ಡೇಟಿಂಗ್ ವಿಚಾರ ಕೇಳಿ ಕೆಂಡಾಮಂಡಲಗೊಂಡ ರವಿ ಶಾಸ್ತ್ರಿ..!

news18
Updated:September 4, 2018, 7:52 PM IST
ಡೇಟಿಂಗ್ ವಿಚಾರ ಕೇಳಿ ಕೆಂಡಾಮಂಡಲಗೊಂಡ ರವಿ ಶಾಸ್ತ್ರಿ..!
news18
Updated: September 4, 2018, 7:52 PM IST
ನ್ಯೂಸ್ 18 ಕನ್ನಡ

ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ ಹಾಗೂ ಬಾಲಿವುಡ್ ನಟಿ ನಿಮ್ರತ್ ಕೌರ್ ನಡುವಿನ ಡೇಟಿಂಗ್ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಬಹು ಚರ್ಚೆಗೆ ಕಾರಣವಾಗಿದೆ. ಇದೀಗ ಈ ಕುರಿತು ರವಿಶಾಸ್ತ್ರಿ ಅವರು ಪ್ರತಿಕ್ರಿಯಿಸಿದ್ದು, ತಮ್ಮದೇ ಶೈಲಿಯಲ್ಲಿ ಖಾರವಾಗಿ ಉತ್ತರಿಸಿದ್ದಾರೆ.

ವಿವಾದದ ಕುರಿತು ರವಿಶಾಸ್ತ್ರಿಯವ್ರನ್ನು ಪ್ರಶ್ನಿಸಿದ್ದೇ ತಡ ಕೆಂಡಾಮಂಡಲಗೊಂಡು ಉತ್ತರಿಸಿದ್ದಾರೆ. 'ನಿಮ್ರತ್ ಕೌರ್ ಜೊತೆಗಿನ ಡೇಟಿಂಗ್ ವಿಚಾರ ಶುದ್ಧ ಸುಳ್ಳು. ಇಲ್ಲ ಸಲ್ಲದ ಸುದ್ದಿಗಳನ್ನ ಹರಿಬಿಡಲಾಗುತ್ತಿದೆ. ಈ ವದಂತಿಗಳೆಲ್ಲಾ ಹಸುವಿನ ಸಗಣಿಯ ತಿಪ್ಪೆ ಗುಂಡಿ. ತಿಪ್ಪೆಗುಂಡಿಗೆ ನಾನೇನು ಉತ್ತರಿಸಲಿ ಇಷ್ಟನ್ನು ಬಿಟ್ಟು ಮತ್ತೇನು ಹೇಳಲಾರೆ' ಎಂದು ಬಿಟ್ಟಿದ್ದಾರೆ.

ಹೀಗೆ ರವಿಶಾಸ್ತ್ರಿ ಸುತ್ತ ಈ ವದಂತಿ ಹಬ್ಬಲು ಕಾರಣವೂ ಇದೆ. ಈ ಹಿಂದೆಯೇ 2013ರಲ್ಲಿ ರವಿಶಾಸ್ತ್ರಿ ಹಾಗೂ ಪತ್ನಿ ರಿತೂ ಸಿಂಗ್ ಸಂಬಂಧ ಮುರಿದು ಬಿದ್ದಿದೆ ಎಂದು ಸುದ್ದಿಯಾಗಿತ್ತು. ಆನಂತರ ಜರ್ಮನ್ ಮೂಲದ ಐಷಾರಾಮಿ ಕಾರಿನ ರಾಯಭಾರಿಯಾಗಿ ರವಿಶಾಸ್ತ್ರಿ ಹಾಗೂ ಬಾಲಿವುಡ್ ನಟಿ ನಿಮ್ರತ್ ಕೌರ್ ಕಾಣಿಸಿಕೊಂಡರು. ಪ್ರತಿ ವರ್ಷ ಕಾರಿನ ಪ್ರಚಾರಕ್ಕೆ ಇವರಿಬ್ಬರು ಒಟ್ಟಾಗಿ ಕಾಣಿಸಿಕೊಳ್ಳುತ್ತಾರೆ. ಇದರ ಜೊತೆಗೆ ಈ ಇಬ್ಬರು ಕದ್ದುಮುಚ್ಚಿ ಡೇಟಿಂಗ್ ಶುರುಮಾಡಿದ್ದಾರೆ ಎಂದು ಸುದ್ದಿ ಹಬ್ಬಿದೆ.
First published:September 4, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ