ಭಾರತ-ಇಂಗ್ಲೆಂಡ್ ಟೆಸ್ಟ್; ಶತಕದ ಹೊಸ್ತಿಲಲ್ಲಿ ಎಡವಿದ ಕೊಹ್ಲಿ; 5 ವಿಕೆಟ್ ಪತನ

news18
Updated:August 18, 2018, 10:24 PM IST
ಭಾರತ-ಇಂಗ್ಲೆಂಡ್ ಟೆಸ್ಟ್; ಶತಕದ ಹೊಸ್ತಿಲಲ್ಲಿ ಎಡವಿದ ಕೊಹ್ಲಿ; 5 ವಿಕೆಟ್ ಪತನ
  • News18
  • Last Updated: August 18, 2018, 10:24 PM IST
  • Share this:
ನ್ಯೂಸ್ 18 ಕನ್ನಡ

ನ್ಯಾಟಿಂಗ್​​ಹ್ಯಾಮ್​ನ ಟ್ರೆಂಟ್​​ಬ್ರಿಡ್ಜ್​​ನಲ್ಲಿ ನಡೆಯುತ್ತಿರುವ ಭಾರತ-ಇಂಗ್ಲೆಂಡ್ ನಡುವಣ 3ನೇ ಟೆಸ್ಟ್​ ಪಂದ್ಯದಲ್ಲಿ ಟೀಂ ಇಂಡಿಯಾ ತನ್ನ ಪ್ರಮುಖ 5 ವಿಕೆಟ್ ಕಳೆದುಕೊಂಡಿದೆ. ಟೀಂ ಇಂಡಿಯಾದ ಆಧಾರಸ್ಥಂಭವಾಗಿದ್ದ ವಿರಾಟ್ ಕೊಹ್ಲಿ ಶತಕದ ಅಂಚಿನಲ್ಲಿ ಎಡವಿ 97 ರನ್​ಗೆ ಔಟ್ ಆಗುವ ಮೂಲಕ ನಿರಾಸೆ ಮೂಡಿಸಿದರು. 80 ರನ್ ಆಗುವ ಹೊತ್ತಿಗೆ ಪ್ರಮುಖ 3 ವಿಕೆಟ್ ಕಳೆದುಕೊಂಡಿದ್ದ ಭಾರತಕ್ಕೆ ಚೇತರಿಕೆ ನೀಡಿದ್ದು ನಾಯಕ ವಿರಾಟ್ ಕೊಹ್ಲಿ ಹಾಗೂ ಉಪನಾಯಕ ಅಜಿಂಕ್ಯ ರಹಾನೆ. ಈ ಜೋಡಿ 4ನೇ ವಿಕೆಟ್​ಗೆ 159 ರನ್​ಗಳ ಕಾಣಿಕೆ ನೀಡಿ ತಂಡಕ್ಕೆ ನೆರವಾದರು.

ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಭಾರತಕ್ಕೆ ಶಿಖರ್ ಧವನ್ ಹಾಗೂ ಕೆ. ಎಲ್. ರಾಹುಲ್ ಮೊದಲ ವಿಕೆಟ್​​ಗೆ 60 ರನ್​ಗಳ ಜೊತೆಯಾಟ ನೀಡಿದರಷ್ಟೆ. ಕಳೆದ ಎರಡು ಟೆಸ್ಟ್​​ನಲ್ಲಿ ಭಾರತ ಮೊದಲ ಬಾರಿ 60 ರನ್​ಗಳ ಆರಂಭ ಪಡೆಯಿತು. ಆದರೆ ಕ್ರಿಸ್ ವೋಕ್ಸ್ ಬೌಲಿಂಗ್ ದಾಳಿಗೆ ಭಾರತದ 3 ಪ್ರಮುಖ ಬ್ಯಾಟ್ಸ್​ಮನ್​ಗಳು ವಿಕೆಟ್ ಒಪ್ಪಿಸಿದರು. 35 ರನ್​ ಗಳಿಸಿರುವಾಗ ಧವನ್ ಔಟ್ ಆದರೆ, ಇದರ ಬೆನ್ನಲ್ಲೆ ರಾಹುಲ್ 23 ರನ್ ಬಾರಿಸಿ ಪೆವಿಲಿಯನ್ ಸೇರಿಕೊಂಡರು. ಬಳಿಕ ಬಂದ ಪೂಜಾರ ಕೂಡ ಕೇವಲ 14 ರನ್​ಗೆ ನಿರ್ಗಮಿಸಿ ಆಘಾತ ನೀಡಿದರು.

ಭೋಜನ ವಿರಾಮದ ಹೊತ್ತಿಗೆ ತನ್ನ ಪ್ರಮುಖ 3 ವಿಕೆಟ್ ಕಳೆದುಕೊಂಡು ದುಸ್ಥಿತಿಗೆ ತಲುಪಿದ್ದ ಟೀಂ ಇಂಡಿಯಾಕ್ಕೆ ಕೊಹ್ಲಿ ಹಾಗೂ ರಹಾನೆ ಎಚ್ಚರಿಕೆಯ ಆಟವಾಡಿ ತಂಡಕ್ಕೆ ಚೇತರಿಕೆ ನೀಡಿದರು. ಕ್ರೀಸ್ ಕಚ್ಚಿ ಆಡಿದ ಈ ಜೋಡಿ, ಇಬ್ಬರೂ ಅರ್ಧಶತಕದ ಸಂಭ್ರಮ ಹಂಚಿಕೊಂಡರು. ಆದರೆ 81 ರನ್ ಗಳಿಸಿ ರಹಾನೆ ಅವರು ಬ್ರಾಡ್ ಎಸೆತದಲ್ಲಿ ಔಟ್ ಆಗಿ ತಮ್ಮ ಇನ್ನಿಂಗ್ಸ್ ಕೊನೆಗೊಳಿಸಿದರೆ, ಕೊಹ್ಲಿ 97 ರನ್​ಗೆ ಆದಿಲ್ ರಶೀದ್​ಗೆ ವಿಕೆಟ್ ಒಪ್ಪಿಸಿ ನಿರ್ಗಮಿಸಿದ್ದಾರೆ.
First published: August 18, 2018, 2:58 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading