• Home
  • »
  • News
  • »
  • sports
  • »
  • Team India: ಟೀಂ ಇಂಡಿಯಾಗೆ ಗುಡ್​ ನ್ಯೂಸ್, ಸ್ಟಾರ್​ ಆಲ್​ರೌಂಡರ್ ತಂಡಕ್ಕೆ​ ಕಂಬ್ಯಾಕ್​

Team India: ಟೀಂ ಇಂಡಿಯಾಗೆ ಗುಡ್​ ನ್ಯೂಸ್, ಸ್ಟಾರ್​ ಆಲ್​ರೌಂಡರ್ ತಂಡಕ್ಕೆ​ ಕಂಬ್ಯಾಕ್​

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Team India: ಟೀಂ ಇಂಡಿಯಾದ ಸ್ಟಾರ್ ಆಲ್ ರೌಂಡರ್ ರವೀಂದ್ರ ಜಡೇಜಾ ಇದೀಗ ಪುನರಾಗಮನಕ್ಕೆ ಸಜ್ಜಾಗಿದ್ದಾರೆ. ಅವರು ಬಾಂಗ್ಲಾದೇಶ ಪ್ರವಾಸಕ್ಕೆ ತಂಡದಲ್ಲಿ ಆಯ್ಕೆಯಾಗಿದ್ದಾರೆ. ಹಾಗಾಗಿ ಶೀಘ್ರದಲ್ಲೇ ಜಡೇಜಾ ಮೈದಾನದಲ್ಲಿ ಆಡುವುದನ್ನು ಕಾಣಬಹುದು.

  • Share this:

ಟೀಂ ಇಂಡಿಯಾ ಮುಂಬರುವ ನ್ಯೂಜಿಲೆಂಡ್ (New Zealand) ಮತ್ತು ಬಾಂಗ್ಲಾದೇಶ (Bangladesh) ಪ್ರವಾಸಗಳಿಗೆ ಭಾರತ ತಂಡವನ್ನು (Team India) ಪ್ರಕಟಿಸಲಾಗಿದೆ. ಬಿಸಿಸಿಐ ಆಯ್ಕೆ ಸಮಿತಿ ಅಧ್ಯಕ್ಷ ಚೇತನ್ ಶರ್ಮಾ ನೇತೃತ್ವದಲ್ಲಿ ಇಂದು ನಡೆದ ಸಭೆಯಲ್ಲಿ ತಂಡವನ್ನು ಪ್ರಕಟಿಸಲಾಯಿತು. ನ್ಯೂಜಿಲೆಂಡ್ ಪ್ರವಾಸದಲ್ಲಿ ಹಲವು ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದೆ. ಹೀಗಾಗಿ ಈ ಆಟಗಾರರು ಬಾಂಗ್ಲಾದೇಶ ಪ್ರವಾಸದಲ್ಲಿ ಕಣಕ್ಕಿಳಿಯುತ್ತಿದ್ದಾರೆ. ಮುಖ್ಯವಾಗಿ, ಏಷ್ಯಾಕಪ್ ನಲ್ಲಿ ಗಾಯಗೊಂಡಿದ್ದ ಟೀಂ ಇಂಡಿಯಾದ ಸ್ಟಾರ್ ಆಲ್ ರೌಂಡರ್ ರವೀಂದ್ರ ಜಡೇಜಾ (Ravindra Jadeja) ಇದೀಗ ಕಂಬ್ಯಾಕ್ ಮಾಡಲು ಸಜ್ಜಾಗಿದ್ದಾರೆ. ಅವರು ಬಾಂಗ್ಲಾದೇಶ ಪ್ರವಾಸಕ್ಕೆ ತಂಡದಲ್ಲಿ ಆಯ್ಕೆಯಾಗಿದ್ದಾರೆ. ಹಾಗಾಗಿ ಶೀಘ್ರದಲ್ಲೇ ಜಡೇಜಾ ಮೈದಾನದಲ್ಲಿ ಆಡುವುದನ್ನು ನೋಡಬಹುದಾಗಿದ್ದು, ಇದು ಟೀಂ ಇಂಡಿಯಾ ಪಾಲಿಗೆ ಒಂದು ಉತ್ತಮ ಅಂಶವಾಗಿದೆ.


ಟೆಸ್ಟ್ ಮತ್ತು ಏಕದಿನ ತಂಡಕ್ಕೆ ಜಡೇಜಾ:


ಟೀಂ ಇಂಡಿಯಾದ ಬಾಂಗ್ಲಾದೇಶ ಪ್ರವಾಸ ಡಿಸೆಂಬರ್ 4 ರಿಂದ 26ರ ವರೆಗೆ ನಿಗದಿಯಾಗಿದೆ. ಇದೇ ವೇಳೆ ಭಾರತ ತಂಡ ಮೂರು ಏಕದಿನ ಹಾಗೂ 2 ಟೆಸ್ಟ್ ಪಂದ್ಯಗಳನ್ನು ಆಡಲಿದೆ. ಈ ಎರಡೂ ಸರಣಿಗಳಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದೆ. ರೋಹಿತ್ ಶರ್ಮಾ ನಾಯಕತ್ವದ ಈ ತಂಡದಲ್ಲಿ ಆಯ್ಕೆ ಸಮಿತಿ ಜಡೇಜಾಗೂ ಸ್ಥಾನ ನೀಡಿದೆ. ಹಾಗಾಗಿ ಸುಮಾರು ನಾಲ್ಕು ತಿಂಗಳ ನಂತರ ಡಿಸೆಂಬರ್ 4 ರಂದು ಜಡೇಜಾ ಕಂಬ್ಯಾಕ್​ ಮಾಡಲಿದ್ದಾರೆ. ಏಷ್ಯಾಕಪ್ ವೇಳೆ ಜಡೇಜಾ ಗಾಯಗೊಂಡಿದ್ದರು. ಇದರಿಂದಾಗಿ ಅವರ ಮೊಣಕಾಲಿಗೆ ಶಸ್ತ್ರಚಿಕಿತ್ಸೆಯನ್ನೂ ಮಾಡಲಾಗಿತ್ತು. ಆದರೆ ಇದೀಗ ಜಡ್ಡು ಚೇತರಿಸಿಕೊಂಡಿದ್ದು, ಮುಂಬರುವ ಸರಣಿಗೆ ಆಯ್ಕೆ ಸಹ ಆಗಿದ್ದಾರೆ.ಏತನ್ಮಧ್ಯೆ, ಎರಡು ವಾರಗಳ ಹಿಂದೆ, ಜಡೇಜಾ ಅವರು ಅಭ್ಯಾಸ ಮಾಡುತ್ತಿರುವ ವೀಡಿಯೊವನ್ನು ಹಂಚಿಕೊಂಡಿದ್ದರು. ಬಿಸಿಸಿಐನ ವೈದ್ಯಕೀಯ ತಂಡವೂ ಅವರ ಫಿಟ್ನೆಸ್ ಮೇಲೆ ನಿಗಾ ಇರಿಸಿತ್ತು. ಹೀಗಾಗಿ ಅವರು ಸಂಪೂರ್ಣ ಫಿಟ್ ಆಗಿದ್ದು, ಬಾಂಗ್ಲಾದೇಶ ವಿರುದ್ಧದ ಏಕದಿನ ಮತ್ತು ಟೆಸ್ಟ್ ಸರಣಿಗೆ ತಂಡದಲ್ಲಿ ಸೇರ್ಪಡೆಗೊಂಡಿದ್ದಾರೆ.


ಇದನ್ನೂ ಓದಿ: T20 WC 2022 IND vs BAN: ಸೋಲಿನ ಬೆನ್ನಲ್ಲೇ ಟೀಂ ಇಂಡಿಯಾಗೆ ಹೊಸ ಟೆನ್ಶನ್​! ಹೀಗಾದ್ರೆ ಭಾರತ ಸೆಮಿ ಫೈನಲ್​ ಕನಸು ಭಗ್ನ!


ಟೀಂ ಇಂಡಿಯಾದ ಬಾಂಗ್ಲಾದೇಶ ಪ್ರವಾಸ:


ಡಿಸೆಂಬರ್ 4, ಮೊದಲ ODI - ಢಾಕಾ
ಡಿಸೆಂಬರ್ 7, ಎರಡನೇ ODI - ಢಾಕಾ
ಡಿಸೆಂಬರ್ 10, ಮೂರನೇ ODI - ಢಾಕಾ


14-18 ಡಿಸೆಂಬರ್, 1 ನೇ ಟೆಸ್ಟ್ - ಚಿತ್ತಗಾಂಗ್
22-26 ಡಿಸೆಂಬರ್, ಎರಡನೇ ಟೆಸ್ಟ್ - ಢಾಕಾ


ಇದನ್ನೂ ಓದಿ: T20 WC 2022 IND vs BAN: ನಾಳೆ ಭಾರತ-ಬಾಂಗ್ಲಾ ಪಂದ್ಯ, ಇಲ್ಲಿದೆ ಉಭಯ ತಂಡಗಳ ಪ್ಲೇಯಿಂಗ್​ 11


ಬಾಂಗ್ಲಾದೇಶ ಪ್ರವಾಸಕ್ಕೆ ಭಾರತ ತಂಡ:


 ಏಕದಿನ ತಂಡ -  ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ಶಿಖರ್ ಧವನ್, ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಶ್ರೇಯಸ್ ಅಯ್ಯರ್, ರಾಹುಲ್ ತ್ರಿಪಾಠಿ, ರಿಷಬ್ ಪಂತ್, ಇಶಾನ್ ಕಿಶನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್ , ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ದೀಪಕ್ ಚಹಾರ್, ಯಶ್ ದಯಾಳ್.


ಟೆಸ್ಟ್ ತಂಡ -   ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ಶುಭಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ರಿಷಭ್ ಪಂತ್, ಕೆಎಸ್ ಭರತ್, ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್

Published by:shrikrishna bhat
First published: