇಂದಿಗೆ ಈ ಹೇರ್ ಸ್ಟೈಲ್ ಕೊನೆಯಾಗಲಿದೆ. ನಾಳೆ ಹೊಸ ಹೇರ್ ಸ್ಟೈಲ್ನಲ್ಲಿ ಅಭಿಮಾನಿಗಳು ನನ್ನನ್ನು ನೋಡಲಿದ್ದಾರೆ ಎಂದಿದ್ದಾರೆ.
Want to know where @imjadeja's love for quirky hairstyles comes from?