ವಿಶ್ವದ ಬೆಸ್ಟ್ ಆಟಗಾರ ಎಂಬುದನ್ನ ಕೊಹ್ಲಿ ಆಂಗ್ಲರ ಮುಂದೆ ಸಾಬೀತು ಮಾಡ್ತಾರೆ: ರವಿ ಶಾಸ್ತ್ರೀ


Updated:July 30, 2018, 2:18 PM IST
ವಿಶ್ವದ ಬೆಸ್ಟ್ ಆಟಗಾರ ಎಂಬುದನ್ನ ಕೊಹ್ಲಿ ಆಂಗ್ಲರ ಮುಂದೆ ಸಾಬೀತು ಮಾಡ್ತಾರೆ: ರವಿ ಶಾಸ್ತ್ರೀ

Updated: July 30, 2018, 2:18 PM IST
-ನ್ಯೂಸ್ 18

ಲಂಡನ್(ಜು.30): ನಾನೊಬ್ಬ ವಿಶ್ವದ ಬೆಸ್ಟ್ ಆಟಗಾರ ಎನ್ನುವುದನ್ನ ವಿರಾಟ್ ಕೊಹ್ಲಿ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಸಾಬೀತುಪಡಿಸಲಿದ್ದಾರೆ ಎಂದು ಹೆಡ್ ಕೋಚ್ ರವಿ ಶಾಸ್ತ್ರೀ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಬುಧವಾರದಿಂದ ಆರಂಭವಾಗಲಿರುವ ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟೆಸ್ಟ್ ಸರಣಿಗೆ ತಯಾರಿ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಸದ್ಯದ ಭಾರತ ತಂಡ ವಿದೇಶ ಪ್ರವಾಸ ಕೈಗೊಂಡ ಎಲ್ಲ ತಂಡಗಳಿಗಿಂತಲೂ ಬೆಸ್ಟ್ ಎನಿಸಿಕೊಳ್ಳುವ ಸಾಮರ್ಥ್ಯ ಹೊಂದಿದೆ ಎಂದು ಹೇಳಿದ್ದಾರೆ.

ಹಾಗೆ ನೋಡಿದರೆ, 2014ರಿಂದೀಚೆಗೆ ಭಾರತ ವಿದೇಶದಲ್ಲಿ ಆಡಿದ 25 ಟೆಸ್ಟ್ ಪಂದ್ಯಗಳ ಪೈಕಿ 9ರಲ್ಲಿ ಮಾತ್ರ ಜಯ ಕಂಡಿದೆ. ಅದರಲ್ಲಿ 5 ಪಂದ್ಯಗಳು ಶ್ರೀಲಂಕಾ(2015ರಲ್ಲಿ 2 ಮತ್ತು 2017ರಲ್ಲಿ 3 ಪಂದ್ಯ)ದಲ್ಲಿ ಗೆದ್ದಿದೆ. 2016ರಲ್ಲಿ 2 ಪಂದ್ಯಗಳನ್ನ ವೆಸ್ಟ್ ಇಂಡೀಸ್ ವಿರುದ್ಧ ಗೆದ್ದಿದೆ.

ವಿಶ್ವದ ಅತ್ಯಂತ ಬಲಿಷ್ಠ ಆಲ್ರೌಂಡರ್​ಗಳನ್ನ ಹೊಂದಿರುವ ದಕ್ಷಿಣ ಆಫ್ರಿಕಾ ವಿರುದ್ಧ 1-2ರಿಂದ ಸರಣಿ ಸೋತರೂ ಭಾರತ ಒಳ್ಳೆಯ ಪ್ರದರ್ಶನವನ್ನೇ ನೀಡಿತ್ತು.

‘ರೆಡ್ ಬಾಲ್ ಆಟದಲ್ಲಿ ನಮ್ಮ ಮುಂದಿರುವ ಸವಾಲು ಸ್ಥಿರತೆ ಕಾಯ್ದುಕೊಳ್ಳುವುದು. ಇಂಗ್ಲೆಂಡ್ ಪ್ರವಾಸ ಕೈಗೊಂಡ ತಂಡಗಳಲ್ಲೇ ಅತ್ಯುತ್ತಮ ತಂಡ ಎನಿಸಿಕೊಳ್ಳುವ ಸಾಮರ್ಥ್ಯ ನಮಗಿದೆ' ಎಂದು ರವಿಶಾಸ್ತ್ರೀ ಹೇಳಿದ್ದಾರೆ.

ಸದ್ಯದ ಪರಿಸ್ಥಿತಿಯಲ್ಲಿ ಯಾವುದೇ ತಂಡ ವಿದೇಶ ಪ್ರವಾಸವನ್ನ ಯಶಸ್ವಿಯಾಗಿ ಮುಗಿಸಿಲ್ಲ. ಶ್ರೀಲಂಕಾದಲ್ಲಿ ದಕ್ಷಿಣ ಆಫ್ರಿಕಾಗೆ ಏನಾಯಿತು ಎಂಬುದು ನಿಮಗೆ ಗೊತ್ತಿದೆ. ಈ ಪ್ರವಾಸಕ್ಕೂ ಮುನ್ನ ಇಂಗ್ಲೆಂಡ್​ನಲ್ಲಿ ನಮ್ಮ ಸಾಧನೆ ಏನೆಂಬುದು ಗೊತ್ತಿದೆ. 2011ರಲ್ಲಿ ಭಾರತ 0-4, 2014ರಲ್ಲಿ 1-3ರಲ್ಲಿ ಸರಣಿ ಸೋತಿದೆ. ಈ ಸಲ ನಾವು ಅದಕ್ಕಿಂತಲೂ ಉತ್ತಮ ಪ್ರದರ್ಶನ ತೋರಬೇಕಿದೆ ಎಂದು ಶಾಸ್ತ್ರಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮುಂಬರುವ ಸರಣಿ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಾವೂ ಸಹ ಸರಣಿ ಗೆಲ್ಲುವ ಸಾಮರ್ಥ್ಯ ಹೊಂದಿದ್ದೇವೆ. ಎದುರಾಳಿಗಳನ್ನ ಔಟ್ ಮಾಡುವ ನಮ್ಮ ಬೌಲಿಂಗ್ ಕೌಶಲ್ಯ ದ್ವಿಗುಣಗೊಂಡಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
Loading...

20 ವಿಕೆಟ್ ಉರುಳಿಸುವ ಬೌಲಿಂಗ್ ಸಾಮರ್ಥ್ಯ ನಮ್ಮಲ್ಲಿದೆ. ಎಲ್ಲಿ ನಾವು ಆಡುತ್ತಿದ್ದೇವೆ ಎಂಬ ಬಗ್ಗೆ ನಾವು ತಲೆಕೆಡಿಸಿಕೊಂಡಿಲ್ಲ. ನಮ್ಮ ಬೌಲಿಂಗ್​ನಲ್ಲಿ ವೆರೈಟಿ ಇದೆ. ನಮ್ಮ ಯೋಜನೆಯನ್ನ ಅತ್ಯುತ್ತಮ ಮಾದರಿಯಲ್ಲಿ ನಾವು ಕಾರ್ಯಗತಗೊಳಿಸಬೇಕಿದೆ. ಬ್ಯಾಟಿಂಗ್ ಸಹ ಉತ್ತಮವಾಗಿರಬೇಕಿದೆ. ದಕ್ಷಿಣ ಆಫ್ರಿಕಾದಲ್ಲಿ ನಮ್ಮ ಬ್ಯಾಟಿಂಗ್ ಕುಸಿದಿತ್ತು ಎಂದಿದ್ದಾರೆ.

ಸದ್ಯದ ಸರಣಿಯಲ್ಲಿ ಎಲ್ಲರ ಚಿತ್ತ ನಾಯಕ ವಿರಾಟ್ ಕೊಹ್ಲಿ ಮತ್ತವರ ಬ್ಯಾಟಿಂಗ್ ಮೇಲೆ ನೆಟ್ಟಿದೆ. 2014ರಲ್ಲಿ ಇಂಗ್ಲೆಂಡ್​ನಲ್ಲಿ ಕೊಹ್ಲಿ ಪ್ರದರ್ಶನ ನಿರಾಶಾದಾಯಕವಾಗಿತ್ತು. 10 ಇನ್ನಿಂಗ್ಸ್​​ಗಳಲ್ಲಿ ವಿರಾಟ್ ಕೇವಲ 13.4ರ ಸರಾಸರಿ ಹೊಂದಿದ್ದರು. ಈ ಕುರಿತಂತೆ ಪ್ರತಿಕ್ರಿಯಿಸಿರುವ ಶಾಸ್ತ್ರಿ,  4 ವರ್ಷಗಳ ಹಿಂದೆ ವಿರಾಟ್ ಕೊಹ್ಲಿ ಪ್ರದರ್ಶನ ಉತ್ತಮವಾಗಿಲ್ಲದಿರಬಹುದು. 4 ವರ್ಷಗಳಲ್ಲಿ ತಾನೊಬ್ಬ ವಿಶ್ವದ ಬೆಸ್ಟ್ ಬ್ಯಾಟ್ಸ್​ಮನ್ ಎಂದು ತೋರಿಸಿದ್ದಾರೆ. ಬ್ರಿಟೀಷ್ ಜನರ ಮುಂದೆ ನಾನೇಕೆ ವಿಶ್ವದ ಬೆಸ್ಟ್ ಬ್ಯಾಟ್ಸ್​ಮನ್ ಎನ್ನುವುದನ್ನ ಸಾಬೀತುಪಡಿಸಲಿದ್ದಾರೆ ಎಂದು ರವಿಶಾಸ್ತ್ರಿ ಅತೀವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
First published:July 30, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...